Tuesday, 7 November 2023

ಡಾ. ಕೆ. ಎಮ್. ಸಂದೇಶ್



ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾಲಯ ಮಾನಸಗಂಗೋತ್ರಿ ಸಂಯೋಗದಲ್ಲಿ ನಡೆದ "ದಲಿತ ಕಲ್ಯಾಣ ಸವಾಲುಗಳು ಮತ್ತು ಅವಕಾಶಗಳು"  (ದಿನಾಂಕ ಜನವರಿ 9 ರಿಂದ 13 - 2020) ಎಂಬ ಈ ಕಾರ್ಯಕ್ರಮಕ್ಕೆ ಯಾದಗಿರಿಯಿಂದ ನಾನು, ಸಿದ್ದು ,ಈಶ್ವರ್ ಮೈಸೂರಿಗೆ ಒಂದು ದಿನ ಮುಂಚಿತವಾಗಿ ತಲುಪಿದೆವು. ಆಗಾಗಲೇ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಳಗದ ವಾಟ್ಸಪ್ ಗುಂಪು ರಚನೆಯಾಗಿತ್ತು. ವಿವಿಧ ಜಿಲ್ಲೆಗಳಿಂದ ಬರುವ 30 ಶಿಬಿರಾರ್ಥಿ ಗಳಲ್ಲಿ ಮತ್ತೆ ಯಾರಾದರೂ ಪರಿಚಿತರು ಇರಬಹುದೇ ಎಂದು ವಾಟ್ಸಾಪ್ ಗುಂಪಿಗೆ ಇಣುಕಿ ನೋಡಿದಾಗ ಯಾರೋ ಹೋರಾಟದ ಚಿತ್ರಪಟಗಳನ್ನು ಪದೇ ಪದೇ ಹಂಚಿಕೊಳ್ಳುತ್ತಿರುವುದನ್ನು ಗಮನಿಸಿ   ಉದಾಸೀನ ಮಂದಹಾಸದೊಂದಿಗೆ ಹೋರಬಂದೆ. ಯಾಕೆಂದರೆ ನಾವು ಇಂತಹ ಹೋರಾಟ ಮತ್ತು ಚಳುವಲಿಯನ್ನು ಹತ್ತಿರದಿಂದ ಕಂಡವರು. ಅವುಗಳ ಗಟ್ಟಿತನ ಮತ್ತು ನಿಲುವುಗಳ ಬದ್ಧತೆ ಯಲ್ಲಿನ ಇಬ್ಬಗೆಯ ಧೋರಣೆಯಿಂದಾಗಿ ಆಗಾಗ ನನ್ನ ಮನದಲ್ಲಿ  ನಿರಾಶ, ತಿರಸ್ಕಾರ ಮನೊಭಾವ  ಮೂಡಿದುಂಟು.   ಐದು ದಿನಗಳ ಕಾಲ ಉಳಿದುಕೊಳ್ಳಲು ಹಾಸ್ಟಲ್ ನ ಕೋಣೆ ಒಂದರಲ್ಲಿ ಐದು ಹಾಸಿಗೆಗಳ  ವ್ಯವಸ್ಥೆ ನಮ್ಮನ್ನು ಬರ ಮಾಡಿಕೊಂಡಿತು. ಮುಂಜಾನೆ ಹಾಸಿಗೆಯಲ್ಲೇ ಕಣ್ಬಿಟ್ಟು ನೋಡಿದಾಗ  ಬಾಹುಬಲಿಯಂತೆ ,ಅಜಾನುಬಾಹು ... ಪ್ರತ್ಯಕ್ಷ, ತಟ್ಟನೆ ನೆನಪಾಯಿತು ಅದೇ ವ್ಯಕ್ತಿ ಅಲ್ಲವೇ...!  ತರುವಾಯ ಪರಿಚಯಿಸಿಕೊಂಡೆವು. ಹೀಗೆ ಸಂದೇಶ ಅವರ ಮೊದಲ ಪರಿಚಯವಾದದ್ದು. ಸದೃಢವಾದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯಕ್ಕೆ ಪ್ರತಿದಿನ ಎಕ್ಸರ್ಸೈಜ್ ಮಾಡುತ್ತಿದ್ದರು ಹಾಗೆ ನನಗೂ ಕೆಲವೊಂದು ಎಕ್ಸಸೈಜ್ ಮಾಡುವ ವಿಧಾನದ ಕುರಿತು ಪ್ರಾಕ್ಟಿಕಲ್ ಆಗಿ ಹೇಳಿಕೊಡುತ್ತಿದ್ದರು. ಕಾರ್ಯಕ್ರಮದ ಸಂದರ್ಭದಲ್ಲಿ ಅವರು ದಲಿತ ಕಲ್ಯಾಣ ಮತ್ತು ಸವಾಲುಗಳ ಕುರಿತು ಅನೇಕ ಪ್ರಶ್ನೆಗಳನ್ನು ಎತ್ತುತ್ತಿದ್ದರು. ನಾಳೆ ನಾನ್ ವೆಜ್ ಊಟದ ವ್ಯವಸ್ಥೆ ಇರುವಂತೆ ಆಯೋಜಕರೊಂದಿಗೆ ಮಾತಾನಾಡುವ ಎಂದು ಸಂದೇಶ ಅವರಿಗೆ ಹೇಳಿದೆ. ಮೊದಮೊದಲು ಕಾರ್ಯಕ್ರಮದ ಆಯೋಜಕರು ಇದಕ್ಕೆ ಒಪ್ಪಿಗೆ ನೀಡಿದರು. ನಂತರದ ದಿನಗಳಲ್ಲಿ ..... ಕಾರಣಗಳನ್ನು ನೀಡಿ ಜಾರಿಕೊಂಡಿತು. ಈ ಕಾರಣಕ್ಕಾಗಿ ಏನೋ ಆ ದಿನ ಮುಸ್ಸಂಜೆ ವೇಳೆ ವಿಶ್ವವಿದ್ಯಾಲಯದ ಆವರಣದಿಂದ ಹೊರ ನಡೆದು ನನ್ನ ಹೋಟೆಲ್ ಗೆ ಕರೆದುಕೊಂಡು ಹೋಗಿ ಒಂದು ಕೆಜಿ ಕಬಾಬ್ ಆರ್ಡರ್ ಮಾಡಿದ. ಹೇ ಅಷ್ಟೊಂದು ತಿನ್ನದಾಗದು ಎಂದು ಅರ್ಧ ಕೆ ಜಿ  ತರುವಂತೆ ಹೇಳಿದೆ. ಇಬ್ಬರು ಸೇರಿ ಬಾಡಿನ ಸವಿ ಸವಿದೆವು. ಬರುವಾಗ ಬೇಕ್ರಿ ಒಂದರಲ್ಲಿ ಕೆಲವಂದಿಷ್ಟು ಸ್ವೀಟ್, ಬಿಸ್ಕೆಟ್ ತೆಗೆದುಕೊಂಡರು. ಅದು  ಯಾಕೆ..? ಮತ್ತು ಯಾರಿಗೆ..? ಎಂದು ಕೇಳಲಿಲ್ಲ. ನಂತರ ಹೆಣ್ಣು ಮಕ್ಕಳು ಉಳಿದುಕೊಂಡಿದ್ದ ವಸತಿ ನಿಲಯಕ್ಕೆ ಭೇಟಿ ನೀಡಿ ಆ ಸಿಹಿ ತಿನಿಸುಗಳನ್ನು ಅವರಿಗೆ ನೀಡಿದರು. ಹಾಗೆ ನಿಮಗಿಲ್ಲಿ ಉಳಿದುಕೊಳ್ಳುವುದಕ್ಕೆ, ಊಟಕ್ಕೆ ಇನ್ನಿತರ ಯಾವುದೇ ಸಮಸ್ಯೆ ಇದ್ದಲ್ಲಿ ನನಗೆ ತಿಳಿಸಿ ಎಂದು ಸಹೋದರಿಯರೆಲ್ಲರಲ್ಲಿಯು ವಿನಂತಿಸಿಕೊಂಡ.  ತಮ್ಮ ಬಾಲ್ಯದ ನೆನಪು ಮತ್ತು ನೋವುಗಳನ್ನ... ನನ್ನೊಂದಿಗೆ ಹಂಚಿಕೊಂಡಿದ್ದು ಉಂಟು. ಕಾರಣಾಂತರಗಳಿಂದ ಕಾರ್ಯಕ್ರಮ ಮುಕ್ತಾಯದ ಒಂದು ದಿನ ಮುಂಚಿತವಾಗಿ ನಮ್ಮನ್ನ ಬಿಟ್ಟು ಹೋದರು. ಹೀಗೆ ಪರಿಚಯ ನಂತರದ ದಿನಗಳಲ್ಲಿ ಸ್ನೇಹವಾದದ್ದು...

ಆನಂತರದಲ್ಲಿ ಅವರೊಂದಿಗೆ ಅನೇಕ ಬಾರಿ ಭೇಟಿ ಮತ್ತು ಸಂಭಾಷಣೆಗಳಿಗೆ ಕಾರಣವಾದವು.

ಸಂಘಟನೆ ಸ್ಥಾಪನೆ:-

"ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ" ಎಂಬ ಸಂಘಟನೆಯನ್ನು ಜನವರಿ 13 - 2017 ರಂದು ಹುಟ್ಟು ಹಾಕಿದರು. ಮೊದಲು ಈ ಸಂಘಟನೆಯ ಮುಖ್ಯ ಉದ್ದೇಶ ದಲಿತರು ಮಹಿಳೆಯರು ಬಡವರು ಹಾಗೂ ಶೋಷಣೆಗೆ ಒಳಪಟ್ಟವರಿಗೆ ನೆರವಾಗುವುದು ಹಾಗೂ ಅರ್ಹರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವುದು ಇದರ ಮುಖ್ಯ ಉದ್ದೇಶವನ್ನು ಹೊಂದಿತ್ತು.

ಇಲ್ಲಿಯತನಕ ಸಂದೇಶ ಅವರ ಹತ್ತಿರ ಸಮಸ್ಯೆಯನ್ನು ಹೊತ್ತುಕೊಂಡು ಹೋದವರಿಗೆ ಶಾಂತಿ ಮತ್ತು ಕಾನೂನಿನ ಮೂಲಕ ಹೋರಾಟದ ಪ್ರತಿ ಹಂತವನ್ನು ಜನರೊಂದಿಗೆ ಮುಕ್ತವಾಗಿ, ಪಾರದರ್ಶಕವಾಗಿ ಹಂಚಿಕೊಳ್ಳುತ್ತಾ ಅಂತಹ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಟ್ಟಿದ್ದಾರೆ.

ವಿವಾಹ:-

ತಮ್ಮ ಚಿಕ್ಕ ವಯಸ್ಸಿನಲ್ಲಿ ಪುರೋಹಿತಶಾಹಿ ವಿವಾಹ ಪದ್ಧತಿ, ಬಾಲ್ಯ ವಿವಾಹದಂತ ಶೋಷಣೆಗೆ ಒಳಗಾದವರು. ಅದರಿಂದ ಬಿಡುಗಡೆಗಾಗಿ  ಪ್ರೇಮ ವಿವಾಹ ಮತ್ತು ಸರಳ ವಿವಾಹಕ್ಕೆ ಪ್ರೇರಣೆ ನೀಡಿದರು.  

ಹೆಣ್ಣು, ಜಾತಿ ಹೆಬ್ಬಾಗಿಲಿನ ಲಾಳವಿಂಡಿಗಿ (ಅಗುಳಿ).  ಧರ್ಮ, ದೇವರು, ಸಂಸ್ಕೃತಿ, ಧಾರ್ಮಿಕ ಆಚರಣೆ, ರಾಜಕೀಯ ಇವೆಲ್ಲವೂ ತಮ್ಮ ಗುರಿ ಸಾಧನೆಗಾಗಿ ಪುರುಷ ಪ್ರಧಾನ ವ್ಯವಸ್ಥೆಯು ಅಂತರ್ಜಾತಿ ವಿವಾಹವನ್ನು ವಿರೋಧಿಸುತ್ತಾ ಸ್ವ ಜಾತಿ ವಿವಾಹವನ್ನು ಪ್ರತಿಪಾದಿಸುತ್ತಾ ಅದಕ್ಕೆ ಪ್ರತಿರೋಧ ಉಂಟಾದಲ್ಲಿ ಮರ್ಯಾದೆ ಹತ್ತೆಗೇಡು, ಸಹಪಂಕ್ತಿ ಭೋಜನಗಳಲ್ಲಿ ಭೇದ, ಮೌಲ್ಯಗಳ ಹೆಸರಿನಲ್ಲಿ ಹೇರಲ್ಪಟ್ಟ ಸಾಂಸ್ಕೃತಿಕ ಯಾಜಮಾನ್ಯ, ಮಡಿವಂತಿಕೆ,  ಶ್ರೇಷ್ಠತೆಯ ವ್ಯಸನನಕ್ಕಾಗಿ ಜಾತಿಯ ಜೀವಂತಿಕೆಯನ್ನು ಉಳಿಸಿಕೊಳ್ಳಲು ಅದನ್ನು ಹೆಣ್ಣಿನ ಮೂಲಕ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆ ಎಂಬುದನ್ನು ಅವರು ಮನಗೊಂಡರು. ಈ ಅಸಮಾನತೆಯ ಗೆರೆಯನ್ನು ಅಳಿಸಿ ಹಾಕಲು ಪಣತೊಟ್ಟರು. ಕೋಲಾರ ತಾಲೂಕಿನ ಕೀಲುಕೊಪ್ಪ ಗ್ರಾಮದ ದಲಿತ ಯುವಕ ಮತ್ತು ಕಿಲಾರಿಪೇಟೆಯ ಓಬಿಸಿ ಯುವತಿ ಯೊಂದಿಗೆ ಸಂಘಟನೆಯ  ಸಾರಥ್ಯದಲ್ಲಿ ಜನವರಿ 18 2017 ರಲ್ಲಿ ಕೋಲಾರದ ಅಂತರಗಂಗೆ ಬೆಟ್ಟದ ತಪ್ಪಲಿನಲ್ಲಿ ಅಂಬೇಡ್ಕರ್ ಅವರ ಬ್ಯಾನರ್ ಮುಂದೆ ಮೊದಲ ಪ್ರೇಮ ವಿವಾಹ/ ಅಂತರ್ಜಾತಿ ವಿವಾಹ/  ಸರಳ ವಿವಾಹ ಮಾಡಿದರು.  ಪೆರಿಯಾರ್ ಮೌಡ್ಯ ಮತ್ತು ಆಡಂಬರದಿಂದ ಕೂಡಿದ ವಿವಾಹಗಳು ಸಾಮಾಜಿಕ ಮತ್ತು ಆರ್ಥಿಕ ಶೋಷಣೆಗೆ ಕಾರಣವಾಗುತ್ತವೆ ಎಂದು ಸರಳ ವಿವಾಹಕ್ಕೆ ಕರೆ ನೀಡಿದ್ದರು. ಕುವೆಂಪು ಅವರ ಮಂತ್ರ ಮಾಂಗಲ್ಯ, ಅಂಬೇಡ್ಕರ್ ಅವರ ವಿವಾಹ ನೋಂದಣಿ (ಭದ್ರತೆ ಮತ್ತು ಆಸ್ತಿ ಹಕ್ಕು), ಜಾತಿ ವಿನಾಶಕ ಬಸವಣ್ಣ- ಅರಸ ಶರಣ ಮಧುವರಸನ ಮಗಳನ್ನು ಮತ್ತು ಸಮಗಾರ ಶರಣ ಹರಳಯ್ಯನ ಮಗನಿಗೆ ಮದುವೆ ಮಾಡಿಸಿದ್ದು... ಕಲ್ಯಾಣ ಕ್ರಾಂತಿಗೆ ಕಾರಣವಾಯಿತು ಎಂಬ  ಈ ಎಲ್ಲ ಸಂಗತಿಗಳ ಅರಿವಿದ್ದು ಸಂದೇಶ ರವರು ಈ ವರೆಗೂ 130ಕ್ಕೂ ಹೆಚ್ಚು ಪ್ರೇಮ ವಿವಾಹ/ ಅಂತರ್ಜಾತಿ ವಿವಾಹ/  ಸರಳ ವಿವಾಹ ನೆರವೇರಿಸಿದ್ದಾರೆ.


ದೇವರು:-

ಉಳ್ಳೇರಹಳ್ಳಿ ಪ್ರಸಂಗದಲ್ಲಿ ದಲಿತ ಬಾಲಕನೊಬ್ಬ ದೇವರ ಕೋಲು ಮುಟ್ಟಿದನೆಂಬ ಕಾರಣಕ್ಕಾಗಿ 60,000 ದಂಡ ಅಥವಾ ಸಮಾಜದಿಂದ ಬಹಿಷ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೃಹತ್ ಹೋರಾಟದ  ಮೂಲಕ ನ್ಯಾಯ ದೊರಕಿಸಿ... ನೂರು ದೇವರನೆಲ್ಲ ನೂಕಾಚೆ ದೂರ - ಕುವೆಂಪು,  ದೇವರು ಹುಟ್ಟಿದ್ದು ನಮ್ಮ ಕಲ್ಪನೆಯಲ್ಲಿ ಅದು ಸಾಯಬೇಕಾದದ್ದು ಅಲ್ಲೇ- ವಸುದೇವ್ ಭೂಪಾಲ್ ಅವರ ನುಡಿಯಂತೆ. ಶ್ರೇಣಿಕೃತ ಅಸಮಾನತೆ, ಭಯ ಮತ್ತು ಮೌಡ್ಯ ದಿಂದ ಕೂಡಿದ ಸಾಂಸ್ಕೃತಿಕ ಮತ್ತು ಧಾರ್ಮಿಕ ಆರಾಧನೆಯನ್ನು ಮನ-ಮನೆಯಿಂದ ಹೊರಗೆ  ಎಸೆಯಿರಿ ಎಂದು ತಮ್ಮ ಹೋರಾಟದ ಮೂಲಕ ಕರೆ ನೀಡಿದರು.

ಹೋರಾಟ:-
ಸಂದೇಶ್ ಅವರ ಹೋರಾಟದ ಹಾದಿ ಏನು ಸುಗಮವಾಗಿರಲಿಲ್ಲ. ಯಾಕೆಂದರೆ ಅವರ ಹತ್ತಿರ ಬಂದ ಸಮಸ್ಯೆಗಳೆಲ್ಲವೂ ಭೀಕರತೆಯಿಂದ ಕೂಡಿದವುಗಳು.
ನೂರಾರು ಎಕರೆ ಭೂಮಿ ವತ್ತುವರಿಯನ್ನು ಭೂಗಳ್ಳಲ್ಲರಿಂದ ತೆರವುಗೊಳಿಸಿ ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಅನಾಥ ಅಸಹಾಯಕ ಹಿರಿಯ ಜೀವಗಳಿಗೆ ಊರು ಗೋಲು ಆಗಿದ್ದಾರೆ. ಅನೇಕ ಜನರಿಗೆ ಭೂಸಾಗುವಳಿಯ ಒಡೆತನವನ್ನು ಕಲ್ಪಿಸಿಕೊಂಟ್ಟಿದ್ದಾರೆ. ಮಾರಣಾಂತಿಕ ಹಲ್ಲೆಗೊಳಗಾದ ಜನತೆಗೆ ಸಾಂತ್ವನ ಹೇಳಿ ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ಮಾಡಿದ್ದಾರೆ. ಅನಾಥರಿಗೆ ಆಶ್ರಯ ಕಲ್ಪಿಸಿಕೊಟ್ಟಿದ್ದಾರೆ. ಬಡ ವಿದ್ಯಾರ್ಥಿಗಳ ಶಿಕ್ಷಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸತ್ತ ಶವ ಹೂಳಲು ಜಾಗವಿಲ್ಲದೆ ಉಸಿರಿರುವ ಶವಾದಂತಾದ ನೊಂದ ಮನಗಳಿಗಾಗಿ ವ್ಯೇವಸ್ತೆ ವಿರುಧ್ದ ಹೋರಾಡಿ ಸ್ಮಶಾನದ ಜಾಗ ಕಲ್ಪಿಸಿಕೊಟ್ಟಿದ್ದಾರೆ. ಅಕ್ರಮ ಮದ್ಯದ ಅಂಗಡಿಗಳನ್ನು  ತೇರವುಗೊಳಿಸಿದ್ದಾರೆ. ಇಂತಹ ಅನೇಕಾ ಸಂದರ್ಭಗಳಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕೆ ಇಟ್ಟು ಹೋರಾಟಗಳನ್ನು ಮಾಡಿದ್ದಾರೆ. ಇವೆಲ್ಲವೂ ಶಾಂತಿಯುತವಾಗಿ ಮತ್ತು ಕಾನೂನಿನ ಚೌಕಟ್ಟಿನ ಒಳಗಡೆ ಮಾಡಿದ್ದು ವಿಶೇಷ.
ಇವರ ಹೇಳಿಗೆಯನ್ನು ಸಹಿಸದ ವ್ಯವಸ್ಥೆ ಹಲವು ಕುತಂತ್ರಗಳನ್ನು ರೂಪಿಸುತ್ತಲೆ ಇರುತ್ತದೆ. ಇಂತಹ ಬೆದರಿಕೆಗಳ್ಗೆ ಜಗ್ಗದ ವ್ಯಕ್ತಿ. ಆದರೆ ಮರದ ಬುಡಕ್ಕೆ ಬಿದ್ದ ಕೊಡಲಿಯ ಪೆಟ್ಟಿನ ಏಟು ನಮ್ಮವರಿಂದಲೇ ಎಂದು ತಿಳಿದಾಗ ನೊಂದು ಉಸಿರು ನಿಲ್ಲಿಸಲು ಹೊರಟಾಗ ಈ ಸಂದರ್ಭದಲ್ಲಿ ಅನೇಕ ಹೋರಾಟಗಾರ ಸಂದೇಶ್ ಅವರ ಜೊತೆ ನಿಂತು ಆತ್ಮಸ್ಥೈರ್ಯ ತುಂಬಿದರು. ಮುಖ್ಯಮಂತ್ರಿಗಳು ಮಾನ್ಯ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಬರಹದ ಮೂಲಕ ಧ್ವನಿ  ಎತ್ತಿ ಬೆಂಬಲ ನೀಡಿದರು.... 
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ತಮ್ಮೊಂದಿಗೆ ಹೆಜ್ಜೆ ಹಾಕುವಂತೆ ಸಂದೇಶ ಅವರಿಗೆ ಕರೆ ನೀಡಿದರು.....  ಇತ್ತೀಚಿಗೆ ವಿಶ್ವವಿದ್ಯಾಲಯ ವಿದ್ಯಾರ್ಥಿನಿವೊಬ್ಬರು  ಅವರ ಹೋರಾಟ ಮತ್ತು ಪ್ರೇಮ ವಿವಾಹಗಳ ಕುರಿತು ಸಂಶೋಧನಾ ಪ್ರಬಂಧಕ್ಕಾಗಿ ಸಂದೇಶ್ ಅವರನ್ನು ಸಂದರ್ಶಿಸಿದ್ದನು ಕಂಡೆನು........
ಇದೇ ಅಕ್ಟೋಬರ್ 1 ರಂದು ಯಾದಗಿರಿ ಜಿಲ್ಲೆಯ ASSK ಜಿಲ್ಲಾ ಶಾಖೆ ಉದ್ಘಾಟನೆಗೆ ಆಗಮಿಸಿದ್ದಾಗ , 10 ನಿಮಿಷ ಅವರ ಹೋರಾಟದ ಹಾದಿ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಲು ಅವಕಾಶ ಸಿಕ್ಕಿತು.  ಹೀಗೆ ನಾನು... ಸಂದೇಶ್ ಅವರ ಹೋರಾಟದ... ಖಾಯಂ ಸಂಗಾತಿ ಆಗಿದ್ದು.


ಸಂದೇಶ್ ಅವರ ಸಾಮಾಜಿಕ ಸೇವೆ:-

• 310ಕ್ಕೂ ಹೆಚ್ಚು ಯಶಸ್ವಿ ಹೋರಾಟ ಜಾತಿ ಶ್ರೇಣಿಕೃತ ವ್ಯವಸ್ಥೆಯ ವಿರುದ್ಧ ಶೋಷಣೆಗೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ.

•151 ಅಂತರ್ಜಾತಿ/ ಪ್ರೇಮ/ ಸರಳ ವಿವಾಹ.

•100ಕ್ಕಿಂತ ಹೆಚ್ಚು ಬಡ ಜನತೆಗೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ.

•ಹೆಣ್ಣು ಮಕ್ಕಳಿಗೆ ಸಾವಿರಕ್ಕೂ ಹೆಚ್ಚು ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ಬಡ ವಿದ್ಯಾರ್ಥಿಗಳ ಶಿಕ್ಷಣ ಜವಾಬ್ದಾರಿ.

•15 ಬಾರಿ ರಕ್ತದಾನ

• 1 doctor rates Coimbatore University
• 1 international award
• 47 state awards 






Tuesday, 26 September 2023

COMPARISON AND CONTRAST

PART VII: COMPARISON AND CONTRAST 

§ 1. What HE Rejected 

1. This survey of the philosophical and religious thought shows that at the time when the Buddha formulated his Sasana, certain ideas had a firm grip on the mind of the people. They were: (i) Belief in the infallibility of the Vedas (ii) Belief in Moksha, or Salvation of the soul, i.e., its ceasing to be born again (iii) Belief in the efficacy of rites, ceremonies and sacrifices as means of obtaining moksha (iv) Belief in Chaturvarna as the ideal for social organization (v) Belief in Iswara as the creator of, and in Brahmana as the principle underlying, the universe (vi) Belief in Atmana, or the soul (vii) Belief in Sansara (wandering together), i.e., transmigration of the soul (viii) Belief in Karma, i.e., the determination of man's position in present life by deeds done by him in his past life. 

2. In formulating the principles of his Sasana, the Buddha dealt with this old stock of ideas in his own way.  

3. The following are the ideas which he rejected: (i) He condemned indulging in speculation as to the whence, whither, and what am I? (ii) He discarded heresies about the soul, and refrained from identifying it with either the body, sensations, volitions, and [=or] consciousness. (iii) He discarded all the Nihilistic views which were promulgated by certain religious teachers. (iv) He condemned such views as were held by heretics. (v) He discarded the theory that the cosmic progress had a known beginning. (vi) He repudiated the theory that a God created man, or that he came out of the body of some Bramha. (vii) The existence of the soul he either ignored or denied. 

§ 2. What HE Modified 

1. He accepted the great grand law of cause and effect with its corollaries. 
2. He repudiated the fatalistic view of life, and [the] other equally foolish view that a God predestined as to what should happen for man and the world. 
3. He discarded the theory that all deeds committed in some former birth have the potency to produce suffering, making present activity impotent. He denied the fatalistic view of Karma. He replaced the view of Karma by a much more scientific view of Karma. He put new wine in old bottle[s].  
4. Transmigration (sansara) was replaced by the doctrine of re-birth.  
5. He replaced the doctrine of moksha or salvation of the soul by the doctrine of Nibbana. 
6. The Buddha Sasana is thus an original piece [of thought]. The little in it which is old is either modified or restated. 

§3. What HE Accepted 

1. The first distinguishing feature of his teachings lay in the recognition of the mind as the centre of everything. 
2. Mind precedes things, dominates them, creates them. If mind is comprehended, all things are comprehended. 
3. Mind is the leader of all its faculties. Mind is the chief of all its faculties. The very mind is made up of those faculties.  4. The first thing to attend to is the culture of the mind. 
5. The second distinguishing feature of his teachings is that mind is the fount of all the good and evil that arises within, and befalls us from without. 
6. Whatsoever there is of evil, connected with evil, belonging to evil--that issues from the mind. Whatsoever there is of good, connected with good, belonging to good--all issues from mind. 
7. If one speaks or acts with a pounded [=polluted?] mind, then affliction follows him as the wheels of the cart follow the feet of the bullocks who pull the cart. The cleaning of the mind is, therefore, the essence of religion.  
8. The third distinguishing feature of his teachings is the avoidance of all sinful acts. 
9. The fourth distinguishing feature of his teaching is that real religion lies not in the books of religion, but in the observance of the tenets of the religion.  
10. Can anyone say that the Buddha's religion was not his own creation?

