ಹಸಿಮಾಂಸ ಮತ್ತು ಹದ್ದುಗಳು- ಗೀತಾ ನಾಗಭೂಷಣರು (ಚಿತ್ರ)
"""'"""""''"'''''"""""'''''''''''''''''''''''"'""""'"""""""""""""""'''''''''''''''''''
ಅಕ್ರಮ ಸಂಬಂಧ ಯಾವುದು. ಇದು ಅನೈತಿಕ ವೇ..?
ಯಾವುದನ್ನು ನಾವು ಅಕ್ರಮ ಸಂಬಂಧ ಎಂದು ವ್ಯಾಖ್ಯಾನಿಸಬಹುದು. ದೈಹಿಕವಾಗಿ ಅಥವಾ ಮಾನಸಿಕವಾಗಿ ಕೂಡುವಿಕೆಯನ್ನೋ..? ಸಮ್ಮತಿಯೊಂದಿಗೋ... ಆಮಿಷದೊಂದಿಗೆನ..?
ಬಾಡಿಗೆ ತಾಯ್ತನ , ಸ್ತನದಾಯಿನಿ ,ಲೈಂಗಿಕ ಕಾರ್ಯಕರ್ತರು ಇವರನ್ನು ನಿರುದ್ಯೋಗಿಗಳನ್ನಬೇಕೆ ಅಥವಾ ಕಾರ್ಮಿಕರನ್ನೆಬೇಕೇ. ಅಕ್ರಮ ಸಂಬಂಧವೇ..? ಹಾಗಾದರೆ ಅಪರಾಧಿ ಯಾರು? ಯಾರನ್ನು ದೂಷಿಸಬೇಕು.
ಕೋಟೆಗಳ ಕೆಡವುತ್ತ, ತಲೆಗಳ ಉರುಳಿಸುತ್ತಾ, ಸ್ತ್ರೀಯರನ್ನು ವರಿಸುತ್ತಾರೆ ರಾಜಸೂಯ ಯಾಗದ ಮೂಲಕ ಚಕ್ರವರ್ತಿಯಾಗಿ ಮೆರೆಯುತ್ತಾ ಚಾಲ್ತಿಯಲ್ಲಿರುವ ಶ್ರೀರಾಮಚಂದ್ರನಂತ ಆದರ್ಶ ಪುರುಷೋತ್ತಮರನ್ನು ಏನೆಂದು ವ್ಯಾಖ್ಯಾನಿಸಬೇಕು.?
ಸಾಹಿತ್ಯದಲ್ಲಿ ಬಹುತೇಕ ಕಥೆ ಕಾದಂಬರಿ ಕಾವ್ಯಗಳಲ್ಲಿ ವಿವಾಹ ಪೂರ್ವದಲ್ಲಿ ಅಥವಾ ವಿವಾಹದ ನಂತರ ವಾಗಲಿ ಅಕ್ರಮ ಸಂಬಂಧ,ಸಂತಾನ ಎಂಬ ಅಪರಾಧ ಹೆಣ್ಣಿಗೆ ಮಾತ್ರ ಕಟ್ಟಿ ಪುರುಷ ಇದರಿಂದ ಪಲಾಯನ ಮಾಡಿದ್ದಾನೆ. (ಸತ್ಯವತಿ, ಕುಂತಿ, ಮಾದವಿ, ದ್ರೌಪದಿ ಅಕ್ರಮ ಸಂಬಂಧದ ಮೂಲಕ ಸಂತಾನ ಪಡೆದಿದ್ದೆ..?)ಹೀಗೆ ಅನೈತಿಕ ಲೈಂಗಿಕ ಸಂಬಂಧಗಳನ್ನು ಮನುವಾದ ದಲ್ಲಿಯೂ ಹೆಣ್ಣು ಮತ್ತು ಶೂದ್ರರನ್ನು ಭೋಗದ ವಸ್ತು ಹಾಗೂ ಗುಲಾಮರಂತೆ ಬಿಂಬಿಸುತ್ತಾ ಶತಮಾನಗಳಿಂದ ಶೋಷಣೆ ಮಾಡುವ ನೈತಿಕತೆಯ ದೃಷ್ಟಿಕೋನದ ಪರಿಕಲ್ಪನೆ ಕಾಲದೇಶದ ಧರ್ಮಗಳಲ್ಲಿ ಬೇರೆ ಬೇರೆಯಾದ ನಿಲುವುಗಳನ್ನು ತಳೆದಿದೆ.
