Friday, 24 August 2018

ಆಯ್ದ ಕವನ

•••"ಕಲ್ಲು ಮಣ್ಣು ಕಟ್ಟಿಗೆಗಳಿಗೆಲ್ಲ ಕೊರೆದು
ಬಣ್ಣ-ಬಣ್ಣದ ಚಿತ್ತಾರ ಬಿಡಿಸಿದಿರಿ
ರತ್ನ ವಜ್ರ ತೊಡಿಸಿ ಪಟ್ಟೆ  ಪಿತಾಂಬರ ಉಡಿಸಿ ಚೆಲುವ
ಚಲುವೆಯಕೈಗೆ ಗದಾಪದ್ಮಗಳ ಹಿಡಿಸಿದಿರಿ.!
*ಹತ್ತಾರು ಕೈಗಳು* *ಹಲವಾರು ಮುಖಗಳನ್ನು*
*ಹಂದಿ-ಆಮೆಗಳಂಥ* ಅವತಾರ ಕಥೆಗಳು
ಬೆಚ್ಚಿ ಬೀಳಿಸುವಂತೆ ಹೆಣೆದು ಹಾಡಿದಿರಿ"
--B.T *ಲಲಿತನಾಯಕ*

ದೇವರು-ದಿಂಡಿರುಗಳ ಬಗೆಗೆ ಭಯ ಹುಟ್ಟಿಸಿದ ಪುರೋಹಿತಶಾಹಿ ವ್ಯವಸ್ಥೆ ಇಲ್ಲಿಯ ಜನತೆಯ ಬದುಕನ್ನು ಹೇಗೆ ಮಣ್ಣು ಮಾಡಿದೆ ಎಂಬುದನ್ನು ಕವಯಿತ್ರಿ ಇಲ್ಲಿ ಸ್ಪಷ್ಟಪಡಿಸಿದ್ದಾರೆ.

*"ನಿಮ್ಮ ಕಲ್ಲು ಮಾಡಿದ ಜನರ ಮಣ್ಣು ಮಾಡಿರೋ"*
              -- *ಚಂಪಾ*
ಮೌಡ್ಯತೆಯನ್ನು ಪ್ರಶ್ನಿಸುತ್ತದೆ.

•••" *ನೇಗಿಲ ಮೊನೆಯಿಂದ*
ಇತಿಹಾಸ ಕೊರೆಯಲ್ಪಟ್ಟಿತು
ಆದರೆ *ಕೀರಿಟದೊಜ್ರದ ಮೊನೆಯಿಂದ*
ಎಂದು ಕಲಿಸಿದರು ನಮಗೆ
*ಗಯ್ಮೆಯ ಕೈಯಿಂದ*
ಇತಿಹಾಸ ನಿರ್ಮಾಣವಾಯಿತು
ಆದರೆ *ಪುರೋಹಿತ ಮಂತ್ರ*
ದಿಂದ ಎಂದು ಕಲಿಸಿದರು ನಮಗೆ"
    --R.v. *ಭಂಡಾರಿ*

•••ಜಗತ್ತನ್ನೇ ಗೆಲ್ಲಬಲ್ಲ ಸ್ವಾಮೀಜಿಗಳು ಕಾಮವನ್ನೇಕೆ ಗೆಲ್ಲುವುದಿಲ್ಲ ಋಷಿಗೆ ಕೇಳಿದೆ...
ಮನಸ್ಸಿಗೆ ಆಧ್ಯಾತ್ಮ , ದೇಹಕ್ಕೆ ಸುಖ, ಮೋಡ, ಮಳೆ, ಚಿಗುರು, ಬೆಳೆ, ಎಂದ..!!

•ಸ್ವಾಮೀಜಿಗಳು ಮದುವೆಯಾಗದಿದ್ದರೆ
ಏನಾಗುತ್ತೋ... ಅಜ್ಜನಿಗೆ ಕೇಳಿದೆ
ಒಲೆಯ ಮೇಲಿನ ಹಾಲು ಉಕ್ಕಿ ನೆಲಕ್ಕೆ ಸೋರುತ್ತಿತ್ತು.....!

