Thursday, 23 July 2020

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ

ಹಿಂದೂ ಸಮಾಜ ವ್ಯವಸ್ಥೆಯು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಈ ಸಿದ್ಧಾಂತಗಳನ್ನು ಎಷ್ಟರಮಟ್ಟಿಗೆ ಗೌರವಿಸುತ್ತದೆ..?

ಚಲನವಲನ ಸ್ವಾತಂತ್ರ್ಯ:~ ಸೂಕ್ತ ನ್ಯಾಯಾಂಗ ಕ್ರಮವಿಲ್ಲದೆ ವ್ಯಕ್ತಿಯನ್ನು ಬಂಧಿಸುವಂತಿಲ್ಲ.

ವಾಕ್ ಸ್ವಾತಂತ್ರ್ಯ ~ ಆಲೋಚನೆ, ಓದು ಬರಹ, ಚರ್ಚೆ ಇವುಗಳ ಸ್ವಾತಂತ್ರ್ಯ ಇದರಲ್ಲಿ ಸೇರುತ್ತದೆ

ಕ್ರಿಯಾ ಸ್ವಾತಂತ್ರ್ಯ:~ ತನಗೆ ಇಷ್ಟ ಬಂದ ಕೆಲಸಮಾಡಲು ವ್ಯಕ್ತಿಗೆ ಅವಕಾಶವಿರುವುದು.



•ವರ್ಣ ಜಾತಿಯ ಮೂಲ.

•ಮನು ಗುಲಾಮ ಪದ್ಧತಿಯನ್ನು ಒಪ್ಪಿಕೊಂಡಿದ್ದಾನೆ. ಅದನ್ನು ಶೂದ್ರರಿ (ಸ್ತ್ರೀ)ಗೆ  ಮಾತ್ರ ಸೀಮಿತಗೊಳಿಸಿದ್ದಾನೆ.

•ಉದ್ಯೋಗ ಸ್ವಾತಂತ್ರ ಹಾಗೂ ಶಿಕ್ಷಣದ ಸಮಾನತೆಯ ಹಕ್ಕನ್ನು ಹಿಂದೂಧರ್ಮ ನಿರಾಕರಿಸುತ್ತದೆ.

•ಸಹಪಂಕ್ತಿಭೋಜನ (ಪಕ್ಕಾ -ಕಚ್ಚಾ ಆಹಾರ) ಹಾಗೂ ವಿವಾಹ ಪದ್ಧತಿ (ಭಿನ್ನಗೋತ್ರ , ಅಂತರ್ಜಾತಿ ವಿವಾಹಕ್ಕೆ ವಿರೋಧ) ಇವು ಧಾರ್ಮಿಕತೆಯ ಹೆಸರಿನಲ್ಲಿ ಜಾತಿ ರಾಜಕಾರಣ ಮಾಡುತ್ತಾ ಅಸಮಾನತೆಯನ್ನು ಪ್ರತಿನಿಧಿಸುತ್ತದೆ.

•ಇಂತಹ ಭಾವನೆಗಳ ಮೇಲೆ ಆಧಾರಿತವಾಗಿರುವ ಸಮಾಜವ್ಯವಸ್ಥೆಯಲ್ಲಿ ಸೋದರಿಕೆ ಎನ್ನುವುದು ಹೇಗೆತಾನೆ ಇರಲು ಸಾಧ್ಯ.? ಜಾತಿಗಳ ನಡುವಣ ಸಂಬಂಧ ಸೋದರತ್ವದ ಭಾವನೆಯಿಂದ ನಡೆಯುವುದು ಬಹುದೂರವೇ ಉಳಿಯಿತು. ವಾಸ್ತವವಾಗಿ ಅದು ಭ್ರಾತೃಘಾತಕವಾಗಿದೆ.

•ಹಿಂದೂ ಸಮಾಜ ವ್ಯವಸ್ಥೆಯು ಶ್ರೇಣಿಕೃತ ಅಸಮಾನತೆ ಮೇಲೆ ಆಧರಿಸಿದೆ ಹಾಗೂ ಪ್ರತಿಯೊಂದು ವರ್ಗದ ವೃತ್ತಿಗಳನ್ನು ನಿಗದಿಗೊಳಿಸಿ ಅವರು ವಂಶಪರಂಪರೆಯಾಗಿ ಅದೇ ವೃತ್ತಿಯನ್ನು ನಿರ್ವಹಿಸಿಕೊಂಡು ಹೋಗುತ್ತಿರಬೇಕೆಂದು ಕಡ್ಡಾಯ ಪಡಿಸಿರುವುದು. 
ವ್ಯಕ್ತಿಯ ಸೃಜನಶೀಲತೆ, ವೈಜ್ಞಾನಿಕ ಸಂಶೋಧನೆಗೆ  ಹಾಗು ದೇಶದ ಆರ್ಥಿಕ ಬೆಳವಣಿಗೆ ಕುಂಠಿತವಾಗಿ ಮಾರಕವಾಗಿ ಪರಿಣಮಿಸಿದೆ. ಬಹು ಸಂಖ್ಯಾತರಿರುವ ಭಾರತದಲ್ಲಿ ಅತಿಹೆಚ್ಚು ಸಂಪತ್ತು ಅಲ್ಪಸಂಖ್ಯಾತ(ಬ್ರಾಹ್ಮಣ, ಮೇಲ್ವರ್ಗ)ರಲ್ಲಿ ಸಂಗ್ರಹವಾಗಿದೆ.

ಆರ್ಥಿಕತೆಯ ಅಸಮರ್ಪಕ ಹಂಚಿಕೆ ಹಾಗೂ ಕ್ರೋಡೀಕರಣವೇ ಬಹುಸಂಖ್ಯಾತರ ದುಃಖಕ್ಕೆ (ಶೋಷಣೆ) ಕಾರಣವಾಗಿ. 

No comments:

Post a Comment

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...