ಹುಚ್ಚುತನವೇ ಅನುಗ್ರಹ -- ~ನೀಷೆ~
ನಗುವುದು ಎಂದರೆ ಕಲ್ಮಶವಿಲ್ಲದೆ ಮತ್ಸರಪಡುವುದು.
ಒಬ್ಬನನ್ನು ಪ್ರೀತಿಸುವುದು ನಿಜಕ್ಕೂ ಮೃಗ ಪ್ರವೃತ್ತಿ ಏಕೆಂದರೆ ಆಗ ಉಳಿದವರು ಎಲ್ಲರಿಗೂ ವಂಚನೆ ಮಾಡಿದ ಹಾಗಾಗುತ್ತದೆ ದೈವ ಪ್ರೀತಿಯೂ ಕೂಡ.
ಭಾವ ಸ್ಥಿತಿಯ ಗಹನತೆಯಲ್ಲ, ಅದರ ಕಾಲವಧಿ ವ್ಯಕ್ತಿಯನ್ನು ಉನ್ನತವಾಗಿಸುವುದು.
ಹೆಣ್ಣು ತನ್ನ ಚೆಲುವನ್ನು ನಾಶವಾಗುವ ಮಟ್ಟಿಕ್ಕೆ ದ್ವೇಷಿಸುತವುದನ್ನು ಕಲಿತಿರುತ್ತಾಳೆ.
ನನಗೆ ಪ್ರೇಮ ಸಿಗುತ್ತಿದೆ ಆದರೆ ತಾನು ಪ್ರೇಮವನ್ನು ನೀಡುತ್ತಿಲ್ಲ ಎಂಬುದು ಅರಿವಾದ ಮರುಗಳಿಗೆ ನಿಂತ ನೆಲ ಕುಸಿಯುತ್ತದೆ. ಆಳದಲ್ಲಿ ಇರುವುದೆಲ್ಲ ಮೇಲೇಳುತ್ತದೆ.
ಒಮ್ಮೆ ನಿರ್ಧರಿಸಿ ಆಯಿತು ಇನ್ನೂ ಯಾವ ಪ್ರತಿವಾದವನ್ನು ಕೇಳದಂತೆ ಕಿವಿ ಮುಚ್ಚಿ ಕೊಳ್ಳಬೇಕು ಇದೇ ದೃಢ ಸ್ವಭಾವದ ಲಕ್ಷಣ. ಇದು ಆಗಾಗ ಮೂರ್ಖತನಕ್ಕಾಗಿ ಮಾಡುವ ಸಾಂದರ್ಭಿಕ ಸಂಕಲ್ಪವು
ಹೌದು.
ಕಾಮಸುಖದ ವಿಪರೀತ ಬಯಕೆ ಹಾಗೂ ಆ ಬಯಕೆಯನ್ನು ಹುದುಗಿಸುವ ಎಲ್ಲಾ ಬಗೆಯ ಪ್ರಯತ್ನ --ಇವು ಹೆಣ್ಣಿನ ಸಮಸ್ತ ಭವಿಷ್ಯವನ್ನೇ ನಾಶ ಮಾಡುತ್ತಿವೆ.
ತನ್ನ ಆಲೋಚನೆಗಳಿಗೆ ಸೂಲಗಿತ್ತಿಯನ್ನು ಬಯಸುವವನು ಒಬ್ಬ. ತಾನು ಯಾರ ನೆರವಿಗಾದರೂ ಆಗಬಲ್ಲೇ ಎಂದು ಚಡಪಡಿಸುವವನು ಮತ್ತೊಬ್ಬ. ಒಳ್ಳೆಯ ಸಂವಾದದ ಮೂಲ.
ಸೇಡಿನಲ್ಲಿ ಹಾಗೂ ಪ್ರೀತಿಯಲ್ಲಿ ಹೆಣ್ಣು ಗಂಡಿಗಿಂತ ಹೆಚ್ಚು ಅನಾಗರಿಕಳು.
ಹೆಣ್ಣು ಪ್ರೇಮಿಸಲು ತೊಡಗಿದಾಗ ಗಂಡು ತಲ್ಲಣಿಸುತ್ತಾನೆ.ಏಕೆಂದರೆ ಪ್ರೇಮಿಸುವ ಸಂದರ್ಭದಲ್ಲಿ ಹೆಣ್ಣು ಯಾವ ವಸ್ತುವಿನ ಮೌಲ್ಯವನ್ನು ಲೆಕ್ಕಿಸದೆ ಎಲ್ಲವನ್ನೂ ತ್ಯಾಗ ಮಾಡಲೂ ಸಿದ್ಧಳಾಗಿರುತ್ತಾಳೆ.
ದೊಡ್ಡದೊಂದು ಅನ್ಯಾಯ ನಿಮ್ಮ ಮೇಲೆರಗಿದಾಗ ಮರುಗಳಿಗೆಯೇ ನೀವು ಹತ್ತಾರು ಸಣ್ಣಪುಟ್ಟ ಅನ್ಯಾಯಗಳನ್ನು ಎಸಗಿಬಿಡಿ, ಅನ್ಯಾಯವನ್ನು ಹೊತ್ತು ನಿಂತ ವ್ಯಕ್ತಿ ಏಕಾಂಗಿಯಾಗಿ ಸಹಿಸಲಾಗದ ಯಾತನೆ ಅನುಭವಿಸುತ್ತಾನೆ.
ನಮ್ಮ ಗರ್ವ ಗಾಯಗೊಂಡಾಗಲೂ ನಮ್ಮ ತೋರಿಕೆ ಮಾತ್ರ ಗಾಯಗೊಳ್ಳಲಾರದಷ್ಟು ಗಟ್ಟಿಯಾಗಿರುತ್ತದೆ.
ತನ್ನ ಬಗ್ಗೆ ಅತಿಯಾಗಿ ಹೇಳಿಕೊಳ್ಳುವುದು ನಿಜವಾಗಿಯೂ ತನ್ನನ್ನು ಮರೆಮಾಚಿಕೊಳ್ಳಲು ಇನ್ನೊಂದು ವಿಧಾನ.
No comments:
Post a Comment