ಅಕ್ರಮ ಸಂಬಂಧಗಳ ಕುರಿತು ನೈಜ ಪರಿಕಲ್ಪನೆ ಪುರುಷಕೇಂದ್ರಿತ ನೀಲುವುಗಳ ಮುಖವಾಡ ಅನಾವರಣವಾಗುವುದು ಹೆಣ್ಣಿಗೆ ಸಾಹಿತ್ಯದ ಅಭಿವ್ಯಕ್ತಿಗೆ ಅವಕಾಶ ಸಾಧ್ಯವಾದಾಗ ಮಾತ್ರ. ಬಹುತೇಕ ಸಾಹಿತ್ಯದಲ್ಲಿ ಪುರುಷಕೇಂದ್ರಿತ ನಿಲುವುಗಳ ಆಶಯಗಳ ಹಿತಾಸಕ್ತಿ ಒಳಗೊಂಡು ತನ್ನನ್ನು ಅಪರಾಧಿ ಸ್ಥಾನದಿಂದ ಹೊರಗುಳಿದು ಒಂದು ಸಮೂಹ , ವರ್ಗವನ್ನು ಕೀಳಿಕರಿಸಿದ್ದಾರೆ.
ಚೋಮನ ದುಡಿಯಲ್ಲಿ ಬೆಳ್ಳಿ ಒಡೆಯನ ಕೈ ಸೆರೆಯಾದುದ್ದರ ಹಿಂದೆ ಕೌಟುಂಬಿಕ ಸಾಮಾಜಿಕ ಬಡತನ ಹಸಿವು ಕಾರಣಗಳಿವೆ. ಸಂಸ್ಕಾರ ಕಾದಂಬರಿ ಪ್ರಾಣೇಶಾಚಾರ್ಯ ಪರವಾಗಿ ಸ್ವೇಚ್ಛಾಚಾರದ ಮಾತುಗಳನ್ನ ಮೈಲಿಗೆ, ಮಡಿವಂತಿಕೆ ಹೆಸರಿನಲ್ಲಿ ಹಾರುವವರು ಹೆಣ್ಣನ್ನು ದೂರಲಾಗಿದೆ. ಕುವೆಂಪು ಕಾದಂಬರಿಗಳಲ್ಲಿ ಕೆಳವರ್ಗದ ಯುವಕ ಮೇಲ್ವರ್ಗದ ಹೆಣ್ಣನ್ನು ಪ್ರೀತಿಸಿದಾಗ ಅವನ ಮೈಕಟ್ಟನ್ನು ಸೊಕ್ಕಿದ ಹೋರಿಗೆ ಹೋಲಿಸುವ ಬದಲು ಕೊಬ್ಬಿದ ಹಂದಿಗೆ ರೂಪಕಗಳನ್ನು ಬಳಸಿ ಕೀಳಾಗಿ ಬಿಂಬಿಸಲಾಗಿದೆ.
ಕೆಳವರ್ಗದ ಸ್ತ್ರೀಯರು ಮೇಲ್ವರ್ಗದ ಪುರುಷನೊಂದಿಗೆ ಸಂಬಂಧವನ್ನು ಅಕ್ರಮ ಎಂದು ಹೇಳುವುದಾದರೆ..!
ಕೆಳವರ್ಗದ ಪುರುಷ ಮೇಲ್ವರ್ಗದ ಸ್ತ್ರೀಯೊಂದಿಗೆ ಸಂಬಂಧ ಸಕ್ರಮ ಎನ್ನಬೇಕೆ..?
ಒಂದು ವೇಳೆ ಇಬ್ಬರ ನಡುವಿನ ಅಂತರ ಮನಸ್ಸುಗಳ ಸಮ್ಮಿಲನವನ್ನು, ಸಂಪ್ರದಾಯಸ್ಥ ಕೌಟುಂಬಿಕ ಸಾಮಾಜಿಕ ಕಟ್ಟಳೆಗಳ ಬಾಹಿರ ಎಂದು ಪೋಷಕರು ಅವರ ಮರ್ಯಾದ ಹತ್ಯೆಗೆ ಸಂಚು ಮಾಡುವ .ತಮ್ಮ ಶತಮಾನದ ಸಿಟ್ಟನ್ನು ಶಮನಗೊಳಿಸಿ ಕೊಳ್ಳಲು ಗ್ರಾಮದೇವತೆ ಆಚರಣೆಯ ಭಾಗವಾಗಿ "ಕೋಣ ಕಡಿಯುವ ಪರಿಕಲ್ಪನೆ" ಕೊಡುವಂತಹ ಸಂಪ್ರದಾಯಗಳ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಾ ವಾಸ್ತವವನ್ನು ಮರೆಮಾಚುತ್ತಾ ಅಂತರವನ್ನು ಜೀವಂತವಾಗಿರಿಸಿದೆ.
