Monday, 27 April 2020

ಕುಂತಿ

"ಕಣ್ಣರಿಯದೊಡಂ ಕರುಳರಿಯದೆ..??"
ಧನುರ್ವಿದ್ಯೆ ಪ್ರದರ್ಶನ ಸಂದರ್ಭದಲ್ಲಿ ಸಭೆಯಲ್ಲಿ ನೆರೆದಿದ್ದ ಜನಸಮೂಹ  ಯಾರು ಈತನ್ ..? ಕೃಪಾಚಾರ್ಯರು ಇವನು ಶೂದ್ರನೆಂದು ನಿಂದಿಸುವಾಗ. ಕುಂತಿ, ಕರ್ಣನು ತನ್ನ ಮಗನೆಂದು ಸಭೆಯಲ್ಲಿ ಸಾರಿಹೇಳಬಹುದಾಗಿತ್ತು..! ಮದುವೆಗಿಂತ ಮೊದಲೇ ಮಗುವನ್ನು ಪಡೆಯುವುದು ಅಪಚಾರ ವೆಂಬಂತೆ ನಿರ್ಬಂಧ, ಸಾಮಾಜಿಕ ನೀತಿ, ಕಟ್ಟೆಗಳೆನಾದರೂ ಇದ್ದವೆ.?

 ಹಾಗಾದರೆ ಪಾಂಡುರಾಜನನ್ನು ನಿರ್ವಿರ್ಯ/ಶಾಪಗ್ರಸ್ತ/ಮರೆವು ಎನ್ನಬೇಕೆ..?
ಏಕೆಂದರೆ.... 
ಕುಂತಿ ದುರ್ವಾಸ ಮುನಿಯಿಂದ ಐದು ವರಗಳನ್ನು ಗಳನ್ನು ಪಡೆದಿದ್ದೇನೆ ಎಂದು ಪಾಂಡು ವಿನಲ್ಲಿ ಹೇಳಿಕೊಂಡಿದ್ದಳು.
ಆದರೆ ಮದುವೆಯ ನಂತರ ನಾಲ್ಕು ಮಂತ್ರಗಳನ್ನು ಮಾತ್ರ ಬಳಸಿದ್ದು, ಪಾಂಡುವಿಗೆ ಲೆಕ್ಕ ತಪ್ಪಿ ಹೋಯಿತೆ ಅಥವಾ ಮಾದ್ರಿಗೆ ಎರಡು ಮಕ್ಕಳು ಜನಿಸಿದ್ದರಿಂದ ವಾಸ್ತವ ಅರಿಯದ ಮತಿಭ್ರಮಣನೆನ್ನಬೇಕೆ.!? 
ನಿಯೋಗ ಪದ್ಧತಿಯ ಮೂಲಕ ಬೇರೆಯವರೊಂದಿಗೆ ಕೂಡಿ ಮಕ್ಕಳನ್ನು ಪಡೆದಳೆಂದೆ ಎನ್ನಬೇಕಾದಿತು.  ಹೀಗೆ ಎನ್ನದೇ ಬೇರೆ ದಾರಿಯೇ ಇಲ್ಲ. "ಕ್ಷೇತ್ರದಲ್ಲಿ ಬೀಜ ಬಿತ್ತದೆ ಬೆಳೆ ಸಾಧ್ಯವಿಲ್ಲ". ಮಂತ್ರಕ್ಕೆ ಮಾವಿನಕಾಯಿ ಉದುರದು.ಇದಕ್ಕೆ ಪೂರಕವೆಂಬಂತೆ ಹಿಂದೆ ಸತ್ಯವತಿಯು ತನ್ನ ಮಕ್ಕಳು ಮಡಿದಾಗ, ವಂಶದ ಕೀರ್ತಿ ಬೆಳಗಲು ಕುಡಿ ಬೇಕೆಂದು ತನ್ನ ಸೊಸೆಯ ರೊಂದಿಗೆ ಕೂಡಲು ಭೀಷ್ಮನಿಗೆ ಸಲಹೆ ನೀಡುತ್ತಾಳೆ. ಬ್ರಹ್ಮಚರ್ಯ ನಾದ ಭೀಷ್ಮ ಈ ಕಾರ್ಯದಿಂದ ಹೊರಗೂಳಿಯುತ್ತಾನೆ. ಕೊನೆಗೆ ಸತ್ಯವತಿ ತಾನು ಪರಾಶರ ಮುನಿಗಳಿಂದ ಪಡೆದಿದ್ದ ವ್ಯಾಸದ್ವೈತ್ ನನ್ನು ಕರೆತಂದು ಮಲಗಿಸಿ ಮಕ್ಕಳನ್ನು ಪಡೆದಿದ್ದು "ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಸಾಕ್ಷಿ." ಎಂದೆನಿಸುತ್ತದೆ.

