Sunday, 29 March 2020

ಮಿಸ್ಟೇಕ್

ಯಾರು ನೀನು..?

ನೀನು ಯಾರು...?

ಹರ ಹರ ಮಹಾದೇವ... ಹರ ಹರ ಮಹಾದೇವ

ಪುರಾವೆ ಎಲ್ಲಿದೆ..?

ಪುರಾವೆ ನನ್ನ ಹೆಸರು ಧರ್ಮ ಚಂದ್.

ಇದು ಪುರಾವೆಯಾಗಲಾರದು.

ನಾಲ್ಕು ವೇದಗಳ ಕುರಿತಂತೆ ಬೇಕಾದ ಪ್ರಶ್ನೆ ಕೇಳಿ ನೋಡ್ರಿ.

ನಮಗೆ ವೇದಗಳು ಗೊತ್ತಿಲ್ಲ ಪುರಾವೆ ಬೇಕು.

ಏನು..?
ಪೈಜಾಮು ಸಡಿಲಿಸು.

ಪೈಜಾಮು ಕೆಳಗೆ ಜಾರಿಸಿದಾಗ ಅವರಿಗೆ ಅದು ಕಂಡದ್ದರಿಂದ ಗೊಂದಲವಾಯಿತು. ಕೊಲ್ಲಿ..! ಇವನನ್ನು ಕೊಲ್ಲಿ ಎಂದರು.

ನಿಲ್ಲಿರಿ... ನಿಲ್ಲಿರಿ... ನಾನು ನಿಮ್ಮ ಸಹೋದರ...ದೇವರಾಣೆಗೂ ನಿಮ್ಮ ಸಹೋದರ.

ಏನು ಕಥೆ ಇದು..?

ನಾನು ಯಾವ ಪ್ರದೇಶದಿಂದ ಓಡಿ ಬಂದಿರುವೆನೋ ಅದು ನಮ್ಮ ವೈರರಿಯದು. ಅನಿವಾರ್ಯವಾಗಿ ಹೀಗೆ ಮಾಡಬೇಕಾಯಿತು.
ಬೇರೆಲ್ಲವೂ ನನ್ನಲ್ಲಿ ಸರಿಯಾಗೇ ಇದೆ. ಇದೊಂದೇ_ಮಿಸ್ಟೇಕ್...

ಮಿಸ್ಟೇಕನ್ನು_ತೆಗೆದು_ಹಾಕಿದರು.... ಈ ಮೂಲಕ "ಧರ್ಮ ಚಂದನ" ತಪ್ಪನ್ನು ಸರಿಪಡಿಸಲಾಯಿತು.

No comments:

Post a Comment

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...