ಡಾ. ಸಿದ್ದಲಿಂಗಯ್ಯ ಅವರು ಪಿ.ಎಚ್. ಡಿ ಪದವಿಗಾಗಿ ಬರೆದ ಸಂಶೋಧನ ಪ್ರಬಂಧ "ಗ್ರಾಮದೇವತೆಗಳು" ಜಾನಪದೀಯ ಅಧ್ಯಯನ.
"ಗ್ರಾಮದೇವತೆಗಳ ಪರಿಕಲ್ಪನೆ" ಎಂಬ ಎರಡನೇ ಅಧ್ಯಯನದಲ್ಲಿನ ಕೆಲವು ಪ್ರಮುಖ ಅಂಶಗಳು.
✓ ಜೀಗನ್ ಬಾಲ್ಗ್
ಕೆಳ ಜಾತಿ ವರ್ಗಗಳ ದೇವತೆಗಳ ಬಗೆಗಿನ ಬಾಲಿಶ ನಂಬಿಕೆಗಳು ಕ್ರೂರವಾದ ಆಚರಣೆಗಳನ್ನು ಬಯಲುಮಾಡಿ ಈ ಜನ ವರ್ಗಗಳನ್ನು ಮತಾಂತರಗೊಳಿಸುವುದು ಅಧ್ಯಯನದ ಒಂದು ಉದ್ದೇಶವಾದರೆ. ಇಲ್ಲಿಯ ಜನಪದರ ದೇವತೆಗಳನ್ನು ಯುರೋಪಿಯನ್ನರಿಗೆ ಪರಿಚಯಿಸುವುದು ಇನ್ನೊಂದು ಉದ್ದೇಶ.
ಶಿಷ್ಟ ವರ್ಗದ ಜನ ಗ್ರಾಮದೇವತೆಗಳನ್ನು ಅಂದು ಕ್ಷುದ್ರ ದೇವತೆಗಳೆಂದು ಭಾವಿಸಿದ್ದರು.
✓ ಮಿಲ್ಟರ್ ಥಿಯೋಡಾರ್ ಎಲ್ಮೋರ್ "ಆಧುನಿಕ ಹಿಂದೂ ಧರ್ಮದಲ್ಲಿ ದ್ರಾವಿಡ ದೇವತೆಗಳು"
ಇದುವರೆಗೆ ಹಿಂದೂ ಧರ್ಮದ ಅಧ್ಯಯನದಲ್ಲಿ 80 ಭಾಗ ದೇವತೆಗಳನ್ನು ಕಡೆಗಣಿಸಲಾಗಿದೆ.ಇವುಗಳ ಬಗ್ಗೆ ಚರ್ಚೆ ಒಂದು ಅಥವಾ ಎರಡು ಪುಟ ಇದ್ದರೆ ಅದೇ ಹೆಚ್ಚು ಆದರೆ ವೈದಿಕ ದೇವತೆಗಳ ಚರ್ಚೆಗೆ ವಿಶೇಷ ಗಮನ ಕೊಡಲಾಗಿದೆ.
•ದ್ರಾವಿಡರು ಅನಕ್ಷರಸ್ಥರಾಗಿರುವುದೂ
•ಈ ಪಂಥಗಳಿಗೆ ನಿರ್ದಿಷ್ಟವಾದ ಒಬ್ಬ ಸ್ಥಾಪಕನಾದ ಪೌರಾಣಿಕ ನಾಯಕ ನಿಲ್ಲದಿರುವುದು.
•ತೌಲನಿಕ ಧರ್ಮಗಳ ವಿಭಾಗಕ್ಕೆ ಸೇರಿಸದೆ ಮನಶಾಸ್ತ್ರ ವಿಭಾಗಕ್ಕೆ ಸೇರಿಸಿದ್ದು ಕಡೆಗಣನೆಗೆ ಒಳಗಾಗಲು ಕಾರಣವಾಗಿದೆ.
✓ ಎನ್.ಎನ್ ಭಟ್ಟಾಚಾರ್ಯ ಮತ್ತು ಶ್ರೀವಾಸ್ತವ ಅವರು ಗ್ರಾಮದೇವತೆಗಳನ್ನು ಕುರಿತು ಆಳವಾಗಿ ಚಿಂತಿಸಿದ್ದಾರೆ ಇವರಿಬ್ಬರಿಗೂ ರಚಿತವಾಗಿದ್ದರೂ ಗ್ರಾಮದೇವತೆಗಳನ್ನು ಕುರಿತ ಚರ್ಚೆ ಅಲ್ಲಿ ವ್ಯಾಪಕವಾಗಿದೆ.
