Thursday, 27 December 2018

ನಾವೆಲ್ಲ ಭಾರತೀಯರು

ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ
ನಾವೆಲ್ಲ ಮನುಜರೊಂದೆ ಎಂಬ ಭಾವ ಮೂಡಲಿ
ನಮ್ಮಲ್ಲಿ ಭೇದಭಾವ ಪ್ರಭು ದೂರವಾಗಲಿ.//2//

ಒಂದು ತೋಟದಲ್ಲಿ ಹಲವು ಬಣ್ಣ ಬಣ್ಣದ ಹೂವುಗಳು
ಅದರಂತೆ ನಮ್ಮ ದೇಶದಲ್ಲಿ ಹಲವು ಮತಗಳು
ಆ ಹೂಗಳಂತೆ ಮತಗಳು ಮಕರಂದ ಬೀರಲಿ
ಆ ಹೂಗಳಂತೆ ಮತಗಳು ಸದ್ಭಾವ ಬೀರಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ.

ನಾವು ಮನೆಯ ಕಟ್ಟುವಾಗ ಭೂಮಿ ಜಾತಿ ಕೇಳಿತೆ
ನಾವು ಶ್ವಾಸ ಎಳೆಯುವಾಗ ಗಾಳಿ ಕುಲವ ಕೇಳಿತೆ //2//
ಈ ಸೃಷ್ಟಿಯಲ್ಲಿ ಸರ್ವರೂ ಸಮನಾಗಿ ಬಾಳಲಿ
ನಮ್ಮಲ್ಲಿ ಭೇದಭಾವ ಪ್ರಭು ದೂರವಾಗಲಿ.

ಮಣ್ಣಿನಿಂದಾದ ಆದ ಮಡಕೆ ಮಣ್ಣಿಗನ್ಯವೇ
ಚಿನ್ನದಿಂದ ಆದ ಒಡವೆ ಚಿನ್ನಗನ್ಯವೇ//2//
ನಿನ್ನಿಂದ ಆದ ಜೀವರು ನಿನ್ನಂತೆ ಕಾಣಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ.

ದಯವೇ ಧರ್ಮವೆಂದು ಸಾರಿದಂತ ನಾಡಿದು
ಜಗಕ್ಕೆ ಶಾಂತಿ ಪಾಠ ಹೇಳಿದಂತ ನಾಡಿದು//2//
ಈ ನಾಡಿನಲ್ಲಿ ಶಾಂತಿಯು ಸ್ಥಿರವಾಗಿ ನೆಲಸಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ.

ಆ ಸೂರ್ಯನಂತೆ ಸಂತರು ಜಗ ಬೆಳಗಿ ಹೋದರು
ಆ ವರುಣನಂತೆ ಜ್ಞಾನವನ್ನು ಸುರಿದು ಹೋದರು
ಗುರುಬಸವ ನಿಮ್ಮ ಬೋಧೆ ಮನದಲ್ಲಿ ನಿಲ್ಲಲಿ
ಗುರುಬಸವ ನಿಮ್ಮ ಬೋಧೆ ಜನರಲ್ಲಿ ನಿಲ್ಲಲಿ
ನಮ್ಮಲ್ಲಿ ಬೇಧಭಾವ ಪ್ರಭು ದೂರವಾಗಲಿ.

ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ
ನಾವೆಲ್ಲ ಒಂದೇ ಎಂಬ ಭಾವ ಮೂಡಲಿ
ನಮ್ಮಲ್ಲಿ ಭೇದಭಾವ ಪ್ರಭು ದೂರವಾಗಲಿ.//2//

ಹುಚ್ಚುತನವೇ ಅನುಗ್ರಹ

ಹುಚ್ಚುತನವೇ ಅನುಗ್ರಹ -- ~ನೀಷೆ~

ನಗುವುದು ಎಂದರೆ ಕಲ್ಮಶವಿಲ್ಲದೆ ಮತ್ಸರಪಡುವುದು.

ಒಬ್ಬನನ್ನು ಪ್ರೀತಿಸುವುದು ನಿಜಕ್ಕೂ ಮೃಗ ಪ್ರವೃತ್ತಿ ಏಕೆಂದರೆ ಆಗ ಉಳಿದವರು ಎಲ್ಲರಿಗೂ ವಂಚನೆ ಮಾಡಿದ ಹಾಗಾಗುತ್ತದೆ ದೈವ ಪ್ರೀತಿಯೂ ಕೂಡ.

ಭಾವ ಸ್ಥಿತಿಯ ಗಹನತೆಯಲ್ಲ, ಅದರ ಕಾಲವಧಿ ವ್ಯಕ್ತಿಯನ್ನು ಉನ್ನತವಾಗಿಸುವುದು.

ಹೆಣ್ಣು ತನ್ನ ಚೆಲುವನ್ನು ನಾಶವಾಗುವ ಮಟ್ಟಿಕ್ಕೆ ದ್ವೇಷಿಸುತವುದನ್ನು ಕಲಿತಿರುತ್ತಾಳೆ.

ನನಗೆ ಪ್ರೇಮ ಸಿಗುತ್ತಿದೆ ಆದರೆ ತಾನು ಪ್ರೇಮವನ್ನು ನೀಡುತ್ತಿಲ್ಲ ಎಂಬುದು ಅರಿವಾದ ಮರುಗಳಿಗೆ ನಿಂತ ನೆಲ ಕುಸಿಯುತ್ತದೆ. ಆಳದಲ್ಲಿ ಇರುವುದೆಲ್ಲ ಮೇಲೇಳುತ್ತದೆ.

ಒಮ್ಮೆ ನಿರ್ಧರಿಸಿ ಆಯಿತು ಇನ್ನೂ ಯಾವ ಪ್ರತಿವಾದವನ್ನು ಕೇಳದಂತೆ ಕಿವಿ ಮುಚ್ಚಿ ಕೊಳ್ಳಬೇಕು ಇದೇ ದೃಢ ಸ್ವಭಾವದ ಲಕ್ಷಣ. ಇದು ಆಗಾಗ ಮೂರ್ಖತನಕ್ಕಾಗಿ ಮಾಡುವ ಸಾಂದರ್ಭಿಕ ಸಂಕಲ್ಪವು
ಹೌದು.

ಕಾಮಸುಖದ ವಿಪರೀತ ಬಯಕೆ ಹಾಗೂ ಆ ಬಯಕೆಯನ್ನು ಹುದುಗಿಸುವ ಎಲ್ಲಾ ಬಗೆಯ ಪ್ರಯತ್ನ --ಇವು ಹೆಣ್ಣಿನ ಸಮಸ್ತ ಭವಿಷ್ಯವನ್ನೇ ನಾಶ ಮಾಡುತ್ತಿವೆ.