THE BUDDHA AND HIS CONTEMPORARIES

PART VI: THE BUDDHA AND HIS CONTEMPORARIES 
§ 1. His Contemporaries 

1. At the time when Gautama took Parivraja, there was a great intellectual ferment in the country. Besides the Brahmanic Philosophy there were as many as sixty-two different schools of philosophy, all opposed to the Brahmanic Philosophy. Of them at least six were worthy of attention. 
2. Of these schools of philosophy there was one headed by Purana Kassappa. His doctrine was known as Akriyavada. He maintained that the soul was not affected in any way by Karma. One may do, or one may get things done. One may do injury, or one may get someone to kill. One may commit theft or dacoity [=highway robbery], or one may get theft or dacoity committed; one may commit adultery, or one may get adultery committed; one may tell a lie, or one may get a lie told. Nothing affects the soul. An act, however licentious, does not affect the soul with sin. An act, however good, does not bring merit to the soul. Nothing has any Kriya (result) on the soul. When a person dies, all the elements of which he is made join in their originals. Nothing survives after death, neither body nor soul. 
3. Another school of thought was known as Niyativada. Its chief propounder was Makhali Ghosal. His doctrine was a kind of fatalism or determinism. He taught that no one can do anything or undo anything. Things happen. No one can make them happen. No one can remove unhappiness, increase it, or diminish it. One must undergo one's share of the experiences of the world. 
4. The third school was known as Ucchedavada. Its chief propounder was Ajit Kesakambal. His doctrine was a kind of Annihilism. He taught that there was nothing in Yajna, Haom; there is no such thing as the fruits or effects of deeds to be enjoyed or suffered by the soul. There is neither heaven nor hell. Man is made up of certain elements of unhappiness in the world. The soul cannot escape it. Whatever sorrow or unhappiness there was in the world, the soul cannot escape. This sorrow or unhappiness will come to an end automatically. The soul must undergo rebirth during eighty-four lakhs [=hundred thousands] of cycles of Mahakalpas. Then only the sorrow and unhappiness of the soul will end, not before nor by any other means. 
5. The fourth school was known as Annyonyavad. The head of this school was Pakudha Kacchyana. He preached that there are seven elements which go to make up a being, namely, Prathvi, Apa, Tej, Vayu, Sukha, Dukha and the Soul. Each is independent of the other; one does not affect the other. They are self-existent, and they are eternal. Nothing can destroy them. If any one chops off the head of man, he does not kill him. All that happens is that the weapon has entered the seven elements. 
6. Sanjaya Belaputta had his own school of philosophy. It was known as Vikshepavada, a kind of scepticism.  He argued, "if anyone asked me is there heaven, if I feel there was I would say yes. But if I feel there was no heaven I would say no. If I am asked whether human beings are created, whether man has to suffer the fruits of his action whether good or bad, and whether the soul lives after death, I say nay to all these because I don't think they exist. This is how Sanjaya Belaputta summed up his doctrine. 
7. The sixth school of philosophy was known as Chaturyamsamvarvad.   The head of this school who was alive at the time when Gautama was searching for light was Mahavir, who was also called Nigantha Nathaputta. Mahavir taught that the soul had to undergo rebirth because of the bad karmas done in the past life and in the present life. One must therefore get over the bad, he suggested, by tapascharya. For preventing the doing of bad karmas in this life Mahavira prescribed the observance of chaturyama dharma, i.e., observance of four rule: (1) not to kill; (2) not to steal; (3) not to tell a lie; and (4) not to have property, and to observe celibacy. 

§ 2. His Attitude to His Contemporaries 

1. The Buddha did not accept the teachings of the new philosophers.  
2. His rejection of their teaching was not without reasons. He said that: 
3. If the doctrines of Purana Kassyappa or Pakudha Kacchyana were true, then one can do any evil or any harm; one may even go to the length of killing another without involving any social responsibility or social consequences. 
4. If the doctrine of Makhali Ghosal is true, then man becomes the slave of destiny. He cannot liberate himself.
5. If the doctrine of Ajit Kesakambal is true, then all that man has to do is to eat, drink and make merry. 
6. If the doctrine of Sanjaya Belaputta was true, then man must float about, and live without a positive philosophy of life. 
7. If the doctrine of Nigantha Nathaputta was true, then man's life must be subjected to Asceticism and Tapascharya, a complete subjugation and uprooting of man's instincts and desires. 
8. Thus, none of the paths of life suggested by the philosophers appealed to the Buddha. He thought they were the thoughts of men who had become hopeless, helpless, and reckless. He therefore decided to seek light elsewhere.

THE BUDDHA AND HIS PREDECESSORS


PART V: THE BUDDHA AND HIS PREDECESSORS 

§1. The Buddha and the Vedic Rishis 


1. The Vedas are a collection of Mantras, i.e., hymns or chants. The reciters of these hymns are called Rishis.     
2. The Mantras are mere invocations to deities such as Indra, Varuna, Agni, Soma, Isana, Prajapati, Bramba, Mahiddhi, Yama and others.    
 3. The invocations are mere prayers for help against enemies, for gift of wealth, for accepting the offerings of food, flesh and wine from the devotee.     
4. There is not much philosophy in the Vedas. But there were some Vedic sages who had entered into speculations of a philosophical nature.     
5. These Vedic sages were: (1) Aghamarsana; (2) Prajapati Parmesthin; (3) Brahmanaspati, otherwise known as Brihaspati; (4) Anila; (5) Dirghatamas; (6) Narayan; (7) Hiranyagarbha; and (8) Visvakarman.     
6. The main problems of these Vedic philosophers were: How did the world originate? In what manner were individual things created? Why have they their unity and existence? Who created, and who ordained? From what did the world spring up, and to what again will it return ?    
 7. Aghamarsana said that the world was created out of Tapas (heat). Tapas was the creative principle from which eternal law and truth were born. From these were produced the night (tamas). Tamas produced water, and from water originated time. Time gave birth to the sun and the moon, the heaven and the earth, the firmament and light, and ordained the days and nights.     
8. Brahmanaspati postulated the genesis of being from non-being. By the term non-existence, he denoted apparently the infinite. The existent originally sprang up from the non-existent. The non-existent (asat, nonens) was the permanent foundation of all that is existent (sat, ens) and of all that is possible and yet non-existent (asat).     
9. Prajapati Parmesthin started with the problem: "Did being come out of non-being?" His view was that this was an irrelevant question. For him water was the original substance of that which exists. For him the original matter--water--came neither under the definition of being nor under that of non-being.     
10. Paramesthin did not draw any distinction between matter and motive power. According to him, water transformed itself into particular things by some inherent principle to which he gave the name Kama, Cosmic Desire.     
11. Anila was another Vedic Philosopher. To him the principal element was air (vayu). It possesses the inherent capacity for movement. It is endowed with the generating principle.     
12. Dirghtamas maintained that all living beings rest and depend ultimately on the sun. The sun, held up and propelled by its inherent force, went backward and forward.     
13. The sun is composed of a grey-coloured substance, and so are lightning and fire.    
 14. The sun, lightning, and fire formed the germ of water. Water forms the germ of plants. Such were the views of Dirghatamas.     
15. According to Narayana, Purusha (God) is the first cause of the universe. It is from Purusha that the sun, the moon, the earth, water, fire, air, mid-air, the sky, the regions, the seasons, the creatures of the air, all animals, all classes of men, and all human institutions, had originated.     
16. Hiranyagarbha. From [a] doctrinal point of view he stood midway between Parmeshthin and Narayan. Hiranyagarbha means the golden germ. It was the great power of the universe, from which all other powers and existences, divine and earthly, were derived.
 17. Hiranyagarbha means [=refers to] fire. It is fire that constituted the solar essence, the generating principle of the universe.
 18. From the point of view of Vishvakarman, it was quite inadequate and unsatisfactory to hold that water was the primitive substance of all that is, and then to derive from it this world as a whole by giving it an inherent power of movement. If water be the primitive substance which is endowed with the inherent principle of change, we have yet to account for that from which water derived its being, and derived the motive power, the generating principle, the elemental forces, the laws and all the rest. 
19. Vishvakarman held the view that it was God which was the motive power. God is first and God is last. He is earlier than the visible universe; he had existed before all cosmic forces came into being. He is the sole God who created and ordained this universe. God is one, and the only one. He is the unborn one (aja) in whom all the existing things abide. He is the one who is mighty in mind and supreme in power. He is the maker--the disposer. As father he generated us, and as disposer he knows the fate of all that is. 
20. The Buddha did not regard all the Vedic Sages as worthy of reverence. He regarded just ten Vedic Rishis as the most ancient, and as the real authors of the Mantras.  
21. But in the Mantras he saw nothing that was morally elevating.  
22. In his view the Vedas were as worthless as a desert.
 23. The Buddha, therefore, discarded the Mantras as a source from which to learn or to borrow. 
24. Similarly, the Buddha did not find anything in the philosophy of the Vedic Rishis. They were groping to reach the truth. But they had not reached it. 
25. Their theories were mere speculations, not based on logic nor on facts. Their contributions to philosophy created no social values. 
 26. He therefore rejected the philosophy of the Vedic Rishis as useless.


§2. Kapila— The Philosopher

 1. Among the ancient philosophers of India, the most pre-eminent was Kapila. 
2. His philosophical approach was unique, and as philosopher he stood in a class by himself. His philosophy was known as the Sankhya Philosophy.  
3. The tenets of his philosophy were of a startling nature. 
4. Truth must be supported by proof. This is the first tenet of the Sankhya system. There is no truth without proof. 
5. For purposes of proving the truth, Kapila allowed only two means of proof--(1) perception, and (2) inference.  
6. By perception is meant mental apprehension of a present object. 
7. Inference is threefold: (1) from cause to effect, as from the presence of clouds to rain; (2) from effect to cause, as from the swelling of the streams in the valleys to rain in the hills; and (3) by analogy, as when we infer from the fact that a man alters his place when he moves that the stars must also move, since they appear in different places. 
 8. His next tenet related to causality--creation and its cause. 
   9. Kapila denied the theory that there was a being who created the universe. In his view a created thing really exists beforehand in its cause, just as the clay serves to form a pot, or the threads go to form a piece of cloth.    
 10. This is the first ground on which Kapila rejected the theory that the universe was created by a being.     
11. But there are other grounds which he advanced in support of his point of view.     
12. The non-existent cannot be the subject of an activity; there is no new creation. The product is really nothing else than the material of which it is composed: the product exists before its coming into being ,in the shape of its material of which it is composed. Only a definite product can be produced from such material; and only a specific material can yield a specific result.     
13. What then is the source of the empirical universe?    
 14. Kapila said the empirical universe consists of things evolved (Vyakta) and things that are not evolved (Avyakta).     
15. Individual things (Vyakta Vastu) cannot  be the source of unevolved things (Avyakta Vastu).     
16. Individual things are all limited in magnitude, and this is incompatible with the nature of the source of the universe.     
17. All individual things are analogous one to another, and therefore no one [of them] can be regarded as the final source of the other. Moreover, as they all come into being from a source, they cannot constitute that source.    
 18. Further, argued Kapila, an effect must differ from its cause, though it must consist of the cause. That being so, the universe cannot itself be the final cause. It must be the product of some ultimate cause.     
19. When asked why the unevolved cannot be perceived, why does it not show movement which would make it perceivable, Kapila replied:    
 20. "It may be due to various causes. It may be that its fine nature makes, it imperceptible, just as other things of whose existence there is no doubt, cannot be perceived; or because of their too great a distance or proximity; or through the intervention of a third object; or through admixture with similar matter; or through the presence of some more powerful sensation; or the blindness or other defect of the senses or the mind of the observer."     
21. When asked, "What then is the source of the universe? What makes the difference between the evolved and unevolved part of the universe?     
22. Kapila's reply was:  "Things that have evolved have a cause, and the things that have not evolved have also a cause. But the source of both is uncaused and independent.     
23. "The things that have evolved are many in number, and limited in space and name. The source is one, eternal and all-pervasive. The things evolved have activities and parts; the source is imminent in all, but has neither activities nor parts."    
 24. Kapila argued that the process of development of the unevolved is through the activities of three constituents of which it is made up, Sattva, Rajas, and Tamas. These are called three Gunas.     
25. The first of the constituents, or factors, corresponds to what we call as light in nature, which reveals, which causes pleasure to men; the second is that [=what] impels and moves, what produces activity; the third is what is heavy and puts under restraint, what produces the state of indifference or inactivity.    
 26. The three constituents act essentially in close relation; they overpower and support one another, and intermingle with one another. They are like the constituents of a lamp, the flame, the oil, and wick.     
27. When the three Gunas are in perfect balance, none overpowering the other, the universe appears static (Achetan) and ceases to evolve.    
 28. When the three Gunas are not in balance, one overpowers the other, the universe becomes dynamic (sachetan), and evolution begins.     
29. Asked why the Gunas become unbalanced, the answer which Kapila gave was [that] this disturbance in the balance of the three Gunas was due to the presence of Dukha (suffering).     
30. Such were the tenets of Kapila's philosophy.    
31. Of all the philosophers, the Buddha was greatly impressed by the doctrines of Kapila.    
32. He was the only philosopher whose teachings appeared to the Buddha to be based on logic and facts.     
33. But he did not accept everything which Kapila taught. Only three things did the Buddha accept from Kapila.     
34. He accepted that reality must rest on proof. Thinking must be based on rationalism.    
 35. He accepted that there was no logical or factual basis for the presumption that God exists or that he created the universe.     
36. He accepted that there was Dukha (suffering) in the world.    
 37. The rest of Kapila's teachings he just bypassed as being irrelevant for his purpose.



§ 3. The Bramhanas 

1. Next to the Vedas are the religious books known as the Bramhanas. Both were held as sacred books. Indeed the Bramhanas are a part of the Vedas. The two went together and were called by a common name, Sruti.     
2. There were four theses on which the Bramhanic Philosophy rested.    
 3. The first thesis was that the Vedas are not only sacred, but that they are infallible, and they are not to be questioned.    
 4. The second thesis of the Bramhanic Philosophy was that salvation of the soul--that is escape from transmigration--can be had only by the due performance of Vedic sacrifices, and observances of religious rites and ceremonies, and the offering of gifts to Brahmins.     
5. The Brahmins had not only a theory of an ideal religion as contained in the Vedas, but they also had a theory for an ideal society.     
6. The pattern of this ideal society they named Chaturvarna. It is imbedded in the Vedas, and as the Vedas are infallible, and as their authority cannot be questioned, so also Chaturvarna as a pattern of society was binding and unquestionable.     
7. This pattern of society was based upon certain rules.    
 8. The first rule was that society should be divided into four classes: (1)  Brahmins; (2) Kshatriyas; (3) Vaishyas; and (4) Shudras.     
9. The second rule was that there cannot be social equality among these four classes. They must be bound together by the rule of graded inequality.     
10. The Brahmins to be at the top, the Kshatriyas to be kept below the Brahmins but above the Vaishyas, the Vaishyas to be below the Kshatriyas but above the Shudras, and the Shudras to be the lowest of all.     
11. These four classes were not to be equal to one another in the matter of rights and privileges. The rule of graded inequality governed the question of rights and privileges.
 12. The Brahmin had all the rights and privileges which he wished to claim. But a Kshatriya could not claim the rights and privileges which a Brahmin could. He had more rights and privileges than a Vaishya could claim. The Vaishya had more rights and privileges than a Shudra. But he could not claim the rights and privileges which a Kshatriya could. And the Shudra was not entitled to any right, much less any privilege. His privilege was to subsist without offending the three superior classes. 
13. The third rule of Chaturvarna related to the division of occupations. The occupation of the Brahmin was learning and teaching and the performance of religious observances. The occupations of the Kshatriya was fighting. Trade was assigned to the Vaishyas. The occupations of the Shudras was service of the three superior classes. These occupations assigned to different classes were exclusive. One class could not trespass upon the occupation of the other. 
14. The fourth rule of Chaturvarna related to the right to education. The pattern of Chaturvarna gave the right to education to the first three classes, the Brahmins, Kshatriyas and Vaishyas. The Shudras were denied the right to education. This rule of Chaturvarna did not deny the right to education to the Shudras only. It denied the right to education to all women, including those belonging to the class of Brahmins, Kshatriyas and Vaishyas.
 15. There was a fifth rule. According to it, man's life was divided into four stages. The first stage was called Bramhacharya; the second stage was called Grahastashram; the third stage was called Vanaprasta and the fourth stage was called Sannyasa. 
16. The object of the first stage was study and education. The object of the second stage was to live a married life. The object of the third stage was to familiarise a man with the life of a hermit, i.e., severing family ties, but without deserting his home. The object of the fourth stage was to enable a man to go in search of God and seek union with him.
 17. The benefits of these stages were open only to the male members of the three superior classes. The first stage was not open to the Shudras and women. Equally the last stage was not open to the Shudras and women. 
18. Such was the divine pattern of an ideal society called Chaturvarna. The Brahmins had idealised the rule and had realised the ideal without leaving any cracks or loopholes. 
19. The fourth thesis of Brahmanic Philosophy was the doctrine of Karma. It was part of the thesis of transmigration of the soul. The Karma of the Brahmins was an answer to the question, "Where did the soul land on transmigration with his new body on new birth?" The answer of the Brahmanic Philosophy was that it depended on a man's deeds in his past life. In other words, it depended on his Karma. 
20. The Buddha was strongly opposed to the first tenet of Brahmanism. He repudiated their thesis that the Vedas are infallible and their authority could never be questioned. 
21. In his opinion, nothing was infallible and nothing could be final. Everything must be open to re-examination and reconsideration, whenever grounds for re-examination and reconsideration arise. 
22. Man must know the truth--and real truth. To him freedom of thought was the most essential thing. And he was sure that freedom of thought was the only way to the discovery of truth.  
23. Infallibility of the Vedas meant complete denial of freedom of thought.  
24. For these reasons this thesis of the Brahmanic Philosophy was most obnoxious to him.
 25. He was equally an opponent of the second thesis of the Brahmanic Philosophy. The Buddha did admit that there was any [=some] virtue in a sacrifice. But he made a distinction between true sacrifice and false sacrifice.     
26. Sacrifice in the sense of self-denial for the good of others, he called true sacrifice. Sacrifice in the sense of killing an animal as an offering to God for personal benefit, he regarded as a false sacrifice.     
27. The Brahmanic sacrifices were mostly sacrifices of animals to please their gods. He condemned them as false sacrifices. He would not allow them, even though they be performed with the object of getting salvation for the soul.     
28. The opponents of sacrifices used to ridicule the Brahmins by saying, "If one can go to heaven by sacrificing an animal, why should not one sacrifice one's own father? That would be a quicker way of going to heaven."     
29. The Buddha wholeheartedly agreed with this view.     
30. The theory of Chaturvarna was as repugnant to the Buddha as the theory of sacrifices was repulsive to him.     
31. The organization of society set up by Brahmanism in the name of Chaturvarna did not appear to him a natural organization. Its class composition was compulsory and arbitrary. It was a society made to order. He preferred an open society and a free society.     
32. The Chaturvarna of the Brahmins was a fixed order never to be changed. Once a Brahmin always a Brahmin. Once a Kshatriya always a Kshatriya, once a Vaishya always a Vaishya, and once a Shudra always a Shudra. Society was based on status conferred upon an individual by the accident of his birth. Vice, however heinous, was no ground for degrading a man from his status, and virtue, however great, had no value [=ability] to raise him above it. There was no room for worth, nor for growth.     
33. Inequality exists in every society. But it was different with Brahmanism. The inequality preached by Brahmins was its official doctrine. It was not a mere growth. Brahmanism did not believe in equality. In fact, it was opposed to equality.     
34. Brahmanism was not content with inequality. The soul of Brahmanism lay in graded inequality.     
35. Far from producing harmony, graded inequality, the Buddha thought, might produce in society an ascending scale of hatred and a descending scale of contempt, and might be a source of perpetual conflict.     
36. The occupations of the four classes were also fixed. There was no freedom of choice. Besides, they were fixed not in accordance with skill, but in accordance with birth.     
37. On a careful review of the rules of Chaturvarna, the Buddha had no difficulty in coming to the conclusion that the philosophic foundations on which the social order was reared by Brahmanism were wrong if not selfish.     
38. It was clear to him that it did not serve the interests of all, much less did it advance the welfare of all. Indeed, it was deliberately designed to make [the] many serve the interests of the few. In it man was made to serve a class of self-styled supermen.     
39. It was calculated to suppress and exploit the weak, and to keep them in a state of complete subjugation.     
40. The law of Karma as formulated by the Brahmins, thought the Buddha, was calculated to sap the spirit of revolt completely. No one was responsible for the suffering of man except he himself. Revolt could not alter the state of suffering ; for suffering was fixed by his past Karma as his lot in this life.     
41. The Shudras and women--the two classes whose humanity was most mutilated by Brahmanism--had no power to rebel against the system.     
42. They were denied the right to knowledge, with the result that by reason of their enforced ignorance they could not realize what had made their condition so degraded. They could not know that Brahmanism had robbed them completely of the significance of their life. Instead of rebelling against Brahmanism, they had become the devotees and upholders of Brahmanism.     
43. The right to bear arms is the ultimate means of achieving freedom which a human being has. But the Shudras were denied the right to bear arms.     
44. Under Brahmanism the Shudras were left as helpless victims of a conspiracy of selfish Brahmanism, powerful and deadly Kshatriyas, and wealthy Vaishyas.     
45. Could it be amended? Knowing that it was a divinely ordained social order, he knew that it could not be. It could only be ended.     
46. For these reasons the Buddha rejected Brahmanism as being opposed to the true way of life.



§4. The Upanishads and Their Teachings 

1. The Upanishads constituted another piece of literature. It is not part of the Vedas. It is uncanonical.     
2. All the same, they did form a part of religious literature.     
3. The number of the Upanishads is quite large. Some important, some quite unimportant.     
4. Some of them were ranged against the Vedic theologians, the Brahmin priests.     
5. All of them agreed in viewing Vedic study as a study of nescience or ignorance (avidya).     
6. They were all agreed in their estimate of the four Vedas and the Vedic science as the lower knowledge.     
7. They were all agreed in questioning the divine origin of the Vedas.     
8. They were all agreed in denying the efficacy attributed to sacrifices, to the funeral oblations, and the gifts to the priests which are the fundamentals of the Brahmanic philosophy.     
9. This, however, was not the main topic with which the Upanishads were concerned. Their discussions centred round Brahman and Atman.     
10. Brahman was the all-pervading principle which binds the universe, and [they maintained] that salvation lay in the Atman realizing that it is Brahman.     
11. The main thesis of the Upanishads was that Brahmana was a reality and that Atmana was the same as Brahmana. The Atmana did not realize that it was Brahmana because of the Upadhis in which it was entangled.     
12. The question was, Is Brahmana a reality? The acceptance of the Upanishadic thesis depended upon the answer to this question.     
13. The Buddha could find no proof in support of the thesis that Brahmana was a reality. He, therefore, rejected the thesis of the Upanishads.     
14. It is not that questions on this issue were not put to the authors of the Upanishads. They were.     
15. Such questions were put to no less a person than Yajnavalkya, a great seer who plays so important a part in the Brahadarnyka Upanishad.     
16. He was asked, "What is Brahmana? What is Atmana " All that Yajnavalkya could say, "Neti! Neti! I know not! I know not! "     
17. "How can anything be a reality about which no one knows anything?" asked the Buddha. He had, therefore, no difficulty in rejecting the Upanishadic thesis as being based on pure imagination.

Monday, 25 September 2023

ಪೆರಿಯಾರ್ ವಿಚಾರಗಳು:-

ಪೆರಿಯಾರ್ ವಿಚಾರಗಳು:-

ಸಂಪಾದಕರು: ಡಿ.ಎಸ್. ಕಾರ್ಲೋಸ್ 

#ಬೌದ್ಧ_ಧರ್ಮ_ಮತ್ತು_ಸ್ವಾಭಿಮಾನ

ಅಧ್ಯಕ್ಷರೇ! ಸಹೋದರಿ-ಸಹೋದರರೇ!
'ಸ್ವಾಭಿಮಾನ ಮತ್ತು ಬೌದ್ಧ ಧರ್ಮ' ಎಂಬ ವಿಷಯದ ಕುರಿತು ಮಾತು ಕಥೆಗಳು ನಡೆಯಲಿರುವ ಈ ಸಭೆಯಲ್ಲಿ ನಾನು ಮಾತನಾಡಬೇಕಾಗಬಹುದು ಎಂದು ಈ ಮೊದಲು ಭಾವಿಸಿರಲಿಲ್ಲ. ನಾನಿಂದು ರೈಲಿನಲ್ಲಿ ಬೇರೆಡಿಗೆ ಹೊರಡಬೇಕಿದ್ದು, ಅದಕ್ಕೆ ಇನ್ನು ಸ್ವಲ್ಪ ಸಮಯವಿರುವುದರಿಂದ, ಸಂಘದ ಕಾರ್ಯದರ್ಶಿಯವರು ನನ್ನನ್ನು ಈ ಸಭೆಗೆ ಆಹ್ವಾನಿಸಿದರು ‌. ಅದನ್ನು ಒಪ್ಪಿ ನಾನು ಉಪನ್ಯಾಸ ಕೇಳಿ ಹೋಗಲು ಬಂದೆ. ಆದರೆ, ಅವರು ದಿಢೀರನೆ ನಾನು ಸಭೆಯನ್ನು ಉದ್ದೇಶಿಸಿ ಮಾತನಾಡಬೇಕೆಂದು ಪ್ರೀತಿ ಪೂರ್ವಕ ಒತ್ತಾಯ ಹಾಕಿದರು. ಆದಕಾರಣ, ಸ್ವಲ್ಪ ಸಮಯ ಕೆಲವು ಮಾತುಗಳನ್ನಾಡುತ್ತೇನೆ. ನನ್ನ ಮಾತುಗಳಲ್ಲಿ ವ್ಯಕ್ತವಾಗುವ ವಿಚಾರಗಳು ನಿಮ್ಮ ಅಭಿಪ್ರಾಯಗಳಿಗೆ ಹೊಂದಿಕೊಳ್ಳದಿದ್ದರೆ ಯಾರು ಬೇಸರಿಸಬಾರದೆಂದು ತಮ್ಮೆಲ್ಲರನ್ನು ಕೇಳಿಕೊಳ್ಳುತ್ತೇನೆ.

ಕಾರಣವೆಂದರೆ, ಇಂದಿನ ವಿಷಯವಾದ 'ಸ್ವಾಭಿಮಾನ ಮತ್ತು ಬೌದ್ಧ ಧರ್ಮ' ಕುರಿತು ಮಾತನಾಡುವ ಸಂದರ್ಭದಲ್ಲಿ ನನ್ನ ಮನದಾಳದಲ್ಲಿರುವುದನ್ನು ನಾನು ವ್ಯಕ್ತಪಡಿಸಬೇಕಾಗುತ್ತದೆ. ಯಾವಾಗಲೂ ಕಟು ಸತ್ಯವೆಂಬುದು ಜನರಿಗೆ ಕಹಿಯಾದದು, ಅದು ಸತ್ಯಕ್ಕಿಂತಲೂ ಹೆಚ್ಚಿನ ಅತೃಪ್ತಿಯನ್ನು ತರುತ್ತದೆ. ಸತ್ಯವನ್ನು ಮರೆಮಾಚಿ ಮಾತನಾಡುವುದೆಂದರೆ, ಅದು ಯಾವಾಗಲೂ ಮಾತನಾಡುವವನಿಗೂ ಕೇಳುಗನಿಗೂ ಸಂತೃಪ್ತಿಯನ್ನೇ ನೀಡುವುದಾಗಿರುತ್ತದೆ. ಆದರೆ ಸತ್ಯವನ್ನು ಹೇಳುವಾಗ ಎಲ್ಲವನ್ನೂ ಸಂತೃಪ್ತಿಯ ಮೂಲಕ ನೋಡಲಾಗುವುದಿಲ್ಲವೆಂದು ನನಗೆ ಗೊತ್ತು. ಸಹೋದರರೇ!  'ಸ್ವಾಭಿಮಾನ ಮತ್ತು ಬೌದ್ಧ ಧರ್ಮ' ಕುರಿತು ಮಾತನಾಡುವಾಗ ನಾನು ಮುಖ್ಯವಾಗಿ ಹೇಳಬಯಸುವುದೇನೆಂದರೆ 'ಇಂತಹ ಧರ್ಮವೇ ಸ್ವಾಭಿಮಾನಿ ಧರ್ಮ' ಎಂಬುದನ್ನು ನಾನು ಯಾವ ಕಾಲಕ್ಕೂ ಹೇಳುವುದಿಲ್ಲ. ಹಾಗೆ ಒಪ್ಪಿಕೊಳ್ಳಲು ನನ್ನಿಂದ ಎಂದು ಸಾಧ್ಯವಿಲ್ಲ. 'ಇಂದು ಇರುವ ಯಾವ ಧರ್ಮವು ಬೇಕಿಲ್ಲ. ಅವು ಮನುಷ್ಯನಿಗೆ ಅಗತ್ಯವು ಅಲ್ಲ' ಎಂಬುದು ನಮ್ಮ ಸ್ವಾಭಿಮಾನಿ ಚಳುವಳಿಯ ಮುಖ್ಯ ಧ್ಯೇಯೋದ್ದೇಶ. ಆದುದರಿಂದ ಈ ಚಳುವಳಿ ಒಂದು ಧರ್ಮದೊಂದಿಗೆ ವಿಲೀನಗೊಳ್ಳುವುದು ಹೇಗೆ ಸಾಧ್ಯ ಎಂಬುದನ್ನು ನೀವೇ ಸ್ವಲ್ಪ ಯೋಚಿಸಿ ನೋಡಿ. ಯಾರೋ ಒಬ್ಬರು ಹೇಳಿದ್ದಾರೆ ಎಂಬುದಕ್ಕಾಗಿಯೇ ಯಾವುದನ್ನೂ ಯಾವ ಕಾಲದಲ್ಲೂ ಒಪ್ಪಿಕೊಳ್ಳಬಾರದು; ಅದು ಯಾರೇ ಹೇಳಿರುವ ವಿಚಾರವಾಗಿದ್ದರೂ ಅದನ್ನು ವಿಶ್ಲೇಷಿಸಿ ಹಾಗೂ ತಮ್ಮ ಅರಿವಿಗೆ ಒಪ್ಪಿತವಾದುದೆ ಎಂದು ಕಂಡುಕೊಂಡ ನಂತರವೇ ಒಪ್ಪಿಕೊಳ್ಳಬೇಕು ಎಂಬುದೇ ಸ್ವಾಭಿಮಾನಿ ಚಳುವಳಿಯ ಮುಖ್ಯ ಆಶಯ. ಇದು ಯಾವುದೇ ವ್ಯಕ್ತಿಯನ್ನು ಹೀಗೆ ಪರೀಕ್ಷಿಸಿದ ನಂತರವೇ ಒಪ್ಪಬೇಕೆಂದು ಸೂಚಿಸುತ್ತದೆ.