ಡಾ ಚೆನ್ನಣ್ಣ ವಾಲೀಕಾರರು ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳು (ಅಪ್ರಕಟಿತ) ಎಂಬ ಸಂಶೋಧನಾ ಪ್ರಬಂಧವನ್ನು ಬರೆದರು. ಇದರಲ್ಲಿ ಗ್ರಾಮದೇವತೆಯ ಆರಾಧನೆಯಿಂದ ಗ್ರಾಮ ಜೀವನದ ಮೇಲೆ ಆಗುವ ಪರಿಣಾಮಗಳು ಮತ್ತು ದುಷ್ಪರಿಣಾಮಗಳನ್ನು ಅವರು ದಾಖಲಿಸಿದ್ದಾರೆ.
✓ ಗ್ರಾಮದೇವತೆಯ ಪರಿಕಲ್ಪನೆ
ಮಾತೃದೇವತಾ ಪಂಥದ ಜನಪದ ರೂಪಗಳೇ ಗ್ರಾಮದೇವತೆಗಳು. ಭಯ-ಭಕ್ತಿ ಭೀತಿಯಿಂದ ಹುತ್ತ ರಕ್ಷಾ ಶಿಲೆಗಳನ್ನು ಆರಾಧಿಸುತ್ತಿದ್ದ ಗ್ರಾಮೀಣರು ಒಂದು ಕಾಲಘಟ್ಟದಲ್ಲಿ ಅವುಗಳಲ್ಲಿ ಗ್ರಾಮದೇವತೆಗಳನ್ನು ಕಂಡುಕೊಂಡರು. ತಮ್ಮ ಜೀವನದ ಅನುಭವದಿಂದಲೇ ಹುಟ್ಟಿದ್ದ ಪುರಾಣ ಕಥೆಗಳನ್ನು ಅವುಗಳಿಗೆ ಜೋಡಿಸಿದರು. ಅನೇಕ ಗ್ರಾಮದೇವತೆಗಳು ಅತಿ ಪ್ರಾಚೀನವಾದ ಭೂಮಿಪೂಜೆ ಅಥವಾ ಮಾತೃ ಪೂಜೆಯ ಕುರುಹುಗಳಲ್ಲದೆ ಬೇರೆಯಲ್ಲ.
ಭಾರತದಲ್ಲಿ ಕೃಷಿ ಆರ್ಥಿಕ ಚಟುವಟಿಕೆಯಾಗಿ ರೂಪುಗೊಳ್ಳುವುದರ ಜೊತೆಗೆ ಶಾಕ್ತ ಪಂಥವು ತಲೆಯೆತ್ತಿತು. ಸೆಮಿಟಿಕ್ ಜನಾಂಗದಲ್ಲಿ ಬೆಳೆದ ಅಷ್ಟಾರ್ಟ್ ದೇವತೆಯ ಕಲ್ಪನೆ, ಈಜಿಪ್ಟ್ನಲ್ಲಿ ರೂಪಗೊಂಡ ಇಸಿನ್ ದೇವತೆಯ ಕಲ್ಪನೆ, ಫ್ರಿಜಿಯಾದಲ್ಲಿ ಸಿಬಿಲೇ ದೇವತೆಯ ಕಲ್ಪನೆ, ಭಾರತದ ಶಕ್ತಿದೇವತೆಯ ಕಲ್ಪನೆಗೆ ಸಮಾನ ಪರಿಕಲ್ಪನೆಗಳಾಗಿವೆ.
ಶಾಕ್ತ ಧರ್ಮವು ದೇವತೆಯನ್ನು ಪ್ರಪಂಚದ ಮೂಲ ಶಕ್ತಿಯ ಸಾಕಾರ ರೂಪವನ್ನು ದೈವಿಕ ಮತ್ತು ಜೈವಿಕ ಬೆಳವಣಿಗೆಯ ಮೂಲ ಶಕ್ತಿಯನ್ನಾಗಿ ಪರಿಗಣಿಸುತ್ತದೆ.