ತನ್ನ ಆಲೋಚನೆಗಳಿಗೆ ಸೂಲಗಿತ್ತಿಯನ್ನು ಬಯಸುವವನು ಒಬ್ಬ. ತಾನು ಯಾರ ನೆರವಿಗಾದರೂ ಆಗಬಲ್ಲೇ ಎಂದು ಚಡಪಡಿಸುವವನು ಮತ್ತೊಬ್ಬ. ಒಳ್ಳೆಯ ಸಂವಾದದ ಮೂಲ.

ಸೇಡಿನಲ್ಲಿ ಹಾಗೂ ಪ್ರೀತಿಯಲ್ಲಿ ಹೆಣ್ಣು ಗಂಡಿಗಿಂತ ಹೆಚ್ಚು ಅನಾಗರಿಕಳು.

ಹೆಣ್ಣು ಪ್ರೇಮಿಸಲು ತೊಡಗಿದಾಗ ಗಂಡು ತಲ್ಲಣಿಸುತ್ತಾನೆ.ಏಕೆಂದರೆ ಪ್ರೇಮಿಸುವ ಸಂದರ್ಭದಲ್ಲಿ ಹೆಣ್ಣು ಯಾವ ವಸ್ತುವಿನ ಮೌಲ್ಯವನ್ನು ಲೆಕ್ಕಿಸದೆ ಎಲ್ಲವನ್ನೂ ತ್ಯಾಗ ಮಾಡಲೂ ಸಿದ್ಧಳಾಗಿರುತ್ತಾಳೆ.

ದೊಡ್ಡದೊಂದು ಅನ್ಯಾಯ ನಿಮ್ಮ ಮೇಲೆರಗಿದಾಗ ಮರುಗಳಿಗೆಯೇ ನೀವು ಹತ್ತಾರು ಸಣ್ಣಪುಟ್ಟ ಅನ್ಯಾಯಗಳನ್ನು ಎಸಗಿಬಿಡಿ, ಅನ್ಯಾಯವನ್ನು ಹೊತ್ತು ನಿಂತ ವ್ಯಕ್ತಿ ಏಕಾಂಗಿಯಾಗಿ ಸಹಿಸಲಾಗದ ಯಾತನೆ ಅನುಭವಿಸುತ್ತಾನೆ.

ನಮ್ಮ ಗರ್ವ ಗಾಯಗೊಂಡಾಗಲೂ ನಮ್ಮ ತೋರಿಕೆ ಮಾತ್ರ ಗಾಯಗೊಳ್ಳಲಾರದಷ್ಟು ಗಟ್ಟಿಯಾಗಿರುತ್ತದೆ.

ತನ್ನ ಬಗ್ಗೆ ಅತಿಯಾಗಿ ಹೇಳಿಕೊಳ್ಳುವುದು ನಿಜವಾಗಿಯೂ ತನ್ನನ್ನು ಮರೆಮಾಚಿಕೊಳ್ಳಲು ಇನ್ನೊಂದು ವಿಧಾನ.

Saturday, 8 December 2018

ಮರದ ನೆರಳಲಿ ಮನೆಯ ಮಾಡಿ ಮನದ ಮರೆಯಲಿ ಕನಸ ಹೂಡಿ ದಣಿದುಂಡ್ ಮಲಗಿದವನ ಮನೆಯೇ ನಿಜ ಸುಖದ ಗುಡ.

ಏಕಾಂಗಿಯಾಗಿ ಹೊರಡು

ಏಕಾಂಗಿಯಾಗಿ ಹೊರಡು, ಯಾರಾದರು ಸಿಕ್ಕಾರು | ಏನನ್ನು ಬಯಸದೇ ಹೊರಡು, ಬೇಕಾದುದು ಸಿಕ್ಕೀತು |
ದಾರಿ ತೊರೆದು ನಡೆ, ಬಯಲು ದಕ್ಕೀತು |
ಗುರಿಯಿಲ್ಲದೆ ಹೊರಡು, ಅರಿವಿನ ಗುರುವು ಸಿಕ್ಕಾನು || ಪ ||

ನದಿಯ ಜಾಡು ಹಿಡಿ, ಕಡಲಾಗಬಹುದು |
ಧರ್ಮದ ನೆರಳ ತೊರೆ, ಮಹಾಮನೆ ಕಂಡೀತು |
ಸಾವನ್ನು ಹುಡುಕಿ ನಡೆ, ಬದುಕು ಸಿಕ್ಕೀತು |
ನಿನ್ನ ವಿರುದ್ಧ ನೀನು ಹೋರಾಡು, ಗೆದ್ದರೆ ಸಂತನಾಗುವೆ ನೀ || ೧ ||

ಸರಳ ರೇಖೆಯಾಗಿರು, ಬಾಳು ಹಗುರ ಆದೀತು | ಸತ್ಯವ ಹುಡುಕದಿರು, ಕಂಡದ್ದು ಸುಳ್ಳಾದೀತು | ಏಕತಾರಿಯ ಹಿಡಿ, ನಾದ ಲಯವೂ ಆದೀತು | ಚಲನೆಗೆ ಸಾಕ್ಷಿಯಾಗು, ಶೂನ್ಯ ತಬ್ಬಿಕೊಂಡೀತು || ೨ ||

ಎದೆಯ ದನಿಯ ನುಡಿ, ಹಾಡು ಬೆಡಗು ಆದೀತು | ಖಾಲಿಯಾಗಿ ಹೊರಡು, ಜೋಳಿಗೆ ತುಂಬೀತು | ತೆರೆದ ತೋಳಲ್ಲಿ ನಡೆ, ಬೊಗಸೆ ಪ್ರೀತಿ ದಕ್ಕೀತು | ಎಲ್ಲವನೂ ಕಳಚಿಟ್ಟು ಹೊರಡು, ಉಡಲು ಬೆಳಕೇ ಸಿಕ್ಕೀತು || ೩ ||

ಯಾರೂ ಒಂಟಿಯಲ್ಲ, ನೆರಳು ಹಿಂಬಾಲಿಸೆ || ನಡೆದಷ್ಟೂ ಹಾದಿ ಕಂಡಷ್ಟು ಬಯಲು  || ಹೊರಡು ಈಗಲೇ ಹೊರಡು || ಗುಂಡಾದ ಭೂಮಿಯಲ್ಲಿ ಎಂದಾದರು ಸಿಕ್ಕೇಸಿಗುತ್ತೇವೆ || ಮತ್ತೇ ಮತ್ತೇ ಸಿಕ್ಕೇ ಸಿಗುತ್ತೇವೆ || ೪ ||