ಅಲ್ಲದೆ, ಅದು ತನ್ನ ಧ್ಯೇಯೋದ್ದೇಶದೊಂದಿಗೆ ಸಮೀಕರಿಸಿಕೊಂಡು ಹಾಗೂ ಅದರ ನಿಬಂಧನೆಗಳಿಗೆ ಒಳಪಟ್ಟು ಯಾರು ಏನನ್ನೇ ಹೇಳಿದರು ಅದರ ಬಗ್ಗೆ ಮುಕ್ತ ಚಿಂತನೆ ಮಾಡುತ್ತದೆ. ಹೀಗಿಲ್ಲದೆ, ಯಾವ ಧರ್ಮವೇ ಆಗಲಿ ಇಲ್ಲವೇ ಯಾವ ವ್ಯಕ್ತಿಯೇ ಆಗಲಿ, ತನ್ನ ಧ್ಯೇಯೋದ್ದೇಶವನ್ನು ಹಾಗೂ ತಾನು ಹೇಳುತ್ತಿರುವ ದೊಡ್ಡವರಿಂದ ಬಂದಂಥ ವಿಚಾರವನ್ನು ಯಾರು ಪರೀಕ್ಷಿಸದೆ, ಸಂಶಯಿಸದೆ ಒಪ್ಪಬೇಕು ಎಂದರೆ ಅದೆಂತಹ ಮುಖ್ಯವಾದ ವಿಚಾರವಾಗಿದ್ದರೂ ಸ್ವಾಭಿಮಾನಿ ಚಳುವಳಿ ಅದನ್ನೇಂದೂ ಒಪ್ಪುವುದಿಲ್ಲ.

ಅಲ್ಲದೆ, ಭಗವಂತನು ಹೇಳಿದನು, ಅವತಾರ ಪುರುಷರು ಹೇಳಿದರು, ಧರ್ಮದೂತರು ಹೇಳಿದರು ಎಂದೆನ್ನುತ್ತ ಅವರು ಹೇಳಿರುವ ವಿಚಾರಗಳನ್ನು ತನ್ನ ಅರಿವಿಗೆ ತಾಳೆ ಮಾಡಿ ನೋಡದೆ ಕಣ್ಮುಚ್ಚಿ ಒಪ್ಪಿಕೊಂಡಿರುವವರು ಯಾರೇ ಆಗಿದ್ದರೂ ಅವರು ತಾವು ಸಹ ಸ್ವಾಭಿಮಾನಿ ಚಳುವಳಿಯಲ್ಲಿ ಭಾಗಿಯಾಗಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಪ್ರಾಚೀನ ಅಭಿಪ್ರಾಯಗಳೆಂದು ಇವೆಯೋ ಅವನ್ನು ಆದ್ಯಂತವಾಗಿ ಒರೆಗೆ ಹಚ್ಚಿ ನೋಡಬೇಕು. ಹೀಗೆ ವರೆಗೆ ಹಚ್ಚುವ ಅಥವಾ ಸಂಶೋಧನೆಯ ಪ್ರಕ್ರಿಯೆಯನ್ನು ಕಿಂಚಿತ್ತು ಹೆದರದೆ, ಪಕ್ಷಪಾತತನ ತೋರದೆ ಮಾಡಬೇಕು. ಈ ಬಗೆಯಲ್ಲಿ ಸಂಶೋಧನೆ ಮಾಡಲು ಹಿಂಜರಿಯುವವರು ಯಾರೇ ಆಗಿದ್ದರೂ ಅವರು ಹೇಡಿಗಳೇ ಸರಿ.

ನಾವು ನಮ್ಮ ಪೂರ್ವಕರಿಗಿಂತ ಹೆಚ್ಚಿನ ತಿಳುವಳಿಕೆಯನ್ನು ಹೊಂದಿದ್ದೇನೆ ಎನ್ನುವುದು ಸಂಶಯಕ್ಕೆ ಎಡೆ ಇಲ್ಲದ ವಿಚಾರವಾಗಿದೆ. ಈಗಿನ ಪೀಳಿಗೆಗೆ ಹೊಸ ಅರಿವನ್ನು ಪಡೆದುಕೊಳ್ಳಲು ಹಾಗೂ ವಿಚಾರಗಳ ಮಂಥನ ನಡೆಸಲು ಹಿಂದಿನವರಿಗಿಂತ ಹೆಚ್ಚಿನ ಸ್ವಾತಂತ್ರ್ಯ ಹಾಗೂ ಸೌಕರ್ಯವನ್ನು ಹೊಂದಿದೆ ಎನ್ನುವುದು ಒಂದು ಚಿಕ್ಕ ಮಗುವಿಗೂ ಗೊತ್ತಿರುವ ವಿಚಾರವೇ. ಇಷ್ಟಲ್ಲದೇ, ಇವತ್ತಿನ ಕಾಲವು ವಿವಿಧ ಅನುಭವಗಳ ಕ್ರೂಢೀಕರಣದಿಂದಾಗಿ ಹೊಸ ಹೊಸ ತತ್ವ ಸಿದ್ಧಾಂತಗಳು ರೂಪುಗೊಳ್ಳುತ್ತಿರುವ ಕಾಲವಾಗಿದೆ. ಇಂದಿನ ಪೀಳಿಗೆಯ ಮಕ್ಕಳು ಪ್ರಗತಿಪರ, ವಿಶಾಲ ಅರಿವು ಹೊಂದಿರುವ ಸಂತತಿಯಲ್ಲಿ ಹುಟ್ಟುತ್ತಿರುವವರಾಗಿದ್ದು ಅವರಲ್ಲಿ ಸ್ವಾಭಾವಿಕವಾಗಿಯೇ ಈ ಸಕರಾತ್ಮಕ ನಿಲುವುಗಳು ಮೂಡುತ್ತಿವೆ.

ಹೀಗಾಗಿ, ನಾವು ನಮ್ಮ ಪೂರ್ವಕರಿಗಿಂತಲೂ ಯಾವ ಬಗೆಯಲ್ಲೂ ಅರಿವನ್ನು ಪಡೆಯುವದರಲ್ಲಾಗಲಿ , ಅಥವಾ ವಿಸ್ಲೇಷಣೆ ಮಾಡುವುದರಲ್ಲಾಗಲಿ ಕಡಿಮೆಯಾದವರಲ್ಲ ಎಂಬ ಆತ್ಮವಿಶ್ವಾಸವನ್ನು ಹೊಂದಿರಬೇಕು. ಕಾಲ ತರುವ ಮಾರ್ಪಾಡುಗಳಿಗೆ ತಕ್ಕಂತೆ ದೃಷ್ಟಿಕೋನಗಳಿಗೆ ತಕ್ಕಂತೆ, ನಮ್ಮ ಚಿಂತನೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಹಕ್ಕು ಇರುವವರು ಹಾಗೂ ಅದು ಅಗತ್ಯವೂ ಕೂಡ ಎಂಬುದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು.

ಈ ಹಿನ್ನಲೆಯಿಂದ ನೋಡುವುದಾದರೆ, ನಮ್ಮ ಪೂರ್ವಿಕರು ಹೇಳಿರುವ ವಿಚಾರಗಳಿಗೆ ಎಷ್ಟು ಮಾನ್ಯತೆ ಕೊಡಬಹುದು ಎಂಬುದು ಸ್ಪಷ್ಟವಾಗಿ ಗೊತ್ತಾಗಿ ಬಿಡುತ್ತದೆ, ಇರಲಿ.

ಮತ್ತೊಂದು ಮಾತಂದರೆ, ಪೂರ್ವಿಕರು ವ್ಯಕ್ತ ಮಾಡಿರುವ ವಿಚಾರಗಳಿಗೆ ನಮ್ಮ ಅಭಿಪ್ರಾಯಗಳು ಹೊಂದಿಕೆಯಾಗುತ್ತವೆಯೇ ಎಂಬುದನ್ನು ತುಲನೆ ಮಾಡಿದ ನಂತರವೇ ನಮ್ಮ ಅಭಿಪ್ರಾಯಗಳನ್ನು ದೃಢಪಡಿಸಿಕೊಳ್ಳಬೇಕು ಎಂಬ ಮನೋಭಾವನೆಯನ್ನು ಬೇರು ಸಹಿತ ಕಿತ್ತೊಗೆಯಬೇಕು.

ಏಕೆಂದರೆ, ಪೂರ್ವಿಕರ ಅಭಿಪ್ರಾಯ ಎಂಬ ಕಾರಣಕ್ಕಾಗಿ ನಾವು ಯಾವುದಕ್ಕೂ ಗುಲಾಮರಾಗಬಾರದು. ನಾವು ಪೂರ್ವಿಕರ ಚಿಂತನೆಗಳಿಗೆ  ಗುಲಾಮರಂತೆ ತಲೆಬಾಗಿದರೆ ಸತ್ಯ ಮತ್ತು ಅರಿವಿನ ಬೆಳವಣಿಗೆಯನ್ನು ನಾವು ಸಂಪೂರ್ಣವಾಗಿ ಕೊಂದವರಾಗುತ್ತೇವೆ. ಆದಕಾರಣ 'ಬೌದ್ಧ ಧರ್ಮವೇ ಸ್ವಾಭಿಮಾನ ಚಳುವಳಿ'  ಎಂದು ಯಾರೂ ಹೇಳಬಾರದೆಂದು ತಿಳಿಸಲು ಬಯಸುತ್ತೇನೆ. ಉದಾಹರಣೆಯಾಗಿ, ಬೌದ್ಧ ಧರ್ಮದಲ್ಲಿ ದೇವರಿಲ್ಲ, ಆತ್ಮವಿಲ್ಲ, ಶಾಶ್ವತತೆ ಇಲ್ಲ ಎಂಬ ಬೋಧನೆ ಉಂಟೇಂದು ಹೇಳುತ್ತಿದ್ದಾರೆ. ಇದನ್ನು ಬುದ್ಧ ಹೇಳಿದ್ದಾನೆ ಎಂದು ಹೇಳುತ್ತಾರೆ. ಇವುಗಳನ್ನು ಸತ್ಯವೆಂದೇ ಪರಿಗಣಿಸೋಣ. ಇಂತಹ ಬೋಧನೆಗಳನ್ನು ಬುದ್ಧ ಹೇಳಿದರು ಎಂಬ ಕಾರಣಕ್ಕಾಗಿ ಅರಿವನ್ನು ಹೊಂದಿದ್ದರೂ, ಬಂದಿಲ್ಲದಿದ್ದರೂ ಬೌದ್ಧರು  ಒಪ್ಪಿಕೊಳ್ಳಬೇಕಾದವರಾಗಿರುತ್ತಾರೆ. ಇದೇ ರೀತಿ ಇತರೆ ಮತದವರು ದೇವರುಂಟು, ಆತ್ಮ ಶಾಶ್ವತ, ಮಾನವನನ್ನು ತನ್ನ ಮರಣದ ನಂತರ ದೇವರಿಂದ ವಿಚಾರಣೆಗೆ ಒಳಪಟ್ಟು ಅವನು ಮಾಡಿರುವ ಪಾಪ ಅಥವಾ ಪುಣ್ಯದ ಕಾರ್ಯಗಳಿಗೆ ತಕ್ಕಂತೆ ನರಕ ಅಥವಾ ಮೋಕ್ಷ (ಸನ್ಮಾನ ,ಧಂಡನೆ) ವನ್ನು ಪಡೆಯುತ್ತಾನೆ ಎಂಬ ವಿಚಾರಗಳನ್ನು ನಂಬಿಕೊಂಡಿರುತ್ತಾರೆ. ಈ ಎರಡೂ ವಿಭಿನ್ನ ನಿಲುವಿನವರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಮ್ಮ ತಮ್ಮ ತಿಳುವಳಿಕೆ, ವಿಶ್ಲೇಷಣೆ, ಮೊದಲಾದವುಗಳ ಆಧಾರದಲ್ಲಿ ಹೊಂದಿದ್ದಾರೆ ಎನ್ನುವುದಾದರೆ ಈ ಇಬ್ಬರೂ ಸ್ವಾಭಿಮಾನಿ ಚಳುವಳಿಗಾರರೇ ಆಗಿರುತ್ತಾರೆ.

ಏಕೆಂದರೆ, ಪೂರ್ವಿಕರ ಮಾತು ಎಂಬ ಕಾರಣಕ್ಕಾಗಿ ಪ್ರಶ್ನೆ ಮಾಡದೆ ಒಪ್ಪಿಕೊಂಡಿಲ್ಲದ ಅವರು ತಾವು ಗಳಿಸಿರುವ ಅರಿವು ತಮ್ಮ ವಿಶ್ಲೇಷಣೆಯ ಫಲದಿಂದ ಎಂದು ಹೇಳಬಲ್ಲವರಾಗಿರುತ್ತಾರೆ. ಆದ ಕಾರಣ ಅವರು ಸ್ವಾಭಿಮಾನಿಗಳಾಗಿರುತ್ತಾರೆ.

ಉದಾಹರಣೆಯಾಗಿ, ಬೌದ್ಧ ಧರ್ಮೀಯನೊಬ್ಬನು ಬಹಿರಂಗವಾಗಿ ದೇವರಿಲ್ಲ ಎಂದು ಹೇಳುತ್ತಾ ಅಂತರಂಗದಲ್ಲಿ ತನ್ನ ಹೇಳಿಕೆಯ ಬಗ್ಗೆ ಸಂದೇಹ ಉಳ್ಳವನಾಗಿದ್ದರೆ ಅವನು ತನ್ನನ್ನು ತಾನು ಬೌದ್ಧ ಧರ್ಮೀಯನೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ಒಬ್ಬ ಹಿಂದೂ, ಒಬ್ಬ ಮುಸ್ಲಿಂ ಅಥವಾ ಒಬ್ಬ ಕ್ರಿಶ್ಚಿಯನ್ ದೇವರಿದ್ದಾನೆ ಎಂದೆನ್ನುವ ಧಾರ್ಮಿಕ ವ್ಯಕ್ತಿಯಾಗಿದ್ದುಕೊಂಡು ಆ ನಿಟ್ಟಿನ ಕಟ್ಟುಪಾಡುಗಳಿಗೆ ಒಳಪಡದೆ ಇದ್ದರೆ ಅವನು ತಾನು ಒಪ್ಪಿಕೊಂಡ ತತ್ವಗಳಲ್ಲಿ ನಂಬಿಕೆ ಇಲ್ಲದವನಾಗಿರುತ್ತಾನೆ. ಈ ದೃಷ್ಟಿಯಿಂದ ಈ ಇಬ್ಬರು ಸ್ವಾಭಿಮಾನಿಗಳಲ್ಲ.

 ‌ ಏಕೆಂದರೆ, ಅವರು ತಮ್ಮ ಅರಿವು ಹಾಗೂ ಅನುಭವಗಳಿಗೆ ವಿರುದ್ಧವಾದ ನಂಬಿಕೆಯನ್ನು ಹೊಂದಿದವರಾಗಿರುತ್ತಾರೆ. ಹೀಗಾಗಿ, ಈ ಎರಡು ಗುಂಪುಗಳಲ್ಲಿನ ಸ್ವಾಭಿಮಾನಿಗಳು ಯಾರೆಂದರೆ ತಮ್ಮ ಚಿಂತನೆಗಳು, ತಾವು ಕಂಡುಕೊಂಡ ಸತ್ಯಗಳು ಪೂರ್ವಿಕರ ಹೇಳಿಕೆಗಳೊಂದಿಗೆ ಹೊಂದಿಕೊಂಡರೆ ಮಾತ್ರ ಪೂರಕವಾದ ಮಾತುಗಳನ್ನು ಬೆಂಬಲಿಸುತ್ತಾರೆ. ಹೀಗಲ್ಲದೆ, ಪೂರ್ವಿಕರ ಹೇಳಿಕೆಗೆ ತಾವೇ ಸತ್ಯಗಳನ್ನು ಜೋಡಿಸಿ, ಅದಕ್ಕೆ ಬೆಂಬಲವಾಗಿ ತಮ್ಮ ಸತ್ಯವಿರುತ್ತದೆ ಎಂದು ಭಾವಿಸುವವರು ಸ್ವಾಭಿಮಾನಿಗಳಾಗಿರುವುದಿಲ್ಲ.

ಹೀಗಾಗಿ, ನೀವು ಎಂತಹ ಸಿದ್ಧಾಂತಗಳನ್ನು ಸ್ವೀಕರಿಸಿದವರಾಗಿದ್ದರೂ, ಅದರಲ್ಲಿ ಎಷ್ಟೇ ಸತ್ಯ ಇರುವುದಾಗಿದ್ದರೂ ಅದರ ಕುರಿತು ನಿಮಗೆ ಸ್ಪಷ್ಟ ಚಿಂತನೆ ಇದೆಯೇ? ನಿಮ್ಮ ಅನುಭವಕ್ಕೆ ಅದು ಸರಿ ಕಂಡಿದೆಯೇ? ಅಥವಾ ಆ ತತ್ವಗಳನ್ನು ಧಾರ್ಮಿಕ ನಾಯಕರು ಹೇಳಿದ್ದಾರೆ ಎಂಬ ಕಾರಣಕ್ಕಾಗಿ ನಂಬಿದ್ದೀರಾ? ಇವುಗಳ ಆದರದ ಮೇಲೆ ನಿಮ್ಮ ಧರ್ಮಕ್ಕೂ ತತ್ವಕ್ಕೂ ಗೌರವ ಸಿಗುತ್ತದೆ.

*****************************************

(ಚೆನ್ನೈನ ಮೌಂಟ್ ರೋಡ್ ನಲ್ಲಿರುವ ಬೌದ್ಧ ಧರ್ಮ ಸಂಘದಲ್ಲಿ ೨೨.೦೩.೧೯೩೧ ರಲ್ಲಿ ಮಾತನಾಡಿದ್ದು)

(ಕುಡಿಯರಸು' ಪತ್ರಿಕೆಯಲ್ಲಿ ಪ್ರಕಟವಾದ ದಿನ ೨೯.೦೩.೧೯೩೧) 

ಅನು: ಎಸ್.ಶಿವಲಿಂಗಂ.

Sunday, 4 June 2023

ಈ ನೆನಪುಗಳೇ ಹೀಗೆ...ನಾ..?

ಈ ನೆನಪುಗಳೇ ಹೀಗೆ...ನಾ..?

ಕೊರಳಾಗುತ್ತವೆ ಕೊಂಕಾಗುತ್ತವೆ ಕೊರಗುತ್ತವೆ
ಕನಿಕರಿಸುತ್ತವೆ ಕುದಿಯುತ್ತವೆ ಕೆರಳಿಸುತ್ತವೆ ಕೊಲೆಗೈಯುತ್ತವೇ

ಅರಳುತ್ತವೆ ಅಳಿಸುತ್ತವೆ ಅವಸಾನ ಹೊಂದುತ್ತವೆ

ನಂಬಿಸುತ್ತವೆ ನರ್ತಿಸುತ್ತವೆ ನವಿರೇಳಿಸುತ್ತವೆ

ವರ್ಣಿಸುತ್ತವೆ ವರ್ತಿಸುತ್ತವೆ ವಂಚಿಸುತ್ತವೆ

ಕವನವಾಗುತ್ತವೆ ಕಥೆಯಾಗುತ್ತವೆ ವ್ಯಥೆಯಾಗುತ್ತವೆ

ಹಾಡುತ್ತವೆ ಆಡುತ್ತವೆ ನಟಿಸುತ್ತವೆ ನಲಿಯುತ್ತವೆ

ಕುಣಿಯುತ್ತವೆ, ಕುಡಿಸುತ್ತವೆ ಕುದಿಸುತ್ತವೆ

ಕಲಿಸುತ್ತವೆ ಕನವರಿಸುತ್ತವೆ ಕತ್ತಲಾಗುತ್ತವೆ ಕಣ್ಣಂಚಲಿ ನೀರೋರೆಸುತ್ತವೆ ಕಲ್ಲಾಗುತ್ತವೆ 

ಮರಳುತ್ತವೆ ನರಳುತ್ತವೆ ಉರುಳುತ್ತವೆ

ಬಣ್ಣಿಸುತ್ತವೆ ಬದುಕಿಸುತ್ತವೆ ಬರೆಸುತ್ತವೆ ಬಸವಳಿಯುತ್ತವೆ 

ಚಿರುತ್ತವೆ ಚಿಮ್ಮುತ್ತವೆ ಚುಮ್ಮಿಸುತ್ತವೆ 
ಚಿಗುರುತ್ತವೆ ಚಡಪಡಿಸುತ್ತವೆ ಚಲಿಸುತ್ತವೆ

ಅಣಕಿಸುತ್ತವೆ ಅಲುಗಾಡಿಸುತ್ತವೆ ಅಂಗಾತ ಬಿದ್ದು ಒದ್ದಾಡುತ್ತವೆ

ಗಡಿಯಾರವಾಗುತ್ತವೆ ಗಂಟೆಯಾಗುತ್ತವೆ ಗರ್ಜಿಸುತ್ತವೆ

ಲಾಲಿಸುತ್ತವೆ ಲೇಖನಿಯಾಗುತ್ತವೆ ಲಗಾಮು ಹಾಕುತ್ತವೆ ಲಂಕೆಯಾಗುತ್ತವೆ 

ಬಿಗಿದಪ್ಪಿಕೊಳ್ಳುತ್ತವೆ ಬಿಸಾಡುತ್ತವೆ ಬಿರುನುಡಿಯುತ್ತವೆ
ಬಿಕ್ಕಳಿಸುತ್ತವೆ ಬಿರುಗಾಳಿಯಾಗುತ್ತವೆ ಭಿಕಾರಿಯಾಗುತ್ತವೆ 

ಗಿಡವಾಗುತ್ತವೆ ಗಿರಿಯಾಗುತ್ತವೆ ಗಿಳಿಯಾಗುತ್ತವೆ ಗಿಡುಗವಾಗುತ್ತವೆ ಗೀಳಿsಡುತ್ತವೆ

ಮೋಡವಾಗುತ್ತವೆ ಮಳೆತರಿಸುತ್ತವೆ ಮಿಂಚಂತೆ ಮಾಯವಾಗಿಬಿಡುತ್ತವೆ

ದಮನಗೊಳಿಸುತ್ತವೆ ದಯೆತೋರಿಸುತ್ತವೆ ದನಿಯಾಗುತ್ತವೆ ದಮ್ಮ ಬೋಧಿಸುತ್ತವೆ 

ಬೆತ್ತಲಾಗುತ್ತವೆ ಬರಿದಾಗುತ್ತವೆ ಬಯಲಾಗುತ್ತವೆ.

Thursday, 1 June 2023

ಪ್ರಾಚೀನ ರಾಜ್ಯ ವ್ಯವಸ್ಥೆ:ಆರ್ಯ ಸಮಾಜದ ಸ್ಥಿತಿ

ಪ್ರಾಚೀನ ರಾಜ್ಯ ವ್ಯವಸ್ಥೆ:ಆರ್ಯ ಸಮಾಜದ ಸ್ಥಿತಿ

ಬೌದ್ಧ ಧರ್ಮವು ಒಂದು ಕ್ರಾಂತಿಯಾಗಿತ್ತು. ಅದು ಫ್ರೆಂಚ್ ಮಹಾಕ್ರಾಂತಿಯಂತೆಯೇ ಇರುವ ಒಂದು ಮಹಾಕ್ರಾಂತಿ. ಮೊದಲಿಗೆ ಒಂದು ಧಾರ್ಮಿಕ ಕ್ರಾಂತಿಯ ರೀತಿಯಲ್ಲಿ ಪ್ರಾರಂಭವಾದರೂ, ಅದು ಧಾರ್ಮಿಕ ಕ್ರಾಂತಿಯನ್ನು ಮೀರಿ ಬೆಳೆಯಿತು. ಸಾಮಾಜಿಕ ಹಾಗೂ ರಾಜಕೀಯ ಕ್ರಾಂತಿಯಾಗಿ ಮಾರ್ಪಟ್ಟಿತು. ಇಂಥ ಕ್ರಾಂತಿಯ ಸ್ವರೂಪದ ಮಹತ್ವವನ್ನು ತಿಳಿಯಬೇಕಾದರೆ, ಕ್ರಾಂತಿ ಪ್ರಾರಂಭವಾಗುವ ಮೊದಲಿಗೆ ಇದ್ದ ಸಮಾಜದ ಸ್ಥಿತಿಯನ್ನು ತಿಳಿಯುವುದು ಅವಶ್ಯಕ. ಫ್ರೆಂಚ್ ಕ್ರಾಂತಿಯ ಭಾಷೆಯನ್ನೇ ಬಳಸುವುದಾದರೆ, ಭಾರತದ ಪ್ರಾಚೀನ ವ್ಯವಸ್ಥೆಯ ಒಂದು ಚಿತ್ರವನ್ನು ಮೊದಲು ಕಲ್ಪಿಸಿಕೊಳ್ಳುವುದು ಅವಶ್ಯಕ.

ತನ್ನ ಉಪದೇಶಗಳಿಂದ ಬುದ್ಧನು ತಂದ ಮಹಾ ಸುಧಾರಣೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಅವನು ತನ್ನ ಉಧಿಷ್ಟ ಕಾರ್ಯವನ್ನು ಪ್ರಾರಂಭ ಮಾಡುವ ಹೊತ್ತಿಗೆ ಆರ್ಯ ನಾಗರಿಕತೆಯು ಎಂತ ಅವನತಿ ಸ್ಥಿತಿಯನ್ನು ತಲುಪಿತು ಎಂಬುದರ ಕಲ್ಪನೆ ಒಂದಿಷ್ಟಾದರೂ ನಮಗೆ ಇರಬೇಕು.

ಅವನ ಕಾಲದ ಆರ್ಯ ಸಮುದಾಯವು ಸಾಮಾಜಿಕವಾಗಿ ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಅತ್ಯಧಮ ರೀತಿಯ ವಿಷಯಲಂಪಟತೆಯಲ್ಲಿ ಮುಳುಗಿಹೋಗಿತ್ತು.

ಸಾಮಾಜಿಕ ಅನಿಷ್ಟಗಳಲ್ಲಿ ಕೆಲವೇ ಕೆಲವು ಮಾತ್ರ ಹೆಸರಿಸುವುದಾದರೆ, ದ್ಯೂತವನ್ನು ಗಮನಿಸಬಹುದು. ಮದ್ಯಪಾನದಂತೆಯೇ ದ್ಯೂತವು ಆರ್ಯರಲ್ಲಿ ಬಹಳ ಪ್ರಚಲಿತವಾಗಿತ್ತು.

ಪ್ರತಿಯೊಬ್ಬ ರಾಜನ ಅರಮನೆಗೆ ಹೊಂದಿಕೊಂಡಂತೆ ಒಂದು ದ್ಯುತ ಗೃಹವಿರುದಿತ್ತು. ಪ್ರತಿಯೊಬ್ಬ ರಾಜನು ತನ್ನ ಜೊತೆ ಆಡಲು ಒಬ್ಬ ನಿಷ್ಣಾತ ಜುಗಾರನನ್ನು ನಿಯಮಿಸಿಕೊಂಡಿರುತ್ತಿದ್ದನು. ರಾಜನಾದ ವಿರಾಟನು ತನ್ನ ಉಳಿಗದಲ್ಲಿ ಕಂಕ ಎಂಬ ನಿಷ್ಣಾತ  ಜೂಜುಗಾರರನ್ನು ಇಟ್ಟುಕೊಂಡಿದ್ದನು. ರಾಜರುಗಳಿಗೆ ದ್ಯೂತವು ಕೇವಲ ವಿನೋದ ವಿಷಯವಾಗಿರಲಿಲ್ಲ. ಅವರು ದೊಡ್ಡ ದೊಡ್ಡ ಪಣಗಳನ್ನು ಹಚ್ಚಿ ಆಡುತ್ತಿದ್ದರು. ತಮ್ಮ ರಾಜ್ಯಗಳನ್ನು, ಆಶ್ರಿತರನ್ನು, ಬಂಧುಗಳನ್ನು, ಗುಲಾಮರನ್ನು ಹಾಗೂ ಸೇವಕರನ್ನು ಪಣಕ್ಕೆ ಒಡ್ಡುತ್ತಿದ್ದರು. ನಳ ಮಹಾರಾಜನು ಪುಷ್ಕರನೋಡನೆ ದ್ಯುತವಾಡುವಾಗ ಎಲ್ಲವನ್ನು ಪಣಕಿಟ್ಟು ಸೋತನು. ಅವನು ತನ್ನನ್ನು ಮತ್ತು ತನ್ನ ಹೆಂಡತಿ ದಮಯಂತಿಯನ್ನು ಮಾತ್ರ ಪಣಕ್ಕಿಡಲಿಲ್ಲ. ನಳನು ಅಡವಿಗೆ ಹೋಗಿ ಭಿಕ್ಷುಕನಂತೆ ಜೀವಿಸಬೇಕಾಯಿತು. ನಳನನ್ನು ಮೀರಿಸಿದ ರಾಜರು ಇದ್ದರು. ಪಾಂಡವರಲ್ಲಿ ಹಿರಿಯನಾದ ಧರ್ಮರಾಯನು ದ್ಯೂತದಲ್ಲಿ ಸರ್ವಸ್ವವನ್ನು, ತನ್ನ ಸಹೋದರರನ್ನೂ ತನ್ನ ಮತ್ತು ಸಹೋದರರೆಲ್ಲರ  ಪತ್ನಿಯಾದ ದ್ರೌಪದಿಯನ್ನೂ, ಹೇಗೆ ಜೂಜಿಗೊಡ್ಡಿದನೆಂಬುದನ್ನು ಮಹಾಭಾರತವು ತಿಳಿಸುತ್ತದೆ. ಆರ್ಯರಿಗೆ ದ್ಯುತವು ಒಂದು ಗೌರವದ ಪ್ರಶ್ನೆಯಾಗಿತ್ತು. ದ್ಯೂತಕ್ಕೆ ಆಮಂತ್ರಿಸುವುದು ಒಬ್ಬನ ಗೌರವ ಹಾಗೂ ಪ್ರತಿಷ್ಠೆಗೆ ಒಡ್ಡಿದ ಸವಾಲ್ ಎಂದು ತಿಳಿಯಲಾಗಿತ್ತು. ಜೂಜಿನ ಅನರ್ಥಕಾರಿ ಪರಿಣಾಮಗಳ ಬಗೆಗೆ ಮೊದಲೇ ಎಚ್ಚರಿಕೆ ಕೊಟ್ಟಿದ್ದರೂ ಧರ್ಮರಾಯನು ದ್ಯೂತವಾಡಿದನು. ಅವನು ಹೇಳಿದ ಸಮಾಧಾನವೆಂದರೆ ಅವನನ್ನು ದ್ಯೂತಕ್ಕೆ ಆಮಂತ್ರಿಸಲಾಗಿತ್ತು ಮತ್ತು ಹಾಗೆ ಆಮಂತ್ರಿಸಿದ ಮೇಲೆ ಗೌರವಸ್ಥನಾದ ತಾನು ಅಂಥ ಆಮಂತ್ರಣವನ್ನು ನಿರಾಕರಿಸುವುದು ಸಾಧ್ಯವಿರಲಿಲ್ಲ.

