ಪರಿವಿಡಿ
ಹುಡುಕು
ಋತಾ ಅನಾಮಿಕಾ
ಅಲೆಮಾರಿಯ ರೆಕ್ಕೆ ಬೀಸು….
ಗಂಡಸು ಮಾತ್ರ ಮಾಡಬಹುದಾದ ವಿಕೃತಿ ಮತ್ತು ಹೆಣ್ಣು ಮಾತ್ರ ಅನುಭವಿಸಬಹುದಾದ ಸಂಕಟ….
ಗಂಡಸು ಮಾಡುವ ಲೈಂಗಿಕ ಶೋಷಣೆ ಹೆಣ್ಣಿನ ಪಾವಿತ್ರ‍್ಯಕ್ಕೆ ಹಾನಿ ಎಸಗಲು ಸಾಧ್ಯವಿಲ್ಲ, ಇಷ್ಟಕ್ಕೂ ಹೆಣ್ಣಿನ ಅಸ್ಮಿತೆಯನ್ನು ಕದಡಲು ಗಂಡಸಿಗೆ ಯಾವ ರೀತಿಯ ಅರ್ಹತೆಯಾಗಲೀ ಸಾಮರ್ಥ್ಯವಾಗಲೀ ಇಲ್ಲ ಅನ್ನುವ ಮಾತನ್ನ ಮನದಟ್ಟು ಮಾಡುವ ಅಗತ್ಯ ಎಲ್ಲಕ್ಕಿಂತ ಮೊದಲು ಇದೆ. ಮತ್ತು ಅತ್ಯಾಚಾರ ಪ್ರಕರಣಗಳನ್ನು ತಗ್ಗಿಸಲು ಇರುವ ಎರಡನೇ ವಿಧಾನ ಕಠಿಣ ಶಿಕ್ಷೆ. ಕಠಿಣ ಅನ್ನುವುದಕ್ಕಿಂತ ಅವಮಾನಕರ ಶಿಕ್ಷೆ. ಅಥವಾ ಒಂದು ಕೆಲಸ ಮಾಡಬಹುದು. ಇದು ಮನಸು ಗಿನಸಿನದಲ್ಲ, ಪೂರಾ ಲೈಂಗಿಕ ಸಂಗತಿಯೇ ಅನ್ನುವ ಹಾಗಿದ್ದರೆ – ಬೀದಿಬೀದಿಯಲ್ಲಿ ಸುಲಭ ಶೌಚಾಲಯಗಳಿರುವ ಹಾಗೆಯೇ ‘ಈಸಿ ಫಕ್ ಸೆಂಟರ್’ಗಳನ್ನ ಸ್ಥಾಪಿಸಬಹುದು. ಚೀನಾದಿಂದ ಏನೇನೋ ತರಿಸುತ್ತಿರುವಂತೆಯೇ ಸೆಕ್ಸ್ ಡಾಲ್‌ಗಳನ್ನ ತರಿಸಿ ಇಡಬಹುದು. ಹಳ್ಳಿ, ಪಟ್ಟಣ, ನಗರಗಳಲ್ಲಿ ಈ ವ್ಯವಸ್ಥೆ ಇರುವಂತಾಗಬೇಕು. ಸರ್ಕಾರಗಳಿಗೆ ಕೊಂಚ ಹಣ ಖರ್ಚಾಗುತ್ತದೆ. ಅಂಥವರ ನರದೌರ್ಬಲ್ಯಕ್ಕೆ ಬಲಿಯಾಗುವ ಹೆಣ್ಣುಗಳ ಜೀವಕ್ಕಿಂತ ಅದು ಹೆಚ್ಚೇನಲ್ಲ.