- ಹಂದಲಗೆರೆ ಗಿರೀಶ್

Saturday, 15 September 2018

ಮಂಕುತಿಮ್ಮನ ಕಗ್ಗ

ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು |
ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ ||
ಗೋಳ್ಕರೆದರೇನು ಫಲ ಗುದ್ದಾಡಲೇನು ಫಲ |
ಪಲ್ಕಿರಿದು ತಾಳಿಕೊಳೊ - ಮಂಕುತಿಮ್ಮ ||

ಬದುಕೊಂದು ಕದನವೆಂದಂಜಿ ಬಿಟ್ಟೋಡುವನು ।ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ।।
ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು ನೀ- ।
ನೆದುರು ನಿಲೆ ಬಿದಿಯೊಲಿವ – ಮಂಕುತಿಮ್ಮ ।।



ತನ್ನಬವಣೆಗಳ ತಾನೆನಿತೆನಿತು ಪಟ್ಟಿರೆಯು |
ಮಿನ್ನೊಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ ||
ಸನ್ನಿಹಿಸುವಂ ಸುಮ್ಮನಿರಲೊಲದೆ ಮಾನವನು |
ಚಿನ್ಮಯತೆಯಾತ್ಮಗುಣ – ಮಂಕುತಿಮ್ಮ||

ಎಲ್ಲ ಬರಿ ಗೊಣಗಾಟ, ತಿಣಕಾಟ, ತಡಕಾಟ ।
ಇಲ್ಲ ನಮಗೂರೆಕೋಲ್, ತಿಳಿಬೆಳಕುಮಿಲ್ಲ ।।
ಬಲ್ಲತನ ಮಬ್ಬಿನಲಿ ನಿದ್ರಿಸದೆ ತೆವಳುವುದು ।
ಸಲ್ಲದುಬ್ಬಟೆ ನಮಗೆ – ಮಂಕುತಿಮ್ಮ ।।


ಮುಂದೇನೊ; ಮತ್ತೇನೊ; ಇಂದಿಗಾ ಮಾತೇಕೆ? |ಸಂದರ್ಭ ಬರಲಿ; ಬಂದಾಗಳಾ ಚಿಂತೆ ||ಹೊಂದಿಸುವನಾರೊ; ನಿನ್ನಾಳಲ್ಲ; ಬೇರಿಹನು |ಇಂದಿಗಿಂದಿನ ಬದುಕು - ಮಂಕುತಿಮ್ಮ ||

ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ ।

ಫಲ ಮಾಗುವಂದು ತುತ್ತೂರಿ ದನಿಯಿಲ್ಲ ।।
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ ।
ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮ ।।


ಎಂದೊ ನಿನಗೊಂದುದಿನ ಮೂಗು ಮುರಿಯುವುದು ದಿಟ ।
ವೃಂದಾರಕರು ಮತ್ಸರಿಸರೆ ಗರ್ವಿತರ ? ।।
ಸಂದರ್ಭಗಳನದಕೆ ಜೋಡಿಪನು ವಿಧಿರಾಯ ।
ಅಂದಿಕೊಳ್ಳನೆ ನಿನ್ನ – ಮಂಕುತಿಮ್ಮ ।।



ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ ।
ಭವಿಷಿಯವ ಚಿಂತಿಸದೆ ಬದುಕ ನೂಕುತಿರು ।।
ವಿವರಗಳ ಜೋಡಿಸುವ ಯಜಮಾನ ಬೇರಿಹನು ।
ಸವೆಸು ನೀಂ ಜನುಮವನು ಮಂಕುತಿಮ್ಮ ।।

ತನ್ನ ಶಿಲುಬೆಯ ತಾನೆ ಹೊತ್ತನಲ ಗುರು ಯೇಸು? |ನಿನ್ನ ಕರ್ಮದ ಹೊರೆಯ ಬಿಡದೆ ನೀನೆ ಹೊರು ||ಖಿನ್ನನಾಗದೆ ತುಟಿಯ ಬಿಗಿದು ಶವಭಾರವನು |ಬೆನ್ನಿನಲಿ ಹೊತ್ತು ನಡೆ - ಮಂಕುತಿಮ್ಮ ||



ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು |
ತೊಂದೆ ಧ್ಯಾನವನುಣ್ಣುತೊಂದೆ ನೀರ್ಗುರ್ಡಿದು ||
ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು |
ಬಂದುದೀ ವೈಷಮ್ಯ ? - ಮಂಕುತಿಮ್ಮ ||

ಬದುಕಿಗಾರ್ ನಾಯಕರು, ಏಕನೊ ಅನೇಕರೊ?|
ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ?||
ಕುದುರುವುದೆಂತು ಈಯವ್ಯವಸ್ಥೆಯ ಪಾಡು?|
ಅದಿಗುದಿಯೆ ಗತಿಯೇನು? - ಮಂಕುತಿಮ್ಮ||

Thursday, 13 September 2018

ಮಹಮದನ ಪ್ರೇಮ ಪತ್ರ

*ಮಹಮದನ ಪ್ರೇಮ ಪತ್ರ*

ಹತ್ತೂ ಜನರು ಓದಿಯಾದ ಮೇಲೆ
ನನ್ನ ಕೈಸೇರಿತ್ತು ಮಹಮದನ ಪತ್ರ

ತನ್ನೂರಿನ ಬಗ್ಗೆ
ತನ್ನ ಅಕ್ಕ ತಂಗಿಯರ ಬಗ್ಗೆ
ಮಲ್ಪೆಯ ಮೀನು, ಸಮುದ್ರದ ಹಿನ್ನೀರು
ಗೇರು ಹಣ್ಣು, ಗುಳ್ಳದ ಬಗ್ಗೆ
ಏನೆಲ್ಲ ಅಚ್ಚ ಕನ್ನಡದಲ್ಲಿ
ಬರೆದಿದ್ದ ಪತ್ರ-
'ಈದ್' ಗೆ ಮನೆಗೆ ಬರಬೇಕೆಂದು
ಕೇಳಿಕೊಂಡಿದ್ದ ಪತ್ರ-

ಅದರಲ್ಲಿ  ಪ್ರೇಮದ ವಿಷಯವೇನೂ
ಇರಲಿಲ್ಲವಾದರೂ
ಅದು ಪ್ರೇಮ ಪತ್ರವೆಂದು
ಮುದ್ರೆ ಒತ್ತಲ್ಪಟ್ಟಿತು
ಮಹಮದನಿಗೆ ಗುದ್ದು
ನನಗೆ ಎಚ್ಚರಿಕೆ
ಹತ್ತು ಹಲವು ಹದ್ದುಗಳು
ನನ್ನ-ಅವನ
ಚಲನವಲನದ ಬಗ್ಗೆ
ನಿಗಾ ಇಡುವಂತಾಯಿತು

ಒಮ್ಮೆ ಮಹಮದನನ್ನು
ಬೇಟಿಯಾಗಬೇಕು
'ಪ್ರೇಮ ಭಾವ'
ಅರಳಿಸಿದ್ದಕ್ಕೇ
ಕ್ಷಮೆ ಬೇಡಬೇಕು  ಎಂದೆಲ್ಲಾ
ಅಂದುಕೊಂಡೆನಾದರೂ...