ದ್ಯೂತದ ಈ ದುಷ್ಟ ಚಟವು ರಾಜರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಶ್ರೀಸಾಮಾನ್ಯರಿಗೂ ಈ ಸೋಂಕು ಬಡಿದಿತ್ತು. ದ್ಯೂತದಿಂದ ಹಾಳಾದ ಬಡ ಆರ್ಯನೊಬ್ಬನ ಪ್ರಲಾಪ 'ಋಗ್ವೇದ'ದಲ್ಲಿದೆ. ಕೌಟಿಲ್ಯನ ಕಾಲದಲ್ಲಿ ಜೂಜು ಎಷ್ಟೊಂದು ಸಾಮಾನ್ಯವಾಗಿತ್ತೆಂದರೆ ರಾಜನ ಪರವಾನಗಿ ಪಡೆದ ದ್ಯುತಗೃಹಗಳು ಇರುತ್ತಿದ್ದವು ಮತ್ತು ಅವುಗಳಿಂದ ರಾಜನಿಗೆ ಸಾಕಷ್ಟು ಆದಾಯ ಬರುತ್ತಿತ್ತು.

ಆರ್ಯರಲ್ಲಿ ಬಹಳವಾಗಿ ಪ್ರಚಲಿತವಾಗಿದ್ದ ಇನ್ನೊಂದು ದೃಷ್ಟ ಚಟವೆಂದರೆ ಮದ್ಯಪಾನ. ಮದ್ಯಪಾನಗಳಲ್ಲಿ ಸೋಮ ಮತ್ತು ಸುರ ಎಂಬ ಎರಡು ಪ್ರಕಾರಗಳು. ಸೋಮವು ಯಜ್ಞಗಳಲ್ಲಿ ಬಳಸುವ ಮದ್ಯವಾಗಿತ್ತು. ಮೊದಲು ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರಿಗೆ ಮಾತ್ರ ಸೋಮಪಾನ ಮಾಡಲು ಅನುಮತಿ ನೀಡಲಾಗಿತ್ತು. ಅನಂತರ ಬ್ರಾಹ್ಮಣರು ಮತ್ತು ಕ್ಷತ್ರಿಯರಿಗೆ ಮಾತ್ರ ಒಪ್ಪಿಗೆ ನೀಡಲಾಯಿತು. ವೈಶ್ಯ ರನ್ನು ಸೋಮಪಾನದಿಂದ ಹೊರಗಿಡಲಾಯಿತು. ಶೂದ್ರರು ಎಂದು ಅದರ ರುಚಿ ನೋಡುವಂತಿರಲಿಲ್ಲ. ಸೋಮರಸವನ್ನು ತಯಾರಿಸುವ ರಹಸ್ಯ ಬ್ರಾಹ್ಮಣರಿಗೆ ಮಾತ್ರ ತಿಳಿದಿತ್ತು. ಆದರೆ ಸುರಪನ ಎಲ್ಲರಿಗೂ ಮುಕ್ತವಾಗಿತ್ತು, ಅಲ್ಲದೆ ಎಲ್ಲರೂ ಅದನ್ನು ಕುಡಿಯುತ್ತಿದ್ದರು. ಬ್ರಾಹ್ಮಣರೂ ಸುರಪಾನ ಮಾಡುತ್ತಿದ್ದರು. ಅಸುರರ ಗುರುವಾದ ಶುಕ್ರಾಚಾರ್ಯನು ಎಷ್ಟು ಅತಿಶಯವಾಗಿ ಕುಡಿದಿದ್ದನೆಂದರೆ ಅವನು ತನಗೊಬ್ಬನಿಗೆ ಮಾತ್ರ ತಿಳಿದಿದ್ದ ಹಾಗೂ ದೇವರಿಂದ ಹತರಾದ ಅಸುರರನ್ನು ಪುನಃ ಬದುಕಿಸುವ ಜೀವದಾನ ಶಕ್ತಿಯನ್ನು ಹೊಂದಿದ್ದ - ಮಂತ್ರವನ್ನು ದೇವರುಗಳ ಗುರುವಾರ ಬ್ರಹಸ್ಪತಿಯ ಮಗ ಕಚನಿಗೆ ಸುರೆಯ ಅಮಲಿನಲ್ಲಿ ಕೊಟ್ಟುಬಿಟ್ಟನು. ಕೃಷ್ಣ ಮತ್ತು ಅರ್ಜುನರು ಒಂದು ಪ್ರಸಂಗದಲ್ಲಿ ಬಹಳಷ್ಟು ಮದ್ಯಪಾನ ಮಾಡಿ ಎಚ್ಚರ ತಪ್ಪಿದ್ದರೆಂದು 'ಮಹಾಭಾರತ'ದಲ್ಲಿ ಹೇಳಿದೆ. ಆರ್ಯರ ಸಮಾಜದಲ್ಲಿ ಉತ್ತಮರಲ್ಲಿ ಉತ್ತಮರೂ ಕೂಡ ಮದ್ಯಪಾನದಿಂದ ಮುಕ್ತರಾಗಿರಲಿಲ್ಲ ಎಂಬುದೂ, ಅವರ ವಿಪರೀತವಾಗಿ ಕುಡಿಯುತ್ತಿದ್ದರೆಂಬುದೂ ಇದರಿಂದ ತಿಳಿಯುತ್ತದೆ. ಆದರೆ ಇವೆಲ್ಲಕ್ಕಿಂತ ಲಜ್ಜಾಸ್ಪದವಾದ ವಿಷಯವೇನೆಂದರೆ ಆರ್ಯ ಸ್ತ್ರೀಯರೂ ಕೂಡ ಮದ್ಯಪಾನ ವ್ಯಸನಿಗಳಾಗಿದ್ದರು, ಉದಾಹರಣೆಗೆ, ವಿರಟರಾಜನ ಹೆಂಡತಿ ಸುದೇಷ್ಣೆಯು ತಾನು ಸೆರೆಕುಡಿಯದೆ ಹತಾಶಳಾಗಿರುವುದರಿಂದ ಕೀಚಕನ ಅರಮನೆಗೆ ಹೋಗಿ ಮದ್ಯವನ್ನು ತರಲು ತನ್ನ ಸೇವೆಕಿಯಾದ ಸೈರಂಧ್ರಿಗೆ ಹೇಳುತ್ತಾಳೆ. ಮದ್ಯಪಾನದ ಗೀಳು ಎಲ್ಲ ವರ್ಗದ ಸ್ತ್ರೀಯರಲ್ಲಿಯೂ ಪ್ರಚಲಿತವಾಗಿತ್ತು. ಬ್ರಾಹ್ಮಣ ಸ್ತ್ರೀಯರೂ ಇದರಿಂದ ಮುಕ್ತರಾಗಿರಲಿಲ್ಲ. ಆರ್ಯಸ್ತ್ರಿಯರು ಮದ್ಯಪಾನ ಮತ್ತು ನೃತ್ಯಗಳಲ್ಲಿ ಆಸಕ್ತರಾಗಿದ್ದರೆಂಬುದನ್ನು 'ಕೌಷೀತಕೀ ಗೃಹ್ಯಸೂತ್ರ ' ೧೧-೧೨ ರಲ್ಲಿ ಹೇಳಿದ ಮಾತಿನಿಂದ ಸ್ಪಷ್ಟವಾಗುತ್ತದೆ; "ವಿವಾಹ ಸಮಾರಂಭದ ಮುನ್ನ ರಾತ್ರಿ ವಿಧವೆಯರಲ್ಲದ ನಾಲ್ಕು ಅಥವಾ ಎಂಟು ಜನ ಸ್ತ್ರೀಯರು ಮದ್ಯಪಾನ ಮತ್ತು ಸಮೀಚೀನಾ ಭೋಜನದ ಅನಂತರ , ನಾಲ್ಕು ಸಲ ನೃತ್ಯ ಮಾಡುವರು."

ಆರ್ಯ ಸಮಾಜದ ಲೈಂಗಿಕ ಅನೈತಿಕತೆಯು ಈಗಿರುವ ಅವನ ವಂಶಜರಿಗೆ ಆಘಾತವನ್ನು ಉಂಟುಮಾಡುವಂತಿದೆ. ಬುದ್ಧ ಪೂರ್ವಕಾಲದ ಆರ್ಯರಿಗೆ ಈಗಿನವರಿಗೆ ಇರುವಂತೆ ಲೈಂಗಿಕ ಮತ್ತು ವೈವಾಹಿಕ ಸಂಬಂಧಗಳ ವಿಷಯದಲ್ಲಿ ನಿಷಿದ್ಧ ಬಾಂಧವ್ಯದ ತಲೆಮೊರೆಗಳ ನಿಯಮಗಳು ಇರಲಿಲ್ಲ.

ಆರ್ಯ ಪುರಾಣ ಸಾಹಿತ್ಯದ ಪ್ರಕಾರ , ಬ್ರಹ್ಮನು ಸೃಷ್ಟಿಕರ್ತ ; ಬ್ರಹ್ಮನಿಗೆ ಮೂವರು ಗಂಡು ಮಕ್ಕಳು ಒಬ್ಬ ಮಗಳು ಇದ್ದರು. ಗಂಡು ಮಕ್ಕಳಲ್ಲಿ ಒಬ್ಬನಾದ ದಕ್ಷನು ತನ್ನ ಸಹೋದರಿಯನ್ನು ಮದುವೆಯಾಗಿದ್ದನು. ಈ ಸಹೋದರ - ಸಹೋದರಿಯರ ವಿವಾಹದಿಂದ ಹುಟ್ಟಿದ ಪುತ್ರಿಯರಲ್ಲಿ ಕೆಲವರು ಬ್ರಹ್ಮನ ಮಗನಾದ ಮರೀಚಿಯ ಮಗ ಕಾಶ್ಯಪನನ್ನು ಮದುವೆಯಾದರೆ, ಕೆಲವರು ಬ್ರಹ್ಮನ ಮೂರನೇ ಮಗನಾದ ಧರ್ಮನನ್ನು ಮದುವೆಯಾದರು.

'ಋಗ್ವೇದ'ದಲ್ಲಿ ಯಮ ಮತ್ತು ಯಮಿ ಎಂಬ ಸಹೋದರ ಸಹೋದರಿಯರಿಗೆ ಸಂಬಂಧಿಸಿದ ಒಂದು ಪ್ರಸಂಗವನ್ನು ಹೇಳಲಾಗಿದೆ. ಈ ಉಪಾಖ್ಯಾನದಂತೆ ಯಮಿಯು ತನ್ನ ಸಹೋದರ ಯಮನನ್ನು ತನ್ನೊಡನೆ ಸಮಾಗಮಿಸುವಂತೆ ಕೇಳಿಕೊಳ್ಳುತ್ತಾಳೆ. ಮತ್ತು ಅವನು ಹಾಗೆ ಮಾಡಲು ನಿರಾಕರಿಸಿದಾಗ ಕೋಪೋದ್ರಿಕ್ತಳಾಗುತ್ತಾಳೆ.

ತಂದೆಯು ತನ್ನ ಮಗಳನ್ನು ವಿವಾಹವಾಗಬಹುದಿತ್ತು. ವಸಿಷ್ಠನು ತನ್ನ ಮಗಳಾದ ಶತ್ರುಪಳು ಪ್ರಾಯಬದ್ದಳಾದೊಡನೆ ಅವಳನ್ನು ಮದುವೆಯಾದನು. ಮನುವು ತನ್ನ ಮಗಳಾದ ಇಳಾಳನ್ನು ಮದುವೆಯಾದನು. ಜಹ್ನುವು ತನ್ನ ಮಗಳಾದ ಜಾಹ್ನವಿಯನ್ನು ಮದುವೆಯಾದನು. ಸೂರ್ಯನ ತನ್ನ ಮಗಳಾದ ಉಷಾಳನ್ನು ವಿವಾಹವಾದನು.

ಅಸಾಮಾನ್ಯ ರೀತಿಯ ಬಹು ಪತಿತ್ವವೂ ಆಚರಣೆಯಲ್ಲಿತ್ತು. ಆರ್ಯರಲ್ಲಿ ಪ್ರಚಲಿತವಿದ್ದ ಬಹುಪತಿತ್ವ ಪದ್ಧತಿಯಂತೆ ರಕ್ತ ಸಂಬಂಧಿಗಳು ಒಂದೇ ಹೆಣ್ಣಿನೊಡನೆ ಸಹವಾಸ ಮಾಡಬಹುದಿತ್ತು. ದಾಹಪ್ರಚೇತನಿ ಮತ್ತು ಅವನ ಮಗ ಸೋಮ -ಇವರಿಬ್ಬರೂ ಸೋಮನ ಮಗಳಾದ ಮರಿಷಾಳನ್ನು ಮದುವೆಯಾಗಿದ್ದರು.
ಅಜ್ಜನ ತನ್ನ ಮೊಮ್ಮಗಳನ್ನು ಮದುವೆಯಾಗುವ ಉದಾರಣೆಗಳು ಇದ್ದವು. ದಕ್ಷನು ತನ್ನ ಮಗಳನ್ನು ತನ್ನ ತಂದೆಯಾದ ಬ್ರಹ್ಮನಿಗೆ ಮದುವೆ ಮಾಡಿಕೊಟ್ಟನು. ಮತ್ತು ಆ ಮದುವೆಯಿಂದ ಪ್ರಸಿದ್ಧನಾದ ನಾರದನು ಹುಟ್ಟಿದನು. ದೌಹಿತ್ರನು ತನ್ನ 27 ಜನ ಪತ್ರಿಯರನ್ನು ತನ್ನ ತಂದೆಯಾದ ಸೋಮನಿಗೆ ಸಮಾಗಮ ಮತ್ತು ಸಂತಾನ ಪ್ರಾಪ್ತಿಗಾಗಿ ಕೊಟ್ಟನು.

ಆರ್ಯರಿಗೆ ಬಯಲಲ್ಲಿ ಎಲ್ಲರೆದುರು ಸಮಗಮಿಸುವುದರಲ್ಲಿ ಸಂಕೋಚವಿರಲಿಲ್ಲ. ಋಷಿಗಳು ವಾಮದೇವ್ಯ ವ್ರತಗಳೆಂಬ ಕೆಲವು ಧಾರ್ಮಿಕ ಕ್ರಿಯಾ ವಿಧಿಗಳನ್ನು ನಡೆಸುತ್ತಿದ್ದರು. ಇವು ಯಜ್ಞಭೂಮಿಯಲ್ಲಿ ನಡೆಯುತ್ತಿದ್ದವು. ಅಲ್ಲಿಗೆ ಯಾವಳೇ ಸ್ತ್ರೀಯು ಬಂದು ಲೈಂಗಿಕ ಸಂಭೋಗವನ್ನು ಬಯಸಿದರೆ, ಮತ್ತು ತನ್ನನ್ನು ತೃಪ್ತಿಗೊಳಿಸಲು ಋಷಿಯನ್ನು ಕರೆದರೆ, ಆಗ ಋಷಿಯು ಯಜ್ಞ ಭೂಮಿಯಲ್ಲಿ ಎಲ್ಲರದುರಿಗೆ ಅವಳ ಸಮಾಗಮ ಮಾಡುತ್ತಿದ್ದನು. ಇಂಥ ಅನೇಕ ಪ್ರಸಂಗಗಳನ್ನು ಹೇಳಬಹುದು. ಸತ್ಯವತಿಯೊಡನೆ ಹೀಗೆ ಸಂಭೋಗ ಮಾಡಿದ ಪರಶರ ಋಷಿಯ ಪ್ರಸಂಗವಿದೆ. ಹಾಗೆಯೇ ದೀರ್ಘತಪ ಪ್ರಸಂಗವೂ ಕೂಡ. ಅಂತ ಪದ್ಧತಿಯು ಸರ್ವೇಸಾಧಾರಣವಾಗಿತ್ತೆಂಬುದನ್ನು ಅಯೋನಿಜ ಎಂಬ ಪದವು ಸೂಚಿಸುತ್ತದೆ. ಅಯೋನಿ ಎಂಬ ಪದಕ್ಕೆ ನಿಷ್ಕಳಂಕ (ಅಕ್ಷತಯೋನಿ) ಗರ್ಭಧಾರಣೆ ಎಂದು ಅರ್ಥ ಹಚ್ಚಲಾಗುತ್ತದೆ. ಆದರೆ ಆ ಪದದ ಮೂಲ ಅರ್ಥ ಹಾಗೆ ಇಲ್ಲ.ಯೋನಿ ಪದದ ಮೂಲಾರ್ಥ ಮನೆ ಎಂದಿದೆ. ಅಯೋನಿಯೆಂದರೆ ಮನೆಯಿಂದ ಹೊರಗೆ, ಅರ್ಥಾತ್ ಬಯಲಿನಲ್ಲಿ ಹುಟ್ಟಿದವರು ಎಂದಾಗುತ್ತದೆ. ಸೀತೆ ಮತ್ತು ದ್ರೌಪದಿ ಇವರಿಬ್ಬರೂ ಅಯೋನಿಜೆಯರು ಎಂದ ಮೇಲೆ ಹೀಗೆ ಹುಟ್ಟುವುದರಲ್ಲಿ ತಪ್ಪಿಲ್ಲ ಎಂದು ಭಾವಿಸುತ್ತಿದ್ದರು ಎಂದಾಯಿತು. ಈ ಪದ್ಧತಿ ಎಷ್ಟು ಸಾಮಾನ್ಯವಾದ ಸಂಗತಿಯಾಗಿತ್ತು ಎಂದರೆ ಅಂಥ ಆಚರಣೆಯ ವಿರುದ್ಧ ಧಾರ್ಮಿಕ ನಿಷೇಧಾಜ್ಞೆಗಳನ್ನು ಹೊರಡಿಸಬೇಕಾಯಿತು.

ಆರ್ಯದಲ್ಲಿ ತಮ್ಮ ಸ್ತ್ರೀಯರನ್ನು ಕೆಲ ಕಾಲದ ಮಟ್ಟಿಗೆ ಇತರರಿಗೆ ಅವರ ಉಪಯೋಗಕ್ಕಾಗಿ ಕೊಡುವ ಪದ್ಧತಿಯೂ ಪ್ರಚಾರದಲ್ಲಿತ್ತು. ಇದಕ್ಕೆ ಉದಾಹರಣೆಯೆಂದು ಮಾಧವಿಯ ಕಥೆಯನ್ನು ಹೇಳಬಹುದು. ಯಯಾತಿ ರಾಜನು ತನ್ನ ಮಗಳು ಮಾಧವಿಯನ್ನು ತನ್ನ ಗುರು ಗಾಲವನಿಗೆ ಕಾಣಿಕೆಯಾಗಿ ಕೊಟ್ಟನು. ಗಾಲವನು ಈ ಕನ್ಯೆ ಮಾಧವಿಯನ್ನು ಒಂದೊಂದು ಅವಧಿಗಾಗಿ ಮೂವರು ರಾಜರಿಗೆ ಎರವಲು ಕೊಟ್ಟನು. ಅನಂತರ ಅವನು ಅವಳನ್ನು ವಿಶ್ವಾಮಿತ್ರನಿಗೆ ಮದುವೆ ಮಾಡಿಕೊಟ್ಟನು. ಅವಳು ತನಗೆ ಒಂದು ಗಂಡು ಮಗು ಹುಟ್ಟುವ ತನಕ ಅವನೊಡನೆ ಇದ್ದಳು. ತದನಂತರ ಗಾಲವನು ಆ ಹೆಣ್ಣನ್ನು ಮತ್ತೆ ಅವಳ ತಂದೆ ಯಯಾತಿಗೆ ಮರಳಿಸಿದನು.

ಹೀಗೆ ತಾತ್ಕಾಲಿಕವಾಗಿ ತಮ್ಮ ಸ್ತ್ರೀಯರನ್ನು ಇತರಿಗೆ ಬಾಡಿಗೆ ಕೊಡುವ ಪದ್ಧತಿಯಲ್ಲದೆ ಆರ್ಯರಲ್ಲಿ ಇನ್ನೊಂದು ಪದ್ದತಿಯು ಪ್ರಚಲಿತವಾಗಿತ್ತು. ಅದೇನೆಂದರೆ ಆರ್ಯರಲ್ಲಿ ಶ್ರೇಷ್ಠರನಿಸಿಕೊಳ್ಳುವ ಗಂಡಸರಿಂದ ಹೆಂಗಸು ಸಂತಾನಪಡೆಯಲು ಅನುಮತಿ ಕೊಡುವುದು. 

ಆರ್ಯರಲ್ಲಿ ದೇವ ಎಂಬ ಜನರ ವರ್ಗವಿತ್ತು. ಆರ್ಯ ಸ್ತ್ರೀಯರ ಕನ್ಯತ್ವ ಹರಣವು ತಮಗಾಗಿಯೇ ಕಾಯ್ದಿರಿಸಿದ ಹಕ್ಕೆಂದು ದೇವ ವರ್ಗದವರು ತಿಳಿಯುತ್ತಿದ್ದರು.
ಎಲ್ಲಾ ಹಿಂದೂ ವಿವಾಹಗಳಲ್ಲಿ ತಪ್ಪದೇ ಆಚರಿಸಲಾಗುವ ಹಾಗೂ ವಿವಾಹದ ಅತಿ ಅವಶ್ಯಕವಾದ ಆಚರಣೆ ಎಂದು ತಿಳಿಯಲಾಗುವ ಸಪ್ತಪದಿ ಆಚರಣೆಗೆ ದೇವಜನರ ಕನ್ಯಾತ್ವ ಹರಣದ ಹಕ್ಕಿನೋಡನೆ ಅವಿಭಾಜ್ಯ ಸಂಬಂಧ ಉಂಟು. ಸಪ್ತಪದಿ ಎಂದರೆ ವಧುವಿನೊಡನೆ ವರನು ಹೇಳು ಹೆಜ್ಜೆಗಳನ್ನು ಹಾಕುವುದು. ಇದು ಅವಶ್ಯ ಎನ್ನುವುದು ಏಕೆ.? ಇದಕ್ಕೆ ಉತ್ತರವೆಂದರೆ, ತಮಗೆ ಕೊಡುವ ಪರಿಹಾರದ ಬಗೆಗೆ ದೇವರಿಗೆ ತೃಪ್ತಿ ಇಲ್ಲದಿದ್ದರೆ ವಧುವು ಏಳನೇ ಹೆಜ್ಜೆ ಇಡುವ ಮೊದಲು ಅವರು ತಮ್ಮವಳನ್ನಾಗಿ ಇಟ್ಟುಕೊಳ್ಳಬಹುದಾಗಿತ್ತು. ಆದರೆ ಏಳನೇ ಹೆಜ್ಜೆಯಿಟ್ಟ ಅನಂತರ ದೇವರ ಹಕ್ಕು ಸಮಾಪ್ತಿಯಾಗುತ್ತಿತ್ತು.ವರನು ಇನ್ನು ಮುಂದೆ ವಧುವನ್ನು   ಕೊಂಡಯ್ಯಬಹುದಾಗಿತ್ತು ಹಾಗೂ ದೇವರ ಅಡ್ಡಿ,ಆತಂಕ ಮತ್ತು ಪೀಡನೆಯ ಭಯವಿಲ್ಲದೆ ಅವರಿಬ್ಬರೂ ಸತಿಪತಿಗಳಾಗಿ ಬಾಳಬಹುದಾಗಿತ್ತು.

ಕನ್ಯೆಯರು ಕನ್ಯತ್ವವನ್ನು ಪಾಲಿಸಬೇಕೆಂಬ ನಿಯಮವಿರಲಿಲ್ಲ. ಅವಿವಾಹಿತಳಾಗಿರುವಾಗಲೇ ಹುಡುಗಿಯು ತನ್ನಿಷ್ಟಬಂದವರೊಡನೆ ಲೈಂಗಿಕ ಸಂಬಂಧ ಹೊಂದಬಹುದಾಗಿತ್ತು.
ಕುಂತಿ ಮತ್ತು ಮತ್ಸ್ಯಗಂಧಾ ಇವರ ಪ್ರಸಂಗಗಳಿಂದ ಕನ್ಯಯರು ವಿಧಿಬದ್ಧವಾಗಿ ವಿವಾಹವಾಗದೇ ತಮಗೆ ಬೇಕಾದವರಿಗೆ ಅರ್ಪಿಸಿಕೊಳ್ಳಬಹುದಿತ್ತು ಮತ್ತು ಮಕ್ಕಳನ್ನು ಪಡೆಯಬಹುದಿತ್ತು ಎಂಬುದು ವಿಶದವಾಗುತ್ತದೆ. ಪಾಂಡುವನ್ನು ವಿವಾಹವಾಗುವ ಮೊದಲೇ ಕುಂತಿಯು ಬೇರೆ ಪುರುಷರಿಂದ ಮಕ್ಕಳನ್ನು ಪಡೆದಿದ್ದಳು. ಭೀಷ್ಮನ ತಂದೆಯಾದ ಶಂತನುವನ್ನು ವಿವಾಹವಾಗುವ ಮೊದಲೇ ಮತ್ಸ್ಯಗಂಧಿಯು ಋಷಿ ಪರಾಶರನೊಡನೇ ಲೈಂಗಿಕ ಸಂಬಂಧ ‌ ಹೊಂದಿದ್ದಳು.
ಆರ್ಯರಲ್ಲಿ ಪಶುಗಮನವೂ ಕೂಡ ಪ್ರಚಲಿತವಾಗಿತ್ತು. ದಮ ಎಂಬ ಋಷಿಯು ಹೆಣ್ಣು ಜಿಂಕೆಯೊಡನೆ ಲೈಂಗಿಕ ಸಂಪರ್ಕ ಹೊಂದಿದ ಕಥೆ ಸೂಪರಿಚಿತವಾಗಿದೆ. ಸೂರ್ಯನು ಹೆಣ್ಣು ಕುದುರೆಯೊಡನೆ ಸಂಪರ್ಕ ಹೊಂದಿದ ಇನ್ನೊಂದು ಉದಾಹರಣೆ ಉಂಟು.
ಆದರೆ
ಅಶ್ವಮೇಧ ಯಜ್ಞದಲ್ಲಿ ಕುದುರೆಯೋಡನೆ  ಸಂಭೋಗಿಸಿದ ಹೆಂಗಸಿನ ಉದಾರಣೆ ಇವೆಲ್ಲಕ್ಕಿಂತ ಅಸಹ್ಯಕರವಾದದ್ದು.
 
                     ( ಅಪೂರ್ಣ)
                       *  *  *  *

~ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಸಂಪುಟ - ೩
                 (ಪು.ಸಂ:- ೧೬೭-೧೭೨)


Wednesday, 31 May 2023

ಪ್ರತಿಸಂಸ್ಕೃತಿ






ಪಾವಿತ್ರ್ಯ ನಾಶವೂ ಪ್ರತಿಸಂಸ್ಕೃತಿಯೂ 

ಪಾವಿತ್ರ್ಯ ನಾಶವೆಂದರೆ, ಯಾವ ಯಜಮಾನ ಸಂಸ್ಕೃತಿಯು ದುಡಿಯುವ ಜನರ ಲೋಕಕ್ಕೆ ಸಂಬಂಧಿಸಿದ್ದನ್ನು ಹೀನವೆಂದೂ, ತನ್ನದನ್ನು ಶ್ರೇಷ್ಠ ಎಂದು ಮೂಡಿಸಿದ ನಂಬಿಕೆಗಳಿವೆಯೋ, ಅವನ್ನು ಅಪಮೌಲೀಕರಣಗೊಳಿಸುವುದು; ಅದು ಪವಿತ್ರೀಕರಿಸಿರುವ ಸಂಕೇತಗಳನ್ನು ನಿರಾಕರಿಸುವುದು. ಇದು ಎಲ್ಲಾ ಪ್ರತಿಭಟನಾ ಸಾಹಿತ್ಯಗಳ ಸಾಮಾನ್ಯ ಲಕ್ಷಣವೇ ಆಗಿದೆ. ಧಣಿಗಳ ಹಿತಕಾದ ಸಂಸ್ಕೃತಿಯನ್ನೇ ತಮ್ಮದೆಂದು ನಂಬಿದ್ದ ಜನ, ಇದು ಹೇಗೆ ನಮ್ಮದು ಎಂದು ಪ್ರಶ್ನೆ ಹಾಕಿಕೊಳ್ಳುತ್ತಿರುವ ಹಂತವಿದಾಗಿರುತ್ತದೆ; ಅವರ 'ವ್ಯವಸ್ಥೆ'ಯ ಮತ್ತು 'ಅವಸ್ಥೆ'ಯ ವ್ಯತ್ಯಾಸಗಳು ಗೊತ್ತಾದ ಮೇಲೆ, ಧಣಿ ಸಂಸ್ಕೃತಿ ಮಾಡಿದ ಅಪರಾಧಗಳನ್ನು ಅದರ ಮುಖದೆದುರೇ ಹಿಡಿಯುವ ಧೈರ್ಯದ ಅರಿವಿನ ಸ್ಥಿತಿಯಿದಾಗಿರುತ್ತದೆ. ಅಂದರೆ ಅನ್ಯಾಯವನ್ನೇ ನ್ಯಾಯವೆಂದು ಹೇಳುತ್ತಾ ತಮ್ಮ ಮೇಲೆ ಹೇರಿಕೊಂಡಿದ್ದ ಪುರಾಣಗಳನ್ನು ಕೆಳಗೆ ಎತ್ತಿಹಾಕಿ ಒಡೆದು, ಅವುಗಳ ಒಳಗಿನ ಸುಳ್ಳನ್ನು ಕಂಡುಕೊಳ್ಳುವುದು ( demytho logizing); ತಮಗೆ ಕೇಡು ಬಯಸುವ ಆಳುವ ಸಂಸ್ಕೃತಿಯನ್ನು ವೈಚಾರಿಕವಾಗಿ ವಿಶ್ಲೇಷಿಸುವುದು ಹಾಗೂ ಅದರ ನಾಶ ಸಾಧಿಸುವುದು. ನಾಶಕವೇಂದರೆ ಅದು ಅವೈಚಾರಿಕವಾಗಿದೆ ಹಾಗೂ ಅಮಾನವೀಯವಾಗಿದೆ. ಆದರೆ ಅರ್ಥಪೂರ್ಣ ಪ್ರತಿಭಟನೆಯಲ್ಲಿ ನಾಶವೊಂದೇ ಕೆಲಸವಲ್ಲ. ಕೆಟ್ಟದ್ದರ ನಾಶದ ನಂತರ ಒಳ್ಳೆಯದೊಂದನ್ನು ಬದಲಿಗೆ ಕಟ್ಟಿಕೊಳ್ಳುವ ಹೊಣೆ ಇರಲೇಬೇಕು. ಯಾಕೆಂದರೆ ಕೆಡಹುವ ಕ್ರಿಯೆಗೆ ಕಟ್ಟುವ ಕನಸಿಲ್ಲದಾಗ ಬೆಲೆಯಿರುವುದಿಲ್ಲ. ಹೀಗೆ ಕೆಡಹಿ ಮತ್ತೆ ಕಟ್ಟುವ ಕ್ರಿಯೆಯೇ ಪ್ರತಿಸಂಸ್ಕೃತಿ.

