Thursday, 27 December 2018

ನಾವೆಲ್ಲ ಭಾರತೀಯರು

ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ
ನಾವೆಲ್ಲ ಮನುಜರೊಂದೆ ಎಂಬ ಭಾವ ಮೂಡಲಿ
ನಮ್ಮಲ್ಲಿ ಭೇದಭಾವ ಪ್ರಭು ದೂರವಾಗಲಿ.//2//

ಒಂದು ತೋಟದಲ್ಲಿ ಹಲವು ಬಣ್ಣ ಬಣ್ಣದ ಹೂವುಗಳು
ಅದರಂತೆ ನಮ್ಮ ದೇಶದಲ್ಲಿ ಹಲವು ಮತಗಳು
ಆ ಹೂಗಳಂತೆ ಮತಗಳು ಮಕರಂದ ಬೀರಲಿ
ಆ ಹೂಗಳಂತೆ ಮತಗಳು ಸದ್ಭಾವ ಬೀರಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ.

ನಾವು ಮನೆಯ ಕಟ್ಟುವಾಗ ಭೂಮಿ ಜಾತಿ ಕೇಳಿತೆ
ನಾವು ಶ್ವಾಸ ಎಳೆಯುವಾಗ ಗಾಳಿ ಕುಲವ ಕೇಳಿತೆ //2//
ಈ ಸೃಷ್ಟಿಯಲ್ಲಿ ಸರ್ವರೂ ಸಮನಾಗಿ ಬಾಳಲಿ
ನಮ್ಮಲ್ಲಿ ಭೇದಭಾವ ಪ್ರಭು ದೂರವಾಗಲಿ.

ಮಣ್ಣಿನಿಂದಾದ ಆದ ಮಡಕೆ ಮಣ್ಣಿಗನ್ಯವೇ
ಚಿನ್ನದಿಂದ ಆದ ಒಡವೆ ಚಿನ್ನಗನ್ಯವೇ//2//
ನಿನ್ನಿಂದ ಆದ ಜೀವರು ನಿನ್ನಂತೆ ಕಾಣಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ.

ದಯವೇ ಧರ್ಮವೆಂದು ಸಾರಿದಂತ ನಾಡಿದು
ಜಗಕ್ಕೆ ಶಾಂತಿ ಪಾಠ ಹೇಳಿದಂತ ನಾಡಿದು//2//
ಈ ನಾಡಿನಲ್ಲಿ ಶಾಂತಿಯು ಸ್ಥಿರವಾಗಿ ನೆಲಸಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ.

ಆ ಸೂರ್ಯನಂತೆ ಸಂತರು ಜಗ ಬೆಳಗಿ ಹೋದರು
ಆ ವರುಣನಂತೆ ಜ್ಞಾನವನ್ನು ಸುರಿದು ಹೋದರು
ಗುರುಬಸವ ನಿಮ್ಮ ಬೋಧೆ ಮನದಲ್ಲಿ ನಿಲ್ಲಲಿ
ಗುರುಬಸವ ನಿಮ್ಮ ಬೋಧೆ ಜನರಲ್ಲಿ ನಿಲ್ಲಲಿ
ನಮ್ಮಲ್ಲಿ ಬೇಧಭಾವ ಪ್ರಭು ದೂರವಾಗಲಿ.

ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ
ನಾವೆಲ್ಲ ಒಂದೇ ಎಂಬ ಭಾವ ಮೂಡಲಿ
ನಮ್ಮಲ್ಲಿ ಭೇದಭಾವ ಪ್ರಭು ದೂರವಾಗಲಿ.//2//

ಹುಚ್ಚುತನವೇ ಅನುಗ್ರಹ

ಹುಚ್ಚುತನವೇ ಅನುಗ್ರಹ -- ~ನೀಷೆ~

ನಗುವುದು ಎಂದರೆ ಕಲ್ಮಶವಿಲ್ಲದೆ ಮತ್ಸರಪಡುವುದು.

ಒಬ್ಬನನ್ನು ಪ್ರೀತಿಸುವುದು ನಿಜಕ್ಕೂ ಮೃಗ ಪ್ರವೃತ್ತಿ ಏಕೆಂದರೆ ಆಗ ಉಳಿದವರು ಎಲ್ಲರಿಗೂ ವಂಚನೆ ಮಾಡಿದ ಹಾಗಾಗುತ್ತದೆ ದೈವ ಪ್ರೀತಿಯೂ ಕೂಡ.