ಪ್ರತಿಬಾರಿ....
ನಮ್ಮಿಬ್ಬರ  ನಡುವೆ
ಮಸೀದಿಯ ಗುಡ್ಡ
ಅಡ್ಡ ಬರುತ್ತಿತ್ತು

ಅದೊಂದು ದಿನ-
ದೊಡ್ಡ ದೇವರ ಪಲ್ಲಕ್ಕಿ ಉತ್ಸವ
ಇಬ್ಬರನೂ ಸೀಳಿಕೊಂಡು
ಹೊರಟು ಹೋಯಿತು!

ಹೂವಿನಷ್ಟೇ ತಾಜಾ -ಕೋಮಲ
ಮಹಮದನ ಪ್ರೇಮ
ವಜ್ರದಷ್ಟೇ ಕಠಿಣ-ಕಠೋರ
ಸುತ್ತಣ ಜನರ ಆತ್ಮ...

ಗಾಳಿ-ಬೆಂಕಿ ಸೇರಿಕೊಂಡು
ತನಗೆ ತಾನೇ ಕೂಡಿಕೊಂಡು
ಎಷ್ಟು ಸುತ್ತು ಉರಿದರೇನು
ಎಷ್ಟು ಹೊತ್ತು ಉರಿದರೇನು
ಉರಿಯೊಳಗೆ ಬಿರಿಯುತ್ತಿತ್ತು
ಬಿರಿದು ತಾನೇ ಬೆಳಗುತ್ತಿತ್ತು
ಪ್ರೇಮ ಪುಷ್ಪ ಅರಳುತ್ತಿತ್ತು.

Sunday, 9 September 2018

The last lecture

*ಮರಳಿ ಯತ್ನವ ಮಾಡು*

"ಅವಕಾಶ ಮತ್ತು ಪೂರ್ವ ಸಿದ್ಧತೆ ಸೇರಿದಾಗ ಅದೃಷ್ಟ ನಿಮ್ಮ ದಾಗುತ್ತದೆ".~*ಸಿನೆಕಾ*

*"ಮನಸ್ಸಿದ್ದರೆ ಮಾರ್ಗ"* ಸಂಕುಚಿತ ಮನೋಭಾವ ಬಿಡಿ, ವಿಶಾಲ ಹೃದಯಿಗಳಾಗಿ, ಮಹತ್ಕಾರ್ಯಗಳನ್ನು ಮಾಡಿ.

*ಹೋರಾಟದಲ್ಲಿ ಎದುರಾಳಿಗೆ  ನೀನು ಎಷ್ಟು ಬಲವಾದ ಹೊಡೆತವನ್ನು ಕೊಡಬಲ್ಲೆ ಎನ್ನುವುದಕ್ಕಿಂತಲೂ ಎದುರಾಳಿ ನೀಡಿದ ಏಟನ್ನು ಸಹಿಸಿಕೊಂಡು ತಿರುಗಿ ಮೈಕೊಡವಿ ಎಷ್ಟರ ಮಟ್ಟಿಗೆ ಎದ್ದು ನಿಲ್ಲಬಲ್ಲೆ ಹಾಗೂ ಮರು ಹೊಡೆತವನ್ನು ಕೊಡುವ ಮೂಲಕ ಮುಂದಿನ ಹೋರಾಟಕ್ಕೆ ಸಿದ್ಧನಾಗಬಲ್ಲೆ ಎಂಬುದು ಬಹಳ ಮುಖ್ಯ.*

*ಜನರು ನಿಮ್ಮ ಬಗ್ಗೆ  ಏನು ಯೋಚಿಸುತ್ತಾರೆಂಬ ಭ್ರಾಂತಿ ಬೇಡ.*

"ನಾನು ನಿಮ್ಮ ಬಗ್ಗೆ ಏನು ಯೋಚಿಸುತ್ತಿದ್ದೆನೆ ಎಂಬುದರ ಬಗ್ಗೆ ನೀವು ಚಿಂತಿಸಬೇಡಿ. ಅದು ಒಳ್ಳೆಯದೋ, ಕೆಟ್ಟದ್ದೋ ಎಂದು ಯೋಚಿಸಬೇಡಿ .
ನನ್ನ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಏನಾದರೂ ಅನುಮಾನ ಸುಳಿದರೆ, ಅದನ್ನು ಖಂಡಿತವಾಗಿ ನಿಮಗೆ ತಿಳಿಸುತ್ತೇನೆ. ನಿಮ್ಮ  ಬಗ್ಗೆ ಮನಸ್ಸಿನಲ್ಲೊಂದು ಭಾವನೆಯನ್ನು ಇಟ್ಟುಕೊಂಡು ಮುಂದೆ ನಯವಾಗಿ ಮಾತನಾಡುವ ಸ್ವಭಾವ ನನ್ನದಲ್ಲ . ಅಂತೆಯೇ ನಿಮಗೆ ನನ್ನ ಭರವಸೆ ಇಷ್ಟೇ. ನಾನು ಏನೂ ಮಾತನಾಡದೆ ಮೌನವಾಗಿದ್ದರೆ ನೀವು ಯಾವುದೇ ಕಾರಣಕ್ಕೂ ಯೋಜನೆ ಮಾಡುವ ಅಗತ್ಯವಿಲ್ಲ. "

*"ನಿನ್ನ ಹಳೆಯ ಬಟ್ಟೆಗಳು ಹರಿದು ಹಾಳಾಗುವವರೆಗೂ ಹೊಸ ಬಟ್ಟೆಗಳನ್ನು ಕೊಂಡುಕೊಳ್ಳಬೇಡ."*

  (ನಾನು 'ಅಂತಿಮ ಉಪನ್ಯಾಸ' ನೀಡಿದ ಸಂದರ್ಭಲ್ಲಿ ಧರಿಸಿದ್ದ ಬಟ್ಟೆಯನ್ನು ನೋಡಿದವರಿಗೆಲ್ಲಾ ಬಹುಶಃ ಇದು ಅರ್ಥವಾಗಿರಬಹುದು.)