ಪ್ರತಿಸಲವೂ (ನಾನು) ಬೇಸರ, ನೋವು, ಹತಾಶೆ, ತಾತ್ಸಾರಗಳಿಂದ ’ಗಂಡಸು’ ಅಂತ ಬರೆವಾಗ ಅಲ್ಲಿ ಬುದ್ಧಿ, ಮೆದುಳು, ಹೃದಯಾದಿ ಅಂತಃಕರಣದಿಂದ ಯೋಚಿಸುವ ಹಾಗೂ ನಡೆದುಕೊಳ್ಳುವ ‘ಮನುಷ್ಯ’ ಇರುವುದಿಲ್ಲ. ಬದಲಿಗೆ, ಕೇವಲ ತನ್ನ ಲಿಂಗ ಮತ್ತು ಅದರ ವಿಕೃತ ಸಾಧ್ಯತೆಗಳಿಂದಷ್ಟೆ ಯೋಚಿಸುವ ಜೀವಿ ಇರುತ್ತಾನೆ. ಇದು ಬರೀ ಲೈಂಗಿಕತೆಗೆ ಸಂಬಂಧಿಸಿದ ದುರಹಂಕಾರವಲ್ಲ. ಅದರ ಮೂಲಕ ತಾನು ಉಂಟು ಮಾಡುವ ದಬ್ಬಾಳಿಕೆ ಕೂಡ.
ಕೋಮು ದ್ವೇಷ, ಜಾತೀಯ ಮೇಲರಿಮೆ, ಹಣದ ಮದ, ರಾಜಕಾರಣ – ಇದೇನೇ ಇದ್ದರೂ ಗಂಡಸು ತನ್ನ ಎದುರಾಳಿ ಹೆಣ್ಣಿನ ‘ಕೊಬ್ಬು ಇಳಿಸಲು’ ಬಳಸುವ ಸುಲಭ ತಂತ್ರ ಇದೊಂದೇ ಆಗಿರುತ್ತದೆ. ಲೈಂಗಿಕವಾಗಿ ಹೆಣ್ಣಿನ ಮೇಲೆರಗುವುದು ಅವನ ಪಾಲಿಗೆ ಅವನು ವಿಧಿಸುವ ‘ಶಿಕ್ಷೆ’. ಆತ ಹೆಣ್ಣಿಗೆ ಮಾಡುವ ‘ಶಾಸ್ತಿ’. ಗಂಡಸು ಅತ್ಯಾಚಾರ ಮಾಡುತ್ತಾನೆಂದರೆ ಅಲ್ಲಿ ಕೇವಲ ಲೈಂಗಿಕ ವಾಂಛೆ ಇರುವುದಿಲ್ಲ. ತೀರ ಕೆಟ್ಟದಾಗಿ ಮಾತಾಡಬೇಕಾಗುತ್ತದೆ ಕೆಲ ಸಾರ್ತಿ – ಅಂತಹ ಹಸಿವನ್ನು ತಣಿಸಿಕೊಳ್ಳಲೇಬೇಕು ಅಂತಿದ್ದರೆ ಒಂದು ಚಿಕ್ಕ ರಂಧ್ರ ಸಾಕಾಗುತ್ತದೆ, ಹೆಣ್ಣು ಬೇಕೆಂದೇನಿಲ್ಲ. ಅವನು ತನ್ನ ದುರಹಂಕಾರದ ತೃಪ್ತಿಗಾಗಿ, ತನ್ನ ಮದವನ್ನು ತಾನು ಸಾಬೀತುಪಡಿಸಿಕೊಳ್ಳಲಿಕ್ಕಾಗಿಯಷ್ಟೆ ಅತ್ಯಾಚಾರ ಎಸಗುವುದು. ಅದು ಆತನ ಲೈಂಗಿಕ ವಿಕೃತಿಯಲ್ಲ, ಮಾನಸಿಕ ವಿಕೃತಿ. ಆತ್ಮ ವಿಕೃತಿಯಷ್ಟೆ.
