ನಿಜಕ್ಕೂ ಅಜ್ಞಾನಿಗಳು ಮಾತ್ರ ತಮ್ಮನ್ನು ತಾವೇ ಪಂಡಿತರು, ತತ್ವಜ್ಞಾನಿಗಳೆಂದು ಕರೆದುಕೊಂಡು ಬೀಗುತ್ತಾರೆ. ಅವರಿಗೆ ವಿಷಯದ ಸ್ಪಷ್ಟತೆ ಇರುವುದಿಲ್ಲ; ದೃಢವಾದ ಅಭಿಪ್ರಾಯವೂ ಇರುವುದಿಲ್ಲ` ಎಂದೆಲ್ಲಾ ನಸ್ರುದ್ದೀನನು ಎಲ್ಲಾ ಕಡೆ ಹೇಳಿಕೊಂಡು ತಿರುಗುತ್ತಿದ್ದಾನೆ . ಇದರಿಂದ ನಮ್ಮ ಘನತೆಗೆ ಚ್ಯುತಿ ಬಂದಿದೆ. ಅಷ್ಟೇ ಅಲ್ಲ ದೇಶದ ಭದ್ರತೆಗೆ ಇದರಿಂದ ಅಪಾಯವಿದೆ ಎಂದು ತತ್ವಜ್ಞಾನಿಗಳು ಮತ್ತು ಪಂಡಿತರು ರಾಜನಲ್ಲಿ ದೂರಿದರು. ನಸ್ರುದ್ದೀನ್ ತಾನು ಹಾಗೆ ಹೇಳಿದ್ದು ನಿಜ ಎಂದು ಒಪ್ಪಿಕೊಳ್ಳಲು ಹಿಂಜರಿಯಲಿಲ್ಲ ಆರೋಪದ ವಿಚಾರಣೆಗಾಗಿ ರಾಜನು ಆ ತತ್ವಜ್ಞಾನಿಗಳು, ಘನಪಾಠಿಗಳು ಮತ್ತು ಕಾನೂನು ಪಂಡಿತರು ಗಳನ್ನು ಆಸ್ಥಾನದಲ್ಲಿ ಸೇರಿಸಿದ.
"ಮೊದಲು ಮಾತನಾಡುವ ಸರದಿ ನಿನ್ನದು" ಎಂದ ರಾಜ.
"ಬರೆಯಲು ಹಾಳೆ ಮತ್ತು ಲೇಖನಿಗಳನ್ನು ತರಿಸಿ" ಎಂದ ನಸ್ರುದ್ದೀನ್.
ಅವುಗಳನ್ನು ತರಿಸಲಾಯಿತು.
ಅವುಗಳನ್ನು ಇಲ್ಲಿ ಬಂದಿರುವ ಏಳು ಮಂದಿ ಪಂಡಿತರಿಗೂ ಹಂಚಿಸಿ.
ಹಾಗೆಯೇ ಹಂಚಲಾಯಿತು.
"ರೊಟ್ಟಿ ಎಂದರೇನು?-- ಈ ಪ್ರಶ್ನೆಗೆ ಪ್ರತಿಯೊಬ್ಬರು ಪ್ರತ್ಯೇಕವಾಗಿ ಉತ್ತರ ಬರೆಯಬೇಕು".
ಏಳುಮಂದಿ ಉತ್ತರಗಳನ್ನು ಸಿದ್ಧಪಡಿಸಿದ್ದರು.
ಅವುಗಳನ್ನು ರಾಜನಿಗೆ ಒಪ್ಪಿಸಿ ಸಭೆಗೆ ಓದಿ ಹೇಳಲು ಕೇಳಿಕೊಂಡ. ಅವರು ಬರೆದ ಉತ್ತರಗಳು ಹೀಗಿದ್ದವು:
ಮೊದಲನೆಯವನು: "ರೊಟ್ಟಿ ಎಂಬುವುದು ತಿನ್ನುವ ವಸ್ತು".
೨....."ಅದು ಹಿಟ್ಟು ಮತ್ತು ನೀರು".
೩.... "ದೇವರ ಕರುಣೆಯ ಪ್ರತಿಕ".
೪.... "ಬೇಯಿಸಲ್ಪಟ್ಟ ಮಿದ್ದಿದ ಹಿಟ್ಟಿನ ಖಾದ್ಯ".
೫.... ರೊಟ್ಟಿ ಎಂಬುದಕ್ಕೆ ಭಿನ್ನ ಭಿನ್ನ ಅರ್ಥಗಳಿವೆ ಅರ್ಥ ಮಾಡಿಕೊಳ್ಳುವವರ ಮೇಲೆ ಅದರ ಅರ್ಥ ಅವಲಂಬಿಸಿದೆ.
೬.... "ಒಂದು ಪೌಷ್ಟಿಕ ಆಹಾರ".
ಏಳನೆಯವನು: "ಅದು ನಿಜವಾಗಿಯೂ ಏನು ಎಂಬುದು ಯಾರಿಗೂ ತಿಳಿಯದು".
ಆಗ ನಸ್ರುದ್ದೀನ್, "ಮಹಾರಾಜ ರೊಟ್ಟಿ ಎಂದರೇನು ಎಂಬುದರ ಬಗ್ಗೆಯೇ ಇವರಲ್ಲಿ ಒಮ್ಮತದ ನಿರ್ಣಯ ಮೂಡಿಬರುವುದು ಸಾಧ್ಯವಿಲ್ಲ. ಹೀಗಿರುವಾಗ ಇತರ ವಿಷಯಗಳ ಬಗ್ಗೆ ಇವರು ನಿರ್ಣಯ ಕೊಡುವುದು ಹೇಗೆ ಸಾಧ್ಯ..? ನನ್ನ ಮೇಲಿರುವ ಆರೋಪದ ವಿಷಯವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ: ನಾನು ಹೇಳಿದ್ದು ಸರಿಯೋ-ತಪ್ಪೋ ಅದನ್ನು ನಿರ್ಣಯಿಸಲು ಇವರನ್ನು ತೀರ್ಪುಗಾರರಾಗಿ ಕರಿಸಿದ್ದೀರಿ. ದಿನವೂ ತಿನ್ನುವ ರೊಟ್ಟಿಯ ಬಗ್ಗೆಯೇ ಒಮ್ಮತವಿಲ್ಲದ ಇವರು ನಾನು ಧರ್ಮ ವಿರೋಧಿ ಎಂದು ಆರೋಪ ಹೊರಿಸುವಲ್ಲಿ ಮಾತ್ರ ಒಂದಾಗಿ ಬಿಡುತ್ತಾರೆ . ಎಂಥ ವಿಪರ್ಯಾಸ.?" ಎಂದು ಹೇಳಿದ.
-ಸೂಫಿ ಕಥಾಲೋಕ
No comments:
Post a Comment