ನಾಶ ಮತ್ತು ಕಟ್ಟುವಿಕೆಯ ಈ ಜೊತೆಗೆಲಸಕ್ಕೆ, ಇಂದಿನ ಕ್ರಿಯೆ ಹಾಗೂ ಮುಂದಿನ ಕನಸಿಗೆ, ಹಿಂದಣ ಅರಿವು ದಿಸೆ ತೋರುವ ಶಕ್ತಿಯಾಗಿರುತ್ತದೆ. ಈ ಅರಿವಿಲ್ಲದಿದ್ದರೆ ಕ್ರಿಯೆ ಮುರುಕಾಗಿ, ಕನಸು ಅರೆಬರೆಯಾಗುತ್ತದೆ. ಈ ಅರಿವೇನೆಂದರೆ ಧಣಿಸಂಸ್ಕೃತಿಯು ಜಾಣತನದಿಂದ ಬಿತ್ತಿ ಬೆಳೆದಿರುವ ಸಮಾಚೋಧಾರ್ಮಿಕ ನಂಬಿಕೆಗಳನ್ನು ಸ್ಪಷ್ಟವಾಗಿ ತಿಳಿಯುವುದು; 'ಗೋಬೆಲ್ಸನ  ಸತ್ಯ' ದಂತೆ ಮತ್ತೆ ಮತ್ತೆ ಹೇಳಲ್ಪಟ್ಟು ನೆಟ್ಟುಹೋಗಿರುವ ಮಿತ್ ಗಳನ್ನು ತಿಳಿಯುವುದು. ಹುಟ್ಟನ್ನು ನೆಚ್ಚಿರುವ ಇಂಡಿಯಾದ ಜಾತಿ ಸಂಸ್ಕೃತಿಯಲ್ಲೂ ಅಸ್ಪೃಶ್ಯರು, ದೈಹಿಕ ಶ್ರಮ, ದನದ ಮಾಂಸಾಹಾರ, ಕಪ್ಪು ಬಣ್ಣ, ದೇಶಿ ಭಾಷೆಗಳು, ಕತ್ತೆ ,ಹಂದಿ ,ನಾಯಿಯಂತ ಪ್ರಾಣಿಗಳು, ಮುತ್ತುಗ ಮೊದಲಾದ ಹೂಗಳು, ಈಚಲು - ಜಾಲಿ -ಬೂರುಗದಂಥ ಮರಗಳು, ಕಾಗೆ-ಗೂಬೆಯಂಥ ಹಕ್ಕಿಗಳು, ಲೋಹಗಳಲ್ಲಿ ಕಬ್ಬಿಣ, ಅಂಗಾಂಗಗಳಲ್ಲಿ ಕಾಲು, ಭಾಗಗಳಲ್ಲಿ ಎಡಭಾಗ, ಲಿಂಗಗಳಲ್ಲಿ ಸ್ತ್ರೀ- ಹೀಗೆ ಹುಟ್ಟಿನಿಂದ ಆವರಿಸಿಕೊಂಡು 'ಮಿತ್' ಗಳು ಸ್ಥಾಪಿತವಾಗಿವೆ.

ಯಜಮಾನ ಸಂಸ್ಕೃತಿ ತನ್ನನ್ನು ಪ್ರಶ್ನಿಸಿದ ಅಥವಾ ತನಗೆ ತೊಡಕೊಡ್ಡಿದ ಎಲ್ಲರನ್ನೂ ರಾಕ್ಷಸರಾಗಿ ದುಷ್ಟರಾಗಿ ಚಿತ್ರಿಸುತ್ತದೆ. ವಾಸ್ತವದಲ್ಲಿ ನಾಶ ಕೂಡ ಮಾಡುತ್ತದೆ. (ಯುದ್ಧ ಗೆದ್ದು ಬಂದ ಯುಧಿಷ್ಠಿರನನ್ನು ಆಶೀರ್ವದಿಸುವಾಗ , ಚಾರ್ವಾಕನ ನುಗ್ಗಿ ನಿನ್ನ ವಿಜಯ ಅಪವಿತ್ರವೆಂದು ಕೂಗಲು, ಪುರೋಹಿತರು ಅವನನ್ನು ಕೊಲ್ಲುತ್ತಾರೆ). ಹೀಗೆ ಪ್ರತಿಭಟಿಸಿದವರನ್ನು ಮತ್ತು ಪ್ರತಿಭಟಿಸಲಾಗದೆ ಬಲಿ-ಏಕಲವ್ಯ - ಶಂಬೂಕರಂತೆ ಬಲಿಯಾದವರನ್ನು, ಬಂಡಾಯಕಾವ್ಯವು 'ನಾಯಕ'ರಂತೆ ಚಿತ್ರಿಸುತ್ತದೆ. ಆರ್ಯ ವಿರೋಧಿ ಚಳುವಳಿಯ ಪಿರಿಯಾರ್ ಪರಂಪರೆಯ ತಮಿಳಿನಲ್ಲಿ ಇದು ಬಹಳ. ಆರ್ಯ ರಾಮನು ನಾಯಕನಲ್ಲವಾದ್ದರಿಂದ ಅಲ್ಲಿ 'ಇರಾವಣ ಕಾವ್ಯಂ' ಇದೆ. ಕನಕಪುರ ತಾಲೂಕಿನ ರಾವಣನ ಒಕ್ಕಲಿನವರು ಇದ್ದಾರೆ ಹಾಗೂ ಕೊಳ್ಳೆಗಾಲದ ಸುತ್ತಮುತ್ತ ರಾವಣನ ಗುಡಿಗಳಿವೆ. ಪೆರಿಯಾರ್ ಹಾಗೂ ಅಂಬೇಡ್ಕರರ ರಾಮಾಯಣ ಕುರಿತ ಚರ್ಚೆಯಲ್ಲಿನ 'ಪಾವಿತ್ರ್ಯ ಭಂಗ' ಕ್ಕೆ ಪ್ರತಿ ಸಂಸ್ಕೃತಿಯ ದಿಟ್ಟ ನೆಲೆಯಾಗಿ.


ಗ್ರಾಮ ದೇವತೆಗಳು: ಫ್ಯೂಡಲ್ ಸಂಸ್ಕೃತಿಯೊಳಗೆ

ಮಾರಿ ಹಬ್ಬಗಳ ಹಿಂದಿರುವ ಮಿತ್ ಗಳನ್ನು ವಿಶ್ಲೇಷಿಸಿದರೂ ಕೂಡ ಅವಗಳ ಒಳಗಿನ ಆಶಯಗಳು ಯಾವ ವರ್ಗದ ಪರವಾಗಿವೆ ಹಾಗೂ ಚರಿತ್ರೆಯು ಯಾರ ಪರವಾಗಿ ತಿದ್ದಲ್ಪಟ್ಟಿದೆ ಎಂಬುದರ ಎಲೆಗಳು ಕಾಣಿಸುತ್ತವೆ. ಕೆಲವು ಪ್ರಮುಖ ಮಿತ್ ಗಳು ಹೀಗಿವೆ:

೧.ತನ್ನ‌ ಜಾತಿಯನ್ನು ಮರೆಮಾಚಿ ಮದುವೆಯಾದ ಕೆಳಜಾತಿಯ ಗಂಡನನ್ನು, ಮೇಲುಜಾತಿಯ ಹೆಣ್ಣು ಕೋಣನಾಗುವಂತೆ ಶಪಿಸುವುದು ಮತ್ತು ಕೋಣವನ್ನು ಕೊಂದು ರಚ್ಚನ್ನು ತೀರಿಸಿಕೊಳ್ಳುವುದು (ಮಾರವ್ವ-ದುರ್ಗವ್ವ).

೨. ಕುಲೀನ ವಂಶದ ಕನ್ಯೆಯು ಮೋಹದಲ್ಲಿ ತಾನೇ ಮೋಸ ಹೋಗಿ , ತನ್ನ ಲೈಂಗಿಕ ಪಾವಿತ್ರ್ಯವನ್ನು ಕಳೆದುಕೊಂಡು, ಭೂಮಿಯಲ್ಲಿ ನೆಲೆಸುವುದು (ಉಜ್ಜಿನಿ ಚೌಡಮ್ಮ).

೩.ಅಡಿಗೆಗಾಗಿ ದಲಿತರ ಮನೆಯಿಂದ ಬೆಂಕಿ ತಂದದ್ದಕ್ಕಾಗಿ ಸೂತಕಗೊಂಡ ಮೇಲು ಜಾತಿಯ ಹೆಣ್ಣೊಬ್ಬಳು,ಊರ ಹೊರಗೆ ಕೆರೆ ಏರಿಯ ಮೇಲೆ ನೆಲೆಸುವುದು (ಹಿರೇಗೌಜದ ಮಲಿಕವ್ವ)

೪.ಹೊಲೆಯನು ಸುಳ್ಳು ಜಾತಿ ಹೇಳಿ, ಬ್ರಾಹ್ಮಣನಲ್ಲಿ ವಿದ್ಯ ಕಲಿತು, ಗುರು ಪುತ್ರಿಯನ್ನು ಮದುವೆಯಾದಂಥ ಮಾತಂಗಿ ಚಪ್ಪರಕ್ಕೆ ಬೆಂಕಿ ಹಾಕುವುದು (ಶಿರಿಸಿ ಮಾರಿಕಾಂಬೆ)

೫. ಪರಪುರುಷನನ್ನು ಮೋಹದಿಂದ ನೋಡಿದ್ದಕ್ಕಾಗಿ ಅಪವಿತ್ರಳಾಗಿ ಬಹಿಷ್ಕೃತೆಯಾಗಿ ಕೊಲ್ಲಲ್ಪಟ್ಟ ಹೆಣ್ಣು (ಎಲ್ಲಮ್ಮ- ರೇಣುಕೆ)

೬. ತೊಟಗೆಲಸದ ಹುಡುಗಿಯೊಬ್ಬಳು ಕಾಯಿಪಲ್ಲೆ ಕದ್ದುದಕ್ಕಾಗಿ, ಗೌಡ-ಶ್ಯಾನ ಭೋಗರು ತನಿಖೆ ಮಾಡಿಸಿ ಮೂಗು ಕೊಯ್ಯುವುದು (ಹುಲಿಗೆಮ್ಮನ ಮಾತಂಗಿ).

೭. ಗಂಡನ ಸಾವಿನಲ್ಲಿ ತಾನೂ ಭಾಗಿಯಾಗಲು ಕೊಂಡಹಾರಿದ ಹೆಣ್ಣು (ಮಾಸ್ತಮ್ಮ).

೮. ಭಟ್ಟರ ಹುಡುಗನು ತನಗಾಗಿ ಹೂಕೀಳಲೆಂದು ಮರಹತ್ತಿ ಕೊಂಬೆಮುರಿದು ಬಿದ್ದು ಸತ್ತದ್ದಕ್ಕಾಗಿ ಸತಿಹೋದ ಕೆಳಜಾತಿಯ ಹೆಣ್ಣುಗಳು (ಭಾಗಮ್ಮ -ಹೊನ್ನಮ್ಮ).

೯. ತನ್ನ ಮಕ್ಕಳು ಪಕ್ಕದೂರಿನ ಕರಿಯನ್ನು ಹರಿದು ತರುವ ಸಾಹಸದಲ್ಲಿ ಪ್ರಾಣ ಕಳೆದುಕೊಂಡದ್ದಕ್ಕಾಗಿ , ದುಃಖ ತಾಳದೆ ಹೋದ ತಾಯಿ ಬಳಲಿಕವ್ವ.

೧೦. ತನ್ನ ಅನಾರ್ಯ ಗಂಡನಿಗಾದ ಅಪಮಾನ ಸಹಿಸದೆ ಬೆಂಕಿಗೆ ಹಾರಿದ ವೈದಿಕರ ಹೆಣ್ಣು (ಚಾಮುಂಡಿ)


ಬಹುತೇಕ ಮಿತ್ ಗಳು, ಜಾತಿ ಸಂಕರವಾಗದಂತೆ, ಹೆಂಡತಿಯರು ಪರರಿಗೆ ಒಲಿಯದಂತೆ, ತಮ್ಮ ಸ್ವತ್ತನ್ನು ಮತ್ತೊಬ್ಬರು ಮುಟ್ಟದಂತೆ ವಿಧಿಸಿದ ನಿಷೇಧಗಳಾಗಿವೆ. ಉಳಿದವು, ಹೆಣ್ಣುಗಳು ತಮ್ಮ ಗಂಡಂದಿರು, ಪ್ರಿಯಕರರ, ಮಕ್ಕಳ ಸಾವಿಗಾಗಿ ಪ್ರಾಣತ್ಯಾಗ ಮಾಡಿದವುಗಳಾಗಿದ್ದು, ಹೆಣ್ಣಿನ ಪ್ರಾಣ ತ್ಯಾಗವನ್ನು ವೈಭವಿಕರಿಸಿದೆ. 
ಕೋಣ ಬಲಿ ಎನ್ನು ಉದಾರಣೆಯಾಗಿ ತೆಗೆದುಕೊಂಡರೆ, ಇದು ಮೂಲತಃ ಜಾತಿಯ ಪಾವಿತ್ರವನ್ನು ನಾಶ ಮಾಡಿದ ದಲಿತನ ಅಪರಾಧಕ್ಕಾಗಿ, ಪ್ರತಿ ವರ್ಷ ಅಭಿನಯ ಗೊಳ್ಳುತ್ತಿರುವ ಶಿಕ್ಷೆಯಾಗಿದೆ. ಮಾರಿಹಬ್ಬದಲ್ಲಿ ಸವರ್ಣಿಯರು ಕೊಡುಗೆಯಾಗಿ ಕೊಡುವ ಕೋಣನ ಮಾಂಸವು, ವಾಸ್ತವದಲ್ಲಿ ದಲಿತರ ವರ್ಷದ ಸಿಟ್ಟನ್ನು ಬಾಯಿಗೆ ಬರದಂತೆ ಗಂಟಲ ಕೆಳಗೆ ಅದುಮುತ್ತದೆ ಅಥವಾ ಧಣಿಗಳು ಮಾಡಿದ ವರ್ಷದ ಕ್ರೌರ್ಯವನ್ನು ಬಾಡಿನ ತುಂಡು ಮರೆಸುತ್ತದೆ.

ಗ್ರಾಮ ದೇವತೆಗಳ ಬಗ್ಗೆ ಅಧ್ಯಯನ ಮಾಡಿದ  ಡಾ. ಸಿದ್ದಲಿಂಗಯ್ಯನವರು , "ಗ್ರಾಮ ದೇವತೆಗಳಿಗೇಕೆ ಗಂಡಂದಿರಿಲ್ಲ..?" ಎಂಬ ಪ್ರಶ್ನೆಯನ್ನೆತ್ತುತ್ತಾರೆ.

Tuesday, 21 March 2023

ವಚನಕಾರರ ವಿಚಾರಕ್ರಾಂತಿ


ಯಾವ ಯಾವ ಜಡ್ಡು ಕಟ್ಟಿದ ಕಾಲಗಳಲ್ಲಿ, ಸೂಕ್ಷ್ಮ ಸಂವೇದನೆ ಉಳ್ಳವರು ವಿಚಾರವಂತರು ಆದ ಕೆಲವು ಜನ ತಮ್ಮ ಸುತ್ತಣ ಪರಿಸ್ಥಿತಿಯನ್ನು ಮತ್ತು ಅದನ್ನು ನಿಯಂತ್ರಿಸಿಕೊಂಡು ಬಂದ ರೂಢಿಗತವಾದ ವ್ಯವಸ್ಥೆ ಹಾಗೂ ಸಂಪ್ರದಾಯಗಳನ್ನು ಪ್ರಶ್ನಿಸಲು ತೊಡಗುತ್ತಾರೋ, ಪ್ರತಿಭಟಿಸಲು ತೊಡಗುತ್ತಾರೋ ಅಂತಹ ಕಾಲಗಳನ್ನು ಸಂಕ್ರಮಣ ಕಾಲಗಳೆಂದು ಕರೆಯಬಹುದು.

ವಚನಕಾರರು ಮೂಲತಃ ನಿಷ್ಠುರ ವಿಮರ್ಶಕರು. ಪರಂಪರೆಯನ್ನು ಕುರಿತು, ಧರ್ಮವನ್ನು ಕುರಿತು, ದೇವರನ್ನು ಕುರಿತು, ತಮ್ಮ ಸುತ್ತಣ ಸಾಮಾಜಿಕ ಪರಿಸರವನ್ನು ಕುರಿತು, ಎಲ್ಲಕ್ಕೂ ಮಿಗಿಲಾಗಿ ತಮ್ಮನ್ನೇ ಕುರಿತು ವಸ್ತುನಿಷ್ಠವಾಗಿ ವಿಮರ್ಶ ಮಾಡಿದರು. ವೇದ, ಶಾಸ್ತ್ರಗಳ ಮಾತಿಗಿಂತ, ತಮ್ಮ ಸುತ್ತಣ ಪರಿಸರದಲ್ಲಿ ಯಾವುದು ಸ್ವಂತ ಅನುಭವಕ್ಕೆ ಬರುತ್ತದೋ, ಆ ಸ್ವಾನುಭವವೇ ಎಲ್ಲದಕ್ಕಿಂತ ಮಿಗಿಲಾದದ್ದು ಎಂಬುದನ್ನು ಕಂಡುಕೊಂಡರು ಆದುದರಿಂದಲೇ ‌...

ವೇದಕ್ಕೆ ಒರೆಯ ಕಟ್ಟುವೆ. ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗಕೊಯ್ಯುವೆ ನೋಡಯ್ಯ.

ಎಂದು ಬಸವಣ್ಣನವರು ಸವಾಲು ಹಾಕಿದರು.

ವೇದಶಾಸ್ತ್ರ ಪುರಾಣಾಗಮಗಳೆಂಬ
ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿರೋ

ಎಂದು ಅಕ್ಕಮಹಾದೇವಿ, ಅವುಗಳ ನಿರರ್ಥಕತೆಯನ್ನು ಘೋಷಿಸಿದಳು. "ವೇದವನೋದಿದರೆನು, ಶಾಸ್ತ್ರವ ಕೇಳಿದರೇನು" ಎಂಬುದೇ ಈ ವಚನಕಾರರ ಮುಖ್ಯ ಧೋರಣೆಯಾಯಿತು. ವೇದೋಕ್ತವಾದ ಹಿಂದೂ ಧರ್ಮ, ತನ್ನ ವರ್ಣ ವ್ಯವಸ್ಥೆಯಿಂದ ವ್ಯಕ್ತಿಗಳಲ್ಲಿ ಶ್ರೇಷ್ಠ ಕನಿಷ್ಠ ಎಂಬ ತಾರತಮ್ಯವನ್ನು ಕಲ್ಪಿಸುತ್ತಾ, ಯಜ್ಞಯಾಗಾದಿಗಳಿಂದ ಪ್ರಾಣಿವಧೆಯನ್ನು ಸಮರ್ಥಿಸುವುದು ಎಷ್ಟು ವಿಲಕ್ಷಣ ಎಂದು ವಚನಕಾರರಿಗೆ ತೋರಿರಬಹುದು. ವ್ಯಕ್ತಿಯ ಆಧ್ಯಾತ್ಮಿಕನುಭವ ಎನ್ನುವುದು, ವೈಯಕ್ತಿಕ ಸಾಧನೆಯಿಂದ ಶ್ರದ್ಧೆ- ನಿಷ್ಠೆ -ಸ್ವಾತ್ಮಪರಿಶೀಲನೆಗಳಿಂದ ಲಭಿಸತಕ್ಕದ್ದೇ ಹೊರತು, ವೇದಶಾಸ್ತ್ರಗಳ ಪಠನದಿಂದ ಪರಂಪರಾಗತವಾದ ವಿಚಾರಗಳನ್ನು ನಂಬಿಕೆಗಳನ್ನು ಒಪ್ಪಿಕೊಳ್ಳುವುದರಿಂದ ಬರುವುದಲ್ಲ ಇವರು ಕಂಡುಕೊಂಡರು.


ವೈದಿಕ ಧರ್ಮದ ಪ್ರಕಾರ ಸ್ತ್ರೀಯರಿಗೆ ವೇದಧಿಕಾರವಿಲ್ಲ; ಪುರುಷರಂತೆ ಜನವಾರವನ್ನು ಧರಿಸುವ ಹಕ್ಕಿಲ್ಲ. ಬೌದ್ಧ ಧರ್ಮವು ಮೊದಮೊದಲು ಸ್ತ್ರೀಯರಿಗೆ ಪ್ರವೇಶವನ್ನು ನಿರಾಕರಿಸಿತು, ಜೈನ ಧರ್ಮದ ಪ್ರಕಾರ ಸ್ತ್ರೀ ಮೋಕ್ಷಕ್ಕೆ ಅರ್ಹಳಲ್ಲ: ಒಂದು ವೇಳೆ ಮೋಕ್ಷವನ್ನು ಪಡೆಯಬೇಕಾದರೆ ಆಕೆ ಮುಂದಿನ ಭವಗಳಲ್ಲಿ ಗಂಡಾಗಿ ಹುಟ್ಟಬೇಕು. ಸ್ತ್ರೀಯರನ್ನು ಕುರಿತು ವಿಚಾರ ಹೀಗಿರುವಾಗ ವಚನಕಾರರು ಈ ಭಾವನೆಯನ್ನು ವಿಮರ್ಶಿಸಿ ಇದು ಎಷ್ಟು ಅಸಂಬದ್ಧವೆನ್ನುವುದನ್ನು ಎತ್ತಿ ತೋರಿಸಿದರು. ಗಂಡಿಗೂ ಹೆಣ್ಣಿಗೂ ಇರುವ ವ್ಯತ್ಯಾಸ ಯಾವುದು.?

ಮೊಲೆ ಮೂಡಿ ಬಂದರೆ ಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿವಾತ್ಮನು ಗಂಡು ಅಲ್ಲ,
ಹೆಣ್ಣೂ ಅಲ್ಲ ಕಾಣ ರಾಮನಾಥ.

ಎನ್ನುತ್ತಾನೆ ಜೇಡರ ದಾಸಿಮಯ್ಯ. ಈ ವಿಚಾರ ಅತ್ಯಂತ ತಾರ್ಕಿಕವೂ ಪಕ್ಷಪಾತ ರಹಿತವೂ ಆಗಿದೆ.



ದೇವರನ್ನು ಕುರಿತ ಕಲ್ಪನೆಯ ಬಗೆಗೂ ವಚನಕಾರರ ವಿಚಾರಗಳು ಪರಂಪರೆಯಿಂದ ಭಿನ್ನವಾಗಿ. ದೇವಸ್ಥಾನಗಳ ನಿರ್ಮಾಣ ಪುಣ್ಯ ಸಂಪಾದನೆಯ ಅಥವಾ ಸ್ವರ್ಗ ಸುಖ ಪ್ರಾಪ್ತಿಯ ಸಾಧನವೆಂದು ಉಳ್ಳವರನ್ನು ಶಾಸ್ತ್ರಗಳು ನಂಬಿಸಿದವು. ದೇವಸ್ಥಾನಗಳು ಉಚ್ಚ ವರ್ಗದ ಪುರೋಹಿತರ ಸ್ವತ್ತುಗಳಾಗಿ ಭಕ್ತಾದಿಗಳನ್ನು ಸುಲಿಯುವ ತಂತ್ರಗಳಾದವು. ಇಂತಹ ಹಿನ್ನೆಲೆಯಲ್ಲಿ ದೇವರು ದೇವಸ್ಥಾನಗಳನ್ನು ಕುರಿತು ವಚನಕಾರರು ನಡೆಸಿದ ವಿಚಾರ ಗಮನಾರ್ಹವಾದುದಾಗಿದೆ. 

ಮೊದಲನೆಯ ಹೆಜ್ಜೆಯೆಂದರೆ, ದೇವಸ್ಥಾನಗಳನ್ನು ನಿರಾಕರಿಸುವುದು. ಹಾಗೆ ಮಾಡುವುದರಿಂದ, ಪುರೋಹಿತ ವರ್ಗದವರು ದೇವಸ್ಥಾನದ ನೆಪದಲ್ಲಿ, ಧರ್ಮದ ಹೆಸರಿನಲ್ಲಿ ಜರ ಜನರನ್ನು ಶೋಷಿಸುವುದನ್ನು ತಪ್ಪಿಸುವುದರ ಜೊತೆಗೆ, ದೇವಸ್ಥಾನಗಳು ಕೆಲವರಿಗೆ ಪ್ರವೇಶವನ್ನು ದೊರಕಿಸುವ, ಇನ್ನು ಕೆಲವರಿಗೆ ಹೀನಕುಲದವರೆಂಬ ಕಾರಣದಿಂದ ಪ್ರವೇಶವನ್ನು ನಿರಾಕರಿಸುವ ತಾರತಮ್ಯ ಭಾವನೆಗಳನ್ನೆ ತೊಡೆದು ಹಾಕುವುದು ಸಾಧ್ಯವಾಗುತ್ತದೆ ಎಂದು ಯೋಚಿಸಿದರು.

ಎರಡನೆಯದಾಗಿ ದೇವರ ಕಲ್ಪನೆಯನ್ನೇ ಬದಲಾಯಿಸಿದರು. ದೇವರಂದರೆ ವಚನಕಾರರ ಪ್ರಕಾರ, ವರ್ಣೋಕ್ತವಾದ ವರುಣ ರಂಜಿತವಾದ ಮೂರ್ತಿ ಅಲ್ಲ; ಅವರ ಪ್ರಕಾರ ಅದೊಂದು, ನಿರಾಕಾರಕ್ಕೆ ಸಮೀಪವಾದ ಸಂಕೇತ. ಅದನ್ನೇ ಅವರು 'ಲಿಂಗ'ವೆಂದು ಕರೆದರು. ಅದನ್ನು ವ್ಯಕ್ತಿ ಶರೀರದ ಮೇಲೆ ಧರಿಸಬೇಕು ಎಂದರು. ಅಂಗದ ಮೇಲೆ ಇರುವ ಈ ಲಿಂಗವೇ, ದೇವರ ಒಂದು ಸಾಂಕೇತಿಕ ರೂಪ ಎಂದು ಹೇಳುವುದರ ಮೂಲಕ ಭಕ್ತನಿಗೆ ಬಹಿರಂಗದ ದೇವಸ್ಥಾನಕ್ಕೆ ಹೋಗಬೇಕಾದ ಅಗತ್ಯವಿಲ್ಲದಂತೆ ಮಾಡಿದರು; ಈ ಲಿಂಗ ಇರುವ ಸ್ಥಳವೇ ದೇವಾಲಯ, ಅಂದರೆ ಭಕ್ತನಾದವನ "ದೇಹವೇ ದೇಗುಲ" ಎಂಬ ಕಲ್ಪನೆಯನ್ನು ಕೊಟ್ಟರು.

ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡುವೆನು ಬಡವನಯ್ಯ
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯಾ

ಎನ್ನುವ ಬಸವಣ್ಣನವರ ವಚನ ಈ ವೈಚಾರಿಕತೆಗೆ ನಿದರ್ಶನವಾಗಿದೆ. ದೇವರ ಕಲ್ಪನೆ ಐತಿಹಾಸಿಕವಾಗಿ, ನಿಸರ್ಗದಿಂದ ದೇಗುಲಕ್ಕೆ ಬಂದದ್ದು, ದೇಗುಲದಿಂದ ವ್ಯಕ್ತಿಯ ದೇಹಕ್ಕೆ ಸ್ಥಳಾಂತರಿತವಾದದ್ದು, ದೇವಸ್ಥಾನದ ಬದುಲು ದೇಹವೇ ದೇಗುಲವಾದದ್ದು ತೀರ ಮಹತ್ವದ ಬದಲಾವಣೆ. ಇದರಿಂದ ದೇವರು ಎನ್ನುವುದು ನಮ್ಮಿಂದಾಚೆಯದಲ್ಲ, ಅದು ನಮ್ಮ ಒಳಗಿನದು ಎನ್ನುವ ತಿಳುವಳಿಕೆಯು ಹೊಸ ರೀತಿಯದಾಗಿದೆ.

