Sunday, 29 March 2020

ಸೂಕ್ತ ಕ್ರಮ

ಹಲ್ಲೆಯಾದಾಗ ಓಣಿಯಲ್ಲಿದ್ದ ಅಲ್ಪಸಂಖ್ಯಾತರ ಪೈಕಿ ಕೆಲವರ ಹತ್ಯೆಯಾಯಿತು. ಉಳಿದವರು ಜೀವ ಉಳಿಸಿಕೊಳ್ಳಲು ಪಲಾಯನಗೈದರು. ಒಬ್ಬ ವ್ಯಕ್ತಿ ತನ್ನ ಹೆಂಡತಿ ಜೊತೆ ತನ್ನ ನಿವಾಸದ ನೆಲಮನೆಯಲ್ಲೇ ಅಡಗಿಕೊಂಡ.

ಅಡಗಿಕೊಂಡಿದ್ದ ದಂಪತಿಗಳು ಗಲಭೆಕೋರರು ಒಳಗೆ ನುಗ್ಗಿ ಬರಬಹುದೆಂದು ಎರಡು ದಿನ ಹಾಗೂ ಎರಡು ರಾತ್ರಿ ಅಡಗಿಕೊಂಡಿದ್ದರು. ಯಾರೂ ಬರಲಿಲ್ಲ.

ಮತ್ತೆ ಎರಡು ದಿನಗಳುರುಳಿದವು. ಸಾವಿನ ಭಯ ಕಡಿಮೆಯಾಗತೊಡಗಿತ್ತು. ಹಸಿವು_ನೀರಡಿಕೆ ಹೆಚ್ಚು ಬಾಧಿಸತೊಡಗಿದ್ದವು.

ಇನ್ನು ನಾಲ್ಕು ದಿನ ಕಳೆದವು. ದಂಪತಿಗಳಿಗೆ ಬೇಸರವಾಯಿತು. ಇಬ್ಬರು ಹೊರಬಂದರು.

ಗಂಡ ಗಟ್ಟಿಯಾದ ಧ್ವನಿಯಲ್ಲಿ ಜನರನ್ನು ಕೈಮಾಡಿ ಕರೆಯತೊಡಗಿದ. ಅವನ ಕರೆಗೆ ಓಗೊಟ್ಟು ಕೆಲವರು ಬಂದರು.

ನಮ್ಮಿಂದ ಇನ್ನು ಸಾಧ್ಯವಿಲ್ಲ.
ನಾವಾಗಿಯೇ_ನಿಮ್ಮ_ವಶಕ್ಕೆ_ಬರುತ್ತಿದ್ದೇವೆ... ನಮ್ಮನ್ನು ಕೊಲ್ಲಿರಿ ಎಂದು ಅವರನ್ನು ಕೇಳಿಕೊಂಡರು.

"ನಮ್ಮ_ಧರ್ಮದಲ್ಲಿ_ನರಹತ್ಯೆ_ಪಾಪ" ಎಂದ ಅವರು ಪರಸ್ಪರ ಸಮಾಲೋಚನೆ ಮಾಡಿ  ದಂಪತಿಗಳನ್ನು ಪಕ್ಕದ ಕೇರಿಯ ಜೈನ ಧರ್ಮೀಯರಲ್ಲದವರ ಕೈಗೆ ಒಪ್ಪಿಸಿದರು.... ಮುಂದಿನ_ಸೂಕ್ತ_ಕ್ರಮ_ಕೈಗೊಳ್ಳಲಿಕ್ಕಾಗಿ.

No comments:

Post a Comment

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...