೮೫ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಲಬುರ್ಗಿ
ಗೋಷ್ಠಿ:
ಸ್ತ್ರೀ ಲೋಕದ ತಲ್ಲಣಗಳು:----
೧.ಮಹಿಳೆ ಮತ್ತು ಪ್ರಭುತ್ವ:-
He Stories ಈವರೆಗಿನ ಚರಿತ್ರೆಯ ಪುಟಗಳಲ್ಲಿ ಕೇವಲ ಪುರುಷಕೇಂದ್ರಿತ ನಿಲುವುಗಳು ಹಾಗೂ ಪುರುಷನನ್ನೇ ಸಂಕೇತಿಸುವ ಸಾಧುಸಂತರು, ಸೈನಿಕರ, ಕಾರ್ಮಿಕರ, ಪ್ರಭುಗಳ ಅಟ್ಟಹಾಸ ಚಿತ್ರಿತವಾಗಿದೆ.
ಧಾರ್ಮಿಕ, ಸಾಮಾಜಿಕ, ರಾಜಕೀಯವಾಗಿ ಪ್ರಭುತ್ವ ಹೇಗೆ ಪುರುಷಕೇಂದ್ರಿತ ನಿಲುವುಗಳಿಂದ ಹೆಣ್ಣನ್ನು ಕಟ್ಟುಪಾಡುಗಳ ಚೌಕಟ್ಟಿನಲ್ಲಿ ಬಂಧಿಸಿ, ಲಿಂಗ ರಾಜಕಾರಣ ಧೋರಣೆ ಅನುಸರಿಸುತ್ತಿದೆ...
ಹೆಣ್ಣು...
" ಮಾತೇ ಇಲ್ಲವೆ ಮಾಯೆ" ಮಾತೆಯಾಗಿ ಬಹು ಮಾನ್ಯಳು, ಪೂಜ್ಯಳು ಮಾಯೆಯಾಗಿ, ಮೋಹಿನಿಯಾಗಿ, ಪುರುಷನನ್ನು ಮರುಳು ಮಾಡುವವಳು, ಹಾದಿ ತಪ್ಪಿಸುವವಳು, ಜಗತ್ತಿನ ಪಾಪವನ್ನೆಲ್ಲ ಸಂಕೇತಿಸುವವಳು.
ಹೆಣ್ಣನ್ನು ದೈವಿಕರಿಸುವ ಹಿಂದಿನ ಸತ್ಯ ಹಾಗು ವಾಸ್ತವ ಸ್ಥಿತಿ ಅರಿವಾಗಬೇಕಿದೆ.
ಹಣ ಮತ್ತು ಅಧಿಕಾರದ ಪಾಲು ಹೆಣ್ಣು...?
ದೇವೇಂದ್ರ ಸೇರಿ ಮಹಿಳೆಗೆ ಕೊಡುವ ಸ್ಥಾನ...?
ಪಿತೃಪ್ರಧಾನ ಅಧಿಕಾರ ನಿಯಂತ್ರಣ ,ಚಾಲನೆ ವರ್ಗ ,ವರ್ಣ ಸಾರ್ವತ್ರಿಕ ಹಾಗೂ ವೈಯಕ್ತಿಕತೆಯಲ್ಲಿ ಪುರುಷ ನಿಲುವುಗಳು ಹೇಗೆ ನಿಯಂತ್ರಿಸುತ್ತವೆ ಹಾಗೂ ಮಹಿಳೆಯನ್ನು ಮೌಢ್ಯದ ಚೌಕಟ್ಟಿನಲ್ಲಿ ಬಂಧಿಸುತ್ತವೆ .
"ಬೆಟ್ಟದ ಮುಂದಿನ ಧೂಳು" ಎಂಬಂತೆ ಪ್ರಭುತ್ವ ಮತ್ತು ಮಹಿಳೆ ನಡುವಿನ ಅಗಾಧ ಕಂದರವನ್ನುಂಟು ಮಾಡಿದೆ.
ಕುಂತಿ, ಗಾಂಧಾರಿ, ದ್ರೌಪದಿ, ಸೀತಾ, ಕಥೆಯೇ ಬೇರೆ .. ಸಂಕೋಲೆಗಳ ಸರಮಾಲೆ, ಬಹುರೂಪದ ಬೇಡಿ.