ಕೃಷಿ ಜನಾಂಗವೊಂದರ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯ ಪರಿಣಾಮವೇ ಆಗಿರಬೇಕು. ಪ್ರಾಚೀನ ಸಮಾಜಗಳಲ್ಲಿ ಮುಕ್ತ ಲೈಂಗಿಕತೆ ಇದ್ದು ಆಯಾ ಗುಂಪುಗಳ ಸ್ತ್ರೀಯರ ಮೂಲಕ ನಿಯಂತ್ರಿಸಲ್ಪಡುತ್ತಿದ್ದುದರಿಂದ ಆಗ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಜಾರಿಯಲ್ಲಿತ್ತು. ಮಕ್ಕಳಿಗೆ ಹೆತ್ತ ತಾಯಿಯನ್ನು ಮಾತ್ರ ಗುರುತಿಸಲು ಸಾಧ್ಯವಿದ್ದು ಈ ವ್ಯವಸ್ಥೆಯ ಹುಟ್ಟಿಗೆ ಕಾರಣವಿರಬೇಕು.
ಮನುಷ್ಯನ ಪ್ರಥಮ ಆರ್ಥಿಕ ಚಟುವಟಿಕೆಯಾದ ಆಹಾರ ಸಂಗ್ರಹಣೆಯ ಹಂತದಲ್ಲಿ ಸ್ತ್ರೀಪಾತ್ರ ಪ್ರಧಾನವಾಗಿತ್ತು.ಮಕ್ಕಳನ್ನು ಹೆರುವುದಲ್ಲದೆ ಅವರನ್ನು ಪಾಲನೆ ಮಾಡುವ ಮತ್ತು ಬೆಳೆಸುವ ಹೊಣೆಗಾರಿಕೆ ಅವಳದಾಗಿತ್ತು. ಸಮಾಜದ ಬೆಳವಣಿಗೆಯ ಮೊದಲ ಹಂತದಲ್ಲಿ ಸ್ತ್ರೀಮಾತ್ರ ಧರ್ಮದ ಕೇಂದ್ರಸ್ಥಾನದಲ್ಲಿ ಇದ್ದಳು. ಆಹಾರ ಸಂಗ್ರಹಣೆ ಮತ್ತು ಆಹಾರದ ಉತ್ಪಾದನೆ ಸ್ತ್ರೀಯ ಕರ್ತವ್ಯವಾಗಿದ್ದುದರಿಂದ ಸ್ತ್ರೀಯ ಸ್ಥಾನಮಾನ ಹೆಚ್ಚಿತು. ಈ ಮಾನ್ಯತೆ ಅವಳನ್ನು ದೈವತ್ವಕ್ಕೇರಿಸುವವರೆಗೆ ಹೋಯಿತು.
ಶಾಕ್ತ ಆಚಾರಗಳು ಪ್ರಧಾನವಾಗಿ ಕೃಷಿಯ ಉತ್ಪನ್ನಗಳ ಸಮೃದ್ಧಿಗಾಗಿ ಹುಟ್ಟಿಕೊಂಡಿವೆ. ಈ ಸಾಂಸ್ಕೃತಿಕ ಹಂತದಲ್ಲಿ ಆಸ್ತಿ ಹಕ್ಕು ಹೆಣ್ಣಿನ ಒಡೆತನಕ್ಕೆ ಒಳಪಟ್ಟಿದ್ದು ಕೌಟಂಬಿಕ ತಲೆಮಾರುಗಳು ಹೆಣ್ಣಿನ ಕಡೆಯಿಂದಲೇ ಗುರುತಿಸಲ್ಪಡುತ್ತಿದ್ದವು. ಕೃಷಿಯನ್ನು ಕಂಡುಹಿಡಿದಿದ್ದು ಹೆಣ್ಣು ಎಂದು ಬಹುಪಾಲು ಮನವಶಾಸ್ತ್ರಜ್ಞರು ಒಪ್ಪುತ್ತಾರೆ.ಗಂಡು ಬೇಟೆಗೆ ಹೋಗಿದ್ದಾಗ ಆಹಾರ ಸಂಗ್ರಹಣೆಯನ್ನು ಗೃಹಕೃತ್ಯವನ್ನು ನೋಡಿಕೊಳ್ಳುತ್ತಿದ್ದ ಹೆಣ್ಣು, "ಬೀಜವು ಗಿಡವಾಗುವ ಪವಾಡವನ್ನು" ಮೊದಲು ಕಂಡಳು.
