Sunday, 29 March 2020

ಕಿರು ಬಿಂದು

ನಾನು ನನ್ನದೆಂದು 
ಗರ್ವದಿಂದ ಕೊಚ್ಚಿಕೊಳ್ಳುವ 
ಮನುಜನೆ ಕೇಳಿಲ್ಲಿ

ನಾನು ಒಡೆಯ ಮಾಲಿಕ ಶ್ರೇಷ್ಠ ಎಂದು
 ಬೀಗಬೇಡ
 ಆಸ್ತಿ ಸಂಪತ್ತು ಅಧಿಕಾರ
ನೀ ಪಡೆದುಕೊಂಡಿರುವುದು ಆದರೂ 
ಎಲ್ಲಿದೆ ಎಷ್ಟಿದೆ ಹೇಗಿದೆ
ಗುರುತಿಸಿ ಹೇಳುವೆಯಾ 


ನಿನು ನಿನ್ನಂತೆ ಅವರು
ಕಟ್ಟದಿರು ಗೋಡೆ
ಬಂದಿಸದಿರು ಗೊಡ್ಡು ಸಂಪ್ರದಾಯಗಳಲ್ಲಿ
ತಳ್ಳದಿರು ದೂರ ಅಹಂಕಾರದ ಅಮಲಿನಲ್ಲಿ



ಅವನಿ ಆಕಾಶವನ್ನೇ ವಿಶಾಲವಾಗಿ 
ತಬ್ಬಿರುವ ಅಬ್ಧಿಯ ಕಿರು ಬಿಂದು ನೀನಿಲ್ಲಿ.
ಆರಡಿ  ಸುಟ್ಟರೆ ಹಿಡಿ ಬೂದಿ
ಮೂರಡಿ ಹೂತಿಟ್ಟರೆ ಹಿಡಿಮಣ್ಣು


ಮಾನವನಾಗು 
ಮನುಷ್ಯತ್ವ ಮರೆಯಾಗದಿರಲಿ...!

No comments:

Post a Comment

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...