*ಸಮಸ್ಯೆಗಳನ್ನೇ ಬಣ್ಣಿಸುಸುತ್ತಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾರಿರಿ. ಅದು ಎಂದಿಗೂ ಕಾರ್ಯನಿರ್ವಹಿಸುವ ವೈಖರಿಯಾಗಲಾರದು.*

*ಗೆಲ್ಲಬೇಕಾದರೆ ನಾನೆಷ್ಟು ಶ್ರಮಪಟ್ಟೆ ಮತ್ತು ಅದರ ಹಿಂದೆ ಅದೆಷ್ಟು ಸೋಲು ಮತ್ತು ನಿರಾಸೆ ಅಡಗಿರುತ್ತದೆ ಎಂಬುದನ್ನು ಇತರರು ತಿಳಿದುಕೊಳ್ಳಬೇಕಾದ ಅಗತ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ.*

*"ಗೆಲ್ಲಲಾಗದಿರುವ ಪರಿಸ್ಥಿತಿಯೊಂದಿದೆ ಎಂದು ನಾನು ನಂಬುವುದಿಲ್ಲ".*
        *~ "ಕ್ಯಾಪ್ಟನ್ ಕ್ರಿಕ್"*

*ನೀವು ಅಡ್ಡದಾರಿಯಲ್ಲಿ ಹೋಗುತ್ತಿದ್ದರೂ ಯಾರೂ  ತಿದ್ದುವ ಕಷ್ಟ ತೆಗೆದುಕೊಳ್ಳುತ್ತಿಲ್ಲ ಎಂದರೆ, ಅದು ನೀವು ಇರಬೇಕಾದ ಸ್ಥಳವಲ್ಲ ಎಂದರ್ಥ.  ನಿಮ್ಮನ್ನು ವಿಮರ್ಶಿಸುವ, ಟೀಕಿಸುವ ಮತ್ತು ನಿಮ್ಮ ತಪ್ಪುಗಳನ್ನು ಎತ್ತಿತೋರಿಸುವವರು ಬಹಳಷ್ಟು ಬಾರಿ ನಿಮ್ಮನ್ನು ಅತಿಯಾಗಿ ಪ್ರೀತಿಸುತ್ತಾರೆ.  ನಿಮ್ಮನ್ನು ಇನ್ನೂ ಉನ್ನತ ಸ್ಥಾನದಲ್ಲಿ ನೋಡಲು ಬಯಸುತ್ತಾರೆ.  ಇದು ಕಟು ಸತ್ಯ.*

*ನಾವು ಯಾವುದೇ ಕನಸುಗಳನ್ನು ಕಂಡರೂ ಅದನ್ನು ಕಾರ್ಯರೂಪಕ್ಕೆ ತರಬೇಕು, ಆಗ ಮಾತ್ರ ಅದು ನಮಗೆ ಹೆಚ್ಚಿನ ಮಾನ್ಯತೆ ಕೊಡುತ್ತದೆ.*

  *Randy pausch*

Friday, 24 August 2018

ಸಾವಿರಾರು ನದಿಗಳು

.....

ನನ್ನ ಜನಗಳು

....

ಆಯ್ದ ಕವನ

•••"ಕಲ್ಲು ಮಣ್ಣು ಕಟ್ಟಿಗೆಗಳಿಗೆಲ್ಲ ಕೊರೆದು
ಬಣ್ಣ-ಬಣ್ಣದ ಚಿತ್ತಾರ ಬಿಡಿಸಿದಿರಿ
ರತ್ನ ವಜ್ರ ತೊಡಿಸಿ ಪಟ್ಟೆ  ಪಿತಾಂಬರ ಉಡಿಸಿ ಚೆಲುವ
ಚಲುವೆಯಕೈಗೆ ಗದಾಪದ್ಮಗಳ ಹಿಡಿಸಿದಿರಿ.!
*ಹತ್ತಾರು ಕೈಗಳು* *ಹಲವಾರು ಮುಖಗಳನ್ನು*
*ಹಂದಿ-ಆಮೆಗಳಂಥ* ಅವತಾರ ಕಥೆಗಳು
ಬೆಚ್ಚಿ ಬೀಳಿಸುವಂತೆ ಹೆಣೆದು ಹಾಡಿದಿರಿ"
--B.T *ಲಲಿತನಾಯಕ*

ದೇವರು-ದಿಂಡಿರುಗಳ ಬಗೆಗೆ ಭಯ ಹುಟ್ಟಿಸಿದ ಪುರೋಹಿತಶಾಹಿ ವ್ಯವಸ್ಥೆ ಇಲ್ಲಿಯ ಜನತೆಯ ಬದುಕನ್ನು ಹೇಗೆ ಮಣ್ಣು ಮಾಡಿದೆ ಎಂಬುದನ್ನು ಕವಯಿತ್ರಿ ಇಲ್ಲಿ ಸ್ಪಷ್ಟಪಡಿಸಿದ್ದಾರೆ.

*"ನಿಮ್ಮ ಕಲ್ಲು ಮಾಡಿದ ಜನರ ಮಣ್ಣು ಮಾಡಿರೋ"*
              -- *ಚಂಪಾ*
ಮೌಡ್ಯತೆಯನ್ನು ಪ್ರಶ್ನಿಸುತ್ತದೆ.

•••" *ನೇಗಿಲ ಮೊನೆಯಿಂದ*
ಇತಿಹಾಸ ಕೊರೆಯಲ್ಪಟ್ಟಿತು
ಆದರೆ *ಕೀರಿಟದೊಜ್ರದ ಮೊನೆಯಿಂದ*
ಎಂದು ಕಲಿಸಿದರು ನಮಗೆ
*ಗಯ್ಮೆಯ ಕೈಯಿಂದ*
ಇತಿಹಾಸ ನಿರ್ಮಾಣವಾಯಿತು
ಆದರೆ *ಪುರೋಹಿತ ಮಂತ್ರ*
ದಿಂದ ಎಂದು ಕಲಿಸಿದರು ನಮಗೆ"
    --R.v. *ಭಂಡಾರಿ*

•••ಜಗತ್ತನ್ನೇ ಗೆಲ್ಲಬಲ್ಲ ಸ್ವಾಮೀಜಿಗಳು ಕಾಮವನ್ನೇಕೆ ಗೆಲ್ಲುವುದಿಲ್ಲ ಋಷಿಗೆ ಕೇಳಿದೆ...
ಮನಸ್ಸಿಗೆ ಆಧ್ಯಾತ್ಮ , ದೇಹಕ್ಕೆ ಸುಖ, ಮೋಡ, ಮಳೆ, ಚಿಗುರು, ಬೆಳೆ, ಎಂದ..!!

•ಸ್ವಾಮೀಜಿಗಳು ಮದುವೆಯಾಗದಿದ್ದರೆ
ಏನಾಗುತ್ತೋ... ಅಜ್ಜನಿಗೆ ಕೇಳಿದೆ
ಒಲೆಯ ಮೇಲಿನ ಹಾಲು ಉಕ್ಕಿ ನೆಲಕ್ಕೆ ಸೋರುತ್ತಿತ್ತು.....!

