#ಸೂಫಿ #ಕಥಾಲೋಕ...
ನದಿಯ ಆ ದಡದಲ್ಲಿ ಒಬ್ಬ ಯ-ಹು ಅನ್ನೋದನ್ನ ಉ-ಯ-ಹು ಎಂದು ಉಚ್ಚರಿಸುತ್ತಿದ್ದ.
ನದಿಯ ಈ ತಟದಲ್ಲಿ ಒಬ್ಬ ಜ್ಞಾನಿ ಅದನ್ನು ಅವನಿಗೆ ತಿಳಿ ಹೇಳಿ ಇದು ತಪ್ಪು ತಪ್ಪು ಎಂದು
"ಅರಿವು ನೀಡುವವನು ಮತ್ತು ಅರಿವು ಪಡೆಯುವವನು ಇಬ್ಬರು ಅದಕ್ಕೆ ಯೋಗ್ಯ ಇದ್ದಾಗಲೇ ಇಂತಹ ಸಂಯೋಗವು ಸಾಧ್ಯ. ಶಬ್ದಗಳನ್ನು ಹೀಗೆ ಉಚ್ಚರಿಸಬೇಕೆಂದು"
ತಿದ್ದಿ ಹೇಳಿ ಮರಳಿ ದಡ ಸೇರಿದ ನಿಷ್ಠಾವಂತ ಸಂಪ್ರದಾಯಿ...
ಸ್ವಲ್ಪಹೊತ್ತಿನ ನಂತರ ಯ-ಉ ಎಂಬ ಇತ್ಯಾದಿ ಉದ್ಘೋಷವು ಮತ್ತೆ ಕೇಳಿಬಂತು...
ಮನುಷ್ಯನ ಮೊಂಡುತನಕ್ಕೆ ಏನು ಹೇಳುವುದು..? ತಪ್ಪು ಎಂದು ತಿಳಿಸಿ ಹೇಳಿದರೂ ತಿದ್ದಿಕೊಳ್ಳದ ಅವನ ಮಂದಬುದ್ಧಿಗೆ ಏನು ಹೇಳಬೇಕು..? ಹೀಗೆ ಯೋಚಿಸುತ್ತಿರುವಂತೆಯೇ ಆಶ್ಚರ್ಯಕರ ದೃಶ್ಯವೊಂದು ಸೂಫಿಯ ಕಣ್ಣಿಗೆ ಬಿತ್ತು. ನದಿಯ ನಡುಗಡ್ಡೆಯಿಂದ ಆ ದರವೇಶಿಯು ಅವನತ್ತ ಬರುತ್ತಿದ್ದ, ನದಿಯ ಮೇಲೆ ನಡೆದುಕೊಂಡು.....!
ಸೂಫಿಯು ನಿಬ್ಬೆರಗಾದ. ದೋಣಿಯ ಹುಟ್ಟು ಹಾಕುವುದು ನಿಂತಿತು. ಧರವೇಶಿಯು ಅವನ ಬಳಿಗೆ ನಡೆದುಕೊಂಡು ಬಂದು:
"ಸೋದರನೆ, ತೊಂದರೆ ಕೊಡುತ್ತಿದ್ದೇನೆ. ದಯವಿಟ್ಟು ಕ್ಷಮಿಸು. ನೀನು ಹೇಳಿಕೊಟ್ಟದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಲು ಕಷ್ಟ. ನೀನು ಹೇಳಿಕೊಟ್ಟದ್ದನ್ನು ನೀನು ತೋರಿಸಿದ ಮಾದರಿಯಲ್ಲೇ ಸ್ಪುಟವಾಗಿ ನಿನ್ನ ಹಾಗೆಯೇ ಉಚ್ಚರಿಸುವುದು ಹೇಗೆ ಹೇಳಿಕೊಡು. ಅದಕ್ಕಾಗಿಯೇ ನಾನು ಈಗ ನಿನ್ನ ಬಳಿಗೆ ಬರಬೇಕಾಯಿತು". ಎಂದು ಹೇಳಿದ.
---ಅಸ್ಸಾಸಿನ್ ಪಂಥಕ್ಕೆ ಸೇರಿದ ಕತೆ
No comments:
Post a Comment