ದೇವಸ್ಥಾನಗಳನ್ನು ಕುರಿತ ಪ್ರತಿಭಟನೆ ವಚನಕಾರರ ಕಾಲದಲ್ಲಿ ಎದ್ದು ಕಾಣುವಂತದ್ದು.

ಕಟ್ಟಿದ ಲಿಂಗವ ಬಿಟ್ಟು, ಬೆಟ್ಟದ ಲಿಂಗಕ್ಕೆ ಹೋಗಿ
ಹೊಟ್ಟೆಯಡಿಯಾಗಿ ಬೀಳುವ, ಲೊಟ್ಟಿ ಮೂಗನ ಕಂಡರೆ
ಮೆಟ್ಟಿದ್ದ ಎಡಪಾದರಕ್ಷೆಯ ತಕ್ಕೊಂಡು
ಲಟಲಟನೆ ಹೊಡೆ ಎಂದ ಅಂಬಿಗರ ಚೌಡಯ್ಯ.

ಹತ್ತು ಮತ್ತರದ ಭೂಮಿ, ಬತ್ತದ ಹಯನು
ನಂದಾದೀವಿಗೆಯ ಮಾಡಿದೆವೆಂಬರ
ಮುಖವ ನೋಡಲಾಗದು,
ಅವರ ನುಡಿಯ ಕೇಳಲಾಗದು.

ಈ ಎರಡು ವಚನಗಳ ಧೋರಣೆಯನ್ನು ನೋಡಬೇಕು. ಮೊದಲನೆಯದು ದೇವಸ್ಥಾನಕ್ಕೆ ಹೋಗುವವರನ್ನು ಕುರಿತ ಪ್ರತಿಭಟನೆಯಾದರೆ, ಎರಡನೆಯದು, ದೇವಸ್ಥಾನಕ್ಕಾಗಿ ದಾನ ದತ್ತಿಗಳನ್ನು ಬಿಡುವ ಶ್ರೀಮಂತರನ್ನು ಕುರಿತ ಪ್ರತಿಭಟನೆಯಾಗಿದೆ.


ವಚನಕಾರರ ವಿಚಾರಕ್ರಾಂತಿಯ ಮತ್ತೊಂದು ಅಂಶವೆಂದರೆ, ಇಹಪರಗಳನ್ನು ಕುರಿತ ಪರಂಪರಾಗತವಾದ ಭಾವನೆಯನ್ನು ಚಿಕಿತ್ಸೆಗೆ ಗುರಿಪಡಿಸಿದ್ದು.
ಈ ಲೋಕವನ್ನು ತಿರಸ್ಕರಿಸುವ, ಸ್ವರ್ಗವನ್ನು ಬಯಸುವ ಒಂದು ಪ್ರವೃತ್ತಿಯಾಯಗಿ, ಇಹದ ಬದುಕನ್ನು ದ್ವಂದ್ವದ ಗೊಂದಲಕ್ಕೆ ಸಿಕ್ಕಿಸಿತು. ಇದು ಎಷ್ಟು ದೂರ ಬಂತು ಎಂದರೆ, 'ಇಹ'ದ ಬದುಕಿನಿದ್ದರೂ ಅನಿಷ್ಟ, ಆಶಾಶ್ವತ, ಪರವೆಂಬುದೇ ಮನುಷ್ಯನ ಬದುಕಿನ ಗುರಿ; ಇಹದ ಸಮಸ್ತವೂ, ಆ 'ಪರ'ಕ್ಕಾಗಿ ಮಾಡಿಕೊಳ್ಳುವ ಪೂರ್ವ ಸಿದ್ಧತೆ ಎಂಬ ಜೀವನ ವಿಮುಖ ಧೋರಣೆಯಾಯಿತು. ಇದರಿಂದ ಜೀವನ ಪ್ರೀತಿಯು ನಷ್ಟವಾಗಿ, ಇಹದ ಜೀವನ ಎಂಬುದು ನಿಕೃಷ್ಟವಾಯಿತು. ಈ ಭಾವನೆಯನ್ನು ಬೌದ್ಧ ಜೈನ ಧರ್ಮಗಳು ತಕ್ಕಷ್ಟು ಪುಷ್ಟಿಗೊಳಿಸಿವೆ ಎಂಬುದರಲ್ಲಿ ಸಂಶಯವಿಲ್ಲ. 'ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ', ವೈಷ್ಣವ ಕೀರ್ತನೆಗಳಲ್ಲೂ ಈ ಭಾವನೆ ಮುಂದುವರೆದಿದೆ. ವಚನಕಾರರು ಈ ಭಾವನೆಯನ್ನು ನಿರಾಕರಿಸಿ 'ಇಹ-ಪರ'ಗಳ ಸಮನ್ವಯವನ್ನು ಸಾಧಿಸಿದರು. ಪರದ ನಿರಾಕರಣೆ ಮಾಡದೆ ಇಹವನ್ನು ಒಪ್ಪಿಕೊಳ್ಳುವ ಧೋರಣೆಯನ್ನು ರೂಪಿಸಿದ್ದು ಇವರ ವಿಶೇಷತೆ.

ಮರ್ತ್ಯಲೋಕವೆಂಬುದು ಕರ್ತಾರನ ಕಮಟವಯ್ಯ
ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ

ಕೊಟ್ಟ ಕುದುರೆಯನೇರಲರಿಯದೆ 
ಮತ್ತೊಂದ ಬಯಸುವವರು
ವೀರರು ಅಲ್ಲ, ಧೀರರು ಅಲ್ಲ.

ಸುಖ-ದುಃಖಗಳನ್ನು ಪೂರ್ವ ಜನ್ಮದ ಪುಣ್ಯ ಹಾಗೂ ಪಾಪಗಳ ಪರಿಣಾಮವೆಂದು ಒಪ್ಪಿಕೊಳ್ಳುವುದು ತೀರ ದುರ್ಬಲವಾದ ಮನೋ ಧರ್ಮ. ಇದಾವುದನ್ನು ಯೋಚಿಸದೆ, ಇದ್ದದ್ದನ್ನು ಇದ್ದಂತೆಯೇ ಒಪ್ಪಿಕೊಳ್ಳಬೇಕು. ಬಸವಣ್ಣನವರು ಒಂದೆಡೆ,

ಸುಖ ಬಂದರೆ ಪುಣ್ಯದ ಫಲ ಎನ್ನೆನು;
ದುಃಖ ಬಂದರೆ ಪಾಪದ ಫಲ ಎನ್ನೆನು,
ನೀ ಮಾಡಿದೊಡೆ ಆಯಿತ್ತು ಏನ್ನನು,
ಸಂಸಾರದ ಸವೆಯೆ ಬಳಸುವೆನು 

ಪರ ಎಂದೊಡನೆ ಈ ದೇಶದ ಜನ ಮನದಲ್ಲಿ ತೆರೆಯುವ ಚಿತ್ರಗಳು ವಿಚಿತ್ರ ಸ್ವರ್ಗ ನರಕ ಕಾಮಧೇನು ಕಲ್ಪವೃಕ್ಷ ಅಪ್ಸರೆಯರು ಇತ್ಯಾದಿ. ಆದರೆ ವಚನಕಾರರು ದೇವಲೋಕ ಸ್ವರ್ಗ ನರಕಗಳನ್ನು ಕುರಿತು ಜನರಲ್ಲಿ ಪ್ರಚಲಿತವಾದ ನಂಬಿಕೆಗಳನ್ನು ತಲೆಕೆಳಗು ಮಾಡಿದರು; ಅಷ್ಟೇ ಅಲ್ಲ ಅವುಗಳ ಅರ್ಥವನ್ನು ಬೇರೊಂದು ರೀತಿಯಲ್ಲಿ ವಿವರಿಸಿದರು.

ಅಯ್ಯಾ ಎಂದರೆ ಸ್ವರ್ಗ 
ಎಲ್ಲವೋ ಎಂದರೆ ನರಕ

ಸ್ವರ್ಗ ನರಕಗಳೆರಡು ನಾವೇ ನಮ್ಮ ನಡವಳಿಕೆಯಿಂದ ನಿರ್ಮಿಸಿಕೊಳ್ಳಬಹುದಾದ 'ಲೌಕಿಕ' ಸ್ಥಿತಿಗಳೇ ಹೊರತು ಬೇರೆ ಅಲ್ಲ.



ಕೊಲುವವನೇ ಮಾದಿಗ
ಹೊಲಸು ತಿಂಬುವನೇ ಹೊಲೆಯ
..................
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
ಕೂಡಲಸಂಗನ ಶರಣರೇ ಕುಲಜರು

ಹಿಂಸೆಯ, ಹೊಲಸಿನ ಮನೋಭಾವ ಹಾಗೂ ನಡವಳಿಕೆಯಿಂದ ಒಬ್ಬ ಕೀಳಾಗುತ್ತಾನೆಯೇ ಹೊರತು ಅವನ ಹುಟ್ಟಿನಿಂದ ಅಲ್ಲ ‌. 'ಸಕಲ ಜೀವಾತ್ಮರಿಗೆ ಲೇಸನೆ ಬಯಸುವ' ಉದಾರತೆ ಹಾಗೂ ಉದಾತ್ತ ನಡವಳಿಕೆ ಉಳ್ಳವನೆ ನಿಜವಾದ 'ಕುಲಜ' ನು.


ಸಮಾನತೆಗೆ ಇರುವ ಇನ್ನೊಂದು ಆತಂಕ 'ವೃತ್ತಿ'ಯದು ಎಂಬುದನ್ನು ವಚನಕಾರರು ಗುರುತಿಸಿದರು. 'ವೃತ್ತಿ'ಯ ಮೇಲೆ ನಿಂತ 'ಮೇಲು-ಕೀಳು'ಗಳ ಭಾವನೆಯನ್ನು ಮಾರ್ಪಡಿಸದ ಹೊರತು ಅವರೆಲ್ಲರೂ ಒಂದು ಸಮಾಜದವರು ಮತ್ತು ಸಮಾನರು ಎಂಬುದನ್ನು ರೂಢಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಇರುವ ದಾರಿ ಎಂದರೆ 'ವೃತ್ತಿ'ಗಳೆಲ್ಲವೂ ಪೂಜ್ಯ, ಅವುಗಳಲ್ಲಿ ಯಾವ ವೃತ್ತಿಯು ಮೇಲಾದುದಲ್ಲ' ಯಾವ ವೃತ್ತಿಯೂ
           ಕೀಳಾದುದಲ್ಲ ಎಂದು ಪರಿಗಣಿಸುವುದು. ಆದುದರಿಂದ ವಚನಕಾರರು 'ಕಾಯಕ' ಎಂಬ ಪರಿಕಲ್ಪನೆಯನ್ನು ರೂಪಿಸಿದರು.

   ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಸಂಚಯ - ವಿಮರ್ಶೆ

Monday, 27 February 2023

*ಕರ್ನಾಟಕದ ನಾಥಪಂಥ -- ರಹಮತ್ ತರೀಕೆರೆ

ರಹಮತ್ ತರೀಕೆರೆ ಅವರು ಬರೆದ "ಕರ್ನಾಟಕದ ನಾಥಪಂಥ" ಕೃತಿಯ ಕೆಲವು ಸಂಗತಿಗಳ ಯಥಾವತ್ತಾದ ಅಚ್ಚು....

ಭಾರತದಲ್ಲಿ ದರ್ಶನ ಪಂಥ ಧರ್ಮಗಳ ನಡುವಣ ಪರಸ್ಪರ ಸಂಘರ್ಷ ಮತ್ತು ಹೊಂದಾಣಿಕೆಗಳು ಕುತೂಹಲಕರವಾಗಿವೆ.

ಗುರುಪಂಥಗಳಲ್ಲಿ ಶಿಷ್ಯನನ್ನು ಹುಡುಕುವುದು, ಅವನಿಗೆ ದೀಕ್ಷೆಕೊಟ್ಟು ಹೊಸ ನಾಮಕರಣ ಮಾಡುವುದು, ಪರೀಕ್ಷೆಗೆ ಒಡ್ಡುವುದು ಮತ್ತು ಸಾಧನೆ ಮಾಡಿಸುವುದು ಸಾಮಾನ್ಯ. ಹೆತ್ತವರು  ಗುರುವಿಗೆ ಮಗನನ್ನು ಒಪ್ಪಿಸುವಾಗ ‘ಇಂದಿನಿಂದ ನೀನು ನನ್ನ ಮಗನಲ್ಲ’ ಎಂದು ಸಾಂಕೇತಿಕವಾಗಿ ಸಂಬಂಧ ಕಡಿದುಕೊಳ್ಳುತ್ತಾರೆ. ದೀಕ್ಷೆಕೊಡುವ ಗುರು ‘ಇವತ್ತಿನಿಂದ ನೀನು ನನ್ನ ಸಿಸುಮಗ’ ಎಂದು ಹೊಸ ಪಿತೃತ್ವದ ಸಂಬಂಧ ಸ್ಥಾಪಿಸುತ್ತಾನೆ. ನಾಥರಿಗೆ ‘ಬಾವಾಜಿ’ ಎಂಬ ಹೆಸರು ಕರ್ನಾಟಕದ ತುಂಬ ಕಾಣಬರುತ್ತದೆ. ಬಾವಾಜಿ ಎಂದರೆ ಅಪ್ಪ ಎಂದರ್ಥ. ಮಂಟೆಸ್ವಾಮಿ ಕಾವ್ಯದಲ್ಲಿ ಗುರುವಿಗೆ ‘ಅಪ್ಪಾಜಿ’ ಎಂದೇ ಕರೆಯಲಾಗಿದೆ.


ನಾಥಪಂಥವು ಸಾಂಖ್ಯ, ಯೋಗ, ರಸೇಶ್ವರ ಮುಂತಾದ ದರ್ಶನಗಳ ಜತೆಯಲ್ಲೂ, ವಜ್ರಯಾನ, ಕಾಪಾಲಿಕ, ಸೂಫಿ, ಕೌಳ, ಶಾಕ್ತ, ದತ್ತ, ವಾರಕರಿ, ಮಹಾನುಭಾವ ಪಂಥಗಳ ಜತೆಯಲ್ಲೂ ಅನುಸಂಧಾನ ಮಾಡಿದೆ. ಈ ಕಾರಣಕ್ಕೆ ಇದು ಭಾರತದ ಸಂಕರಶೀಲ ಪಂಥಗಳಲ್ಲಿ ಒಂದು.
ಕರ್ನಾಟಕದ ನಾಥವನ್ನು ಕಾಪಾಲಿಕ, ಸೂಫಿ, ಶರಣ, ಶಾಕ್ತ, ಆರೂಢ, ವಜ್ರಯಾನಗಳ ನೆರವಿಲ್ಲದೆ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ.

ಕದ್ರಿಯ ಮಂಜುನಾಥ ಗುಡಿಯಲ್ಲಿ ವಜ್ರಯಾನದ ಅವಲೋಕಿತೇಶ್ವರ ಹಾಗೂ ಧ್ಯಾನಿಬುದ್ಧರಿದ್ದಾರೆ. ಮಚೇಂದ್ರನಾಥ ಗೋರಖನಾಥ ಚೌರಂಗಿನಾಥರಿದ್ದಾರೆ. ಆಗಮೋಕ್ತ ಪೂಜೆ ಪಡೆಯುತ್ತಿರುವ ಶಿವಲಿಂಗವೂ ಇದೆ. ಕರಾವಳಿಗೆ ವಿಶಿಷ್ಟವಾದ ಭೂತಗಳೂ ಇವೆ. ಎಲ್ಲ ಪದರಗಳೂ ಒಂದೇ ಕಡೆ ಸಾಮರಸ್ಯದಲ್ಲಿವೆ. ಆದರೆ ಅವುಗಳ ಒಳಗಿನ ಸೆಳೆದಾಟಗಳು ನಿಂತಿಲ್ಲ. ಆದ್ದರಿಂದ ಪಂಥಗಳನ್ನು ಅಧ್ಯಯನ ಮಾಡುವುದು ಎಂದರೆ ಕರ್ನಾಟಕ ಸಂಸ್ಕೃತಿಯ ಸಂಕರಶೀಲ ಹಾಗೂ ಸಂಘರ್ಷಶೀಲ ಎರಡೂ ಗುಣಗಳನ್ನು ಅರಿಯುವ ಜವಾಬ್ದಾರಿ; ಧಾರ್ಮಿಕ, ಸಾಹಿತ್ಯಕ, ಸಾಮಾಜಿಕ ಬದುಕಿನ ಮೇಲೆ ಈ ಪಂಥಗಳ ಕೊಡುಕೊಳೆಗಳು ಸೃಷ್ಟಿಸಿರುವ ಹೊಸರೂಪಗಳನ್ನು ಗುರುತಿಸುವ ಕೆಲಸ. ಈ ಬಗೆಯ ಅಧ್ಯಯನಗಳು ನಮ್ಮ ರಾಜಕೀಯ ಉಪಕ್ರಮಗಳಲ್ಲಿ ಹೇಗೆ ಬಳಕೆಯಾಗುತ್ತವೆ ಎನ್ನುವುದು ಮಾತ್ರ ಊಹಾತೀತ.




ಚರಿತ್ರೆಯಲ್ಲಿ ಪಂಥಗಳು ಪರಸ್ಪರ ಸಂಘರ್ಷ ಮಾಡಿವೆ.  ಭಾರತದ ‘ಅವೈದಿಕ’ ಎನ್ನಲಾಗುವ ದಾರ್ಶನಿಕ ಧಾರೆ ಹಾಗೂ ಪಂಥಗಳು ಏಕಕಾಲಕ್ಕೆ ವಿಶಾಲ ಸಮುದಾಯಗಳಿಂದ ಸ್ವೀಕಾರವನ್ನೂ ಸ್ಥಾಪಿತ ವರ್ಗಗಳಿಂದ ವಿರೋಧವನ್ನೂ ಪಡೆದಿದ್ದವು.  ವೈದಿಕ ಪುರಾಣಗಳು ತಮ್ಮ ವಿರೋಧಿಗಳನ್ನು ರಾಕ್ಷಸರಾಗಿ ಚಿತ್ರಿಸುವಂತೆ, ವೈದಿಕ ದಾರ್ಶನಿಕರು ಕೂಡ  ‘ಅವೈದಿಕ’  ಭೌತವಾದಿ ದರ್ಶನ ಹಾಗೂ ಪಂಥಗಳನ್ನು ವಿಕೃತವಾಗಿ ಚಿತ್ರಿಸಿದರು. ಇದನ್ನು ದಾರ್ಶನಿಕ ಅಮಾನುಷೀಕರಣ ಎನ್ನಬಹುದು.  ಇದಕ್ಕಿದ್ದ ಒಂದು ಕಾರಣಗಳಿವೆಂದರೆ, ನಾಥ ಕಾಪಾಲಿಕ ಶಾಕ್ತ ಕೌಳ ಮುಂತಾದ ಯೌಗಿಕ ಹಾಗೂ ತಾಂತ್ರಿಕ ಪಂಥಗಳು ವೇದ ಮತ್ತು ಸ್ಮೃತಿಗಳನ್ನು;   ಹುಟ್ಟಿನ ನೆಲೆಯಿಂದ ಶ್ರೇಷ್ಠ ಕನಿಷ್ಟ ಎಂದು ಜನರನ್ನು ವಿಂಗಡಿಸುವ ವರ್ಣಾಶ್ರಮವನ್ನು; ದೇವರು, ಆತ್ಮ, ಪುನರ್ಜನ್ಮ ನರಕಗಳ ಅಸ್ತಿತ್ವವನ್ನು ತಾತ್ವಿಕ ನೆಲೆಯಲ್ಲಿ ಒಪ್ಪದಿರುವುದು. ಇವುಗಳ ಈ ನಿಲುವು ವ್ಯವಸ್ಥೆಯಲ್ಲಿ ಯಾವ್ಯಾವ ಬಗೆಯ ಗಲಿಬಿಲಿ ಹುಟ್ಟಿಸಿತೊ, ಪರಿಣಾಮವಾಗಿ ಇವುಗಳ  ಅಮಾನುಷೀಕರಣ ಆಯಿತು.

ಪ್ರಭುತ್ವಗಳು ಮಾಡುವ ರಾಕ್ಷಸೀಕರಣದ ತರ್ಕವು ಅಂತಿಮವಾಗಿ ಒಪ್ಪದವರನ್ನು ನಾಶಮಾಡುವಲ್ಲಿ ಕೊನೆಗೊಳ್ಳುತ್ತದೆ. ಭಾರತದಲ್ಲಿ  ಬಹುತೇಕ ತಾಂತ್ರಿಕ ಪಂಥಗಳನ್ನು ದುಷ್ಟೀಕರಿಸಲಾಗಿದೆ ಮತ್ತು ನಾಶಪಡಿಸಲಾಗಿದೆ. ನಾಥದ ಬಗೆಗಿನ  ನಿರ್ಲಕ್ಷ್ಯ ಮತ್ತು ನೇತ್ಯಾತ್ಮಕ ಬರೆಹಗಳಂತೆ, ಅದನ್ನು ವಿಮರ್ಶೆಯಿಲ್ಲದೆ ನೋಡುವ ಪಂಥಾಭಿಮಾನಿ ಬರಹಗಳೂ ಇವೆ. ದುಷ್ಟೀಕರಿಸುವ ಹಾಗೂ ವೈಭವೀಕರಿಸುವ ಆಕರಗಳಿಂದ ತಪ್ಪಿಸಿಕೊಳ್ಳುವುದು ಒಂದು ಸಮಸ್ಯೆಯಾಗಿದೆ.

ನಾಥ ದರ್ಶನವು ಒಂದು ಬಗೆಯಲ್ಲಿ ಭೌತವಾದಿ ಎನ್ನಬಹುದಾದುದು. ಗೋರಖನು ದೇಹವು ಪವಿತ್ರವೆಂದೂ ಅದರ ಮೂಲಕವೇ ಸಮಸ್ತ ಅರಿವನ್ನು ಸಾಧನೆ ಮಾಡಿ ಪಡೆಯಬೇಕೆಂದೂ ಹೇಳುತ್ತಾನೆ.  ಒಂದರ್ಥದಲ್ಲಿ ನಾಥರ ಯೋಗ ದರ್ಶನವು ದೇಹ ಮತ್ತು ಮನಸ್ಸುಗಳ ಸಮನ್ವಯ ಸಿದ್ಧಾಂತ. ಇದರ ಆಳದಲ್ಲಿ ಬೌದ್ಧರ ಅನಾತ್ಮವಾದವೂ ಶೂನ್ಯವಾದವೂ ಇದೆ. 

ಬಹುಶಃ ವ್ಯವಸ್ಥೆಗೆತಟ್ಟನೆ ಅರಿವಾಗದ, ಆದರೆ ಅನುಯಾಯಿಗಳಿಗೆ ಮಾತ್ರ ಅರಿವಾಗುವ ಸಾಂಕೇತಿಕ ಭಾಷೆಯನ್ನು ಪಂಥಗಳು ರೂಪಿಸಿಕೊಳ್ಳುತ್ತವೆ. ಈ ಗೂಢ ಭಾಷೆ  ಆತ್ಮರಕ್ಷಣೆಗೆ ಮಾತ್ರವಲ್ಲದೆ, ಅವುಗಳ ತಾತ್ವಿಕ ಅನನ್ಯತೆಯನ್ನು ರಕ್ಷಿಸಿಕೊಳ್ಳಲೂ ನೆರವಾಗುತ್ತದೆ.

ಬಹಮನಿಯ ನಿಜಾಂಶಾಹನ ಆಸ್ಥಾನದಲ್ಲಿದ್ದ ಕವಿ ನಿಜಾಮಿಯ ‘ಕದಂ ರಾವ್-ವ-ಪದಂರಾವ್’ ಮಸ್ನವಿಯಲ್ಲಿ, ಅಖ್ಖರನಾಥ ಎಂಬ ಯೋಗಿಯ ಪ್ರಸಂಗವಿದೆ. ಆತ ದೊರೆಯ ಬಳಿ ಬಂದು, ತಾನು ಕಬ್ಬಿಣವನ್ನು ಚಿನ್ನವನ್ನಾಗಿ ಮಾಡುವೆನೆಂದೂ ಸತ್ತ ಹೆಣಕ್ಕೆ ಜೀವಕೊಡುವೆನೆಂದೂ ಆಸ್ಥಾನದಲ್ಲಿ ಸವಾಲು ಹಾಕುತ್ತಾನೆ. ಇವೆರಡೂ ವೈದ್ಯ ಹಾಗೂ ಲೋಹಶಾಸ್ತ್ರಗಳಿಗೆ ಸಂಬಂಧಿಸಿದ ಸಂಗತಿಗಳು. ಈ ಪಂಥಗಳಲ್ಲಿ ಅನೇಕ ವಿದ್ಯೆಗಳಿಗೆ ಸಂಬಂಧಪಟ್ಟ ಪ್ರಾಯೋಗಿಕವಾದ ಜ್ಞಾನವಿತ್ತು. ಯೋಗ ಸಾಧನೆಯು ದೇಹರಚನೆ ಮತ್ತು ನರವಿಜ್ಞಾನಕ್ಕೂ ಲಗತ್ತಾಗಿರುವಂತಹುದು.

ಅಸ್ತಿತ್ವಕ್ಕಾಗಿ ನಡೆಯುವ ಸಂಘರ್ಷಗಳು ತುಂಬ ಜಟಿಲವಾಗಿರುತ್ತವೆ. 

ಈ ಅಧ್ಯಯನವು ನಮ್ಮ ಸಮಾಜದ ಚಲನಶೀಲತೆಯನ್ನು ನೋಡುವ ಅರಿಯುವ ಚಿಂತಿಸುವ ಒಂದು ಅಪೂರ್ವ ಅವಕಾಶ ಮಾತ್ರ.

ಟಿಬೇಟು ನೇಪಾಳಗಳ ತಾಂತ್ರಿಕ ಬೌದ್ಧ ಪರಂಪರೆಯಲ್ಲಿ ಮಚೇಂದ್ರನು ಬೋಧಿಸತ್ವನ ನಾಲ್ಕನೇ ಅವತಾರವಾದ ಅವಲೋಕಿತೇಶ್ವರನು. ಆದರೂ ಬೌದ್ಧ ವಜ್ರಯಾನ ಪಂಥಕ್ಕೆ ಶೈವರೂಪ  ಕೊಟ್ಟ ಕೀರ್ತಿ ಗೋರಖನಿಗೆ ಕೊಡಲಾಗಿದೆ.  ನಾಥಪಂಥಕ್ಕೆ ಭದ್ರವಾದ ತಾತ್ವಿಕ ಬುನಾದಿ ಹಾಕಿ, ನಾಡಿನ ತುಂಬ ಹರಡುವ ಶಕ್ತಿಯನ್ನು ಒದಗಿಸಿದವನು ಮಾತ್ರ ಗೋರಖನೆ. 

ನೇಪಾಳಕ್ಕೆ  ಗೋರಖದೇಶವೆಂಬ ಹೆಸರಿದೆ. ಅಲ್ಲಿನ ಜನರನ್ನು ಗೋರಖರೆಂದು ಕರೆಯಲಾಗುತ್ತದೆ. ಭಾರತದಲ್ಲಿ ರಾತ್ರಿಕಾವಲು ಕೆಲಸ ಮಾಡುವ ನೇಪಾಳಿಗಳನ್ನು ಗೂರ್ಖರು ಎಂದೇ ಕರೆಯತ್ತಾರಷ್ಟೆ. ನೇಪಾಳದಲ್ಲಿ ಗೋರಖ ಜಿಲ್ಲೆಯಿದೆ. ನೇಪಾಳದ ನಾಣ್ಯಗಳ ಮೇಲೆ ಶಿವಗೋರಖನಾಥ ಎಂಬ ಲಾಂಛನವಿದೆ. ಕಠಮಂಡುವಿನ ಪಶುಪತಿನಾಥ ಮಂದಿರವು ಮೂಲತಃ ನಾಥರದ್ದಾಗಿತ್ತು. ಮಚೇಂದ್ರನ ಹೆಸರಲ್ಲಿ ನೇಪಾಳದಲ್ಲಿ ರಾಷ್ಟ್ರೀಯ ಹಬ್ಬ ಜರುಗುತ್ತದೆ. ಅಲ್ಲಿ ಅವನು ಫಲವಂತಿಕೆಯ ದೈವ. ಒಮ್ಮೆ ಗೋರಖನು ಮೋಡಗಳನ್ನೆಲ್ಲ ಹಾವುಗಳನ್ನಾಗಿ ಮಾಡಿ ಅವುಗಳ ಮೇಲೆ ಕೂತು ತಪಸ್ಸನ್ನು ಆಚರಿಸುವಾಗ, ದುಂಬಿಯಾಗಿ ಹೋಗಿ ಮಚೇಂದ್ರನು ಮೋಡಗಳನ್ನು ಬಿಡುಗಡೆ ಮಾಡಿ ಮಳೆತರಿಸಿದನಂತೆ. ಈಗಲೂ ಮಳೆಬಾರದಿದ್ದರೆ ಮಚೇಂದ್ರನನ್ನು ಪೂಜಿಸುವ ಪದ್ಧತಿ ನೇಪಾಳದಲ್ಲಿದೆ.

