ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾದ, ಸಾವನ್ನಪ್ಪಿದವರ ಕುರಿತು....
ಯೇಸುವಿನ ಅನುಯಾಯಿಗಳು ಹೆಚ್ಚಿದಂತೆ ಅವರ ವಿರೋಧಿಗಳ ಸಂಖ್ಯೆಯು ಹೆಚ್ಚಿತು. ಧಾರ್ಮಿಕ ಮುಂದಾಳುಗಳು ಯೇಸುವನ್ನು ವಿರೋಧಿಸಿದರು. ಯೇಸು ರಾಜದ್ರೋಹಿ ಎಂಬ ತಪ್ಪು ಹೊರಿಸಿ, ಅವರನ್ನು ಶಿಲುಬೆಗೆ ಏರಿಸಿದರು.
ಕಾಲಕ್ರಮೇಣ ಪ್ರವಾದಿಯವರ ಅನುಯಾಯಿಗಳ ಸಂಖ್ಯೆ ಹೆಚ್ಚಿತು. ಆ ಕಾಲದ ಧಾರ್ಮಿಕ ಆಚಾರ ವಿಚಾರಗಳನ್ನು ಅವರು ಟೀಕಿಸಿದ್ದುದರಿಂದ ಅವರ ವಿರೋಧಿಗಳ ಸಂಖ್ಯೆ ಸಹ ಬೆಳೆಯಿತು. ಹೀಗಾಗಿ ಅವರು ಮೆಕ್ಕದಿಂದ ಮದೀನಾ ನಗರಕ್ಕೆ ಹೋಗಬೇಕಾಯಿತು.
ಕೋಪರ್ನಿಕಸನ ಕಾಲಘಟ್ಟದಲ್ಲಿ ಸೂರ್ಯನು ಭೂಮಿಯ ಸುತ್ತ ತಿರುಗುವನೆಂದು ಟಾಲೆಮಿ ಹೇಳಿದ ಮಾತೇ ಚರ್ಚಿನ ಸಿದ್ಧಾಂತವಾಗಿತ್ತು.
ಇಟಲಿಯ ಖಗೋಳ ಶಾಸ್ತ್ರಜ್ಞನಾದ ಗೆಲಿಲಿಯೋ ದೂರದರ್ಶಕವನ್ನು ಕಂಡುಹಿಡಿದನು. ಇವನು ಕೋಪರ್ನಿಕಸನ ವಾದವನ್ನು ಬಲವಾಗಿ ಪ್ರತಿಪಾದಿಸಿದನು.
ಆದುದರಿಂದ ಆ ಕಾಲದ ಸಾಂಪ್ರದಾಯಿಕ ಚರ್ಚ್ ಇವನನ್ನು ಬಂಧಿಸಿ ಚರ್ಚಿನ ನ್ಯಾಯಾಲಯಕ್ಕೆ ಒಳಪಡಿಸಿತು. ಬಲವಂತದ ತಪ್ಪೊಪ್ಪಿಗೆಯ ನಂತರ ಗೆಲಿಲಿಯೋ ನನ್ನು ಬಿಡುಗಡೆ ಮಾಡಿತು.
ವೆಸಾಲಿಯಸ್ ಎಂಬ ಬೆಲ್ಜಿಯಂ ವಿಜ್ಞಾನಿಯು ದೇಹದಲ್ಲಿ ರಕ್ತ ಸಂಚಾರದ ಬಗ್ಗೆ ಅಮೂಲ್ಯ ಗ್ರಂಥವನ್ನು ಪ್ರಕಟಿಸಿದನು. ಈ ಚಿಂತನೆ ಆಗಿನ ಸಂಪ್ರದಾಯವಾದಿಗಳ ನಂಬಿಕೆಯನ್ನು ಪ್ರಶ್ನಿಸಿದ್ದಕ್ಕಾಗಿ ಆತನನ್ನು ಮರಣದಂಡನೆಗೆ ಗುರಿಪಡಿಸಲಾಯಿತು.
ಜಾನ್ ಹಸ್ ಈತನು ಚರ್ಚಿನ ಅನೈತಿಕ ನಡುವಳಿಕೆಗಳನ್ನು ಕಟುವಾಗಿ ಪ್ರಶ್ನಿಸಿದನು. ಚರ್ಚಿನ ನ್ಯಾಯಾಲಯವು ಅವನನ್ನು ಕರೆಯಿಸಿ, ಚರ್ಚಿನ ತತ್ವಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿತು. ಇದಕ್ಕೆ ಪ್ರತಿಯಾಗಿ "ನನ್ನ ಆತ್ಮಸಾಕ್ಷಿಯ ವಿರುದ್ಧವಾದ ಯಾವುದೇ ವಿಚಾರಗಳನ್ನು ನಾನು ಒಪ್ಪಿಕೊಳ್ಳಲಾರೆ" ಎಂದು ಜಾನ್ ಹಸ್ ಉತ್ತರಿಸಿದ.
ಚರ್ಚ್ ಹಾಗೂ ಚರ್ಚ್ ನ್ಯಾಯಾಲಯವನ್ನು ವಿರೋಧಿಸಿದಕ್ಕಾಗಿ ಅವನನ್ನು ಅಪರಾಧಿ ಎಂದು ಸಾರಿ ಜೀವಂತವಾಗಿ ಸುಡಲಾಯಿತು..!
ಮಾರ್ಟಿನ್ ಲೂಥರ್ ಪಾಪ ಕ್ಷಮಾಪಣಾ ಪತ್ರಗಳ ಕುರಿತು 95 ಹೇಳಿಕೆಗಳನ್ನು ಬರೆದು ವಿಟೆನ್ ಬರ್ಗ್ ಚರ್ಚಿನ ಹೆಬ್ಬಾಗಿಲಿಗೆ ಹಚ್ಚಿ ಜನರಲ್ಲಿ ಜಾಗೃತಿ ಮೂಡಿಸಿದ. ಲೂಥರ್ ಸ್ವತಃ ಕ್ರಿಶ್ಚಿಯನ್ ಆಗಿದ್ದನು.
ಕ್ಯಾಥೊಲಿಕ್ ಚರ್ಚಿನವರು ಲೂಥರನ ಅನುಯಾಯಿಗಳನ್ನು "ಪ್ರಾಟೆಸ್ಟೆಂಟ್ಸ್ " (ಪ್ರತಿಭಟನಾಕಾರರು) ಎಂದು ಕರೆದರು.
ಉಳಿದದ್ದನ್ನು ಸೇರಿಸಿ..... (ಉಳಿದವರು ಕಂಡಂತೆ)
ಚಾರ್ವಾಕ, ಬುದ್ಧ, ಬಸವಣ್ಣ, ಸಾಕ್ರೆಟಿಸ್, ಗಾಂಧೀಜಿ.........
No comments:
Post a Comment