Saturday, 19 September 2020
ಪೆರಿಯಾರ್ ವಿಚಾರಗಳು
Saturday, 29 August 2020
ಹಿಂದೂ ಧರ್ಮದ ತತ್ವಜ್ಞಾನ
Thursday, 23 July 2020
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ
Saturday, 23 May 2020
ನಾನು ಕೊಂದ ಹುಡುಗಿ
ನಾನು ಕೊಂದ ಹುಡುಗಿ’ ಅಜ್ಜಂಪುರ ಸೀತಾರಾಮಯ್ಯನವರು ‘ಆನಂದ’ ಎನ್ನುವ ಕಾವ್ಯನಾಮದಲ್ಲಿ ಬರೆದ ಒಂದು ಸಣ್ಣ ಕತೆ. ನನ್ನನ್ನು ಬಹಳ ಗಾಢವಾಗಿ ಕಾಡಿದ ಕತೆ ಅದು.
ಪ್ರಾಚೀನ ದೇವಸ್ಥಾನದ ಶಿಲ್ಪಕಲೆಗಳನ್ನು ಅಧ್ಯಯನ ಮಾಡುವ ಒಬ್ಬ ಸಂಶೋಧಕ ಇರುತ್ತಾನೆ. ಊರಿಂದ ಊರಿಗೆ ಪ್ರಾಚೀನ ಚಿಲ್ಪ ಕಲೆಗಳ ಬಗೆ ಅಧ್ಯಯನ ಮಾಡುತ್ತಾ ಹೋಗ್ತಾ ಇದ್ದೋನು ಅವನು. ಒಂದು ಸಣ್ಣ,ಪುಟ್ಟ ಹಳ್ಳೀಲಿ ಒಂದೆರಡು ದಿನದ ಮಟ್ಟಿಗೆ ಉಳಿಯಬೇಕಾಗುತ್ತದೆ. ಆ ಹಳ್ಳಿಯ ದೊಡ್ಡ ಮನುಷ್ಯರೊಬ್ಬರು ತಮ್ಮ ಮನೆಯಲ್ಲಿ ಅವನಿಗೆ ಆತಿಥ್ಯ ನೀಡುತ್ತಾರೆ. ಅಂದು ಸಂಜೆ ಹಳಿಯ ಒಬ್ಬ ದೊಡ್ಡ ಮನುಷ್ಯರೊಬ್ಬರ ಮನೆಯಲ್ಲಿ ಊಟಕ್ಕೆ ಕೂತಾಗ, ಗೆಜ್ಜೆ ಸದ್ದಿನ ಹೆಜ್ಜೆಯನಿಡುತ್ತಾ…
ಸುಂದರ ಹೆಣ್ಣುಮಗಳೊಬ್ಬಳು ನಾಚುತ್ತಲೇ ಬಂದು ಊಟ ಬಡಿಸಿ ಹೋಗುತ್ತಾಳೆ. ಆನಂತರ ಮನೆಯ ಹಿಂದಿನ ತೋಟದಲ್ಲಿ ನಡೆಯುತ್ತ ಇರುವಾಗ, ಆ ಸುಂದರ ಹೆಣ್ಣುಮಗಳು ಯಾರೆಂದು ಆ ಮನೆಯ ಕೆಲಸಗಾರನನ್ನು ವಿಚಾರಿಸುತ್ತಾನೆ. ‘ಅವಳು ನಮ್ಮ ಯಜಮಾನ್ರ ಮಗಳು, ಯಾಕೆ ಸ್ವಾಮಿ’ ಎಂದು ಇವನನ್ನು ಅನುಮಾನಿಸುತ್ತಾ ಉತ್ತರಿಸುತ್ತಾನೆ ಮನೆಯ ಕೆಲಸಗಾರ.
ತಾನು ಮುಗ್ಧವಾಗಿ ಕೇಳಿದ್ದನ್ನು ಕೆಲಸಗಾರನು ತನ್ನನ್ನು ಅಪಾರ್ಥ ಮಾಡಿಕೊಂಡನಲ್ಲ ಎಂದು ಕಸಿವಿಸಿಗೊಳ್ಳುತ್ತಲೇ, ತನ್ನ ಕೋಣೆಯನ್ನು ಸೇರಿ ತನ್ನ ಹೆಂಡತಿಗೆ ಈ ಬಗ್ಗೆ ಕಾಗದ ಪತ್ರ ಬರೆಯುವಾಗ ಯಾರೋ ಒಬ್ಬರು ಬಾಗಿಲು ತಟ್ಟಿದಂತಾಗುತ್ತದೆ.