ಬೌದ್ಧತಾಂತ್ರಿಕ ಪಂಥಗಳಿಂದ ಬಂದ ಮಚೇಂದ್ರನು  ತಾಂತ್ರಿಕ  ಪ್ರಜ್ಞೆಯ ಸಂಕೇತವಾದ ಮೀನಿಗೆ ಸಮೀಕರಣಗೊಂಡಿದ್ದು,  ಮುಂದೆ ಸಾಂಕೇತಿಕ ಅರ್ಥಗಳು ಹಿಂಜರಿದು ಮೀನಿನ ಹೊಟ್ಟೆಯಲ್ಲಿ ಹುಟ್ಟುವ ಕತೆ ಹುಟ್ಟಿರಬೇಕು ಎಂಬ ವ್ಯಾಖ್ಯಾನವೂ ಇದೆ.
   ‘ದೇವರಿಗೆ ಹೋಗಬೇಕು ದಾರಿಬಿಡು ಪೂಜಾರಿ, ದೇವರಿಗೂ ನನಗೂ ಒಳಮಾತು|ಭೈರವನ ಠಾವಿಗೆ ಹೋಗಿ ಕೈಯ ಮುಗಿದೇನು’ ಎಂಬ ಜನಪದ ಪದವಿದೆ. ಪೂಜಾರಿಯ  ಮಧ್ಯಸ್ಥಿಕೆಯಿಲ್ಲದೆ ದೇವರ ಜತೆ ನೇರವಾಗಿ ಸಂವಾದ ಮಾಡುವ ಇಲ್ಲಿನ ದನಿಯು ಧ್ಯಾನ ಮತ್ತು ಯೋಗದ ಮೂಲಕ ತನ್ನೊಳಗಿನ ಶಕ್ತಿಯನ್ನು ತಾನೇ ಕಂಡುಕೊಳ್ಳುವಿಕೆಯಾಗಿದೆಯೆಂದು ಅನಿಸುತ್ತದೆ. ‘ಒಳಮಾತು’  ಎನ್ನುವುದು ಅವಧೂತ ದರ್ಶನದ ತನ್ನತಾನರಿವ ತತ್ವವೆನಿಸುತ್ತದೆ. ಇಲ್ಲಿ ನಾಥ ಅಥವಾ ಅವಧೂತ ದಾರ್ಶನಿಕತೆಯು ಜನಪದ ಸಾಹಿತ್ಯದಲ್ಲಿ ಜಿನುಗಿ ಬಂದಂತಿದೆ.

ಒಂದರೊಳಗಿಂದ ಮತ್ತೊಂದು
ಮಹಾಯಾನ ಬೌದ್ಧದಲ್ಲಿ ಒಂದು ಕತೆಯಿದೆ. ಬುದ್ಧನ ಬೋಧಿಸತ್ವ ಅವತಾರವಾದ ಅವಲೋಕಿತೇಶ್ವರನು, ಒಂದು ದಿನ ಸುಮೇರು ಪರ್ವತದ ತುದಿಯಲ್ಲಿ ಕುಳಿತು, ಮಹಾನಿರ್ವಾಣ ಪಡೆದು ಶೂನ್ಯದಲ್ಲಿ ಕರಗಿಹೋಗಬೇಕು ಎಂದು ಸಿದ್ಧನಾಗಿರುತ್ತಾನೆ. ಆಗ, ಮಾನವ ಲೋಕದಿಂದ ಒಂದು ಗೋಳಿನ ದನಿ ಬಂದು ಕಿವಿಗೆ ತಾಕುತ್ತದೆ. ಆಗ ಅವನು ‘ಓಹೋ, ಯಾವ  ಜನರ ದುಃಖವನ್ನು ಪರಿಹರಿಸಲು ನಾನು ಈತನಕ ಯತ್ನ ಮಾಡಿದೆನೊ, ಅದಿನ್ನೂ ಪೂರಾ ಶಮನವಾಗಿಲ್ಲ. ಹಾಗಾಗಿ ನಾನೊಬ್ಬನೇ ಮೋಕ್ಷವನ್ನು ಪಡೆಯುವುದು ಸಲ್ಲದು. ಲೋಕದ ಪ್ರತಿಯೊಂದು ಜೀವಿಯೂ ದುಃಖದಿಂದ ಬಿಡುಗಡೆ ಆಗುವವರೆಗೆ ನನಗೂ ಮೋಕ್ಷಬೇಡ’ ಎಂದವನೆ ಮರಳಿ ಲೋಕಕ್ಕೆ ಬರುತ್ತಾನೆ. ಇದನ್ನು ಬುದ್ಧನ ಮಹಾಕರುಣೆ ಎಂದು ಬಣ್ಣಿಸಲಾಗಿದೆ.ಇಂತಹ ‘ಕರುಣೆ’ಯ ಹಿನ್ನೆಲೆಯುಳ್ಳ ಮಹಾಯಾನದ  ಕುಡಿಗಳಲ್ಲಿ ಒಂದಾದ ವಜ್ರಯಾನದ ಸಹವಾಸದಲ್ಲಿ ನಾಥಪಂಥವು ಮೂಡುತ್ತದೆ ಮತ್ತು ಅವಲೋಕಿತೇಶ್ವರನ ಜತೆ ನಾಥಪಂಥದ ಮಚೇಂದ್ರನಾಥನು ಏಕೀಭವಿಸುತ್ತಾನೆ.

ವಜ್ರಯಾನದ ಪ್ರಸ್ತಾಪವಿಲ್ಲದೆ ನಾಥಪಂಥದ ಚರಿತ್ರೆ ಪೂರ್ಣಗೊಳ್ಳುವುದಿಲ್ಲ. ಪಂಥಗಳ ಈ ರೂಪಾಂತರ ಪ್ರಕ್ರಿಯೆ ಆರಂಭವಾಗಿದ್ದು ಬಂಗಾಲ ನೇಪಾಳ ಟಿಬೇಟುಗಳಲ್ಲಿ. ಇದರ ಪರಿಣಾಮವು ಕಾಬೂಲು ಬಲೂಚಿಸ್ಥಾನದಿಂದ  ಕರ್ನಾಟಕದ ಕದ್ರಿಯ ತನಕ ಹರಡಿತು.
ಬೌದ್ಧ ತಾಂತ್ರಿಕಪಂಥಗಳೂ  ಶೈವ ತಾಂತ್ರಿಕ ಪಂಥಗಳೂ ಬೆರೆಯಲು ಅವುಗಳ ನಡುವೆ, ಯೋಗಾಚರಣೆ, ಶೂನ್ಯತತ್ವ ಪ್ರತಿಪಾದನೆ, ಕಾಯ ಪ್ರಧಾನ ಚಿಂತನೆ, ಆನಾತ್ಮವಾದ, ವೇದ ಪ್ರಮಾಣ ಒಪ್ಪದಿರುವಿಕೆ,  ವರ್ಣಾಶ್ರಮ ವಿರೋಧಿ ನಿಲುವು, ಮುಂತಾದ ಸಮಾನ ಕಾರಣಗಳಿದ್ದವು. ಇದರಿಂದ ಸಂಕರಕ್ಕಾಗಲಿ ರೂಪಾಂತರಕ್ಕಾಗಲಿ ಕಷ್ಟವಾಗಲಿಲ್ಲ.

ಕರ್ನಾಟಕದಲ್ಲಿ ಬೌದ್ಧಧರ್ಮದ ಇರುವಿಕೆಯನ್ನು ಕೆಲವು ವಿಶಿಷ್ಟ ಕುರುಹುಗಳ ಮೂಲಕ ಗುರುತಿಸಬಹುದು. ಅವೆಂದರೆ , ಧರ್ಮ, ಹೇಮ, ವಜ್ರ, ಮಂಜು, ಅವಲೋಕಿತ, ತಾರಾ, ಚಂದ್ರ, ಕದಳಿ. ಇವೆಲ್ಲ ಕುರುಹುಗಳು ಒಂದೇಕಡೆ ಇರುವುದೂ ಉಂಟು.

ಮಂಜುಸಂಬಂಧ
ಕರ್ನಾಟಕದಲ್ಲಿ ಬೌದ್ಧ ಮತ್ತು ನಾಥಸಂಬಂಧವನ್ನು ಬೆಸೆಯುವ ಹೆಸರುಗಳಲ್ಲಿ  ಮಂಜು ಮುಖ್ಯವಾದುದು. ಮಹಾಯಾನದಲ್ಲಿ ಮಂಜು (ಟಿಬೆಟ್ಟಿನ ಭಾಷೆಯಲ್ಲಿ ‘ಮಾಂಚು’) ಎಂಬುದು ಬುದ್ಧನ ಹೆಸರು. ಇದಕ್ಕೆ ನಂತರ ನಾಥ ಎಂಬ ಶಿವಸೂಚಕ ಶಬ್ದ ಸೇರಿಕೊಂಡಿತು. ಬೌದ್ಧತಾಂತ್ರಿಕ ಪಂಥದಲ್ಲಿ ‘ಮಂಜುಶ್ರೀಕಲ್ಪ’ ಎಂಬ ಗ್ರಂಥವಿರುವ ಉಲ್ಲೇಖ ಹಿಂದೆ ಬಂದಿತು.

ಚಂದ್ರನಿಗೂ ಬೌದ್ಧರಿಗೂ ಇರುವ ಸಂಬಂಧವಂತೂ ಲೋಕಪ್ರಸಿದ್ಧವಾಗಿದೆ. ಬೌದ್ಧರಲ್ಲಿ  ಚಂದ್ರನು ಅಹಿಂಸೆ ಮತ್ತು ಶಾಂತಿಯ ಸಂಕೇತ. ಬುದ್ಧ ಜನಿಸಿದ್ದು ಹುಣ್ಣಿಮೆಯಲ್ಲಿ. ಅವನಿಗೆ  ಬೋಧವಾದ ದಿನವೂ ವೈಶಾಖ ಪೂರ್ಣಿಮೆ.

ಚಂದ್ರಗುತ್ತಿಯ ಚಂದ್ರಲಾಂಬಾ ದೇವಿ ಮೂಲತಃ ತಾರಾಭಗವತಿ ಇರಬಹುದು. ಯಾಕೆಂದರೆ ಬೌದ್ಧಸ್ಥಾನವಾಗಿದ್ದ ಸನ್ನತಿಯಲ್ಲಿರುವ  (ಚಿತಾಪುರ) ತಾರಾದೇವಿಯು, ನಂತರ ಚಂದ್ರಲಾಂಬೆಯಾಗಿ ಬದಲಾಗುತ್ತಾಳೆ.

 ಶಿವನಿಂದಲೇ ನಾಥಪಂಥವು ಮೂಡಿತು ಎಂದು ನಂಬುವ ನಾಥಪಂಥೀಯ ಸಮುದಾಯಗಳು, ನಾಥವನ್ನು  ‘ಶುದ್ಧ ಶೈವಧರ್ಮ’ವಾಗಿ ನೋಡಲು ಬಯಸುತ್ತವೆ. ಆದರೆ ಜಗತ್ತಿನ ಅನೇಕ ದೊಡ್ಡ ಧರ್ಮಗಳು ಒಂದರ ವಿರುದ್ಧ ಇನ್ನೊಂದು  ಭಿನ್ನಮತದಿಂದಲೊ ಬಂಡಾಯ ಮಾಡಿಯೊ ಒಟ್ಟಿನಲ್ಲಿ  ‘ಪಿತೃಹತ್ಯೆ’ಗೈದೇ ಹುಟ್ಟಿವೆ. ಕದ್ರಿಯ ಗುಡಿಯಲ್ಲಿ ನಾಥಪಂಥದ ಕುರುಹುಗಳನ್ನು ವೈದಿಕರು ನಾಶಮಾಡದಂತೆ ಅದರ ಉತ್ತರಾಧಿಕಾರಿಗಳಾದ ಜೋಗಿ ಸಮುದಾಯದ ಕಣ್ಗಾವಲಿದೆ. ಆದರೆ ಹೀಗೆ ಯಾವುದೇ ಜೀವಂತ ಉತ್ತರಾಧಿಕಾರಿ ಸಮುದಾಯವಿಲ್ಲದ ಕಾರಣಕ್ಕೊ ಏನೊ, ವಜ್ರಯಾನಕ್ಕೆ ಅದರ ಕುರುಹುಗಳ ನಾಶವನ್ನು ಕೇಳುವವರಿಲ್ಲ ಎಂಬಂತಾಗಿದೆ. ಈಗಲೂ ಮನೆಯಿಂದ ಹೊರಹಾಕಲ್ಪಟ್ಟ ಮಗುವಿನಂತೆ ಕಾಣವ ಅವಲೋಕಿತೇಶ್ವರನ ಮೂರ್ತಿಯು, ಕದ್ರಿಯ ಮಂಜುನಾಥ ಗುಡಿಯಲ್ಲಿದೆ. ಲೋಕದ ದುಃಖಕ್ಕೆ ತನ್ನ ನಿರ್ವಾಣವನ್ನೆ ತ್ಯಾಗಮಾಡಿದ ಅವಲೋಕಿತನ ಕತೆಗೆ, ಚರಿತ್ರೆ ಕೊಟ್ಟಿರುವ ಈ ಉಪಸಂಹಾರ ಮಾತ್ರ ವಿಚಿತ್ರವಾಗಿದೆ.

ತೀರ್ಥಂಕರರ ಹೆಸರುಗಳೆಲ್ಲ ಆದಿನಾಥ ನೇಮಿನಾಥ ಪಾರ್ಶ್ವನಾಥ ಎಂದು ಕೊನೆಗೊಂಡರೂ ಅವಕ್ಕೂ ನಾಥಪಂಥಕ್ಕೂ ಸಂಬಂಧವಿಲ್ಲ. 

ಬೀರಪ್ಪ ಹಾಗೂ ಮಾಳಿಗಂರಾಯರಿಗೆ ರೇವಣನು ಗುರುಬೋಧ ಕೊಡುತ್ತಾನೆ.  ಅಮೋಘಸಿದ್ಧನು ತಪಗೈದು ಶಿವನಿಂದ ವರವಾಗಿ ಹೋಮಗಂಬಳಿ ಹಾಗೂ ನೇಮಬೆತ್ತ ಪಡೆಯುತ್ತಾನೆ. ನೇಪಾಳದಲ್ಲಿ ಮಚೇಂದ್ರನು ಬರಗಾಲದಲ್ಲಿ ಮಳೆ ತರಿಸಿದ ಕಾರಣದಿಂದ ಫಲವಂತಿಕೆಯ ದೈವವಾದರೆ, ಇಲ್ಲಿ ಅಮೋಘಸಿದ್ಧನು ಬರಗಾಲ ಬಂದಾಗ ತನ್ನ ಕಂಬಳಿ ಬೀಸಿ ಮಳೆತರಿಸುವ ಪವಾಡ ಮಾಡುವ ದೈವವಾಗಿದ್ದಾನೆ.


ಕುರಿಯ ಕಾಯಬೇಡಿ ಮರಿಗ್ಹುಲ್ಲ ತರಬೇಡಿ; ಕರಿಯ ಕಂಬಳಿ ನೇಯಬೇಡಿ ಭೈರುವ
ನೀವು ಕುರುಬರ ಮಾಳಿಯ ತರಬೇಡಿ|
ಕುರಿಯ ಕಾಯ್ದೇನು ಮರಿಗ್ಹುಲ್ಲ ತಂದೇನು; ಕರಿಯ ಕಂಬಳಿ ನೇಯ್ದೇನು ಪಾರ್ವತಿ
ನಾನು ಕುರುಬರ ಮಾಳಿಯ ಬಿಡಲಾರೆ |
ಕುರುಬತಿ ತರುವುದಕೆ ಕುರಿಯ ತಿಂಗಳ ಕಾದ; ಹಂಪೇಲಿ ಹಾಲು ಕರೆದುಂಡ ಭೈರುವ
ಮೆಚ್ಚಿ ತಂದಾನೆ ಮಾಳವ್ನ| (ಶ್ರೀಆದಿಚುಂಚನಗಿರಿ)



ದೀಕ್ಷಾಪದ್ಧತಿ ಇರುವ ಕಡೆ, ಸಾಮಾಜಿಕ ವಾಗಿ ಜಾತಿಪದ್ಧತಿ ಸಡಿಲವಾಗಿ, ಒಂದು ಬಗೆಯ ಸಮಾನ ಸ್ಥಾನಮಾನ ಸಿಗುವ ಕಾರಣ, ಕಾಪಾಲಿಕ ನಾಥ ಶಾಕ್ತ ಮುಂತಾದ ಪಂಥಗಳಲ್ಲಿ ದಲಿತರು ದೊಡ್ಡಪ್ರಮಾಣದಲ್ಲಿ ಪ್ರವೇಶ ಪಡೆದಿರಬಹುದು. ಕರ್ನಾಟಕದ ತಂತ್ರಪಂಥಗಳ ಬಗ್ಗೆ ಚಿಂತನೆ ಮಾಡಿರುವ ವಿದ್ವಾಂಸರ ಪ್ರಕಾರ, ದಲಿತರೇ ತಾಂತ್ರಿಕ ಪಂಥಗಳ ಮುಖ್ಯ ಆಧಾರವಾಗಿದ್ದರು. ಚುಂಚನಗಿರಿಯ ಭಕ್ತರು ಕೇವಲ ಒಕ್ಕಲಿಗರಲ್ಲ ಎಂದು ಸಾಧಿಸಲು ಕಾಪಾಲಿಕರು ಸಿದ್ಧಪಡಿಸಿ ಕೋರ್ಟಿಗೆ ಸಲ್ಲಿಸಿದ್ದ ಕೋಮುವಾರು ಪಟ್ಟಿಯಲ್ಲಿ, ಮೈಸೂರು ಸೀಮೆಯ ಮಾದಿಗರು(ಎಡಗೈ) ಹಾಗೂ ಆದಿಕರ್ಣಾಟಕರು (ಪಂಚಮರು) ಇರುವುದು ಗಮನಾರ್ಹ.

ದಲಿತರು ಭೈರವನ ಅರ್ಚಕರೂ ಆಗಿರುವ ಏಕೈಕ ನಿದರ್ಶನವು ಸೊಂಡೇಕೊಳದಲ್ಲಿದೆ.   ನಾಥಮಠವಿದ್ದ ಹುಲಿಗೊಂದಿ ಹಾಗೂ ಕಾಪಾಲಿಕರು ಇರುವ ಉಪನಾಯಕನ ಹಳ್ಳಿಯ ಪರಿಸರದಲ್ಲಿ ಈ ಸೊಂಡೇಕೊಳವಿದೆ. ಮಾದಿಗ ಸಮುದಾಯಕ್ಕೆ ಸೇರಿದ ಭೈರವನ ಅರ್ಚಕರು ಕಾಪಾಲಿಕರಿಂದ ಜೋಗಿದೀಕ್ಷೆ ಪಡೆದವರು. ಜೋಗೇರ ಜಯಣ್ಣ ಹೇಳಿದ ಪ್ರಕಾರ, ‘‘ನಮಿಗೆ ಎಲ್ಲಕಡೆ ಹೋಗಕಾಗಲ್ಲ. ಹಿಂಗಾಗಿ ನಮ್ಮ ಪರವಾಗಿ ಭೈರವನ ಪೂಜೆ ಮಾಡೋಕೆ ದಲಿತರಿಗೆ ಬೋವಿಗಳಿಗೆ ಅಗಸರಿಗೆ ದೀಕ್ಷೆಕೊಟ್ಟು ಶಿಷ್ಯರನ್ನಾಗಿ ಮಾಡಿದ್ದೇವೆ’’. ಈ ಶಿಷ್ಯರು ತೀರಿಕೊಂಡರೆ ದೀಕ್ಷೆಕೊಟ್ಟ ಗುರುವೇ ಸಮಾಧಿ ಮಾಡಲು ಹೋಗಬೇಕು. ಚುಂಚನಗಿರಿ ಪರಿಸರದಲ್ಲಿ ದಲಿತ ಜೋಗಪ್ಪಗಳು ಸಾಕಷ್ಟು ಇದ್ದಾರೆ. ಆದರೂ ಕರ್ನಾಟಕದ ನಾಥಯೋಗಿಗಳಲ್ಲಿ ದಲಿತರಿಲ್ಲ. ಭೈರವ ಗುಡಿಗಳಲ್ಲಿ ದಲಿತರಿಗೆ ಅಘೋಷಿತ ನಿಷೇಧವಿದೆ. 

ಎಂಥವನೊ ಜೋಗಿ ಗಾನವಾಡುತ ಬಂದ, ಮಾಳಿಗೆ ಮೇಲೆ ಮಲಗಿರುವ ಹೆಣ್ಣೀಗೆ
ಮಂತ್ರದ ವಿಭೂತಿ ಬಳಿದಾನು
ಎಂಥವನೊ ಜೋಗಿ ಪಂಥನಾಡುತ ಬಂದ, ಉಪ್ಪರಿಗೆ ಮೇಲೆ ಮಲಗಿರುವ ಹೆಣ್ಣೀಗೆ
ಮಂಕೀನ ವಿಭೂತಿ ತೊಳೆದಾನೆ
ಕನಸಿನಲ್ಲಿ ಕಂಡೆ ಮನಸಿಗೆ ದೊಡ್ಡೋನ, ತೊಳಸಿಯ ಮಾಲೆ ಒಳದಂಡೆ ಚುಂಚನಗಿರಿ
ಭೈರುವ ಸ್ವಾಮಿ ಬಾನನ್ನ ಸೊಪುನಾಕೆ
ಅಟ್ಟ ಗುಡ್ಸಿವ್ನಿ ಪುಟ್ರಂಗೋಲೆ ಬುಟ್ಟಿವ್ನಿ, ಅಟ್ಟಿಗೆ ಬೋರಯ್ಯ ಬರ್ನಿಲ್ಲ ಅಂತೇಳಿ
ಸಿಳ್ಳೊಡ್ದು ಅವ್ಳ ಕರ್ದಾಳು.

. ಈ ೧೨ ವತ್ಸರವು  ನಾಥರು ೧೨ ವರ್ಷಕ್ಕೊಮ್ಮೆ ತ್ರ್ಯಂಬಕೇಶ್ವರದಲ್ಲಿ ಸೇರುವ ಮಹಾಸಭೆಯನ್ನು ಸಂಕೇತಿಸುತ್ತಿದೆ. ಸಾಮಾನ್ಯವಾಗಿ ಸ್ಥಾವರ ಲಿಂಗ ಪೂಜಕರು ಇಷ್ಟಲಿಂಗದವರ ಮುಂದೆ, ಇಷ್ಟಲಿಂಗದವರು ಆತ್ಮಲಿಂಗವಾದಿಗಳ ಮುಂದೆ ಸೋಲುವ ಪ್ರಸಂಗಗಳಿವೆ. ಇಲ್ಲಿ, ಸ್ಥಾವರಲಿಂಗ ವಾದದ ಮುಂದೆ ಯೋಗವಾದಿ ನಾಥರು ಸೋಲುತ್ತಿದ್ದಾರೆ.

ಅಹಂ ಬೆಳೆಸಿಕೊಂಡಿರುವ, ಆದರೆ ತಕ್ಕ ಗುರು ಸಿಕ್ಕರೆ ಬೆಳೆಯುವ ಸಾಧ್ಯತೆ ಇರುವ  ಸಾಧಕನಾಗಿ ಕಾಣಿಸುತ್ತದೆ. ಅಲ್ಲಮನನ್ನು ಕುರಿತು ಬಂದಿರುವ ಎರಡು ರೂಪಕಗಳು ಇದಕ್ಕೆ ಪೂರಕವಾಗಿವೆ. ಜೀವವಿಲ್ಲದವನ ಮುಂದೆ ಸಂಜೀವಿನಿ ಬಂದಂತೆ ಎಂಬುದು ಔಷಧಿಸಿದ್ದಿಯ ರೂಪಕವಾದರೆ, ಲೋಹ ಬಿಸಿಯಾಗಿರು ವಾಗಲೇ  ಬಡಿದು ತಕ್ಕ ಶಿಲ್ಪ ಮಾಡುವ ರೂಪಕವು ಲೋಹಸಿದ್ದಿಯ ರೂಪಕವಾಗಿದೆ. ಇವೆರಡೂ ಸಿದ್ದಿಗಳು ಸಿದ್ಧರ ಜಗತ್ತಿನವು. 

ಕೆ.ಜಿ. ನಾಗರಾಜಪ್ಪ ಹಾಗೂ ಶಂಕರ ಮೊಕಾಶಿ ಪುಣೇಕರ ಅವರು ಕೂಡ, ಶರಣರು ಪ್ರತಿಪಾದಿಸುವ ಅನೇಕ ಕ್ರಾಂತಿಕಾರಕ ಪರಿಕಲ್ಪನೆಗಳು, ನಾಥವೇ ಮೊದಲಾದ ತಾಂತ್ರಿಕ ಗುಪ್ತ ಪಂಥಗಳಿಂದ ಬಂದವು ಎಂದು ನಂಬಿ ಚರ್ಚಿಸುತ್ತಾರೆ.

‘ಪಿತೃಹತ್ಯೆ’ಯನ್ನು ಮಾಡಿ ಹೊಸ ಚಳುವಳಿಯನ್ನು ಕಟ್ಟಿದರು. ಬಸವಣ್ಣ ಅಲ್ಲಮ ಸಿದ್ಧರಾಮ ಇವರನ್ನು ಕಥಾನಾಯಕರನ್ನಾಗಿ ಮಾಡಿಕೊಂಡು ಚಾರಿತ್ರ ರಗಳೆ ಪುರಾಣ ಬರೆದ ಮುಂದಿನವರಿಗೆ, ಈ ಸೂಕ್ಷ್ಮಗಳನ್ನು ಹಿಡಿಯುವುದು ಆಗಲಿಲ್ಲ. 

ಬುದ್ಧನಿಂದ ಆರಂಭಿಸಿ ಚಾರ್ವಾಕರು ನಾಥರು ಶರಣರ ತನಕ, ಭಾರತದಲ್ಲಿ ವಿಭಿನ್ನ ಪಂಥ ದರ್ಶನ ಹಾಗೂ ಧರ್ಮಗಳು, ಯಾಕೆ ವೇದಪ್ರಮಾಣ, ವರ್ಣಪದ್ಧತಿ ಹಾಗೂ ಯಾಗಯಜ್ಞಗಳನ್ನು ಇಷ್ಟು ನಿಷ್ಠುರವಾಗಿ ನಿರಾಕರಿಸುವ ಸನ್ನಿವೇಶ ಬಂದಿತು ಎಂಬುದು ಮೂಲಭೂತ ಪ್ರಶ್ನೆಯಾಗಿದೆ. ಬಹುಶಃ ಗೋರಖನು ತನ್ನ ಕಾಲದ ವರ್ಣ ಪದ್ಧತಿಯು ಉಂಟುಮಾಡಿದ್ದ ಅಮಾನುಷತೆಗೆ  ತೀವ್ರವಾದ  ಪ್ರತಿರೋಧ ಒಡ್ಡಲೆಂದೇ ಅವಧೂತರು ಅತ್ಯಾಶ್ರಮಿಗಳು ಎಂದು ವಿಧಿಸಿರಬಹುದು.