ದ್ರೌಪದಿಯ ಸಂದರ್ಭ ಬಂದಾಗಲೂ. ಕುಂತಿಯಲ್ಲಿ ಪರಂಪರಾನುಗತವಾಗಿ ಬಂದ ವಂಶವಾಹಿಗಳು ಸುಪ್ತಪ್ರಜ್ಞೆಯಲ್ಲಿ ಪ್ರಚೋದನೆ ನೀಡುತ್ತಾ ಬಂದವೆನಿಸುತ್ತದೆ. ಹಾಗೂ ತಾನೂ ಅವರೊಂದಿಗೆ ಸುಖ ಪಡೆದು ಮಕ್ಕಳನ್ನೆತ್ತಿದ್ದರಿಂದಲೋ..! ಅರ್ಜುನ, ದ್ರೌಪದಿಯನ್ನು ಕರೆತಂದಾಗ ಹಣ್ಣು-ಹೆಣ್ಣು ಪಾಂಡವರೈವರು  ಸಮ ಹಂಚಿಕೊಳ್ಳಿ ಎಂದಿದ್ದು, ತನ್ನ ವೈವಾಹಿಕ ಜೀವನದ ಪೂರ್ವ ಘಟನೆಗಳು ಸುಪ್ತ ಪ್ರಜ್ಞೆಯಲ್ಲಿ ಕೆಲಸ ಮಾಡುತ್ತಿತ್ತು ಅಂತ ಹೇಳಬೇಕೆ..?.

ಅಥವಾ ಮೂಲದಲ್ಲಿ ಪುರುಷಕೇಂದ್ರಿತ ನಿಲುವುಗಳು ಹೆಣ್ಣನ್ನು ಒಂದು ಉಪಭೋಗದ ವಸ್ತುವಿನಂತೆ ಬಳಸಿಕೊಳ್ಳಲು,  ಸಂಪ್ರದಾಯ, ಸಂಸ್ಕೃತಿಯ ಹೆಸರಲ್ಲಿ ತಮ್ಮ ಬಯಕೆಗಳನ್ನು, ಆಸೆಗಳನ್ನು ಬೆರೆಸಿ, ಈಡೇರಿಸಿ ಕೊಂಡು. ಕೊನೆಗೆ ಹೆಣ್ಣನ್ನೇ ತಪ್ಪಿಸ್ಥತ್ತ ಸ್ಥಾನದಲ್ಲಿರಿಸಿದಂತೆ ಚಿತ್ರಸಿದ್ದಾರೆ ಎಂದು ಹೇಳಬೇಕೆ..!?


ಒಟ್ಟಿನಲ್ಲಿ ಕುಂತಿಯ  "ಮೌನ" ಕರ್ಣನನ್ನು ದುರಂತ ವ್ಯಕ್ತಿಯನ್ನಾಗಿ ಮಾಡಿದರೆ,   "ಮಾತು" ದ್ರೌಪದಿಯ ಬಾಳು ಹರಿದು ಹಂಚಿ... ಗೋಳಿಗೆ ಕಾರಣವಾಯಿತು.

ಬಸವರಾಜ.N


No comments:

Post a Comment

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...