ಬಾಗಿಲು ತೆಗೆದರೆ ಆಶ್ಚರ್ಯ. ಮದುವಣಗಿತ್ತಿಯಂತೆ ಅಲಂಕಾರ ಮಾಡಿಕೊಂಡು ಕೈಯಲ್ಲಿ ಹಾಲಿನ ಲೋಟ, ತಾಂಬೂಲ ಹಿಡಿದು ಒಳಗೆ ಬಂದವಳು ಆ ಸುಂದರ ಹೆಣ್ಣುಮಗಳು..! ಕೋಣೆಯ ಒಳಗೆ ಬಂದು ಬಾಗಿಲ ಚಿಲಕ ಹಾಕುತ್ತಾಳೆ.
ಏನೂ ಅರ್ಥವಾಗದೆ ನೋಡುತ್ತಿದ್ದವನಿಗೆ- ‘ನೀವು, ನನ್ನ ಬಗ್ಗೆ ವಿಚಾರಿಸಿದರಂತೆ. ಹೌದಾ ಎಂದು ಕೇಳುತ್ತಾಳೆ! ನಿನ್ನ ಬಗೆ ಅವರು ವಿಚಾರಿಸಿದ್ದಾರೆ ಹೋಗಿ ಅವರನ್ನ ನೋಡ್ಕೋ ಅಂತ ನನ್ನ ಅಪ್ಪ ನಿಮ್ಮ ಬಳಿಗೆ ನನ್ನನ್ನು ಕಳುಹಿಸಿಕೊಟ್ಟರು ಎನ್ನುತ್ತಾ ಮಂಚದ ಮೇಲೆ ಹೋಗಿ ಕೂರುತ್ತಾಳೆ.
ಯಾರು ತಪ್ಪು ತಿಳಿಯಬೇಡಿ! ವಿಷಯ ಇಷ್ಟೇ, ಆ ಊರಿನ ದೊಡ್ಡ ಮನುಷ್ಯರ ಮೊದಲ ಮಗಳಿವಳು. ದೊಡ್ಡ ಮನುಷ್ಯರಿಗೆ ಬಹಳ ವರ್ಷಗಳವರೆಗೆ ಗಂಡು ಸಂತಾನದ ಭಾಗ್ಯವಿರಲಿಲ್ಲ. ತನಗೆ ವಂಶೋದ್ಧಾರಕ ಮಗ ಹುಟ್ಟುತ್ತಿಲ್ಲ ಎನ್ನುವ ಆತಂಕದಲ್ಲಿ, ‘ಮುಂದೆ ನನಗೆ ಒಂದು ಗಂಡು ಮಗುವಾದರೆ ಇವಳನ್ನು ನಿನ್ನ ಸೇವೆಗೆ(ದೇವರ ಸೇವೆಗೆ) ಮೀಸಲಿಡುತ್ತೇನೆ’ ಎಂದು ಹರಕೆ ಹೊತ್ತ ಆ ದೊಡ್ಡ ಮನುಷ್ಯನಿಗೆ ಮುಂದೆ ಒಂದು ಗಂಡು ಮಗುವಾಗುತ್ತದೆ.
ತಾನು ಹೊತ್ತ ದೇವರ ಹರಕೆಯಂತೆ ಇವಳು, ಬರುವ,ಹೋಗುವ ಅತಿಥಿಗಳನ್ನು ಸತ್ಕರಿಸುವ ದೇವರ ದಾಸಿಯಾಗಿದ್ದಾಳೆ.! ಹೀಗೆ ತನ್ನನ್ನು ಬಯಸುವ ಅತಿಥಿಗಳನ್ನು ಸತ್ಕರಿಸುವ ದೇವದಾಸಿಯಾಗುವುದೇ ತನ್ನ ಬದುಕಿನ ಪುಣ್ಯ, ಸಾರ್ಥಕ್ಯವೆಂದು ಗಾಢವಾಗಿ ನಂಬಿ ಅವಳು ಬದುಕುತ್ತಿದ್ದಾಳೆ,ಆ ಮುಗ್ಧ ಸುಂದರ ಹೆಣ್ಣುಮಗಳು.!