----D.M *ನಾಟೇಕರ್*

•••"ಪಟ್ಟವೇರಿದೊಬ್ಬನಿಗಾಗಿ ಚಟ್ಟವೇರಿದವರೆಷ್ಟೋ
ತಳದ ಜನರ ತಳಮಳದ ದನಿಗೆ ಬಾಣ ಹೂಡಿದ
ಶಬ್ದವೇದಿ ನರಹಂತಕರ ನಿರಂತರ ಸಂತೆ
ಇದು ಸುವರ್ಣಯುಗದಂತೆ
ಇದು ಸುವರ್ಣಾಕ್ಷರದಲಿ ಬರೆದ ಇತಿಹಾಸವಂತೆ
ಇದೊಂದು ಕಂತೆ, ಸುಳ್ಳು,ಬೊಂಕುಗಳ ತೇಪೆ ಹಾಕಿ ಹೋಲಿದಂಥ ಬೋತೆ."

-- *ಜಂಬಣ್ಣ ಅಮರಚಿಂತ*

••• *"ಯಾವ ಅಕ್ಷರದಿಂದ ಬರೆದು ಹೇಳಲಿ ನಾನು*
*ನಮ್ಮ ಜನರಿಗಾದ ಎದೆಯ ಬ್ಯಾನಿ*
*ಲೂಟೇಗಾರರೆ ಇಲ್ಲಿ ಲೀಡರ್ ಆಗುವ  ಹೊತ್ತು*
*ನಡೆಯಲಾರವು ನಿತ್ಯ ಖೂನಿ"*

-- *ಚನ್ನಣ್ಣ ವಾಲೀಕಾರ*

•••"ನಾ ಕಟ್ಟಿರುವ
ಬೇಲಿಯನು ಮುರಿದು
ಚಂದ ಕಂಡ ಸೀರೆ, ಬ್ಲೌಸ್, ಬ್ರಾ
ಗಳಲ್ಲಿ ಹೊಕ್ಕು ಕಾವೇರಿ
ಉಬ್ಬು ತಗ್ಗುಗಳ ನೆಕ್ಕಿ ಕಣ್ಣಿಂದ
ಮಕರಂದ ಹೀರಿ ಸುಖಿಸಿ
ಹಸನ್ಮುಖಿಸುವ ನಿನ್ನ ಡೊಂಕು ಬಾಲದ
ಲೋಲತೆಗೆ ನಾನೂ
ಉತ್ತರಿಸಬೇಕಾದಿತು....
ನೀ ಕಟ್ಟಿರುವ ಬೇಲಿಯನು
ಮುರಿದೂಗೆದು"

---B.T. *ಲಲಿತನಾಯಕ*

��ಈ ಕವಿತೆಯಲ್ಲಿ ಗಂಡಿನ ಲೈಂಗಿಕ ಸ್ವೇಚ್ಛಾಚಾರದ ಬಗೆಗೆ ಪ್ರತಿಭಟನೆಯ ದನಿ ಇದೆ... ಈ ದನಿ ಪರೋಕ್ಷವಾಗಿ ಲೈಂಗಿಕ ಸ್ವಾತಂತ್ರ್ಯದ ಮಹತ್ವವನ್ನು ಸಾರುತ್ತದೆ.



•••"ದಿನಕ್ಕೊಬ್ಬರಿಬ್ಬರಾದರೂ
ದುಶ್ಯಾಸನರ ಕೈಯೊಳಗೆ
ವಿವಸ್ತ್ರಳಾಗುವ ನನಗೆ
ಕೂಗಿ ಕರೆದರೂ
ಚೀರಿ ಮೀಡಿದರೂ
ಕಿವುಡಾದ ಕೃಷ್ಣ
ಕೊಡಲಿಲ್ಲ ಒಮ್ಮೆಯೂ
ಅಕ್ಷಯದ ವಸ್ತ್ರದಾನ
ತೆಡೆದಿಲ್ಲ ಗಳಿಗೆಯೂ
ಸೋರಿ ಹೋಗುವ ಮಾನ"

-- *ವಿಜಯಾ ಸುಬ್ಬರಾಜ್*

No comments:

Post a Comment

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...