ಹೆಣ್ಣಿನ ಗರ್ಭಧಾರಣೆ ಮತ್ತು ಭೂಮಿಯ ಸಸ್ಯಧಾರಣೆ ಇವೆರಡಕ್ಕೂ ಸಾಮ್ಯತೆಯನ್ನು ಕಂಡುಕೊಂಡ ಆದಿಮಾನವ ಹೆಣ್ಣು ಮತ್ತು ಭೂಮಿ ಇವೆರಡು ಪೂಜ್ಯ ವಸ್ತುಗಳೆಂದು ಭಾವಿಸಿದ. ಸಮೃದ್ಧಿಯ ಆಚರಣೆಯಾಗಿ ಮಾಟ ರೂಪುಗೊಂಡಿತು. ಇದರ ಮುಂದುವರೆದ ರೂಪವೇ ಶಾಕ್ತ ಪಂಥ.
ಈ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ರೂಪುಗೊಂಡು ಮಾತ್ರ ದೇವತೆಗಳ ಪ್ರತಿನಿಧಿಗಳಾದ ಗ್ರಾಮದೇವತೆಗಳು ಗ್ರಾಮಗಳಲ್ಲಿ ಆರಾಧನೆಗೆ ಒಳಗಾದವು.ಸಮೃದ್ಧಿ ಆಚರಣೆಗಳೆಲ್ಲಾ ಸ್ತ್ರೀ ಸಂಬಂಧಿ ಆಚರಣೆಗಳಾಗಿದ್ದರಿಂದ ಅನೇಕ ಸಂಸ್ಕೃತಿಗಳಲ್ಲಿ ಗಂಡಿಗೆ ಆಚರಣೆಯನ್ನು, ಆಚರಣೆಯ ಸ್ಥಳಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದೆ.ಈ ತೊಡಕನ್ನು ನಿವಾರಿಸಲು ಈ ಗಂಡು ಪೂಜಾರಿಯು ಸ್ತ್ರೀವೇಷಧಾರಿ ಆಗುತ್ತಾನೆ.ಬೆಂಗಳೂರು ಕರಗ ದೇವತೆಯ ಉತ್ಸವದ ಸಂದರ್ಭದಲ್ಲಿ ಅರ್ಚಕ ನಾದವನು ಸ್ತ್ರೀವೇಷ ದಾರಿಯಾಗುತ್ತಾನೆ. ಮೂಲದಲ್ಲಿ ಕರಗ'ದ ಉತ್ಸವ ಸಮೃದ್ಧಿಯ ಆಚರಣೆಯಾಗಿ ಇರುವುದೇ ಇದಕ್ಕೆ ಕಾರಣವಾಗಿದೆ.
ಆದಿಮಾನವನ ಮನಸ್ಸಿನಲ್ಲಿ ಹೆಣ್ಣು ಮತ್ತು ಪ್ರಾಣಿ ಎರಡು ಸಂಗತಿಗಳು ವಿಶೇಷವಾದ ಆಸಕ್ತಿಯನ್ನು ಕೆರಳಿಸಿದವು.ಲೈಂಗಿಕ ಸಂತೋಷದ ಮೂಲಾಧಾರ ವಾದ್ದರಿಂದ ಹೆಣ್ಣಿನ ಬಗ್ಗೆಯೂ, ಆಹಾರ ಮೂಲವಾದ್ದರಿಂದ ಪ್ರಾಣಿಗಳ ಬಗ್ಗೆಯೂ ಆದಿಮಾನವ ನಲ್ಲಿ ಕುತೂಹಲ ಬಂದಿರಬೇಕು.
ಹೆಣ್ಣನ್ನು ಚಿತ್ರಿಸುವಾಗ ಆಕೆಯ ಸ್ತನಗಳನ್ನು, ಜಘನಗಳನ್ನೂ ಪ್ರಧಾನವಾಗಿ ಚಿತ್ರೀಕರಿಸಲಾಗಿದೆ. ಹೀಗೆ ಸ್ತ್ರೀಯರು ಆರಂಭದ ಕೃಷಿಕರು ಆದರೆ, ಪುರುಷರು ಆರಂಭದ ಕಲಾಕಾರರಾಗಿದ್ದಾರೆ.
ಸಸ್ಯವು ಬೆಳೆಯಲು ಕಾರಣವಾಗುವ ಬೀಜದ ಪಾತ್ರವನ್ನು ಮಾನವನ ಅರಿತಿರಲಿಲ್ಲ. ಹಾಗೆಯೇ ಮಗುವಿನ ಸೃಷ್ಟಿಗೆ ಕಾರಣವಾಗುವ ಪುರುಷನ ಪಾತ್ರವೂ ತಿಳಿದಿರಲಿಲ್ಲ. ಆದ್ದರಿಂದ ಸೃಷ್ಟಿಕಾರ್ಯ ಹೆಣ್ಣು ಮತ್ತು ಭೂಮಿಯಿಂದ ಮಾತ್ರ ಸಾಧ್ಯ ಎಂದು ಭಾವಿಸಲಾಗಿತ್ತು.ಮನುಷ್ಯನ ಈ ಭಾವನೆ ಸ್ತ್ರೀ ಆರಾಧನೆಗೆ ದಾರಿಮಾಡಿಕೊಟ್ಟಿತು.