ಗಂಡಸು ಮಾಡುವ ಲೈಂಗಿಕ ಶೋಷಣೆ ಹೆಣ್ಣಿನ ಪಾವಿತ್ರ‍್ಯಕ್ಕೆ ಹಾನಿ ಎಸಗಲು ಸಾಧ್ಯವಿಲ್ಲ, ಇಷ್ಟಕ್ಕೂ ಹೆಣ್ಣಿನ ಅಸ್ಮಿತೆಯನ್ನು ಕದಡಲು ಗಂಡಸಿಗೆ ಯಾವ ರೀತಿಯ ಅರ್ಹತೆಯಾಗಲೀ ಸಾಮರ್ಥ್ಯವಾಗಲೀ ಇಲ್ಲ ಅನ್ನುವ ಮಾತನ್ನ ಮನದಟ್ಟು ಮಾಡುವ ಅಗತ್ಯ ಎಲ್ಲಕ್ಕಿಂತ ಮೊದಲು ಇದೆ. ಮತ್ತು ಅತ್ಯಾಚಾರ ಪ್ರಕರಣಗಳನ್ನು ತಗ್ಗಿಸಲು ಇರುವ ಎರಡನೇ ವಿಧಾನ ಕಠಿಣ ಶಿಕ್ಷೆ. ಕಠಿಣ ಅನ್ನುವುದಕ್ಕಿಂತ ಅವಮಾನಕರ ಶಿಕ್ಷೆ. ಅಥವಾ ಒಂದು ಕೆಲಸ ಮಾಡಬಹುದು. ಇದು ಮನಸು ಗಿನಸಿನದಲ್ಲ, ಪೂರಾ ಲೈಂಗಿಕ ಸಂಗತಿಯೇ ಅನ್ನುವ ಹಾಗಿದ್ದರೆ – ಬೀದಿಬೀದಿಯಲ್ಲಿ ಸುಲಭ ಶೌಚಾಲಯಗಳಿರುವ ಹಾಗೆಯೇ ‘ಈಸಿ ಫಕ್ ಸೆಂಟರ್’ಗಳನ್ನ ಸ್ಥಾಪಿಸಬಹುದು. ಚೀನಾದಿಂದ ಏನೇನೋ ತರಿಸುತ್ತಿರುವಂತೆಯೇ ಸೆಕ್ಸ್ ಡಾಲ್‌ಗಳನ್ನ ತರಿಸಿ ಇಡಬಹುದು. ಹಳ್ಳಿ, ಪಟ್ಟಣ, ನಗರಗಳಲ್ಲಿ ಈ ವ್ಯವಸ್ಥೆ ಇರುವಂತಾಗಬೇಕು. ಸರ್ಕಾರಗಳಿಗೆ ಕೊಂಚ ಹಣ ಖರ್ಚಾಗುತ್ತದೆ. ಅಂಥವರ ನರದೌರ್ಬಲ್ಯಕ್ಕೆ ಬಲಿಯಾಗುವ ಹೆಣ್ಣುಗಳ ಜೀವಕ್ಕಿಂತ ಅದು ಹೆಚ್ಚೇನಲ್ಲ.
ಮರಕ್ಕೆ ಗೋಣು ತೂಗಿಸಿಕೊಂಡು ನೇತಾಡುತ್ತಿರುವ ಅಕ್ಕ ತಂಗಿಯರ ಶವದ ಚಿತ್ರಗಳನ್ನು ನೋಡಿ ಅಸಹನೀಯ ನೋವು. ಕೇವಲ ಹೆಣ್ಣು ಅನ್ನುವ ಕಾರಣಕ್ಕೆ ಅನುಭವಿಸುವ ಯಾತನೆ. ಯಾವ ಹೊತ್ತು ಯಾವ ಗಂಡಸು ಹೇಗೆ ನಡೆದುಕೊಳ್ಳುತ್ತಾನೆ ಅನ್ನುವ ಆತಂಕದಲ್ಲಿ ಕಾಲ ತಳ್ಳಬೇಕು. ಎರಡು ತಿಂಗಳ ಹಿಂದೆ ಓದಿದ್ದ ಒಂದು ವರದಿ ಇನ್ನೂ ಕಾಡುತ್ತಲೇ ಇರುವಾಗ ಈ ಮತ್ತೊಂದು ಸುದ್ದಿ. ಉತ್ತರ ಭಾರತದ ಕೆಲ ಹಳ್ಳಿಗಳಲ್ಲಿ ಅಪ್ಪಂದಿರೇ ಹೆಣ್ಣುಮಕ್ಕಳನ್ನ ಲೈಂಗಿಕವಾಗಿ ಬಳಸಿಕೊಳ್ಳುವ ಬಗ್ಗೆ…. ತಾಯಂದಿರಿಗೆ ಇದು ಗೊತ್ತಿದ್ದೂ ಎದುರಾಡಲಾಗದ, ಮಗಳನ್ನು ರಕ್ಷಿಸಲಾಗದ ಅಸಹಯಾಕತೆಯ ಬಗ್ಗೆ… ಇನ್ನೂ ಮುಂದುವರೆದು ಕೆಲವರು ಅದನ್ನು ಒಪ್ಪಿಕೊಂಡು ಮಗಳನ್ನೇ ಸವತಿಯಾಗಿ ಕಾಣುವ ಬಗ್ಗೆ….