----D.M *ನಾಟೇಕರ್*

•••"ಪಟ್ಟವೇರಿದೊಬ್ಬನಿಗಾಗಿ ಚಟ್ಟವೇರಿದವರೆಷ್ಟೋ
ತಳದ ಜನರ ತಳಮಳದ ದನಿಗೆ ಬಾಣ ಹೂಡಿದ
ಶಬ್ದವೇದಿ ನರಹಂತಕರ ನಿರಂತರ ಸಂತೆ
ಇದು ಸುವರ್ಣಯುಗದಂತೆ
ಇದು ಸುವರ್ಣಾಕ್ಷರದಲಿ ಬರೆದ ಇತಿಹಾಸವಂತೆ
ಇದೊಂದು ಕಂತೆ, ಸುಳ್ಳು,ಬೊಂಕುಗಳ ತೇಪೆ ಹಾಕಿ ಹೋಲಿದಂಥ ಬೋತೆ."

-- *ಜಂಬಣ್ಣ ಅಮರಚಿಂತ*

••• *"ಯಾವ ಅಕ್ಷರದಿಂದ ಬರೆದು ಹೇಳಲಿ ನಾನು*
*ನಮ್ಮ ಜನರಿಗಾದ ಎದೆಯ ಬ್ಯಾನಿ*
*ಲೂಟೇಗಾರರೆ ಇಲ್ಲಿ ಲೀಡರ್ ಆಗುವ  ಹೊತ್ತು*
*ನಡೆಯಲಾರವು ನಿತ್ಯ ಖೂನಿ"*

-- *ಚನ್ನಣ್ಣ ವಾಲೀಕಾರ*

•••"ನಾ ಕಟ್ಟಿರುವ
ಬೇಲಿಯನು ಮುರಿದು
ಚಂದ ಕಂಡ ಸೀರೆ, ಬ್ಲೌಸ್, ಬ್ರಾ
ಗಳಲ್ಲಿ ಹೊಕ್ಕು ಕಾವೇರಿ
ಉಬ್ಬು ತಗ್ಗುಗಳ ನೆಕ್ಕಿ ಕಣ್ಣಿಂದ
ಮಕರಂದ ಹೀರಿ ಸುಖಿಸಿ
ಹಸನ್ಮುಖಿಸುವ ನಿನ್ನ ಡೊಂಕು ಬಾಲದ
ಲೋಲತೆಗೆ ನಾನೂ
ಉತ್ತರಿಸಬೇಕಾದಿತು....
ನೀ ಕಟ್ಟಿರುವ ಬೇಲಿಯನು
ಮುರಿದೂಗೆದು"

---B.T. *ಲಲಿತನಾಯಕ*

��ಈ ಕವಿತೆಯಲ್ಲಿ ಗಂಡಿನ ಲೈಂಗಿಕ ಸ್ವೇಚ್ಛಾಚಾರದ ಬಗೆಗೆ ಪ್ರತಿಭಟನೆಯ ದನಿ ಇದೆ... ಈ ದನಿ ಪರೋಕ್ಷವಾಗಿ ಲೈಂಗಿಕ ಸ್ವಾತಂತ್ರ್ಯದ ಮಹತ್ವವನ್ನು ಸಾರುತ್ತದೆ.



•••"ದಿನಕ್ಕೊಬ್ಬರಿಬ್ಬರಾದರೂ
ದುಶ್ಯಾಸನರ ಕೈಯೊಳಗೆ
ವಿವಸ್ತ್ರಳಾಗುವ ನನಗೆ
ಕೂಗಿ ಕರೆದರೂ
ಚೀರಿ ಮೀಡಿದರೂ
ಕಿವುಡಾದ ಕೃಷ್ಣ
ಕೊಡಲಿಲ್ಲ ಒಮ್ಮೆಯೂ
ಅಕ್ಷಯದ ವಸ್ತ್ರದಾನ
ತೆಡೆದಿಲ್ಲ ಗಳಿಗೆಯೂ
ಸೋರಿ ಹೋಗುವ ಮಾನ"

-- *ವಿಜಯಾ ಸುಬ್ಬರಾಜ್*

Wednesday, 22 August 2018

ನಾವು ಹುಡುಗಿಯರೇ ಹೀಗೆ...

ನಾವು ಹುಡುಗಿಯರೇ ಹೀಗೆ...
"''''''''''''''''''''''''''''’'''''

-೧-

ಹೌದು ಕಣೆ ಉಷಾ

ನಾವು ಹುಡುಗಿಯರೇ ಹೀಗೆ...

ಏನೇನೋ ವಟಗುಟ್ಟಿದರೂ

ಹೇಳಬೇಕಾದ್ದನ್ನು ಹೇಳದೆ

ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ.

ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ

ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ

ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ.

ಹೇಳಲೇಬೇಕು ಎನಿಸಿದ್ದನ್ನು

ಹೇಳಹೋಗಿ ಹೆದರಿ ಏನೇನೋ ತೊದಳುತ್ತೇವೆ

'ಐ ಲವ್ ಯೂ' ಅಂತ ಹೇಳಲು ಕಷ್ಟಪಟ್ಟು

ಬೇರೆ ಏನೇನೋ ದಾರಿ ಹುಡುಕಿ

ಸಂದೇಶ ಮುಟ್ಟಿಸಲು ಹೆಣಗುತ್ತೇವೆ.

ಅದನ್ನು ಅರ್ಥ ಮಾಡಿಕೊಳ್ಳಲಾರದೆ

ಹುಡುಗರು ಕೈ ತಪ್ಪಿದಾಗ

ಮುಸು ಮುಸು ಅಳುತ್ತೇವೆ.

ಕೊನೆಗೆ ಬೇರೆ ಯಾರನ್ನೋ ಮದುವೆಯಾಗಬೇಕಾದಾಗ

ನಾವೇ ದುರಂತ ನಾಯಕಿಯರೆಂದು

ಭ್ರಮಿಸಿ ಎಲ್ಲರ ಅನುಕಂಪ ಬಯಸುತ್ತೇವೆ.

ಗಂಡನಲ್ಲಿ 'ಅವನನ್ನು' ಹುಡುಕುತ್ತೇವೆ.

ಗಂಡನಿಗೆ ಮಾತ್ರ ಅದರ ಸುಳಿವೂ ಸಿಗದಂತೆ ನಟಿಸುತ್ತೇವೆ.

ಅಷ್ಟರಲ್ಲಿ ಒತ್ತಿಟ್ಟ ಭಾವನೆಗಳೆಲ್ಲ ಹರಳಾಗಿಬಿಟ್ಟಿರುತ್ತವೆ

ಅರಳುವುದೇ ಇಲ್ಲ ಉಷಾ...

