Saturday, 29 August 2020

ಹಿಂದೂ ಧರ್ಮದ ತತ್ವಜ್ಞಾನ

ಮನು ಒಬ್ಬನೇ ಹೀಗೆ ಜಗತ್ತಿನಲ್ಲಿ ಸಾಮಾನ್ಯ ಮನುಷ್ಯನಿಗೆ ಜ್ಞಾನದ ಹಕ್ಕನ್ನು ನಿರಾಕರಿಸಿದ ಏಕೈಕ ವ್ಯಕ್ತಿ.:- 

ಹಿಂದೂ ಧರ್ಮದಲ್ಲಿ ಸಾಮಾಜಿಕ ಅಸಮಾನತೆ ಮತ್ತು ಧಾರ್ಮಿಕ ಅಸಮಾನತೆಗಳೆರಡನ್ನು ತಾತ್ವಿಕವಾಗಿ ಬೆಸೆಯಲಾಗಿದೆ.

ಹಿಂದೂ ಧರ್ಮವು ಸಮಾನತೆಯನ್ನು ಒಪ್ಪುತ್ತದೆಯೇ..?
•ವರ್ಣ ಜಾತಿಯ ಮೂಲ.
•ಮನು ಗುಲಾಮ ಪದ್ಧತಿಯನ್ನು ಒಪ್ಪಿಕೊಂಡಿದ್ದಾನೆ. ಅದನ್ನು ಶೂದ್ರರಿಗೆ ಮಾತ್ರ ಸೀಮಿತಗೊಳಿಸಿದ್ದಾನೆ.
ಉದ್ಯೋಗ ಸ್ವಾತಂತ್ರ ಹಾಗೂ ಶಿಕ್ಷಣದ ಸಮಾನತೆಯ ಹಕ್ಕನ್ನು ಹಿಂದೂಧರ್ಮ ನಿರಾಕರಿಸುತ್ತದೆ.

•ಹಿಂದೂ ಧರ್ಮದ ತತ್ವಜ್ಞಾನದಲ್ಲಿ ಸಾಮಾನ್ಯ ಮನುಷ್ಯರಂತೆ ಒಟ್ಟಾರೆ ಸಮಾಜದ ಹಿತವನ್ನು ನಿರಾಕರಿಸಿ ತುಳಿದು ಮತ್ತು ಬಲಿಕೊಟ್ಟು ಅತಿಮಾನವ ವರ್ಗದ ಹಿತಾಸಕ್ತಿಯನ್ನು ಕಾಪಾಡಲಾಗಿದೆ.

•ಹಿಂದೂ ಧರ್ಮದ ತತ್ವಜ್ಞಾನವು ಅತಿಮಾನವನಿಗೆ ಸ್ವರ್ಗವಾದರೆ; ಸಾಮಾನ್ಯ ಮನುಷ್ಯನಿಗೆ ನರಕವಾಗಿದೆ.

•ಹಿಂದೂ ಧರ್ಮದಲ್ಲಿ ಉತ್ತಮ ಗುಣ ವೆಂಬುದು ಸಮಾಜದ ಒಳಿತಿಗೆ ಅಥವಾ ದೇವತಾರಾಧನೆಗೆ ಸಂಬಂಧಿಸಿದ್ದಲ್ಲ. ಅದು ಬ್ರಾಹ್ಮಣರಿಗೆ ನೀಡುವ ಗೌರವ ಮತ್ತು ದಕ್ಷಿಣೆ ಎಂದು ತಿಳಿಯಲಾಗಿದೆ. ಹಿಂದೂ ನೀತಿಶಾಸ್ತ್ರ ವೆಂದರೆ ಶ್ರೇಷ್ಠ ವ್ಯಕ್ತಿಯ ಆರಾಧನೆ.

•ಹಿಂದೂ ಧರ್ಮವೇ..!ನಿನ್ನ ಹೆಸರೇ ಅಸಮಾನತೆ. ಅಸಮಾನತೆಯೇ ಹಿಂದೂ ಧರ್ಮದ ಆತ್ಮ.