ಹರಪ್ಪ ಸಂಸ್ಕೃತಿಯಲ್ಲಿ ಒಂದು ಕುತೂಹಲಕರವಾದ ಮುದ್ರೆ ಸಿಕ್ಕಿದ್ದು ಇದು ಕೃಷಿ ದೃಶ್ಯಕ್ಕೆ ಸಂಬಂಧಿಸಿದ್ದಾಗಿದೆ.ಈ ಮುದ್ರಿಕೆಯಲ್ಲಿ ಒಂದು ಸ್ತ್ರೀ ವಿಗ್ರಹವಿದ್ದು ಆಕೆಯ ಗರ್ಭದಿಂದ ಒಂದು ಸಸ್ಯವು ಹುಟ್ಟುತ್ತಿರುವಂತೆ ಚಿತ್ರಿಸಲಾಗಿದೆ. ಇದರ ಇನ್ನೊಂದು ಬದಿಯಲ್ಲಿ ಸ್ತ್ರೀ-ಪುರುಷರ ಚಿತ್ರಗಳಿವೆ.ಒಬ್ಬ ಮನುಷ್ಯನು ನೇಗಿಲಿನ ಅಂತ ಆಯುಧವನ್ನು ಹಿಡಿದಿದ್ದಾನೆ. ಈ ಚಿತ್ರದಲ್ಲಿರುವ ಮನುಷ್ಯ ಉಳುಮೆ ಮಾಡುವ ರೈತ ಎಂದು ಭಾವಿಸಲಾಗಿದೆ. ಗರ್ಭದಿಂದ ಸಸ್ಯವು ಹೊಮ್ಮುತ್ತಿರುವ ಸ್ತ್ರೀಚಿತ್ರವನ್ನು ಮಾತೃದೇವತೆ ಎಂದು ಹೇಳಲಾಗಿದೆ . ಈಕೆಯನ್ನು ಶಾಕಂಬರಿ ಎಂದು ಗುರುತಿಸುತ್ತಾರೆ.
ಭೂಮಿಯನ್ನು ಸ್ತ್ರೀಯರೊಡನೆ ಹೋಲಿಸುವುದನ್ನು ಸಂಸ್ಕೃತಿಯ ಬೇರೆ ಬೇರೆ ಹಂತದ ಚಿಂತನೆಯಲ್ಲಿ ಕಾಣಬಹುದು. ರೋಮನ್ ಕಾನೂನಿನ ಪ್ರಕಾರ ತಾಯಿ ಮತ್ತು ಮಣ್ಣು ಸಮಾನರು.ಪ್ರಾಚೀನ ಭಾರತದಲ್ಲಿ ಮದುವೆಯ ಆಚರಣೆಯಲ್ಲಿ "ಸ್ತ್ರೀಯನ್ನು ಬೀಜ ಬಿತ್ತುವ ಹೊಲ"ವೆಂದು ಕರೆಯಲಾಗುತ್ತಿತ್ತು ಮತ್ತು ಅರ್ಚಕನು ಮದುಮಗನಿಗೆ "ಅವಳ ಮೇಲೆ ನಿನ್ನ ಬೀಜವನ್ನು ಬಿತ್ತು" ಎಂದು ಹಾರೈಸುತ್ತಿದ್ದನು. ಕುರಾನಿನ ಪ್ರಕಾರ "ನಿಮ್ಮ ಹೆಂಗಸರು ನಿಮ್ಮ ಹೊಲ" ತಾಯಿಯ ಗರ್ಭ ಒಂದೇ ವಸ್ತುವಿನ ಎರಡು ರೂಪಗಳಾಗಿವೆ. "ಬೆತ್ತಲೆಯಾಗಿ ನಾನು ತಾಯಿಯ ಗರ್ಭದಿಂದ ಬಂದೆ ಬೆತ್ತಲೆಯಾಗಿ ನಾನು ಅದಕ್ಕೆ ಹಿಂತಿರುಗುವೆ". ಎಂದು ಬೈಬಲ್ ನಲ್ಲಿ ಹೇಳಲಾಗಿದೆ.
No comments:
Post a Comment