ಇಂಥ ಕ್ರೂರ ಮೂಢನಂಬಿಕೆಯನ್ನು ಕಂಡು ತತ್ತರಿಸಿ ನಡುಗಿ ಹೋದ ಅವನು, ಆಕೆಯನ್ನು ತನ್ನ ಪಕ್ಕ ಕೂರಿಸಿ, ‘ನೀನು ನಂಬಿರುವುದು ತಪ್ಪು.ಇದು ನಿನ್ನ, ನಿನ್ನ ತಂದೆಯ ಮೂಢನಂಬಿಕೆ,ನೀನು ಮಾಡುತ್ತಿರುವುದು ದೇವರ ಸೇವೆ,ಸತ್ಕಾರವಲ್ಲ. ಅದು ಪರೋಕ್ಷ ವ್ಯಭಿಚಾರ ಎಂದು ಆ ಸುಂದರ ಮನಸಿನ, ಸುಂದರ ಹೆಣ್ಣುಮಗಳಿಗೆ ತಿಳಿಸಿ ಹೇಳಿದನು. ಈ ಮೂಢನಂಬಿಕೆಯಿಂದ ನೀನು ಇಂದೇ ಹೊರಗೆ ಬಾ’ ಎಂದು ಬೈದು,ಅವಳಿಗೆ ತಿಳುವಳಿಕೆ,ಅರಿವು ನೀಡಿ ಕಳುಹಿಸುತ್ತಾನೆ. ತಾನು ನಂಬಿದ್ದ ಪ್ರಪಂಚವೇ ಕುಸಿದು ಬಿದ್ದಂತಾಗಿ ಅಳುತ್ತಲೇ ಅವಳು ಅಲ್ಲಿಂದ ತಲೆ ತಗ್ಗಿಸಿ ಓಡಿಹೋಗುತ್ತಾಳೆ.
ಮಾರನೆಯ ದಿನ ಬೆಳಿಗ್ಗೆ ತೋಟದ ಬಾವಿಯಲ್ಲಿ ಆ ಸುಂದರ ಹುಡುಗಿಯ ಹೆಣ ತೇಲುತ್ತಿರುತ್ತದೆ.! ಬದುಕಲು ಇದ್ದ ಕಾರಣವನ್ನು ಸಹ ಕಳೆದುಕೊಂಡ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.! ‘ಅವಳ ಸಾವಿಗೆ ಕಾರಣ ಯಾರು? ಅವಳು ನಂಬಿದ್ದ (ಮೂಢ)ನಂಬಿಕೆಯನ್ನು ಛಿದ್ರಗೊಳಿಸಿ, ಬೇರೊಂದು ನಂಬಿಕೆಯನ್ನು ಕೊಡಲಾಗದೆ, ನಾನೇ ಅವಳನ್ನು ಕೊಂದೆನೇ’ ಎನ್ನುವ ಪಾಪಪ್ರಜ್ಞೆ ,ಪ್ರಶ್ನೆ ಅವನನ್ನು ಕಾಡತೊಡಗುವಲ್ಲಿಗೆ ‘ನಾನು ಕೊಂದ ಹುಡುಗಿ’ ಕತೆ ಅಲ್ಲಿಗೆ ಮುಗಿಯುತ್ತದೆ.! ನಾನು ನನ್ನ ನಂಬಿಕೆಗಳನ್ನು ಇನ್ನೊಬ್ಬರ ಮೇಲೆ ಹೇರಬಾರದೆನ್ನುವುದಕ್ಕೆ ಈ ಕತೆಯೇ ಕಾರಣ. ಮತ್ತೊಂದು ಬಲವಾದ ನಂಬಿಕೆಯನ್ನು ಕೊಡಲು ಸಾಧ್ಯವಾದರೆ ಮಾತ್ರ ನಾವು ಇನ್ನೊಬ್ಬರ ನಂಬಿಕೆಯ ಮೇಲೆ ಕೈ ಇಡಬೇಕು. ಹಾಗೆ ಮಾಡಲು ಸಾಧ್ಯವಾಗದಿದ್ದರೆ ಅವರವರ ನಂಬಿಕೆಗಳೊಂದಿಗೆ ಜನ ಅವರಿಸ್ಟದಂತೆ ಬದುಕಲಿ. ಇದರಿಂದ ಲಾಭವಿಲ್ಲದಿದ್ದರೂ, ನಷ್ಟವಂತೂ ಖಂಡಿತವಾಗಿ ಇಲ್ಲ. (ಕೃಪೆ-ಪ್ರಜಾವಾಣಿ)