•ಆರ್ಥಿಕ ಭದ್ರತೆ ಇಲ್ಲದ ಸ್ವಾತಂತ್ರ್ಯಕ್ಕೆ ಯಾವುದೇ ಬೆಲೆಯಿಲ್ಲ.

•ಬ್ರಾಹ್ಮಣರು ಬರೆದ ಸಾಹಿತ್ಯವೆಲ್ಲವೂ ಇಸವಿ, ದಿನಾಂಕ ವಿಲ್ಲದ ಇತಿಹಾಸ.

•ಕೊಲ್ಲುವುದೇ ಕ್ಷತ್ರಿಯನ ಕರ್ತವ್ಯವೆಂದು ಹೇಳುವ ಭಗವದ್ಗೀತೆಯ ತಾತ್ವಿಕ ಸಮರ್ಥನೆ.

ಭಗವದ್ಗೀತೆಯ ಹೃದಯವೇ ಚಾತುರ್ವರ್ಣದ ಸಮರ್ಥನೆ ಮತ್ತು ಅನುಷ್ಠಾನದಲ್ಲಿ ಅದರ ಆಚರಣೆಯನ್ನು ತರುವುದು.


•ಬ್ರಹ್ಮ, ವಿಷ್ಣು ,ಶಿವ ಇವರ ಏಳುಬೀಳುಗಳನ್ನು ಪ್ರಸ್ತಾಪಿಸಲಾಗಿದೆ. ಸ್ಥಾನ ಮತ್ತು ಅಧಿಕಾರಕ್ಕಾಗಿ ನಡೆದ ಹೋರಾಟವೇ ಆಗಿದೆ.~ಗಾಡ್ಸ ಅಟ್ ವಾರ್.

•ಇವರುಗಳು ಪರಸ್ಪರ ಸ್ನೇಹಿತರಾಗಿರುವದಕ್ಕಿಂತ,ಶತ್ರುಗಳಾಗಿದ್ದು; ಸರ್ವೋತ್ಕೃಷ್ಟತೆಗೂ, ಪರಮಾಧಿಕಾರಕ್ಕಾಗಿ ನಡೆದ ಕಚ್ಚಾಟ‌. 

•ರಾಮಾಯಣದ ಉತ್ತರಕಾಂಡದಲ್ಲಿ ರಾಮನು-ಸೀತೆಯು ಒಟ್ಟಿಗೆ ಕುಳಿತು ಮದ್ಯಪಾನ ಹಾಗೂ ಮಾಂಸ ಸೇವನೆ ಮಾಡುತ್ತಿದ್ದುದ್ದರ ಉಲ್ಲೇಖ ಇದೆ.

•ಶಿವ ಮೊದಲ ವೇದ ವಿರೋಧಿಯಾಗಿದ್ದನೆಂದು ಸಾಕಷ್ಟು ಸ್ಪಷ್ಟವಾದ ನಿದರ್ಶನಗಳಿವೆ.

• ಬುದ್ಧನ ವಿಗ್ರಹ ಕೇವಲ ಒಂದು ಚಿತ್ರ ಅಥವಾ ಪ್ರತಿಮೆ. ಅದಕ್ಕೆ ಆತ್ಮವಿಲ್ಲ. 

•ಬ್ರಾಹ್ಮಣರು ಹಿಂದೂ ದೈವಗಳಿಗೆ ಆತ್ಮವನ್ನು ಆರೋಪಿಸಿ ಅವರನ್ನು ಸಜೀವ ವ್ಯಕ್ತಿಗಳನ್ನಾಗಿ ಮಾಡಿದರೆಕೇ..? ಪ್ರಾಣಪ್ರತಿಷ್ಠಾಪನ. ಹಿಂದುಗಳು ಬಹುದೇವತ ಆರಾಧಕರು ಭಕ್ತಿಯಲ್ಲಿ ಎಂದು ಅಚಲ ವಾಗಿರಲಿಲ್ಲ. ದೈವಕ್ಕೆ ನಿಷ್ಠೆ, ಶ್ರದ್ಧೆ ವಿಶ್ವಾಸವೂ ಇರಲಿಲ್ಲ.

