ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ
ನಾವೆಲ್ಲ ಮನುಜರೊಂದೆ ಎಂಬ ಭಾವ ಮೂಡಲಿ
ನಮ್ಮಲ್ಲಿ ಭೇದಭಾವ ಪ್ರಭು ದೂರವಾಗಲಿ.//2//
ಒಂದು ತೋಟದಲ್ಲಿ ಹಲವು ಬಣ್ಣ ಬಣ್ಣದ ಹೂವುಗಳು
ಅದರಂತೆ ನಮ್ಮ ದೇಶದಲ್ಲಿ ಹಲವು ಮತಗಳು
ಆ ಹೂಗಳಂತೆ ಮತಗಳು ಮಕರಂದ ಬೀರಲಿ
ಆ ಹೂಗಳಂತೆ ಮತಗಳು ಸದ್ಭಾವ ಬೀರಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ.
ನಾವು ಮನೆಯ ಕಟ್ಟುವಾಗ ಭೂಮಿ ಜಾತಿ ಕೇಳಿತೆ
ನಾವು ಶ್ವಾಸ ಎಳೆಯುವಾಗ ಗಾಳಿ ಕುಲವ ಕೇಳಿತೆ //2//
ಈ ಸೃಷ್ಟಿಯಲ್ಲಿ ಸರ್ವರೂ ಸಮನಾಗಿ ಬಾಳಲಿ
ನಮ್ಮಲ್ಲಿ ಭೇದಭಾವ ಪ್ರಭು ದೂರವಾಗಲಿ.
ಮಣ್ಣಿನಿಂದಾದ ಆದ ಮಡಕೆ ಮಣ್ಣಿಗನ್ಯವೇ
ಚಿನ್ನದಿಂದ ಆದ ಒಡವೆ ಚಿನ್ನಗನ್ಯವೇ//2//
ನಿನ್ನಿಂದ ಆದ ಜೀವರು ನಿನ್ನಂತೆ ಕಾಣಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ.
ದಯವೇ ಧರ್ಮವೆಂದು ಸಾರಿದಂತ ನಾಡಿದು
ಜಗಕ್ಕೆ ಶಾಂತಿ ಪಾಠ ಹೇಳಿದಂತ ನಾಡಿದು//2//
ಈ ನಾಡಿನಲ್ಲಿ ಶಾಂತಿಯು ಸ್ಥಿರವಾಗಿ ನೆಲಸಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ.
ಆ ಸೂರ್ಯನಂತೆ ಸಂತರು ಜಗ ಬೆಳಗಿ ಹೋದರು
ಆ ವರುಣನಂತೆ ಜ್ಞಾನವನ್ನು ಸುರಿದು ಹೋದರು
ಗುರುಬಸವ ನಿಮ್ಮ ಬೋಧೆ ಮನದಲ್ಲಿ ನಿಲ್ಲಲಿ
ಗುರುಬಸವ ನಿಮ್ಮ ಬೋಧೆ ಜನರಲ್ಲಿ ನಿಲ್ಲಲಿ
ನಮ್ಮಲ್ಲಿ ಬೇಧಭಾವ ಪ್ರಭು ದೂರವಾಗಲಿ.
ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ
ನಾವೆಲ್ಲ ಒಂದೇ ಎಂಬ ಭಾವ ಮೂಡಲಿ
ನಮ್ಮಲ್ಲಿ ಭೇದಭಾವ ಪ್ರಭು ದೂರವಾಗಲಿ.//2//
Good song
ReplyDeleteThank you. I found what I was looking for.
ReplyDelete