ಅಸಮಾನತೆಯನ್ನು ಜೀವಂತಿಕೆ ರೂಪಿಸುವುದೇ ಪ್ರಭುತ್ವದ ಮೂಲ ಮಂತ್ರ.
ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ ಸಮಾನತೆಯ, ಬಿಡುಗಡೆ, ಹಕ್ಕು -- ಎಂಬುದು ಪೂರ್ಣವಾಗಿ ಹೆಣ್ಣಿಗೆ ದಕ್ಕಿದಾಗ ಮಾತ್ರ ಅವಳು ಪ್ರಭುತ್ವದ
ಪ್ರತಿನಿಧಿಯಾಗುವಳು...
ಸರ್ಕಾರ ಮಹಿಳಾ ಸಬಲೀಕರಣ ಹೆಸರಿನಲ್ಲಿ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತದೆ ಆದರೆ ಮಹಿಳೆಯರಿಗೆ ಕೇವಲ ವಿನಾಯಿತಿಗಳು - ರಿಯಾತಿಗಳು ಎಂಬ ಹೆಸರಲ್ಲೇ ಕೊನೆಯಾಗವುದು. ಇದರಿಂದ ನಿಜವಾಗಿಯೂ ಮಹಿಳೆಯರ ಏಳ್ಗೆ ಅಸಾಧ್ಯ..!
ಮೊದಲು ಹೆಣ್ಣಿಗೆ ಹುಟ್ಟುವ ಹಕ್ಕಾದರೂ ಇತ್ತು. ಈಗ ಹುಟ್ಟುವ ಮೊದಲೇ ಹೊಸಕಿಹಾಕುವ ತಂತ್ರಜ್ಞಾನ -ಬೇಟಿಯ ಬೇಟೆ.
ಮಹಿಳೆಗೆ ಶೌಚಾಲಯವು ಬೇಕು .ಅದನ್ನು ರೂಪಿಸುವ ನಿರ್ದೇಶಿಸುವ ಹಕ್ಕು, ರಾಜಕೀಯ ಅಡಿಪಾಯದ ಅಧಿಕಾರದ ಚುಕ್ಕಾಣಿ ಬೇಕು.
"ಭಾರತ್ ಮಾತಾಕಿ ಜೈ "ಎಂದರೆ ಅಷ್ಟೇ ಸಾಲದು .ಮಹಿಳೆಗೆ ಸಂಸತ್ತಿಗೆ ಸ್ಪರ್ಧಿಸುವ ಹಕ್ಕು, ಮಹಿಳೆಗೆ ಸಂಬಂಧಿಸಿದ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ, ಹಾಗೆ ಸಂಪೂರ್ಣ ಮೀಸಲಾತಿ ಹಕ್ಕು ದೊರೆಯುವಂತಾಗಬೇಕು...
ಪ್ರಭುತ್ವದ ವಿರುದ್ಧ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗ, ಅದನ್ನು ಉಳಿಸಲು ಮಹಿಳೆ ಸವಾಲು ಹಾಕುತ್ತಿದ್ದಾಳೆ ಬಹಿರಂಗ ಹೋರಾಟ ,ಪ್ರತಿರೋಧ ಪ್ರದರ್ಶನಕ್ಕೆ ಇಳಿದಿದ್ದಾಳೆ.
"ಮೂಲ ಸೆಲೆ ಅವರ ಕರುಳಿನಲ್ಲಿ ನೆಲೆಯೂರಿರುವ ಕರುಳಿನ ಸಮಾನತೆ"
ದೊರಕಿದಾಗ ಮಾತ್ರ ಹೆಣ್ಣು ಆಳುವ ವರ್ಗವಾಗಿ ಪ್ರವೇಶ ಪಡೆಯುತ್ತಾಳೆ... ಪಡೆಯುತ್ತಿದ್ದಾಳೆ.
೨.ಮಹಿಳೆ ಮತ್ತು ಸೃಜನಶೀಲತೆ
---ತಾರಿಣಿ ಶುಭದಾಯಿನಿ.