ಗೆಳತಿ ಹೇಳಿದ್ದ ಮತ್ತೂ ಒಂದು ಘಟನೆ ನೆನಪಾಗುತ್ತಿದೆ… ದಕ್ಷಿಣ ಕನ್ನಡದಲ್ಲಿ ನಡೆದಿದ್ದು. ಆ ಹುಡುಗಿಯ ಮೇಲೆ ಲೈಂಗಿಕ ಶೋಷಣೆ ನಡೆಸಿ ಮರಕ್ಕೆ ನೇತು ಹಾಕಿ, ಕೊಂಬೆಯಲ್ಲಿದ್ದ ಜೇನು ಗೂಡಿಗೆ ಕಲ್ಲು ಹೊಡೆದು ಆಕೆ ನರಳಿ ಸಾಯುವಂತೆ ಮಾಡಿದ್ದರಂತೆ! ಇದು ಸುದ್ದಿಯಿರಲಿ, ಸದ್ದೂ ಆಗಲಿಲ್ಲ. ಸಾಮಾನ್ಯ ಕುಟುಂಬ, ಮಾತಾಡಲೂ ಭಯಪಟ್ಟು ಸುಮ್ಮನೆ ಉಳಿದಿದೆ. ಅತ್ಯಾಚಾರ ಅಂದ ಕೂಡಲೆ ಎಳುವ ವಾದ ವಿವಾದಗಳು ಅಸಹ್ಯ ಹುಟ್ಟಿಸುತ್ತವೆ. ಹೆಣ್ಣುಮಕ್ಕಳ ಬಟ್ಟೆ, ನಡೆನುಡಿಗಳ ಬಗ್ಗೆ ಭಾಷಣಗಳಾಗುತ್ತವೆ. ಈ ಎಲ್ಲ ಹರಟುವ ಸಂಸ್ಕೃತಿ ವಕ್ತಾರರಿಗೆ ಹೇಳಬೇಕು, ನಮ್ಮ ಪುರಾಣಗಳನ್ನು ಓದಲು. ಗಂಡಸಿನೊಟ್ಟಿಗೇ ಆತನ ಈ ವಿಕೃತಿಯೂ ಹುಟ್ಟಿಕೊಂಡಿದೆ. ಗರತಿಯಾಗಿದ್ದ ತುಳಸಿಯ ಪಾವಿತ್ರ‍್ಯವನ್ನು ಸ್ವತಃ ಭಗವಂತ ಅನ್ನಿಸಿಕೊಂಡವನು ಕೆಡಿಸುವ ಕಥೆಯೇ ನಮ್ಮಲ್ಲಿ ಇಲ್ಲವೆ? ಮತ್ತವರು ಬಟ್ಟೆಯ ಬಗ್ಗೆ ಮಾತಾಡುತ್ತಾರೆ!!
~
ಪುರಾಣ ಕಂತೆಗಳನ್ನು ಬಿಡಿ. ಬಹುಶಃ ಅತ್ಯಾಚಾರ ಕುರಿತಂತೆ ಇರುವ ಮೊದಲ ಐತಿಹಾಸಿಕ ದಾಖಲೆ ಇದು. ಧಮ್ಮಪದ ಗಾಥಾ ಪ್ರಸಂಗಗಳು ಕೃತಿಯು ಈ ಕುರಿತು ಹೇಳುತ್ತದೆ.
ಶ್ರಾವಸ್ತಿಯ ಶ್ರೀಮಂತನೊಬ್ಬನಿಗೆ ಅತ್ಯಂತ ಸುಂದರಿಯಾದ ಮಗಳೊಬ್ಬಳು ಇರುತ್ತಾಳೆ. ಅವಳ ಹೆಸರು ಉತ್ಪಲಾವರ್ಣ. ಅವಳನ್ನ ಮೆಚ್ಚಿ ಮದುವೆಯಾಗಲು ಅನೇಕ ರಾಜಕುಮಾರರು ಮುಂದೆ ಬರುತ್ತಾರೆ. ಆದರೆ ಅವಳು ವಿರಾಗಿಣಿ. ಸಂಸಾರದಲ್ಲಿ ಅನಾಸಕ್ತೆ. ಬುದ್ಧನ ಬೋಧನೆಗಳಲ್ಲಿ ಹೃದಯವಿಟ್ಟವಳು. ಅಪ್ಪನ ಮನವೊಲಿಸಿ ತಾನೂ ಬಿಕ್ಖುಣಿಯಾಗುವೆ ಅನ್ನುತ್ತಾಳೆ. ಆ ಶ್ರೀಮಂತನೂ ಬುದ್ಧಾನುಯಾಯಿ. ಸಂಭ್ರಮದಿಂದಲೇ ಆಕೆಗೆ ಅನುಮತಿ ಇತ್ತು ಕಳಿಸಿಕೊಡುತ್ತಾನೆ. ಬಿಕ್ಖುಣಿ ಸಂಘ ಸೇರುವ ಉತ್ಪಲಾ ವರ್ಣ, ಸತತ ಸಾಧನೆಯಿಂದ ಅರಹಂತೆಯೂ ಆಗುತ್ತಾಳೆ.
