Sunday, 4 June 2023

ಈ ನೆನಪುಗಳೇ ಹೀಗೆ...ನಾ..?

ಈ ನೆನಪುಗಳೇ ಹೀಗೆ...ನಾ..?

ಕೊರಳಾಗುತ್ತವೆ ಕೊಂಕಾಗುತ್ತವೆ ಕೊರಗುತ್ತವೆ
ಕನಿಕರಿಸುತ್ತವೆ ಕುದಿಯುತ್ತವೆ ಕೆರಳಿಸುತ್ತವೆ ಕೊಲೆಗೈಯುತ್ತವೇ

ಅರಳುತ್ತವೆ ಅಳಿಸುತ್ತವೆ ಅವಸಾನ ಹೊಂದುತ್ತವೆ

ನಂಬಿಸುತ್ತವೆ ನರ್ತಿಸುತ್ತವೆ ನವಿರೇಳಿಸುತ್ತವೆ

ವರ್ಣಿಸುತ್ತವೆ ವರ್ತಿಸುತ್ತವೆ ವಂಚಿಸುತ್ತವೆ

ಕವನವಾಗುತ್ತವೆ ಕಥೆಯಾಗುತ್ತವೆ ವ್ಯಥೆಯಾಗುತ್ತವೆ

ಹಾಡುತ್ತವೆ ಆಡುತ್ತವೆ ನಟಿಸುತ್ತವೆ ನಲಿಯುತ್ತವೆ

ಕುಣಿಯುತ್ತವೆ, ಕುಡಿಸುತ್ತವೆ ಕುದಿಸುತ್ತವೆ

ಕಲಿಸುತ್ತವೆ ಕನವರಿಸುತ್ತವೆ ಕತ್ತಲಾಗುತ್ತವೆ ಕಣ್ಣಂಚಲಿ ನೀರೋರೆಸುತ್ತವೆ ಕಲ್ಲಾಗುತ್ತವೆ 

ಮರಳುತ್ತವೆ ನರಳುತ್ತವೆ ಉರುಳುತ್ತವೆ

ಬಣ್ಣಿಸುತ್ತವೆ ಬದುಕಿಸುತ್ತವೆ ಬರೆಸುತ್ತವೆ ಬಸವಳಿಯುತ್ತವೆ 

ಚಿರುತ್ತವೆ ಚಿಮ್ಮುತ್ತವೆ ಚುಮ್ಮಿಸುತ್ತವೆ 
ಚಿಗುರುತ್ತವೆ ಚಡಪಡಿಸುತ್ತವೆ ಚಲಿಸುತ್ತವೆ

ಅಣಕಿಸುತ್ತವೆ ಅಲುಗಾಡಿಸುತ್ತವೆ ಅಂಗಾತ ಬಿದ್ದು ಒದ್ದಾಡುತ್ತವೆ

ಗಡಿಯಾರವಾಗುತ್ತವೆ ಗಂಟೆಯಾಗುತ್ತವೆ ಗರ್ಜಿಸುತ್ತವೆ

ಲಾಲಿಸುತ್ತವೆ ಲೇಖನಿಯಾಗುತ್ತವೆ ಲಗಾಮು ಹಾಕುತ್ತವೆ ಲಂಕೆಯಾಗುತ್ತವೆ 

ಬಿಗಿದಪ್ಪಿಕೊಳ್ಳುತ್ತವೆ ಬಿಸಾಡುತ್ತವೆ ಬಿರುನುಡಿಯುತ್ತವೆ
ಬಿಕ್ಕಳಿಸುತ್ತವೆ ಬಿರುಗಾಳಿಯಾಗುತ್ತವೆ ಭಿಕಾರಿಯಾಗುತ್ತವೆ 

ಗಿಡವಾಗುತ್ತವೆ ಗಿರಿಯಾಗುತ್ತವೆ ಗಿಳಿಯಾಗುತ್ತವೆ ಗಿಡುಗವಾಗುತ್ತವೆ ಗೀಳಿsಡುತ್ತವೆ

ಮೋಡವಾಗುತ್ತವೆ ಮಳೆತರಿಸುತ್ತವೆ ಮಿಂಚಂತೆ ಮಾಯವಾಗಿಬಿಡುತ್ತವೆ

ದಮನಗೊಳಿಸುತ್ತವೆ ದಯೆತೋರಿಸುತ್ತವೆ ದನಿಯಾಗುತ್ತವೆ ದಮ್ಮ ಬೋಧಿಸುತ್ತವೆ 

ಬೆತ್ತಲಾಗುತ್ತವೆ ಬರಿದಾಗುತ್ತವೆ ಬಯಲಾಗುತ್ತವೆ.

No comments:

Post a Comment

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...