ಸ್ತ್ರೀತ್ವ- ಪ್ರಕೃತಿ ಸೃಷ್ಟಿಶೀಲತೆ.
೧.ವ್ಯವಸ್ಥೆಯ ವಿರುದ್ಧವಾಗಿ ಮೌಲ್ಯಗಳನ್ನು ಪ್ರತಿರೋಧದ ನೆಲೆ
೨.ಅನನ್ಯತೆ ನೆಲೆ
ಪುರಾಣದ (ಮಿಥ್ ) ಪರ್ಯಾಯ ರೂಪಿಸಿಕೊಳ್ಳುವುದು:
ಕಂಬಾರರ ಪುಣ್ಯಕೋಟಿ: ಜನಪದ- ಅಮ್ಮ ಹೇಳಿದ ಸುಳ್ಳು ಒಂದು ಹೆಣ್ಣು ಮತ್ತೊಂದು ಹೆಣ್ಣನ್ನು ರಕ್ಷಿಸುವಂತೆ ಇರಬೇಕು.
ಹೆಣ್ಣು ಕಟ್ಟಿದ ಕಥೆಗಳು: ಸೃಷ್ಟಿ ಕಡೆ, ಬದುಕು ಜೀವನದೆಡೆಗೆ ಸಹಜತೆ ಬಯಸುತ್ತವೆ.
ಪ್ರಧಾನ ಸಂಸ್ಕೃತಿಯ ಅಡಿಯಲ್ಲಿ ಹೆಣ್ಣು ಕೇವಲ ಅಡುಗೆ ಮನೆಗೆ, ಹಿತ್ತಲು, ಮಕ್ಕಳು, ಸಂಸಾರ, ಜೈವಿಕ ಬಂಧನಕ್ಕೆ ಸೀಮಿತವಾಗಿದ್ದರೂ... ಕಲೆ, ಕಸೂತಿ, ರಂಗೋಲಿ, ತನ್ನ ದುಡಿಮೆ ಮತ್ತು ಸೃಜನಶೀಲತೆಯಿಂದ ಆಧುನಿಕೋತ್ತರ ಮಾರುಕಟ್ಟೆಗೆ ಸಾಕ್ಷಿಯಾಗುತ್ತಾಳೆ...
ಹೆಣ್ಣು ಬಳಸುವ ಅಹಿಂಸಾ ತಂತ್ರ ಹಾಗೂ ಉಪ್ಪು ವಸಹತೋತ್ತರ ಚಿಂತನೆಯಿಂದ --ಗಾಂಧಿ ಪ್ರಭಾವಿತ...
೩.ಮಹಿಳಾ ಮತ್ತು ಲೋಕಗ್ರಹಿಕೆ
---ಪ್ರೊ// ಶ್ರೀಮತಿ ಶಿವಗಂಗಾ ರುಮ್ಮಾ.
ಲೋಕದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಎಲ್ಲಾ ಅನಿಷ್ಟಕ್ಕೆ ಮಹಿಳೆಯೇ ಕಾರಣ ಎಂದು ಸಾರುತ್ತ ಬಂದಿರುವುದನ್ನು-- ಪರಂಪರೆ , ದೈವತ್ವ ನಂಬಿಕೆ-ಮೂಢನಂಬಿಕೆಯ ಇನ್ನೊಂದು ದೃಷ್ಟಿಕೋನ.
ಪ್ರಭುತ್ವ -"ಮೌಢ್ಯದ ಮುಖಾಂತರ ಜನರನ್ನು ಆಳುತ್ತದೆ".
ಜನರಿಗೆ ಪೂರಕವಾಗಿರುವುದು ಕಾಮನ್ ಸೆನ್ಸ್:
ಹೆಣ್ಣು ಅಬಲೆ, ಚಂಚಲೇ, ಬುದ್ಧಿ-ಮನ್ ಕಾಲ್ಕೆಳಗೆ ,ಅಪಶಕುನ ,ಕನಿಷ್ಠ, ದಾರಿದ್ರ್ಯ ಎಂಬ ಇತ್ಯಾದಿ ಲೋಕಗ್ರಹಿಕೆಗಳಿವೆ.