ಒಮ್ಮೆ ಅವಳು ಕಾಡಿನಲ್ಲಿ ಧ್ಯಾನಕ್ಕೆ ಕುಳಿತಿದ್ದಾಗ ಆಕೆಯ ಚಿಕ್ಕಪ್ಪನ ಮಗ ಬರುತ್ತಾನೆ. ತನ್ನ ದಾಯಾದಿ ಹೀಗೆ ಬಿಕ್ಖುಣಿಯಾಗಿದ್ದು ಅವನಲ್ಲಿ ಮತ್ಸರ ಹುಟ್ಟುಹಾಕಿರುತ್ತದೆ. ಉತ್ಪಲಾವರ್ಣ ಏಕಾಂಗಿಯಾಗಿ ತಪೋನಿರತಳಾಗಿದ್ದ ವೇಳೆಯಲ್ಲಿ ಅವಳ ಮೇಲರಗುತ್ತಾನೆ. ಅತ್ಯಾಚಾರಕ್ಕೆಳಸುತ್ತಾನೆ. ಕಾಡಿನಿಂದ ಮರಳಿದ ಉತ್ಪಲೆ ಈ ಸಂಗತಿಯನ್ನು ಸಹಬಿಕ್ಖುಣಿಯರಲ್ಲಿ ಹೇಳಿಕೊಳ್ಳುತ್ತಾಳೆ. ವಿಷಯ ಬುದ್ಧನ ಕಿವಿ ತಲಪುತ್ತದೆ.
ಬುದ್ಧನ ಚಿಂತನೆ ಅದೆಷ್ಟು ಉದಾತ್ತ ನೋಡಿ…. “ಮತ್ತೊಬ್ಬರ ವಿಕೃತಿಗೆ ಈಕೆಯ ಪಾವಿತ್ರ‍್ಯ ಕೆಡುವುದು ಹೇಗೆ? ಈಕೆಯದೇನೂ ದೋಷವಿಲ್ಲ. ಉತ್ಪಲಾವರ್ಣ ಹಿಂದಿನಂತೆಯೆ ಪರಿಶುದ್ಧಳು” ಅನ್ನುತ್ತಾನೆ. ಮತ್ತು ಆಕೆಯನ್ನು ಎಂದಿನಂತೆಯೇ ಸಂಘದಲ್ಲಿ ಮುಂದುವರೆಯಲು ಹೇಳುತ್ತಾನೆ.
ಅತ್ಯಾಚಾರದ ವಿರುದ್ಧ ಮಾತಾಡುವವರ ಬಾಯ್ಮುಚ್ಚಿಸುತ್ತ ಹೆಣ್ಣಿನ ನಡತೆ ಬಗ್ಗೆ ಪಾಠ ಹೇಳುವವರು ಧ್ಯಾನಸ್ಥಳಾದ ಹೆಣ್ಣನ್ನೂ ಬಯಸುವಂಥ ವಿಕೃತ ಮನಸ್ಥಿತಿಯನ್ನ ಬೆಂಬಲಿಸುವಂಥರೇ ಆಗಿರುತ್ತಾರೆ.
ಇದು ಶಾಶ್ವತ ಪರಿಹಾರವಿಲ್ಲದ ಅನ್ಯಾಯ ಎಂದು ನಿಡುಸುಯ್ಯುವುದಷ್ಟೆ ಉಳಿಯುವುದೇ ಕೊನೆಗೆ?
No comments:
Post a Comment