ತ್ರಿಮೂರ್ತಿಗಳು
ಈ ದೇವರುಗಳು ಪರಸ್ಪರ ಸ್ನೇಹಿತರಾಗಿರುವುದರ ಬದಲು, ಪರಸ್ಪ ಶತ್ರುಗಳಾಗಿದ್ದು, ಸರ್ವೋತ್ಕೃಷ್ಟತೆಗೂ, ಪರಮಾಧಿಕಾರಕ್ಕೂ ಕಚ್ಚಾಟ ನಡೆಸುವವರಂತೆ ಕಾಣುತ್ತದೆ.. ಪುರಾಣಗಳಿಂದ ಆಯ್ದ ಕೆಲವು ಉದಾಹರಣೆಗಳು ಈ ವಿಷಯವನ್ನು ದೃಢಪಡಿಸುತ್ತವೆ.
ತ್ರಿಮೂರ್ತಿಗಳಲ್ಲಿ ಮೊದಲಿಗೆ ಹುಟ್ಟಿದವರು ಯಾರು ಎಂಬ ಪ್ರಶ್ನೆಗೆ ಶಿವನ ಪರೀಕ್ಷೆಯಲ್ಲಿ ಬ್ರಹ್ಮನು ಸುಳ್ಳಿನಿಂದ ಶಿವನಿಂದ ಶಿಕ್ಷೆಗೆ ಗುರಿಯಾಗಿ ನಂತರದಲ್ಲಿ ಮಗಳನ್ನುಮೋಹಿಸಿದ್ದರಿಂದ ಲೋಕಾಪಾದನೆಗೆ ಗುರಿಯಾಗಿ ತನ್ನ ಸ್ಥಾನಮಾನ ಗೌರವದಿಂದ ಶಾಶ್ವತವಾಗಿ ವಂಚಿತನಾದಾಗ ಮುಂದೆ ಕಣದಲ್ಲಿ / ಕಲಹದಲ್ಲಿ ಉಳಿದದ್ದು ಶಿವ ಮತ್ತು ವಿಷ್ಣು. ಶಿವನಿಗೆ ಸಹಸ್ರನಾಮ ಹಾಗೂ ನಾಲ್ಕು ಗುರುತುಗಳು 1) ಗಂಗೆ 2)ಅರ್ಧಚಂದ್ರ 3.) ಹಾವು (ಶೇಷ). 4) ಜಡೆ. ಇದರಂತೆ ವಿಷ್ಣುವಿಗೂ ಸಹ...
ಶಿವನ ಪರವಾಗಿ ಮಾಡಿರುವ ಮಹಾ ಕಾರ್ಯಗಳ ಪ್ರಚಾರಪಟ್ಟಿ ವಿಷ್ಣುವಿನ ಪರವಾಗಿ ಮಾಡಲಾಗಿರುವ ಪ್ರತಿ ಪ್ರಚಾರಕ್ಕೆ ಸರಿಸಾಟಿಯಾಗಿವೆ...
1. ಗಂಗೆಯ ಮೂಲ...
ಪವಿತ್ರ ಗಂಗೆಯು ಶಿವನ ಜಡೆಯಿಂದ ಹುಟ್ಟಿದ್ದು ಎಂಬುದು ಶೈವರ ವಾದವಾದರೆ...
ಗಂಗೆಯು ಶಿವನ ಮೂಲವಲ್ಲ; ಶಿವನು ವಿಷ್ಣುವಿಗಿಂತ ಕೀಳದುದರಿಂದ ವಿಷ್ಣುವಿನ ಪಾದದಿಂದ ಹರಿದ ನೀರನ್ನು ಅವನು ತನ್ನ ತಲೆಯ ಮೇಲೆ ಧರಿಸಿದ್ದಾನೆ ಎಂಬುದು ವೈಷ್ಣವರ ವಾದ.
2. ಸಮುದ್ರ ಮಂಥನ...
ವಿಷ್ಣು ಮಂದರ ಪರ್ವತವನ್ನು ಕಡಗೋಲನ್ನಾಗಿ; ಆದಿಶೇಷ ಮಹಾ ಸರ್ಪವನ್ನು ಹಗ್ಗವನ್ನಾಗಿ ಬಳಸಿ ಭೂಮಂಡಲ ನಡುಗಿ ಮುಳುಗುತ್ತಿರುವಾಗ ಕೂರ್ಮಾವತಾರ ತಾಳಿ ಅದನ್ನು ತನ್ನ ಬೆನ್ನೆ ಮೇಲೆ ಹೊತ್ತು ಕಾಪಾಡಿದ... ಎಂದು ವೈಷ್ಣವರು ವೈಭವಿಕರಿಸಲು...