"ಕೆಳವರ್ಗದ ಪುರುಷ ಮೇಲ್ವರ್ಗದ ಸ್ತ್ರೀಯೊಂದಿಗೆ ಸಂಬಂಧ" ಇಂತಹ ಘಟನೆಗಳು ಸಾಹಿತ್ಯದಲ್ಲಿ ಚಿತ್ರಿತವಾಗಿರುವುದು ತುಂಬಾ ವಿರಳ.
ಮೇಲ್ವರ್ಗದ ಸ್ತ್ರೀಯರು ಕೆಳವರ್ಗದ ಪುರುಷರನ್ನು ಸಂಬಂಧಕ್ಕಾಗಿ ಹಾತೊರೆಯುವುದು ಹಣಕ್ಕಾಗಿ ಅಲ್ಲ .
"ಅತೃಪ್ತ ಲೈಂಗಿಕ ಬಯಕೆಗಳು ಹಿತಾಸಕ್ತಿಯ ಪೂರೈಕೆಗಾಗಿ...ಸಂತಾನಕ್ಕಾಗಿ".
ಹಸಿವು ಆಹಾರ ಮೈಥುನ ಇವು ಮಾನವನ ಪ್ರಾಣಿ ಸಹಜ ಪ್ರಕೃತಿ ಬಯಕೆಗಳು.ಸಾಮಾಜಿಕ ನೀತಿ ನಿಯಮ ನಾಗರಿಕ ಪ್ರಜ್ಞೆ, ಆಧುನಿಕ ವೈವಾಹಿಕ ಜೀವನ ಪದ್ಧತಿ ,ಕಾನೂನಿನಿಂದಾಗಿ ಸಮಾಜದ ಸ್ವಾಸ್ಥ್ಯಕ್ಕಾಗಿ ಹಲವು ನಿಯಮಗಳನ್ನು ಮಾನವ ತನಗಾಗಿ ರೂಪಿಸಿಕೊಂಡಿದ್ದಾನೆ. ನಿಯಮಬಾಹಿರವಾಗಿ ವರ್ತಿಸಿದರೆ ಕಾನೂನಿನ ಮೂಲಕ ಶಿಕ್ಷೆ ವಿಧಿಸಿ ಅವನ ಪ್ರಾಣಿ ಸಹಜ ಪ್ರವೃತ್ತಿಗೆ ಕಡಿವಾಣ ಹಾಕಲಾಗಿದೆ.
ಇದಕ್ಕೆ ನಿದರ್ಶನವೆಂಬಂತೆ ಪ್ರಾಚೀನ ಕಾಲದಲ್ಲಿ ವೈವಾಹಿಕ ಜೀವನ ಪದ್ಧತಿಯನ್ನು ಕಾಣಬಹುದು
"ತಾಯಿ ಎಂಬುದು ವಾಸ್ತವ; ತಂದೆ ಎಂಬುದು ನಂಬಿಕೆ"
ಇಲ್ಲಿ ಈಡಿಪಸ್ ಕಾಂಪ್ಲೆಕ್ಸ್ ಮತ್ತು ಎಲೆಕ್ಟ್ರಾ ಕಾಂಪ್ಲೆಕ್ಸ್ ಚಹರೆ ಕಾಣಬಹುದು.
ಇಂದಿನ ಆಧುನಿಕ ಜೀವನಶೈಲಿಯ ವೈವಾಹಿಕ ಪದ್ಧತಿಗಳು ಸಹ ಕೆಲವು ಬುಡಕಟ್ಟು ಅಲೆಮಾರಿ ಜನಾಂಗಗಳಲ್ಲಿ ಒಂದು ಹೆಣ್ಣನ್ನು ಇಬ್ಬರು ಪುರುಷರು ವಿವಾಹವಾಗುವುದನ್ನು ಕಾಣಬಹುದು. ಅದಕ್ಕೆ ಆಸ್ತಿ ಆರ್ಥಿಕತೆ ಬಡತನ ಹಲವು ಕಾರಣಗಳಿವೆ.