•ಹಿಂದೂ ಭಾರತದ ಮೇಲೆ ಮುಸ್ಲಿಂ ದಾಳಿಕೋರರ ದಂಡೆಯಾತ್ರೆಗಳಿಗಿಂತ ಬೌದ್ಧ ಭಾರತದ ಮೇಲೆ ಬ್ರಾಹ್ಮಣ ದಾಳಿಕೋರರ ದಂಡೆಯಾತ್ರೆಗಳು ಅತ್ಯಂತ ಘೋರ ,ಪೈಶಾಚಿಕ.

•ಬೌದ್ಧ ಧರ್ಮವನ್ನು ನಾಶಮಾಡಿ ಬ್ರಾಹ್ಮಣ ಧರ್ಮವನ್ನು ಮರು ಸ್ಥಾಪಿಸುವುದೇ ಪುಷ್ಯಮಿತ್ರನ ಕ್ರಾಂತಿಯ ಏಕೈಕ ಗುರಿ ಉದ್ದೇಶವಾಗಿತ್ತೆಂಬುದಕ್ಕೆ ಸಂದೇಹವಿಲ್ಲ. (ಮನುಸ್ಮೃತಿ ಕಾನೂನು ಸಂಹಿತೆ ರೂಪುಗೊಂಡಿತು)

•ಬೌದ್ಧಧರ್ಮದ ಪ್ರಹಾರದಿಂದ ತಮ್ಮನ್ನು ರಕ್ಷಿಸಿಕೊಳ್ಳಲು  ಭಗವದ್ಗೀತೆ ಅಸ್ತಿತ್ವಕ್ಕೆ ಬಂತು. ಹಾಗೆ ಬೌದ್ಧ ಸಾಹಿತ್ಯದಿಂದ ತಾತ್ವಿಕ, ನೈತಿಕ ಮೌಲ್ಯಗಳನ್ನು ಎರವಲು ಪಡೆದದ್ದು ಕಾಣಬಹುದು.

•ಭಗವದ್ಗೀತೆಯ ಹೃದಯವೇ ಚಾತುರ್ವರ್ಣದ ಸಮರ್ಥನೆ ಮತ್ತು ಅನುಷ್ಠಾನದಲ್ಲಿ ಅದರ ಆಚರಣೆಯನ್ನು ತರುವುದು. ಭಗವದ್ಗೀತೆಯು ದೇವ ವಾಣಿಯಲ್ಲ. ಆದ್ದರಿಂದ ಅದು ಯಾವ ಸಂದೇಶವನ್ನು ಕೊಡಲಾರದು. ಅದನ್ನು ಹುಡುಕುವುದು ವ್ಯರ್ಥ. ಭಗವದ್ಗೀತೆಯು ಧರ್ಮ ಗ್ರಂಥವಲ್ಲ, ದರ್ಶನ ಗ್ರಂಥವು ಅಲ್ಲ ಎಂಬುದೇ ನನ್ನ ಉತ್ತರ. ತಾತ್ವಿಕ ನೆಲೆಗಟ್ಟಿನ ಮೇಲೆ ಕೆಲವು ಧಾರ್ಮಿಕ ನಂಬಿಕೆಗಳನ್ನು ಸಮರ್ಥಿಸುವುದೇ ಭಗವದ್ಗೀತೆಯ ಉದ್ದೇಶ. ಚಾತುರ್ವರ್ಣ ದೈವ ಸೃಷ್ಟಿಯೆಂದು, ಆದ್ದರಿಂದ ಪವಿತ್ರವೆಂದು ಭಗವದ್ಗೀತೆ ನಿಸ್ಸಂದೇಹವಾಗಿ ಹೇಳುತ್ತದೆ. ಮೂಢನಂಬಿಕೆಯೇ ಅದರ ಹೊಲಸು (ಕರ್ಮಸಿದ್ಧಾಂತ). ಕರ್ಮವೆಂದರೆ ಧಾರ್ಮಿಕ ವ್ರತಗಳು ಮತ್ತು ಆಚರಣೆಗಳು. ಕೊಲ್ಲುವುದೇ ಕ್ಷತ್ರಿಯನ ಕರ್ತವ್ಯವೆಂದು ಹೇಳುವ ಭಗವದ್ಗೀತೆಯ ತಾತ್ವಿಕ ಸಮರ್ಥನೆ . ಕೊಲೆಯಾಗುವುದು ದೇಹ ಆದರೆ ಆತ್ಮವಲ್ಲ ಎಂದು ಹೇಳುತ್ತದೆ. ಇದನ್ನು (ಒಬ್ಬ ಕೊಲೆ ಮಾಡಿದ ವ್ಯಕ್ತಿ ನ್ಯಾಯಾಲಯದ ಮುಂದೆ ತನ್ನ ಅಪರಾಧಕ್ಕೆ ಈ ನಿದರ್ಶನವನ್ನು ಕೊಟ್ಟು ಸಮರ್ಥನೆ ಮಾಡಿಕೊಂಡರೇ ನಗೆಪಾಟಲಿಗೆ ಗುರಿಯಾಗಬಹುದು,  ಬಾಲಿಶ ಎನಿಸುತ್ತದೆ.)