ಭಾವ ಸ್ಥಿತಿಯ ಗಹನತೆಯಲ್ಲ, ಅದರ ಕಾಲವಧಿ ವ್ಯಕ್ತಿಯನ್ನು ಉನ್ನತವಾಗಿಸುವುದು.

ಹೆಣ್ಣು ತನ್ನ ಚೆಲುವನ್ನು ನಾಶವಾಗುವ ಮಟ್ಟಿಕ್ಕೆ ದ್ವೇಷಿಸುತವುದನ್ನು ಕಲಿತಿರುತ್ತಾಳೆ.

ನನಗೆ ಪ್ರೇಮ ಸಿಗುತ್ತಿದೆ ಆದರೆ ತಾನು ಪ್ರೇಮವನ್ನು ನೀಡುತ್ತಿಲ್ಲ ಎಂಬುದು ಅರಿವಾದ ಮರುಗಳಿಗೆ ನಿಂತ ನೆಲ ಕುಸಿಯುತ್ತದೆ. ಆಳದಲ್ಲಿ ಇರುವುದೆಲ್ಲ ಮೇಲೇಳುತ್ತದೆ.

ಒಮ್ಮೆ ನಿರ್ಧರಿಸಿ ಆಯಿತು ಇನ್ನೂ ಯಾವ ಪ್ರತಿವಾದವನ್ನು ಕೇಳದಂತೆ ಕಿವಿ ಮುಚ್ಚಿ ಕೊಳ್ಳಬೇಕು ಇದೇ ದೃಢ ಸ್ವಭಾವದ ಲಕ್ಷಣ. ಇದು ಆಗಾಗ ಮೂರ್ಖತನಕ್ಕಾಗಿ ಮಾಡುವ ಸಾಂದರ್ಭಿಕ ಸಂಕಲ್ಪವು
ಹೌದು.

ಕಾಮಸುಖದ ವಿಪರೀತ ಬಯಕೆ ಹಾಗೂ ಆ ಬಯಕೆಯನ್ನು ಹುದುಗಿಸುವ ಎಲ್ಲಾ ಬಗೆಯ ಪ್ರಯತ್ನ --ಇವು ಹೆಣ್ಣಿನ ಸಮಸ್ತ ಭವಿಷ್ಯವನ್ನೇ ನಾಶ ಮಾಡುತ್ತಿವೆ.

ತನ್ನ ಆಲೋಚನೆಗಳಿಗೆ ಸೂಲಗಿತ್ತಿಯನ್ನು ಬಯಸುವವನು ಒಬ್ಬ. ತಾನು ಯಾರ ನೆರವಿಗಾದರೂ ಆಗಬಲ್ಲೇ ಎಂದು ಚಡಪಡಿಸುವವನು ಮತ್ತೊಬ್ಬ. ಒಳ್ಳೆಯ ಸಂವಾದದ ಮೂಲ.

ಸೇಡಿನಲ್ಲಿ ಹಾಗೂ ಪ್ರೀತಿಯಲ್ಲಿ ಹೆಣ್ಣು ಗಂಡಿಗಿಂತ ಹೆಚ್ಚು ಅನಾಗರಿಕಳು.

ಹೆಣ್ಣು ಪ್ರೇಮಿಸಲು ತೊಡಗಿದಾಗ ಗಂಡು ತಲ್ಲಣಿಸುತ್ತಾನೆ.ಏಕೆಂದರೆ ಪ್ರೇಮಿಸುವ ಸಂದರ್ಭದಲ್ಲಿ ಹೆಣ್ಣು ಯಾವ ವಸ್ತುವಿನ ಮೌಲ್ಯವನ್ನು ಲೆಕ್ಕಿಸದೆ ಎಲ್ಲವನ್ನೂ ತ್ಯಾಗ ಮಾಡಲೂ ಸಿದ್ಧಳಾಗಿರುತ್ತಾಳೆ.

ದೊಡ್ಡದೊಂದು ಅನ್ಯಾಯ ನಿಮ್ಮ ಮೇಲೆರಗಿದಾಗ ಮರುಗಳಿಗೆಯೇ ನೀವು ಹತ್ತಾರು ಸಣ್ಣಪುಟ್ಟ ಅನ್ಯಾಯಗಳನ್ನು ಎಸಗಿಬಿಡಿ, ಅನ್ಯಾಯವನ್ನು ಹೊತ್ತು ನಿಂತ ವ್ಯಕ್ತಿ ಏಕಾಂಗಿಯಾಗಿ ಸಹಿಸಲಾಗದ ಯಾತನೆ ಅನುಭವಿಸುತ್ತಾನೆ.