ನೀಲು ಕಾವ್ಯ-- ಪಿ.ಲಂಕೇಶ್
ಪ್ರೀತಿ, ಪ್ರೇಮ, ಕಾಮ, ಕಾಮನೆಗಳನ್ನು ಅವರು ಬರಿ ಪ್ರಸ್ತಾಪಿಸದೆ “ಪ್ರಸ್ತ”ಪಿಸುತ್ತಾರೆ…
ನಾವು ಪ್ರೀತಿಸುವ ವ್ಯಕ್ತಿಯಲ್ಲಿ
ತಪ್ಪು ಕಂಡು ಹಿಡಿವ ಕೆಲಸ
ಓಯಸಿಸ್’ನಲ್ಲಿ
ಹಸಿರು ಮತ್ತು ನೀರನ್ನು
ತಿರಸ್ಕರಿಸಿದಂತೆ
ಎಂದೋ ಕಂಡ ಮೋಹಕ ಹೆಣ್ಣನ್ನು
ನೆನೆದು ದುಗುಡಗೊಳ್ಳುವ
ಗಂಡಿನಲ್ಲಿ ಎಷ್ಟು
ಸ್ವಾರ್ಥ, ಎಷ್ಟು ಪ್ರೇಮ, ಎಷ್ಟು
ಕೇವಲ ಚಪಲ ?
ಎಂಥವನನ್ನೂ ವಾಕ್ಪಟುವನ್ನಾಗಿ
ಮಾಡುವ ಎರಡು ವಸ್ತುಗಳು
ವ್ಯಾಪಾರ ಮತ್ತು ಪ್ರೇಮ
ಎನ್ನುವುದು ಎಷ್ಟು ತಮಾಷೆ !
ವ್ಯವಹಾರ ಲೋಕದಲ್ಲಿ ಲೆಕ್ಕ
ನಿಷ್ಠೆ, ನಿಯತ್ತು ಇರುವಂತೆ
ಅನುರಾಗ ಲೋಕದಲ್ಲಿ
ಚಂಚಲತೆ, ಊಹೆ ಮತ್ತು ಕವನ
ಎಂದರೆ ನಗುವೆಯಾ ?
ಸುರಸುಂದರಿಯ ರೂಪ
ಅರಳಿದ್ದು
ನಶಿಸಿದ್ದು
ಇವೆರಡರ ನಡುವಿನ ಸೂಕ್ಷ್ಮ
ಕ್ಷಣಕ್ಕಾಗಿ ಅರಸಿ ನಿರಾಶನಾಗುವುದು
ಪ್ರೇಮಿಯ ಪರಂಪರಾಗತ ಗೋಳು
ನನ್ನ ಬದುಕಿನ ಮೂವತ್ತು ವಸಂತಗಳು
ಮೂವತ್ತು ಮುಂಗಾರು
ಬೇಸಿಗೆ
ಎಲ್ಲವನ್ನೂ ಮೀರಿ
ಚಳಿಗಾಲವೊಂದರ ನಡುರಾತ್ರಿಯ ಕನಸು
ನನಗೆ ಕಂಪನ ತರುವುದು
ಕಾಮ, ಪ್ರೇಮವ ಪ್ರತ್ಯೇಕಿಸಿ
ನೋಡಬೇಡ :
ಚುಂಬನದ ನಾಲ್ಕು ತುಟಿಗಳಿಗೆ
ಸಾಕ್ಷಿಯಾದ ಎರಡು ನಾಲಿಗೆಗಳೂ
ಸದಾ ಗೊಂದಲದ ಸ್ಥಿತಿಯಲ್ಲಿರುತ್ತವೆ
ಪರಿಚಯ ಮತ್ತು ಪ್ರತಿಭಟನೆಯ
ನಡುವೆ
ಹೇಗೋ ಗೂಡು ಕಟ್ಟುವ
ಹಕ್ಕಿ
ಪ್ರೇಮ
ನೀನು ಮೆಚ್ಚುವ ಪ್ರೇಮಿಯ
ಪುಟ್ಟ ಗುಡಿಸಲು ಅರಮನೆಯೆಂದು
ಭ್ರಮಿಸಬೇಡ :
ಎಲ್ಲ ಪ್ರೇಮದ ಹಿಂದೆಯೂ
ಒಂದು ಸೆರೆಮನೆ ಇದೆ
ಮೊನ್ನೆ ತುಂಬು ಸೀರೆ ಉಟ್ಟು
ಬಟ್ಟೆ ಗಿರಣಿಗಳಂತಿದ್ದ ಹುಡುಗಿಯರು
ಈಚೆಗೆ ಗಿರಣಿಗಳ ಮುಷ್ಕರದಲ್ಲಿ
ಭಾಗವಹಿಸಿದ್ದಕ್ಕೆ
ಬೇಸಿಗೆ ಕಾರಣವಿರಬಹುದೆ ?