-೨-

ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪಗಾಗಿ

ಕೈಗೊಂದು ಕಾಲಿಗೊಂದು ಮಕ್ಕಳಾಗಿ

ಏದುಸಿರು ಬಿಡುತ್ತಾ ತರಕಾರಿ ಕೊಳ್ಳುವಾಗ

'ಅವನು' ಸಿಗುತ್ತಾನೆ.

ನಮ್ಮ ಇಂದಿನ ಅವಸ್ಥೆಗೆ ಇವನೇ ಕಾರಣ

ಅಂತ ರೋಷ ತಾಳುತ್ತೇವೆ.

ಆದರೆ ಮೇಲೆ ನಗುನಗುತ್ತಾ 'ಅವನ'

ಹೆಂಡತಿ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತೇವೆ.

ಯಾಕೆಂದರೆ ಅವಳದೂ ಅದೇ ಕಥೆಯಲ್ಲವೇ?

ನಾವು ಹುಡುಗಿಯರೇ ಹೀಗೆ...

                           - ಪ್ರತಿಭಾ ನಂದಕುಮಾರ್

ಮುದ್ದು ರಾಮನ ಬದುಕು

ಮುದ್ದು ರಾಮನ ಬದುಕು

*ಮರೆತೆಲ್ಲ ತೊಡಕುಗಳ,ಸರಿಸುತ್ತ ಹಳತುಗಳ*
*"ಎಂತೋಡುತ್ತಿದೆ ಮುಂದೆ ಈ ಕಾಲಪಕ್ಷಿ! ನಾಳೆ* *ಬಾನಿನಂಚಿನಲಿ ನವರೇಖೆ ಏನಿದೆಯೋ! ಕಾಲ ಮಹಿಮೆಗೆ ನಮಿಸೊ! ಮುದ್ದುರಾಮ*.

*ಎಷ್ಟಿದೆಯೋ ಅದಕ್ಕಿಂತ ಒಂದಿಂಚು ಹೆಚ್ಚಿಲ್ಲ; ಉದ್ದ ಇಲ್ಲವೆ ಮೊಟಕು ನೀ ಮಾಡಲಾರೆ. ಕಾಲವೆಂಬುದಕಿಲ್ಲಿ ಪರ್ಯಾಯ ಯಾವುದಿದೆ? ಕಾಲ ಚಕಿತವ ಅರಿಯೋ! ಮುದ್ದುರಾಮ*

*ತನ್ನ ಬಲೆ ರಚನೆಯಲ್ಲಿ ನಿತ್ಯ ಗೆಲ್ಲಬಹುದೇ ಜೇಡ? ನಿನ್ನೆ ಅದು ಆಗದಿರಿ ಇಂದಾಗಬಹುದು. ಹೊಸತನ ನೀ ಕಾಣಲಿಕ್ಕೆ ಸೋಮಾರಿತನ ಸಲ್ಲ; ನವನವೀನವೊ ಕಾಲ! ಮುದ್ದುರಾಮ*

*ಸಮಯ ಪಾಲಿಸದವರ ಕಾಲ ಹಂಗಿಸದಿರದು;ಕಾಲ ಸರಿಯುವುದು ನಿತ್ಯ ತಾನೊಪ್ಪಿದಂತೆ. ಯಾರ ಕಾಯಿಸಬೇಡ, ಕಾದು ಕುಳಿತಿರಬೇಡ; ಕಾಲ ನಿರ್ಣಾಯಕವೋ! ಮುದ್ದುರಾಮ*

*ಇದ್ದಾರೆ ಬಳಿಯಲ್ಲೆ ಸಮಯ ಕಳ್ಳರು, ಜೋಕೆ! ಜೂಜಾಟವಾಡುತ್ತ ಕಿಸೆಯ ಕದಿಯುವವರು. ಕಾಲಕಿಸೆಗಿಂತಾವ ಮಿಗಿಲಾದ ಚೀಲವಿದೆ? ಕಾಲ ಬಾಳಿನ ಆಸ್ತಿ- ಮುದ್ದುರಾಮ.*

*ಇಟ್ಟಿಗೆಯ ಸೇರಿಸದೆ ಗೋಡೆ ಕಟ್ಟುವೆ ಎಂತು? ಸಮಯ ಪಾಲಿಸದೆಂತು ಗೆಲುವ ಸಾಧಿಸುವೆ? ಆಚರಣೆ ಎಲ್ಲಿರದೊ ಅಲ್ಲಿರದು ಸೌಭಾಗ್ಯ; ಕಾಲಗೌರವ ಸೊಮ್ಮ -ಮುದ್ದು ರಾಮ*.

*ಬದುಕೆಂದರೇನಯ್ಯ? ಗಳಿಗೆಗಳ ಸರಮಾಲೆ. ಒಳಿತು ಇಲ್ಲವೇ ಕೇಡು ಇದೆ ಗಳಿಗೆ ಹಿಂದೆ. ಪ್ರತಿರೋಧಿಸದೆ ಬದುಕು ಒಪ್ಪಿಕೋ ಬಂದುದನು; ನಿನ್ನ ಮಿತ್ರನೋ ಸಮಯ! ಮುದ್ದುರಾಮ.*

*ಕಾಲ ಕುಂಟುವುದಿಲ್ಲ; ಅದರ ನಡೆ ಅವಿರತವೊ!ಇದೆ ಏನೊ ವ್ಯತ್ಯಾಸ ನಿನ್ನ ನಿಲುವಿನಲಿ. ಹೆಜ್ಜೆಗತಿಯನು ಅರಿತು ಸರಿಪಡಿಸಿಕೋ ಮೇಲ್ಲ; ಕಾಲ ಶಿಸ್ತಿನ ಮಿತ್ರ- ಮುದ್ದುರಾಮ*

*ಕಳೆದು ನಿನ್ನೆಯ ನೀನು ಗುಣಿಸದಿರು ನಾಳೆಯನು; ಕೂಡಿ ನಿಂತರೆ ಭೂತ ಇಂದು ಸೊಗಸಲ್ಲ. ಇರದುದನು ವಿಭಜಿಸುವುದಾವ ಲೆಕ್ಕಾಚಾರ? ಸಮಯ ಬಾಳಿನ ಬೆರಗೊ! ಮುದ್ದುರಾಮ.*

*ನಾಳೆ ಏನೋ ಎಂದು ಇಂದೇಕೆ ಅಳುತ್ತಿರುವೆ? ಇಂದಾಗುವುದರ ಅರಿವು ನಿನ್ನೆ ನಿನಗಿತ್ತೆ? ಏನಾಗಬೇಕೊ ಅದು ಆಗುವುದು ಅದರಂತೆ; ಕಾಲ ಪ್ರಶ್ನಾತೀತ!-ಮುದ್ದುರಾಮ*