ಸಮುದ್ರಮಂತನದಿಂದ ಉಂಟಾದ ಹಾಲಹಲವೆಂಬ ವಿಷ ಸೇವಿಸಿ ಹಾನಿಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗದಿದ್ದಾಗ ಶಿವನ ಅದನ್ನು ಸೇವಿಸಿ ತನ್ನ ಕಂಠದಲ್ಲಿರಿಸಿ... ನೀಲಕಂಠನಾದ. ವಿಷ್ಣುವಿನ ಮೂರ್ಖತನದಿಂದ ಉಂಟಾದ ದುರಂತವನ್ನು ಶಿವ
ತಡೆದನು ಎಂಬುದು ಶೈವರ ವಾದ...
3. ಅಕ್ರೂರಾಸೂರ
ಆಕ್ರೂರಾಸೂರ ವೇದ ಅಧ್ಯಯನ ಮತ್ತು ಭಕ್ತಿ ಕ್ರಿಯೆಗಳ ಮೂಲಕ ವಿಷ್ಣುವನ್ನು ಸಂತೃಪ್ತಿಪಡಿಸಿ ಅವನಿಂದ "ಮೂರು ಲೋಕಗಳಲ್ಲಿ ಈಗಿರುವ ಯಾವ ಜೀವಿಯು ತನ್ನ ಜೀವ ತೆಗೆಯುವಷ್ಟು ಶಕ್ತನಾಗಿರೋಕೂಡದು" ಎಂಬ ವರವನ್ನು ಪಡೆದನು.
ವಿಷ್ಣು ವಾದಿಯಾಗಿ ಯಾವ ದೇವ ದಾನವರಿಗೂ ಇವನ ಉಪಟಳದಿಂದ ಪಾರಾಗಲು ಸಾಧ್ಯವಾಗದಿದ್ದಾಗ ಸಕಲ ಸಂಹಾರಿಯಾದ ಮಹಾದೇವನು ಕ್ಷಣಮಾತ್ರದಲ್ಲಿ ವಿಷ್ಣುವಿನ ವ್ಯಾಕುಲವನ್ನು ಹೋಗಲಾಡಿಸಿದ.
ಭಸ್ಮಾಸುರನ ಕಥೆ.
"ಯಾರ ತಲೆಯ ಮೇಲೆ ಕೈ ಇಡುತ್ತೇನೆ ಅವನು ಸುಟ್ಟು ಬಸ್ಮವಾಗಲಿ" ಎಂಬ ವರವನ್ನು ಪಡೆದು ಅದನ್ನು ಶಿವನ ಮೇಲೆ ಪ್ರಯೋಗಿಸಲು ಪ್ರಯತ್ನಿಸಿದ..
ವಿಷ್ಣು ಒಬ್ಬ ಸುಂದರ ಸ್ತ್ರೀಯ ರೂಪ ತಾಳಿ ಭಸ್ಮಾಸುರನ ಬಳಿ ಹೋಗಿ ಮೋಹಿಸಿ ತನ್ನ ತಲೆಯ ಮೇಲೆ ತಾನೆ ಕೈ ಇಟ್ಟುಕೊಳ್ಳುವಂತೆ ಮಾಡಿ ಶಿವನ ತಪ್ಪಿನಿಂದಾದ ದುಷ್ಪರಿಣಾಮಗಳಿಂದ ಕಾಪಾಡಿದ ಎಂಬ ಕೀರ್ತಿ ವಿಷ್ಣುವಿಗೆ ಸಂದಿತು ಎಂಬುದು ವೈಷ್ಣವರ ವಾದ...
ತ್ರಿಮೂರ್ತಿಗಳ ಅನುಯಾಯಿಗಳಾಗಿದ್ದವರು ಒಬ್ಬೊಬ್ಬ ದೇವರನ್ನು ಆರಿಸಿಕೊಂಡು ಪ್ರತಿಪಕ್ಷದ ದೇವರ ಮೇಲೆ ದಾಳಿಯನ್ನು ಏಕೆ ಆರಂಭಿಸಿದರು..?
(ಅಂಬೇಡ್ಕರ್ ಅವರ ಬರೆಹ ಮತ್ತು ಭಾಷಣಗಳು - ಸಂಪುಟ ಮೂರು)
No comments:
Post a Comment