Tuesday, 19 May 2020
ಅಕ್ರಮ
Tuesday, 12 May 2020
ಸಾಹಿತ್ಯ ಮತ್ತು ಮನೋವಿಜ್ಞಾನ
ಗ್ರಾಮದೇವತೆಗಳು
Monday, 27 April 2020
ಕುಂತಿ
Sunday, 29 March 2020
ಕಿರು ಬಿಂದು
ಸೂಕ್ತ ಕ್ರಮ
ಮಿಸ್ಟೇಕ್
Thursday, 5 March 2020
ಗಂಡಸು ಮಾತ್ರ ಮಾಡಬಹುದಾದ ವಿಕೃತಿ ಮತ್ತು ಹೆಣ್ಣು ಮಾತ್ರ ಅನುಭವಿಸಬಹುದಾದ ಸಂಕಟ….
Wednesday, 19 February 2020
ಇಲ್ಲಿ ಕವಿತೆಗಳವಿರುದ್ಧ ಕೇಸುಹಾಕಲಾಗುತ್ತೆ ಎಚ್ಚರ...!
Wednesday, 12 February 2020
ಸ್ತ್ರೀವಾದಿ ಚಿಂತನೆ
ಸ್ತ್ರೀ ಲೋಕದ ತಲ್ಲಣಗಳು:---
Tuesday, 11 February 2020
ಸೂಫಿ ಕಥಾಲೋಕ
ಸೂಫಿ ಕಥಾಲೋಕ
Wednesday, 5 February 2020
ಸೂಫಿ ಕಥಾಲೋಕ
ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.
ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...
-
ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ ನಾವೆಲ್ಲ ಮನುಜರೊಂದೆ ಎಂಬ ಭಾವ ಮೂಡಲಿ ನಮ್ಮಲ್ಲಿ ಭೇದಭಾವ ಪ್ರಭು ದೂರವಾಗಲಿ.//2// ಒಂದು ತೋಟದಲ್ಲಿ ಹಲವು ಬಣ್ಣ ಬಣ್ಣದ ಹೂವುಗಳು ...
-
ಮುದ್ದು ರಾಮನ ಬದುಕು *ಮರೆತೆಲ್ಲ ತೊಡಕುಗಳ,ಸರಿಸುತ್ತ ಹಳತುಗಳ* *"ಎಂತೋಡುತ್ತಿದೆ ಮುಂದೆ ಈ ಕಾಲಪಕ್ಷಿ! ನಾಳೆ* *ಬಾನಿನಂಚಿನಲಿ ನವರೇಖೆ ಏನಿದೆಯೋ! ಕಾಲ ಮಹಿಮೆಗೆ...
-
ಡಾ. ಸಿದ್ದಲಿಂಗಯ್ಯ ಅವರು ಪಿ.ಎಚ್. ಡಿ ಪದವಿಗಾಗಿ ಬರೆದ ಸಂಶೋಧನ ಪ್ರಬಂಧ "ಗ್ರಾಮದೇವತೆಗಳು" ಜಾನಪದೀಯ ಅಧ್ಯಯನ. "ಗ್ರಾಮದೇವತೆಗಳ ಪರಿಕಲ...