Sunday, 26 February 2023

ಅಲ್ಲಮ ಪ್ರಭು ವಚನಗಳು

ಅಂಗದ ಮೇಲಣ ಲಿಂಗವ ಹಿಂಗಿ ಸ್ಥಾವರಲಿಂಗಕ್ಕೆರಗುವ
ಭಂಗಿತರ ಮುಖವ ನೋಡಲಾಗದು.
ಅದೆಂತೆಂದಡೆ;
ತನ್ನ ಗಂಡನ ಬಿಟ್ಟು ಅನ್ಯ ಗಂಡರಿಗೆರಗುವ
ಹಾದರಗಿತ್ತಿಯಂತೆ ಅವಂದಿರ ಭಕ್ತಿ.
ಅಂತಪ್ಪ ಪಂಚಮಹಾಪಾತಕರ
ಮುಖದತ್ತ ತೋರದಿರಾ ಗುಹೇಶ್ವರಾ/15

ಅಂಗದ ಮೇಲೆ ಲಿಂಗವರತು, ಲಿಂಗದ ಮೇಲೆ ಅಂಗವರತು
ಭಾವತುಂಬಿ ಪರಿಣಾಮವರತು,
ನಾಮವಿಲ್ಲದ ದೇವರಿಗೆ ನೇಮವೆಲ್ಲಿಯದೊ ಗುಹೇಶ್ವರಾ./18

ಅಂಗದೊಳಗೆ ಮಹಾಲಿಂಗವಿರಲು,
ಕೈಯ ಲಿಂಗ ಬಿದ್ದಿತ್ತೆಂದು ನೆಲದೊಳಗಂಗವ ಹೂಳಿ
ಭಂಗಪಡುವರಲ್ಲಾ,
ಗುಹೇಶ್ವರಲಿಂಗವನರಿಯದ ಜಡರು./28

ಅಂತರಂಗದೊಳಗಿಲ್ಲ ಬಹಿರಂಗದೊಳಗಿಲ್ಲ
ಮತ್ತಾವ ದೆಶೆ ದಿಕ್ಕಿನೊಳಗೆಯೂ ಇಲ್ಲ.
ಏನಾಯಿತ್ತೆಂದರಿಯೆ ಎಂತಾಯಿತ್ತೆಂದರಿಯೆ
ಅದೆಂತೆಂದರೆ:
“ಅಂತಃ ಶೂನ್ಯಂ ಬಹಿಃಶೂನ್ಯಂ ಶೂನ್ಯಂ ಶೂನ್ಯಂ ದಿಶೌ ದಿಶೌ!
ಸರ್ವಶೂನ್ಯಂ ನಿರಾಲಂಬಂ ನಿದ್ರ್ವಂದ್ವಂ ಪರಮಂ ಪದಂ
ಎಂಬುದಾಗಿ-ಅಲ್ಲಿ ಇಲ್ಲಿ ಎಲ್ಲಿಯೂ ಇಲ್ಲ.
ಗುಹೇಶ್ವರ ಬಯಲು./53

ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ
ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ
ಯೋಗದ ಹೊಲಬ ನೀನೆತ್ತ ಬಲ್ಲೆ?
ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು,
ಮದ ಮತ್ಸರ ಬೇಡ. ಹೊದಕುಳಿಗೊಳಬೇಡ.
ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ./79
ಅಜ್ಞಾನ ಸುಜ್ಞಾನಗಳೆರಡೂ ಶಿವನೆಂದಡೆ
ಶಿವಜ್ಞಾನಿಗಳು ಮೆಚ್ಚುವರೆ ?
ಶಿವ ಶಕ್ತಿಗಳೆರಡೂ ನೀನೇ ಎಂದಡೆ
ಮಹಾನುಭಾವಿಗಳು ಪರಿಣಾಮಿಸುವರೆ ?
ತನ್ನ ತಾನಾರೆಂಬುದನರಿಯದೆ, ಅನ್ಯವೆಲ್ಲವೂ ಬೊಮ್ಮವೆಂಬ,
ಈ ಕರ್ಮದ ನುಡಿಯ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?/85


ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ !
ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ,
ಗುಹೇಶ್ವರನೆಂಬ ಲಿಂಗವ ಕಾಣಬಾರದು/86


ಅಡಿಗಡಿಗೆ ತೊಳೆದು ಕುಡಿವಡೆ ಹೊಟ್ಟೆಯ ಜಲಗರಕುತ್ತ ಬೆಳೆಯಿತ್ತೆ ?
ಅಚ್ಚ ಪ್ರಸಾದಿಯಾದಡೆ ಹಿಂದೆ ಪರಿಯಾಣ ಉಳಿವುದೆ ?
ಇವರೆಲ್ಲರು ನಿಮ್ಮ ಪೂಜಿಸಿ ವ್ರತಗೇಡಿಗಳಾದರು.
ನಾ ನಿಮ್ಮ ಪೂಜಿಸಿ ಬದುಕಿದೆನು ಗುಹೇಶ್ವರಾ !/95



ಅತ್ತಲಿಂದ ಒಂದು ಪಶುವು ಬಂದು,
ಇತ್ತಲಿಂದ ಒಂದು ಪಶುವು ಬಂದು,
ಒಂದರ ಮೋರೆಯನೊಂದು ಮೂಸಿ ನೋಡಿದಂತೆ,
ಗುರುವು ಗುರುವಿನೊಳಗೆ ಸಂಬಂಧವಿಲ್ಲ ಶಿಷ್ಯರು ಶಿಷ್ಯರೊಳಗೆ ಸಂಬಂಧವಿಲ್ಲ,
ಭಕ್ತರಲಿ ಭಕ್ತರಲಿ ಸಂಬಂಧವಿಲ್ಲ.
ಈ ಕಲಿಯುಗದೊಳಗುಪದೇಶವ ಮಾಡುವ ಹಂದಿಗಳಿರಾ ನೀವು ಕೇಳಿರೊ,
ಗಂಡಗೆ ಗುರುವಾದಡೆ ಹೆಂಡತಿಗೆ ಮಾವನೆ ?
ಹೆಂಡತಿಗೆ ಗುರುವಾದಡೆ ಗಂಡಂಗೆ ಮಾವನೆ ?
ಗಂಡ ಹೆಂಡತಿಗೆ ಗುರುವಾದಡೆ ಇವರಿಬ್ಬರೇನು ಒಡಹುಟ್ಟಿದರೆ ?
ಈ ಭೇದವನರಿಯದೆ ದೀಕ್ಷೆ ಕಾರಣವ ಮಾಡುವಾತ ಗುರುವಲ್ಲ.
ಈ ಕಳೆಯ ಕುಲವನರಿಯದಾತ ಶಿಷ್ಯನಲ್ಲ.
ಈ ಭೇದವನರಿದು ಕಾರಣವ ಮಾಡುವ ಗುರುಶಿಷ್ಯ ಸಂಬಂಧವೆಲ್ಲ
ಉರಿ ಕರ್ಪುರ ಸಂಯೋಗದಂತಹುದು ಕಾಣಾ ಗುಹೇಶ್ವರಾ./99


ಅನಾದಿಗಣನಾಥನ ಶಿಷ್ಯನು ಆದಿಗಣನಾಥನು.
ಆದಿಗಣನಾಥನ ಶಿಷ್ಯನು ಅಧ್ಯಾತ್ಮಗಣನಾಥನು.
ಅಧ್ಯಾತ್ಮಗಣನಾಥನ ಶಿಷ್ಯನು ಆತ್ಮಗಣನಾಥನು.
ಆತ್ಮಗಣನಾಥನ ಶಿಷ್ಯನು ವ್ಯೋಮಸಿದ್ಧಗಣನಾಥನು
ವೋಮಸಿದ್ಧಗಣನಾಥನ ಶಿಷ್ಯನು ಬಸವನೆಂಬ ಗಣನಾಥನು.
ಬಸವನೆಂಬ ಗಣನಾಥನ ಶಿಷ್ಯನು ಅನಿಮಿಷನೆಂಬ ಗಣನಾಥನು.
ಅನಿಮಿಷನೆಂಬ ಗಣನಾಥನ ಶಿಷ್ಯನು ಅಲ್ಲಮಪ್ರಭುವೆಂಬ ಗಣನಾಥನು.
ಇಂತು ಅನಾದಿವಿಡಿದು ಬಂದ ಅನುಪಮಲಿಂಗವು,
ಗುಹೇಶ್ವರನೆಂಬ ಹೆಸರನೊಳಕೊಂಡು,
ಎನ್ನ ಕರಸ್ಥಲಕ್ಕೆ ಸಾಧ್ಯವಾಯಿತ್ತು ಕಾಣಾ ಸಿದ್ಧರಾಮಯ್ಯಾ./110

ಅನು ನೀನೆಂಬುದು ತಾನಿಲ್ಲ, ತಾನರಿದ ಬಳಿಕ ಏನೂ ಇಲ್ಲ ಇಲ್ಲ.
ಇಲ್ಲದ ಇಲ್ಲವೆ ಎಲ್ಲಿಂದ ಬಪ್ಪುದೊ?
ಅನುವರಿದು, ತನುವ ಮರೆದ ಭಾವರಹಿತ ಗುಹೇಶ್ವರ./115

ಅನ್ನವನಿಕ್ಕಿ ನನ್ನಿಯ ನುಡಿದು
ಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದಡೆ
ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ
ಶಿವನ ನಿಜವು ಸಾಧ್ಯವಾಗದು.
ಗುಹೇಶ್ವರನನರಿದ ಶರಣಂಗೆ ಆವ ಫಲವೂ ಇಲ್ಲ/121


ಅಭ್ಯಾಸದ ಮಾತಲ್ಲ, ಶ್ರೋತ್ರದ ಸುಖವಲ್ಲ,
ಶಾಸ್ತ್ರದ ಅನುಭಾವದ ಮಾತಲ್ಲ.
ಒಳಗಣ ಮಾತಲ್ಲ ಹೊರಗಣ ಮಾತಲ್ಲ.
ಇದರಂಗ (ತು?) ವನರಿಯರೆ,
ಅನುಭಾವವ ಮಾಡಿ ಫಲವೇನಯ್ಯಾ ?
ಗುಹೇಶ್ವರಲಿಂಗವು ಉಪಮಾತೀತ ನೋಡಯ್ಯಾ ಸಿದ್ಧರಾಮಯ್ಯ !/125

ಅಭ್ಯಾಸವ ಮಾಡುವ ಕೋಲಿಂಗೆ ಶರಣೆಂದಡೆ
ಮುಂದಣ ಬವರಕ್ಕಾಗಬಲ್ಲುದೆ ಅಯ್ಯಾ ?
ಇಷ್ಟಲಿಂಗವೆಂದು ಮುಟ್ಟಿ ಪೂಜಿಸುತ್ತಿದ್ದಡೆ
ಮುಂದಣ ಶಂಕೆಗಿನ್ನೆಂತೊ ?
ಲಿಂಗವೆಂದಡೆ ನಿಸ್ಸಂಗದಲ್ಲಿದೆ,
ಜಂಗಮವೆಂದಡೆ ಆಶ್ರಯದಲ್ಲಿದೆ
ಈ ಲಿಂಗಜಂಗಮವನೊಂದೆಂದಡೆ ಮುಂದಣ ಲಯಕ್ಕಿನ್ನೆಂತೊ ?
ಎಲೆ ಗುಹೇಶ್ವರಾ,
ನಿಮ್ಮ ಶರಣ ಚತುರ್ವಿಧಪದವಿಗಳಿಗೆ ಹೊರಗು./126


ಅಯ್ಯ ! ನಾಟಕನಲ್ಲ ಬೂಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಶೀಲಿಗನಲ್ಲ ಕಪಟನಾಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ರುಂಡಮಾಲಿಗನಲ್ಲ ಗುಂಡುಗಾಸಿಗನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಪುಲಿಚರ್ಮನಲ್ಲ ಗಜಚರ್ಮನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ದಕ್ಷಾಧ್ವರಸಂಹರನಲ್ಲ ತ್ರಿಪುರಾರಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ನಂದಿವಾಹನನಲ್ಲ ಭೃಂಗಿಸ್ತುತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಸರ್ಪಧರನಲ್ಲ ಚಂದ್ರಶೇಖರನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಗಂಗಾಧರನಲ್ಲ ಗೌರಿಪ್ರಿಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಗಿರಿಜಾವಲ್ಲಭನಲ್ಲ ಪಾರ್ವತಿಪ್ರಿಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಯೋಗಿಯಲ್ಲ ಜೋಗಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಶ್ರವಣನಲ್ಲ ಸನ್ಯಾಸಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಕಾಳಾಮುಖಿಯಲ್ಲ ಪಾಶುಪತಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಇಂತು ಉಭಯವಳಿದ ಸಂಗನಬಸವಣ್ಣನ
ಸರ್ವಾಂಗದಿ ಬೆಳಗುವ ಮಹಾಜ್ಯೋತಿ ತಾನೆ ನೋಡ ! ಗುಹೇಶ್ವರಲಿಂಗವು
ಚೆನ್ನಬಸವಣ್ಣ./143



ಅಯ್ಯ ! ನಿರಾಳ ನಿಃಶೂನ್ಯ ಪರಮ ಭಕ್ತ-ಜಂಗಮ ತಾನಾಗಲರಿಯದೆ
ಬರಿದೆ ಅಹಂಕರಿಸಿ ಮುಂದುಗೊಂಡು ಮೂರು ಮಲಗಳ ಸ್ವೀಕರಿಸಿ,
ನಾವೆ ಭಕ್ತ-ಜಂಗಮವೆಂದು ನುಡಿವ ಕರ್ಮಕಾಂಡಿಗಳು
ಕಾಶಿ, ಕೇತಾರ, ಶ್ರೀಶೈಲ, ಗಯಾ, ಪ್ರಯಾಗ, ಶಿವಗಂಗೆ, ಕಂಚಿ,
ಕಾಳಹಸ್ತಿ, ಪಂಪಾಕ್ಷೇತ್ರ,
ವೀರಣ್ಣ, ಬಸವಣ್ಣ, ಕಲ್ಲಣ್ಣ, ಮಲ್ಲಣ್ಣ,
ಕಂಥೆ, ಕಮಂಡಲ, ಗದ್ದಿಗೆ, ಪಾವುಗೆ, ಭಸ್ಮ, ಘಂಟಿಕೆ, ಪುರಾಣ, ದಂಡಾಗ್ರ,
ಗಿಳಿಲು, ಶಂಖು,
ತಿಥಿ, ವಾರ, ನಕ್ಷತ್ರ, ಹುಣ್ಣಿವೆ, ಅಮಾವಾಸ್ಯೆ, ಸೂರ್ಯ, ಚಂದ್ರಾಗ್ನಿ, ದೀಪಾರತಿ
ಗಂಗೆ, ಗೌರಿ, ವಿಘ್ನೇಶ್ವರ ಮೊದಲಾದವು ಇವು ದೈವಂಗಳೆಂದು
ಕಲ್ಲು, ಮಣ್ಣು, ಮರದಿಂದ ರಚಿಸಿ, ಸಂದಿ-ಗೊಂದಿ-ಮಾಡು-
ಜಗುಲಿಯ ಮಾಡಿಟ್ಟು,
ಅದರ ತೊಳೆದ ನೀರು, ಎಂಜಲವ ತಿಂಬವರ ದೇವ-ಭಕ್ತರೆನಬಹುದೆ ?
ಇಂತಪ್ಪ ಅನಾಚಾರಿ ಶ್ವಪಚರ, ಭಕ್ತ-ಜಂಗಮ-ದೇವರೆಂದು ಪೂಜಿಸಲಾಗದು.
ನಿರಾಭಾರಿ ವೀರಶೈವಾಚಾರ ಕ್ರಿಯಾಜ್ಞಾನ ವೈರಾಗ್ಯ ಸದ್ಭಕ್ತಿಯುಳ್ಳ
ಸದ್ಭಕ್ತ ಶಿವಶರಣನ ಪೂಜಿಸಿ ಪಾದೋದಕ-ಪ್ರಸಾದವ ಕೊಂಡಡೆ
ಭವಪಾಶಕರ್ಮಂಗಳು ಮಾಣ್ಬವು ಕಾಣಾ ಗುಹೇಶ್ವರಲಿಂಗದಲ್ಲಿ
ಚೆನ್ನಬಸವಣ್ಣ./148


ಅರಿವು ಅರಿವು ಎನುತಿಪ್ಪಿರಿ, ಅರಿವು ಸಾಮಾನ್ಯವೆ ?
ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ
ನಿಂದ ಹೆಜ್ಜೆಯನರಿಯಬಾರದು.
ಮುಂದಣ ಹೆಜ್ಜೆಯಳಿದಲ್ಲದೆ, ಒಂದು ಪಾದ ನೆಲೆಗೊಳ್ಳದು.
ನೆಲನ ಬಿಟ್ಟು ಆಕಾಶದಲ್ಲಿ ನಿಂದು ಮುಗಿಲೊಳಗೆ ಮಿಂಚಿದಲ್ಲದೆ
ತಾನಾಗಬಾರದು.-ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ ?/220

ಅಳಿವರ ಉಳಿವರ ಸುಳಿವರ ನಿಲವ ನೋಡಿ ಕಂಡು
ಸೋಂಕಿಲ್ಲದ ರೂಪಿಲ್ಲದ ನಿಜವ ಬಯಸುತ್ತಿದ್ದೆ,
ಕಾಲಿಲ್ಲದೆ ನಡೆಯುತ್ತಿದ್ದೆ, ಕಣ್ಣಿಲ್ಲದೆ ನೋಡುತ್ತಿದ್ದೆ ಗುಹೇಶ್ವರಾ./248



   
                ಅಂತಪ್ಪ ಮಹಾಲಿಂಗವನು ಶರಣರನು ಅರಿಯದೆ
ಷಡುದೇವತೆಗಳು ಮುಖ್ಯವಾದ ಮನು ಮುನಿ ದೇವ ದಾನವ
ಮಾನವರೆಲ್ಲರೂ ಆರಿಸಿ ತೊಳಲಿ ಬಳಲುತ್ತಿಪ್ಪರು.
ಅದು ಹೇಗೆಂದಡೆ:
ಬ್ರಹ್ಮವೇದದಲ್ಲರಸುವನು.
ವಿಷ್ಣು ಪೂಜೆಯಲ್ಲರಸುವನು.
ರುದ್ರ ಜಪದಲ್ಲರಸುವನು.
ಈಶ್ವರ ನಿತ್ಯನೇಮದಲ್ಲರಸುವನು.
ಸದಾಶಿವನು ನಿತ್ಯ ಉಪಚಾರದಲ್ಲರಸುವನು.
ಸರ್ವಗತ ಶೂನ್ಯದಲ್ಲರಸುವನು.
ಗೌರಿ ತಪದಲ್ಲರಸುವಳು, ಗಂಗೆ ಉಗ್ರದಲ್ಲರಸುವಳು.
ಚಂದ್ರ ಸೂರ್ಯರು ಹರಿದರಸುವರು.
ಇಂದ್ರ ಮೊದಲಾದಷ್ಟದಿಕ್ಪಾಲಕರು ಆಗಮ್ಯದಲ್ಲರಸುವರು
ಸಪ್ತ ಮಾತೃಕೆಯರು `ಓಂ ಪಟು ಸ್ವಾಹಾ’ ಎಂಬ ಮಂತ್ರದಲ್ಲರಸುವರು.
ಸತ್ಯಋಷಿ ದದಿಚಿ ಗೌತಮ ವಶಿಷ್ಠ ವಾಲ್ಮೀಕಿ ಅಗಸ್ತ್ಯ ವಿಶ್ವಾಮಿತ್ರ
ಇವರು ಮೊದಲಾದ ಸಪ್ತಋಷಿಯರುಗಳೆಲ್ಲಾ
ತಪ, ಯೋಗ, ಆಗಮಂಗಳಲ್ಲಿ ಅರಸುವರು.
ಇಂತಿವರೆಲ್ಲರಿಗೆಯೂ ಸಿಕ್ಕಿಯೂ ಸಿಕ್ಕದ ಘನವು
ಶುಕ್ಲ ಶೋಣಿತವಿಲ್ಲದ ಕಾಮಿ, ಒಡಲಿಲ್ಲದ ರೂಪು,
ತಲೆಯಿಲ್ಲದ ಗಜ, ಬಾಲವಿಲ್ಲದ ಸಿಂಹ, ನಿದ್ರೆಯಿಲ್ಲದ ನಿರಾಳ.
ಇಂತೀ ಭೇದಮಂ ಭೇದಿಸಿ ನೋಡಬಲ್ಲಡೆ ಕಣ್ಣ ಮೇಲೆ ಕಣ್ಣುಂಟು.
ಮತ್ತಾ ಕಣ್ಣ ತೆರೆದು
ಅಮೃತಕಾಯದೃಷ್ಟಿಯಲ್ಲಿ ನೋಡಿದಡೊಂದೂಯಿಲ್ಲ.
ನಮ್ಮ ಗುಹೇಶ್ವರ ಲಿಂಗವು ಬಚ್ಚಬರಿಯ ಬಯಲು
ನಿಶ್ಚಿಂತ ನಿರಾಳನು/289

ಮರ್ತ್ಯಲೋಕದ ಭಕ್ತರುಗಳೆಲ್ಲರು, ತಥ್ಯವನರಿಯದೆ,
ಮಿಥ್ಯವನೆ ಹಿಡಿದು ಮಿಥ್ಯವನೆ ಪೂಜಿಸಿ ವ್ಯರ್ಥರಾಗಿ ಹೋದರು,
ತಮ್ಮ ತಾವರಿಯದೆ ಕೆಟ್ಟರು.

ಆರು ದರುಶನ ಅನಾಚಾರವ ನಡೆದವು,
ಸುರೆಯ ಕುಡಿದವು, ಮಾಂಸವ ತಿಂದವು.
ಆರು ದರುಶನಕ್ಕೆ ಅನಾಚಾರವಾದುದೆಂದು
ನಾನು ಗುರುವಾದೆ ಕಾಣಾ ಗುಹೇಶ್ವರಾ./342


ಗುರುಲಿಂಗ ವಿಷ್ಣುವಿಂಗೆ ಸಂಬಂಧ,
ಶಿವಲಿಂಗ ರುದ್ರಂಗೆ ಸಂಬಂಧ,
ಜಂಗಮಲಿಂಗ ಈಶ್ವರಂಗೆ ಸಂಬಂಧ,
ಪ್ರಸಾದಲಿಂಗ ಸದಾಶಿವಂಗೆ ಸಂಬಂಧ,
ಮಹಾಲಿಂಗ ಪರಶಿವಂಗೆ ಸಂಬಂಧ,
ಇಂತಾರುಲಿಂಗ ಆರುದರುಶನಕ್ಕೆ ಸಂಬಂಧ.
ನಿಮ್ಮ ಸಂಬಂಧವ ನೀವು ಬಲ್ಲಿರೆ ಹೇಳಿರೊ !/344


ಆರುಸ್ಥಲದಲ್ಲಿ ಅರಿತಿಹೆನೆಂದು
ಸಹಭೋಜನದಲ್ಲಿ ಉಂಬ ಅಣ್ಣಗಳು ನೀವು ಕೇಳಿರೊ !
ಅಂಗದ ಮೇಲೆ ಲಿಂಗಸಂಬಂದಿಯಾದಡೇನಯ್ಯ,
ಆ ಲಿಂಗವ ತನ್ನ ಪ್ರಾಣಕ್ಕೆ ಅವಧರಿಸದನ್ನಕ್ಕ !
ಆ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರ
ಬಾಹ್ಯಕ್ರೀಯ ಮಾಡಿದಡೇನಯ್ಯ ನೈಷ್ಠೆಇಲ್ಲದನ್ನಕ್ಕ
ಅಷ್ಟಮದಂಗಳ ನಷ್ಟವಮಾಡಿ ಪಂಚೇಂದ್ರಿಯಂಗಳ ಲಿಂಗಮುಖವ ಮಾಡಿ
ದೇಹೇಂದ್ರಿಯ ಮನ ಪ್ರಾಣಾದಿಗಳ ಪ್ರಕೃತಿಯನಳಿದು !
ಇಷ್ಟ ಪ್ರಾಣ ಭಾವವೆಂಬ ತ್ರಿವಿಧ ಲಿಂಗಕ್ಕೆ
ರೂಪು ರುಚಿ ತೃಪ್ತಿಯನೀವ ವರ್ಮಾದಿವರ್ಮಂಗಳ ಭೇದವನರಿಯದೆ !
ಕರಸ್ಥಲದಲ್ಲಿ ಲಿಂಗವಿಡಿದು ಸಹಭೋಜನವೆಂದು ಒಂದಾಗಿ ಉಂಡು
ತಮ್ಮ ಒಡಲ ಹೊರೆವ ಲಿಂಗದ್ರೋಹಿಗಳ ನೋಡಿ ನಗುತ್ತಿರ್ದೆನಯ್ಯಾ
ಗುಹೇಶ್ವರಾ./345



ಇಂದು ನಾಳೆ ಮುಕ್ತಿಯ ಪಡೆವೆನೆಂಬ ಶಿಷ್ಯಂಗೆ
ಮುಂದಳ ಮುಕ್ತಿಯ ತೋರಿಹೆನೆಂಬ ಗುರುಗಳ ನೋಡಿರೆ !
ಹೋಮ, ನೇಮ, ಜಪ, ತಪಗಳ ಮಾಡಿ ತಾನುಂಡು
ಫಲವುಂಟೆಂದ ಗುರು ಹುಸಿದು ಸತ್ತ, ಶಿಷ್ಯ ಹಸಿದು ಸತ್ತ.
ಹಿಂದಣ ಕಥೆಯ ಹೇಳುವಾತ ಹೆಡ್ಡ, ಮುಂದಣ ಕಥೆಯ ಹೇಳುವಾತ ಮೂಢ,
ಇಂದಿನ ಘನವ ಹೇಳುವಾತನೆ ಹಿರಿಯನಯ್ಯಾ.
ತಾ ಹುಟ್ಟಿದಂದೆ ಯುಗಜುಗಂಗಳು ಹುಟ್ಟಿದವು, ತಾನಳಿದಲ್ಲೆ ಯುಗಜುಗಂಗಳಳಿದವು.


ಮಣ್ಣಿನ ಸಾರಾಯದಿಂದ ಮರನುತ್ಪತ್ಯ.
ಮರದ ಸಾರಾಯದಿಂದ ಎಲೆಯುತ್ಪತ್ಯ
ಎಲೆಯ ಸಾರಾಯದಿಂದ ಹೂವ ಉತ್ಪತ್ಯ
ಹೂವ ಸಾರಾಯದಿಂದ ಕಾಯಿ ಉತ್ಪತ್ಯ
ಕಾಯ ಸಾರಾಯದಿಂದ ಹಣ್ಣು ಉತ್ಪತ್ಯ
ಹಣ್ಣಿನ ಸಾರಾಯದಿಂದ ರುಚಿ ಉತ್ಪತ್ಯ
ರುಚಿಯಿಂದತ್ತ ಇಲ್ಲವೆಂಬ ತತ್ವ.
ಮಣ್ಣು ಮರನು ಅಳಿದ ಬಳಿಕ ಬೇರೆ ರುಚಿಯಿಪ್ಪಠಾವುಂಟೆ ?
ದೇಹವಳಿದ ಬಳಿಕ ಪ್ರಾಣವಿಪ್ಪುದಕ್ಕೆ ಠಾವುಂಟೆ ? ಇಲ್ಲವಾಗಿ;
ಇದು ಕಾರಣ, ಗುಹೇಶ್ವರನೆಂಬ ಲಿಂಗವ ಒಡಲು ವಿಡಿದು ಕಂಡೆ ಕಾಣಾ.
ಸಿದ್ಧರಾಮಯ್ಯ./361
ಇಷ್ಟಲಿಂಗವ ಪೂಜಿಸಿದರಾಗಿ ನಿಷ್ಠೆ ನೆಲೆಗೊಳ್ಳದು.
ಬಹುಲಿಂಗವ ಪೂಜಿಸಿ ಭ್ರಮಿತರಾದರು.
ಅನ್ಯಲಿಂಗವ ಪೂಜಿಸಿ ಬಿನ್ನರಾದರು.
ಸ್ಥಾವರ ಲಿಂಗವ ಪೂಜಿಸಿ ಸಾವಿಗೊಳಗಾದರು
ಬಳ್ಳ ಲಿಂಗವೆಂದು ಪೂಜಿಸಿ ಏನುವನರಿಯದೆ ಹೋದರು.
ಗುಹೇಶ್ವರನೆಂಬ ಲಿಂಗವ ಪೂಜಿಸಿ
ನಿಮ್ಮ ಶರಣರು ಅಲ್ಲಿಗಲ್ಲದೆ ಇಲ್ಲಿಗಲ್ಲದೆ ಹೋದರು ನೋಡಾ./394

ಊರದ ಚೇಳಿನ ಏರದ ಬೇನೆಯಲ್ಲಿ, ಮೂರುಲೋಕವೆಲ್ಲಾ ನರಳಿತ್ತು !
ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟದೆ ಹೂಸಲು;
ಮಾಬುದು-ಗುಹೇಶ್ವರಾ/443


ಎಸೆಯದಿರು ಎಸೆಯದಿರು ಕಾಮಾ,
ನಿನ್ನ ಬಾಣ ಹುಸಿಯಲೇಕೊ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ-ಇವು ಸಾಲದೆ ನಿನಗೆ ?
ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ,
ಮರಳಿ ಸುಡಲುಂಟೆ ಮರುಳು ಕಾಮಾ ?/488

ಏನ ಕಂಡಡೇನಯ್ಯಾ, ತನ್ನ ಕಾಣದಾತ ಕುರುಡ.
ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ.
ಏನ ಮಾತಾಡಿದಡೇನಯ್ಯಾ ತನ್ನ ಮಾತಾಡದಾತ ಮೂಕ.
ದಿಟದಿಂತ ತನ್ನ ತಾ ಕಾಣಬೇಕು, ದಿಟದಿಂದ ತನ್ನ ತಾ ಕೇಳಬೇಕು,
ದಿಟದಿಂದ ತನ್ನ ತಾ ಮಾತಾಡಬೇಕು.
ಇದೆ ತನ್ನ ನೆಲೆ, ಸ್ವಭೂಮಿ, ಸ್ವಸ್ವರೂಪು ಕಾಣಾ-ಗುಹೇಶ್ವರಾ/490

ಕಂಗಳ ಕರುಳ ಕೊಯ್ದವರ, ಮನದ ತಿರುಳ ಹುರಿದವರ,
ಮಾತಿನ ಮೊದಲ ಬಲ್ಲವರ; ಎನಗೊಮ್ಮೆ ತೋರಾ ಗುಹೇಶ್ವರಾ/548

ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ,
ನೇತ್ರವೆ ಸೂತ್ರ, ಸೂತ್ರವೆ ಲಿಂಗ, ಲಿಂಗವೆ ಗುಹ್ಯ.
ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ.
ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆ
ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ./574


ಕಣ್ಣಿನೊಳಗಣ ಕಸ, ಕಾಲೊಳಗಣ ಮುಳ್ಳು,
ಮನದೊಳಗಣ ಶಂಕೆ ಹರಿಯಿತ್ತು,
ಗುಹೇಶ್ವರನೆಂಬ ಭಾವ ನಿರಾಳವಾದಲ್ಲಿ !/575


ಕಬ್ಬಿನ ರಸದೊಳಗಣ ಮುತ್ತನೊಡೆದು ನೋಡಲು
ಹುಬ್ಬಿನ ಮೇಲಣ ನೀಲದ ಪ್ರಭೆಯ ನೋಡಾ !
ವಜ್ರದ ಚಂಡಿಕೆ (ಚಂದ್ರಿಕೆ?)ಯಲ್ಲಿ ಕಟ್ಟಿ ಆಳುವರು !
ಉಭಯ ಕವಿಗಳಿಗೆ ಅರಿಯಬಾರದು.
ಗುಹೇಶ್ವರನ ಸ್ವಾನುಭಾವಿಗಳಿಗಲ್ಲದೆ ತಿಳಿಯಬಾರದು. /583

ಕಾಯದಲ್ಲಿ ಕಾಯ ಸವೆದು,
ಪ್ರಾಣದಲ್ಲಿ ಪ್ರಾಣ ಸವೆದು-ನಿಶ್ಚಿಂತವಾದ ಬಳಿಕ
ಹಸಿವು-ತೃಷೆಗಳೆಂಬವು ಅಳಿದು ಹೋದವು ನೋಡಾ.
ಉಂಡಿಹೆನೆಂಬ ಬಯಕೆಯಿಲ್ಲ ಒಲ್ಲೆನೆಂಬ ವೈರಾಗ್ಯವಿಲ್ಲ.
ಇದು ಸ್ವಾನುಭಾವತೃಪ್ತಿಯೊಳಡಗಿತ್ತು.
ಇದು ಕಾರಣ-ನಮ್ಮ ಗುಹೇಶ್ವರಲಿಂಗಕ್ಕೆ
ಆರೋಗಣೆ ಇಲ್ಲ ಕಾಣಾ ಸಂಗನಬಸವಣ್ಣಾ./659




ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...