ಸಿಗ್ಮಂಡ್ ಫ್ರಾಯ್ಡ್ ಅವರು ಮಾನವನ ಅನೈತಿಕ ಲೈಂಗಿಕ ಬಯಕೆಗಳು ಕುರಿತು "ಸುಪ್ತಾವಸ್ಥೆ, ಅರೆ ಜಾಗೃತಾವಸ್ಥೆ, ಜಾಗೃತಾವಸ್ಥೆ" ಎಂಬ ಮನಸ್ಸಿನ ಮೂರು ಪರಿಕಲ್ಪನೆಗಳನ್ನು ನೀಡಿದ್ದಾನೆ.
ಇವನ ಪ್ರಕಾರ ನೋಡುವುದಾದರೆ ಪ್ರತಿಯೊಬ್ಬ ವ್ಯಕ್ತಿಯು ಅಕ್ರಮ ಸಂಬಂಧ ಬಯಸುವವನು. ತನ್ನ ಬಯಕೆಗಳು ವಾಸ್ತವದಲ್ಲಿ ಈಡೇರದಿದ್ದಾಗ ಅವುಗಳನ್ನು ಕೆಲವು ಕನಸುಗಳ ಮೂಲಕ (ಸುಪ್ತಪ್ರಜ್ಞೆ), ಹಗಲುಗನಸುಗಳು ಮೂಲಕ (ಅರೆ ಪ್ರಜ್ಞಾವಸ್ಥೆ)
ಕೆಲ ಸಂದರ್ಭಗಳಲ್ಲಿ ತನ್ನ ಬಯಕೆ ಪೂರೈಸಿಕೊಳ್ಳುವ ಆತುರತೆಯಲ್ಲಿ ಅಪರಾಧಿಯಾಗುತ್ತಾನೆ. (ಜಾಗೃತಾವಸ್ಥೆಯಲ್ಲಿ ಇದ್ದರೂ ಸುಪ್ತ ಪ್ರಜ್ಞೆಯ ಪ್ರಚೋದನೆಯಿಂದಾಗಿ) . ಸಾಹಿತ್ಯದಲ್ಲಿ ತನ್ನ ಸಂವೇದನೆಗಳನ್ನು ಅಭಿವ್ಯಕ್ತಗೊಳಿಸುವುದರ ಮೂಲಕ ತನ್ನ ಬಯಕೆಗಳನ್ನು ಹತ್ತಿಕ್ಕುವ & ದಮನಗೊಳಿಸುವ ಪ್ರಯತ್ನ ಮಾಡುತ್ತಾನೆ...
ಕೆಲವು ಉದಾತ್ತ ವ್ಯಕ್ತಿಗಳು ಸಹಜವಾಗಿಯೇ ಹತ್ತಿಕ್ಕಿದ್ದಾರೆ. ಅಂತ ದುರಾಲೋಚನೆ ಭಾವಗಳ ಸೆಳೆತದಿಂದ ದೂರವುಳಿಯುತ್ತಾ ಮೋಹವನ್ನು ಗೆದ್ದು ಮೆಟ್ಟಿ ನಿಂತವರ ಸಂಖ್ಯೆ ತುಂಬ ವಿರಳ.
"ಅಕ್ರಮ ಸಂಬಂಧ" ಎಂಬ ಪರಿಕಲ್ಪನೆ ಕೇವಲ ಲೈಂಗಿಕ ದೃಷ್ಟಿಕೋನದಲ್ಲಿನ ವಿಮರ್ಶೆಗೆ ಸೀಮಿತಗೊಳಿಸಬೇಕೆ..?
ಆಧುನಿಕ ದೃಷ್ಟಿಕೋನದಲ್ಲಿ ಹೇಳುವುದಾದರೆ
ರಾಷ್ಟ್ರೀಯತೆಯ ಹೆಸರಿನಲ್ಲಿ ನೈತಿಕತೆಯ ಪರಿಕಲ್ಪನೆಯಲ್ಲಿ ಸಂಪ್ರದಾಯ ಸಂಸ್ಕೃತಿ ಧಾರ್ಮಿಕ ಆಚರಣೆಯ ಮೂಲಕ ಕೋಮುವಾದ ಭಯೋತ್ಪಾದಕತೆ ಭ್ರಷ್ಟಾಚಾರವನ್ನು ಜೀವಂತಗೊಳಿಸಿ ಚಾಲ್ತಿಯಲ್ಲಿರುವಂತೆ ಬಯಸುವ ವಿಕೃತ ಮನಸುಗಳನ್ನು "ಅಕ್ರಮ ಸಂಬಂಧದ ಸಂತಾನಗಳೆಂದೆ" ಹೇಳಬಹುದೇ..?
No comments:
Post a Comment