*ಒಮ್ಮೆ ಸರಿದರೆ ಮುಂದೆ ಇಲ್ಲ ಹಿಂದಕ್ಕೆ ಹೆಜ್ಜೆ; ಏಕಮುಖ ಸಂಚಾರ ಈ ಕಾಲ ಗರಿಮೆ. ಆದುದಕೆ ಶೋಕಿಸದೆ ಮುಂದೆ ನಡೆವುದೆ ಲೇಸು; ಸಮಯ ಪ್ರಸ್ತುತ ಪ್ರಜ್ಞೆ- ಮುದ್ದುರಾಮ.*

*ಸರಿದು ಹೋದರೆ ಒಮ್ಮೆ ಕೈಗೆ ಸಿಗುವುದೇ ಕಾಲ? ಕೊಂಡು ಬಳಸಲಿಕೆ ಅದು ಪೇಟೆ ಸರಕಲ್ಲ. ಇಡಬಲ್ಲೆಯೋ ನೀನು ಇದ ದಾಸ್ತಾನಿನಲ್ಲಿ? ಜಲದಂತೆ ಕಾಲಗತಿ- ಮುದ್ದು ರಾಮ*.

*ಮುನ್ನೆಡೆಯುವುದು ಲೋಕ ಯಾರಿರಲಿ ಇರದಿರಲಿ;ನೀ ಅಳಿದೆ ಎಂದೇನು ರವಿ ಮೂಡದಿಹನೆ? ಬೀಸದೇ ತಂಗಾಳಿ? ಘಮಘಮಿಸದೇ ಹೂವು? ಕಾಲ ಕಾಯದು ನಿನಗೆ- ಮುದ್ದುರಾಮ.*

*ದೂರವಿರು ಬೇಕಿರದ ಕಾಲ ಭಕ್ಷಕರಿಂದ; ಅನಗತ್ಯ ಮಾತಿಂದ ನೂರು ತಲೆಬೇನೆ. ಇರುವ ಸಮಯವನರಿತು ಜಾಣ್ಮೆಯಿಂದದ ಬಳಸು; ಪರಿಮಿತವೊ ಈ ಕಾಲ! ಮುದ್ದುರಾಮ.*

*ಸೂರ್ಯ ಪ್ರತಿ ಮುಂಜಾನೆ ಉದಿಸದಿರೆ ಮೂಡಲಲಿ  ಎಷ್ಟೊಂದು ಪರದಾಟ ಈ ಮನುಜಕುಲಕೆ? ಬರಬಾರದೇಕೆ ಆ ಶಿಸ್ತು ದಿನದಿನ ನಮಗೆ? ಶಿಸ್ತಿದ್ದರಿದೆ ಹುರುಪು- ಮುದ್ದುರಾಮ.*

*ಹೀಗಿದ್ದೆ ಹಾಗಿದ್ದೆ ಎಂದು ಕೊರಗುವೆ ಏಕೆ? ಮುಡಿದ ಮಲ್ಲಿಗೆ ಒಮ್ಮೆ ಬಾಡುವುದು ಸಹಜ. ನೆನೆಯುತ್ತ ನಿನ್ನೆಯನೆ ಮರೆಯದಿರು ಈ ದಿನವ ಇಂದು ಎಂದರೆ ಸ್ವರ್ಗ- ಮುದ್ದುರಾಮ*

*ಹಳೆ ನೆನಪು ಕಾಡಿದರೆ ಮರೆ ಒಡನೆ ಅದನ್ನೆಲ್ಲ; ಮಾಗಿ ಕೋಗಿಲೆಯಂತೆ ಇರು ಮೌನದಿಂದ. ಕಾತರಕ್ಕೆ ಬೇಸರಕ್ಕೆ ವಾಲಿದರೆ ಅದೇ ನೋವು; ವರ್ತಮಾನಕ್ಕೆ ಒರಗೊ!- ಮುದ್ದುರಾಮ.*

*ನೋವು ಬರಲಿದೆ ನಾಳೆ ಎಂದಳುವೆ ಇಂದೇಕೆ? ಬಂದಾಗ ಬರಲಿ ಬಿಡು ಚಿಂತೆ ಅದಕ್ಕೇಕೆ? ಹೂವು ಬಾಡುವುದೆಂದು ಈಗ ಕಣ್ಮುಚ್ಚುವುದೆ? ನಿನ್ನದೋ ದಿನ ಇಂದು!- ಮುದ್ದುರಾಮ.*

*ಇರುವಷ್ಟು ದಿನ ನೀ ನೂಕದಿರು ಕಸದಂತೆ; ಎಷ್ಟು ದಿನ ನಿನಗಿದೆಯೊ ಅದೇ ನಿನ್ನ ಬಾಳು. ಸುಧೆಗೆ ಹುಳಿ ಹಿಂಡಿದರೇ ಭಕ್ಷಾನ್ನವೆಲ್ಲಿಹುದೊ? ಸೆರೆಹಿಡಿಯೋ ಗಳಿಗೆಯನು- ಮುದ್ದುರಾಮ.*

*ಮಾಡಬೇಕಾದುದುನು ಮೊದಲು ಗುರುತಿಸು ನೀನು; ದೂರ ಸರಿವುದು ಆಗ ಅನಗತ್ಯ ಕಾರ್ಯ. ಬೇಡದುದ ಕೈಗೆತ್ತುಕೊಂಡೇನು ಫಲ ನಮಗೆ? ಗಮನ ಕೊಡು ಆದ್ಯತೆಗೆ- ಮುದ್ದುರಾಮ.*

*ಮಾಡಬೇಕಾದುದರ ಪಟ್ಟಿ ಮಾಡಿದ ಬಳಿಕ ಕಾರ್ಯ ಕಾರ್ಯತತ್ಪರನಾಗು  ಆದ್ಯತೆಯ ಮೇರೆ. ಬರೆದ ಪಟ್ಟಿಯ ಮತ್ತೆ ಬರೆದರೇನಿದೆ ಲಾಭ? ಮುಗಿಸೆಸಕವನು ಮೊದಲು- ಮುದ್ದುರಾಮ.*

*ಬರಿ ಪಟ್ಟಿ ಮಾಡಿದರೆ ಕಾರ್ಯ ಮುಗಿದಂತೇನು? ಮಾಡು ಯೋಜಿಸಿದಂತೆ, ನಿರ್ಧಾರದಂತೆ. ಮುಂದೂಡಿದರೆ ಆಗ ಆ ಕೆಲಸ ಕೆಟ್ಟಂತೆ; ಸಮಯ ನೀ ನಿರ್ವಹಿಸು- ಮುದ್ದುರಾಮ.*

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...