ನಮ್ಮ ಗರ್ವ ಗಾಯಗೊಂಡಾಗಲೂ ನಮ್ಮ ತೋರಿಕೆ ಮಾತ್ರ ಗಾಯಗೊಳ್ಳಲಾರದಷ್ಟು ಗಟ್ಟಿಯಾಗಿರುತ್ತದೆ.

ತನ್ನ ಬಗ್ಗೆ ಅತಿಯಾಗಿ ಹೇಳಿಕೊಳ್ಳುವುದು ನಿಜವಾಗಿಯೂ ತನ್ನನ್ನು ಮರೆಮಾಚಿಕೊಳ್ಳಲು ಇನ್ನೊಂದು ವಿಧಾನ.

Saturday, 8 December 2018

ಮರದ ನೆರಳಲಿ ಮನೆಯ ಮಾಡಿ ಮನದ ಮರೆಯಲಿ ಕನಸ ಹೂಡಿ ದಣಿದುಂಡ್ ಮಲಗಿದವನ ಮನೆಯೇ ನಿಜ ಸುಖದ ಗುಡ.

ಏಕಾಂಗಿಯಾಗಿ ಹೊರಡು

ಏಕಾಂಗಿಯಾಗಿ ಹೊರಡು, ಯಾರಾದರು ಸಿಕ್ಕಾರು | ಏನನ್ನು ಬಯಸದೇ ಹೊರಡು, ಬೇಕಾದುದು ಸಿಕ್ಕೀತು |
ದಾರಿ ತೊರೆದು ನಡೆ, ಬಯಲು ದಕ್ಕೀತು |
ಗುರಿಯಿಲ್ಲದೆ ಹೊರಡು, ಅರಿವಿನ ಗುರುವು ಸಿಕ್ಕಾನು || ಪ ||

ನದಿಯ ಜಾಡು ಹಿಡಿ, ಕಡಲಾಗಬಹುದು |
ಧರ್ಮದ ನೆರಳ ತೊರೆ, ಮಹಾಮನೆ ಕಂಡೀತು |
ಸಾವನ್ನು ಹುಡುಕಿ ನಡೆ, ಬದುಕು ಸಿಕ್ಕೀತು |
ನಿನ್ನ ವಿರುದ್ಧ ನೀನು ಹೋರಾಡು, ಗೆದ್ದರೆ ಸಂತನಾಗುವೆ ನೀ || ೧ ||

ಸರಳ ರೇಖೆಯಾಗಿರು, ಬಾಳು ಹಗುರ ಆದೀತು | ಸತ್ಯವ ಹುಡುಕದಿರು, ಕಂಡದ್ದು ಸುಳ್ಳಾದೀತು | ಏಕತಾರಿಯ ಹಿಡಿ, ನಾದ ಲಯವೂ ಆದೀತು | ಚಲನೆಗೆ ಸಾಕ್ಷಿಯಾಗು, ಶೂನ್ಯ ತಬ್ಬಿಕೊಂಡೀತು || ೨ ||

ಎದೆಯ ದನಿಯ ನುಡಿ, ಹಾಡು ಬೆಡಗು ಆದೀತು | ಖಾಲಿಯಾಗಿ ಹೊರಡು, ಜೋಳಿಗೆ ತುಂಬೀತು | ತೆರೆದ ತೋಳಲ್ಲಿ ನಡೆ, ಬೊಗಸೆ ಪ್ರೀತಿ ದಕ್ಕೀತು | ಎಲ್ಲವನೂ ಕಳಚಿಟ್ಟು ಹೊರಡು, ಉಡಲು ಬೆಳಕೇ ಸಿಕ್ಕೀತು || ೩ ||

ಯಾರೂ ಒಂಟಿಯಲ್ಲ, ನೆರಳು ಹಿಂಬಾಲಿಸೆ || ನಡೆದಷ್ಟೂ ಹಾದಿ ಕಂಡಷ್ಟು ಬಯಲು  || ಹೊರಡು ಈಗಲೇ ಹೊರಡು || ಗುಂಡಾದ ಭೂಮಿಯಲ್ಲಿ ಎಂದಾದರು ಸಿಕ್ಕೇಸಿಗುತ್ತೇವೆ || ಮತ್ತೇ ಮತ್ತೇ ಸಿಕ್ಕೇ ಸಿಗುತ್ತೇವೆ || ೪ ||

- ಹಂದಲಗೆರೆ ಗಿರೀಶ್

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...