• ಹಿಂದೂ ಧರ್ಮವೆಂದರೆ ಅನೇಕ ನಂಬಿಕೆ ಮತ್ತು ಸಿದ್ಧಾಂತಗಳ ಒಂದು ಸಂಕೀರ್ಣ ಸಮೂಹ.

•ಯಜ್ಞವು ಕಗ್ಗೊಲೆಯನ್ನು ಒಳಗೊಂಡಿತ್ತಷ್ಟೇ ಅಲ್ಲ. ಅದೊಂದು ಸ್ವೇಚ್ಛಾ ವಿಹಾರೋತ್ಸವವಾಗಿತ್ತು.ಸುಟ್ಟ ಮಾಂಸವಲ್ಲದೆ ಮಧ್ಯವೂ ಅಲ್ಲಿರುತ್ತಿತ್ತು. ಬ್ರಾಹ್ಮಣರು ಸೋಮ ಮತ್ತು ಸುರಪಾನ ಮಾಡುತ್ತಿದ್ದರು.ಪ್ರತಿಯೊಂದು ಯಜ್ಞವು ಮುಗಿದ ನಂತರ ಜೂಜಾಟವಾಡುತ್ತಿದ್ದರು ಮತ್ತು ಇನ್ನೂ ಅಸಾಧಾರಣವಾದ ಒಂದು ಮಾತೆಂದರೆ ಇದರ ಜೊತೆಯಲ್ಲಿಯೇ ಬಯಲಿನಲ್ಲಿ ಮೈಥುನ ಸಂಭೋಗ ನಡೆಯುತ್ತಿತ್ತು. ಯಜ್ಞವೆಂದರೆ ವ್ಯಭಿಚಾರವಾಗಿತ್ತು ಮತ್ತು ಅದರಲ್ಲಿ ಧರ್ಮವೆಂಬುದು ಏನೂ ಉಳಿದಿರಲಿಲ್ಲ.

• ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್

•ಆಸ್ತಿಯ ಖಾಸಿಗೆ ಒಡೆತನದಿಂದ ಒಂದು ವರ್ಗಕ್ಕೆ ಅಧಿಕಾರವೂ, ಇನ್ನೊಂದು ವರ್ಗಕ್ಕೆ ದುಃಖವೂ ಉಂಟಾಗುತ್ತದೆ.

•ಅಷ್ಟಾಂಗ ಮಾರ್ಗ ತತ್ವವು ವರ್ಗಸಂಘರ್ಷ ಇದೆ ಎಂದು ಹಾಗೂ ಆ ವರ್ಗ  ಸಂಘರ್ಷವೇ ದುಃಖದ (ಶೋಷಣೆಯ) ಮೂಲ ಎಂದು ಗುರುತಿಸುತ್ತದೆ.

•ಸಮಾಜದ ಒಳಿತಿಗಾಗಿ ದುಃಖವನ್ನು (ಶೋಷಣೆ) ನಿರ್ಮೂಲ ಮಾಡಲು ಖಾಸಗಿ ಆಸ್ತಿಯನ್ನು ತೊಡೆದು ಹಾಕಬೇಕು.

(ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳು ಸಂಪುಟ :~೩)

No comments:

Post a Comment

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...