"ಕಾರ್ಯಕಾರಣ ಸಂಬಂಧ" - ನಂಬಿಕೆ ಲೋಕವನ್ನಾಳುತ್ತದೆ.
"ಹೆಣ್ಣು ಮಗು ಹುಟ್ಟಿದರೆ ಮೊದಲು ಶುಭ" ಈಗ "ಗಂಡು ಮಗು" ಎಂಬ ಲೋಕಗ್ರಹಿಕೆ ಕಾಲಕಾಲಕ್ಕೆ "ಪ್ರಭುತ್ವದ" ಭಾಗವಾಗಿ ಬದಲಾವಣೆಯಾಗಿದೆ.
ಉತ್ತರ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಭಿನ್ನತೆ:
ವರದಕ್ಷಿಣೆ, ಬಲತ್ಕಾರ ,ಭ್ರೂಣಹತ್ಯೆ ಹೆಚ್ಚಾಗಿ ಉತ್ತರಭಾರತದಲ್ಲಿ ಕಂಡುಬರುತ್ತವೆ...
ಉತ್ತರ ಭಾರತದಲ್ಲಿನ ಮಹಿಳೆಗೆ ಸಾಹಿತ್ಯ ರಚನೆಯಲ್ಲಿ (ಸಂಸ್ಕೃತ) ಅವಕಾಶ ಗೌಣ.
ಮಹಿಳೆಯರಿಗೆ ಸಾಹಿತ್ಯ ರಚನೆಯಲ್ಲಿ ಅವಕಾಶ ದೊರೆತ್ತಿದ್ದು ಮೊದಲು ದಕ್ಷಿಣ ಭಾರತದಲ್ಲಿ...
ವಿಜ್ಜಿಕ... ಗಂಗಾದೇವಿ...
•ನೀತಿ ಕಾವ್ಯ ದ.ಭಾ---ಶಂಕರ್ ಮೊಕಾಶಿ
•ದಲಿತ ಆತ್ಮಕಥೆಗಳು ಆರಂಭ--ದ.ಭಾ
•ಮಿತಾಕ್ಷರ ಸಂಹಿತೆ: (ಹಿಂದೂ ಕಾನೂನು ಗ್ರಂಥ)
ಮಹಿಳೆಗೆ ಆಸ್ತಿ ಹಕ್ಕು ಪ್ರತಿಪಾದಿಸಿದ್ದು.
•ಮಹಿಳೆಯನ್ನು ಕಥ ನಾಯಕಿಯಾಗಿ ಕಾವ್ಯರಚನೆ:
ಮಣಿಮೇಖಲೆ, ಶಿಲಪ್ಪದಿಗಾರಂ ,ಶಾಕುಂತಲ (ದಕ್ಷಿಣ ಭಾರತದ ನಂಟು) ಬಾಣ ಕಾದಂಬರಿ, ಕರ್ನಾಟಕ ಕಾದಂಬರಿ...
ಮಹಿಳೆ ಅಬಲೆ:-
ಮಹಿಳೆಗೆ ರೋಗ ನಿರೋಧಕ ಶಕ್ತಿ ಹಾಗು ಜೀವಿತಾವಧಿ ಅಧಿಕ.
ಲತೆಯಂತೆ ಮರದ ಆಸರೆ ಪಡೆದವಳೆಂದು ಜೀವ ಮಹಿಳಾ ವಿರೋಧಿ ನೆಲೆಗಳು ಬಿತ್ತುತ್ತಿರುವುದು --ಪ್ರಭುತ್ವ.
ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶ:
ಪ್ರಾಚೀನ ಭಾರತದ ಲೋಕಗ್ರಹಿಕೆ: ಮಹಿಳೆಯೇ ಪೂಜಾರಿ.
ಇಂದಿನ ಮಹಿಳೆ ಸಂಸತ್ತಿನ ಪ್ರವೇಶ ಪಡೆಯಬೇಕೆ ವಿನಃ ದೇವಾಲಯಗಳ ಪ್ರವೇಶವಲ್ಲ...!
ಮನಸ್ಥಿತಿ ಬದಲಾಗದಿದ್ದರೆ ಪರಿಸ್ಥಿತಿ ಬದಲಾಗದು.!
No comments:
Post a Comment