ಮನುಷ್ಯನ ಮೇಲೆ ಆಹಾರ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಒಮ್ಮೆ ಒಬ್ಬ ಬ್ರಾಹ್ಮಣ ಭಗವಾನ್ ಬುದ್ಧನನ್ನು ಪ್ರಶ್ನೆ ಮಾಡುತ್ತಾನೆ...
ಗಡ್ಡೆಗೆಣಸು ಹಣ್ಣು ಹಂಪಲು ಚಿಗುರು, ಇವುಗಳು ತಿನ್ನಲು ಯೋಗ್ಯವಾದುದು, ಕೊಳತ್ತದ್ದನ್ನು- ಮಾಂಸ ತಿನ್ನೋದು ತಪ್ಪು ಎಂಬ ಗ್ರಹಿಕೆ ಆ ಬ್ರಾಹ್ಮಣನ ಕಲ್ಪನೆ.
ಆಗ ಭಗವಾನ್ ಬುದ್ಧರು ಹೇಳುತ್ತಾರೆ... ಕೊಲ್ಲುವುದು, ಸುಳ್ಳು ಹೇಳುವುದು, ಮೋಸ, ವಂಚನೆ, ವ್ಯಭಿಚಾರ, ಮತ್ತುಬರಿಸುವ ವಸ್ತುಗಳ ಸೇವನೆ, ಬೇರೆಯವರ ಆಸ್ತಿಯ ಮೇಲೆ ಆಸೆ, ಚಾಡಿ ಹೇಳುವುದು, ಕ್ರೌರ್ಯ ಮೆರೆಯುವುದು, ದ್ರೋಹ ಬಗೆಯುವುದು, ಜಂಬ ಕೊಚ್ಚಿಕೊಳ್ಳುವುದು, ನಿರ್ದಾಕ್ಷಿಣ್ಯ ವರ್ತನೆ ಹಲ್ಲೆ ನಿಂದನೆ. ಅನೈತಿಕ ಕ್ರಿಯೆಗಳಲ್ಲಿ ತೊಡುವುದು, ತಪ್ಪು ದೃಷ್ಟಿ , ಇಂತಹ ವಿಕೃತ ಮನಸ್ಸಿನ ವರ್ತನೆ ಕೆಟ್ಟದ್ದು... ಮಾಂಸ ಆಹಾರ ಸೇವನೆ ಕೆಟ್ಟದ್ದಲ್ಲ... ಮುಂದುವರೆದು
ಮಾಂಸ ಮತ್ತು ಮತ್ಸ್ಯ ವರ್ಜನೆಯಿಂದ, ಬೆತ್ತಲೆ ಸೇವೆ, ಜುಟ್ಟು ಬಿಡುವುದರಿಂದ, ಚರ್ಮದ ಉಡುಗೆ ತೊಡಗುವುದರಿಂದ, ಕಠಿಣ ವ್ರತ ಮಾಡುವುದರಿಂದ, ಪವಿತ್ರ ಸ್ನಾನ ಮಾಡುವುದರಿಂದ, ತಲೆಬೋಳಿಸುವುದರಿಂದ, ಅಗ್ನಿ ಉರಿಸುವುದರಿಂದ, ಹರಕೆ ತೀರಿಸುವುದರಿಂದ... ಯಾರು ಕೂಡ ಶುದ್ಧವಾದ ಜೀವನ ನಡೆಸುವುದಕ್ಕೆ ಸಾಧ್ಯವಿಲ್ಲ....
ಇಂದ್ರಿಯ ಸುಖ ನಿಯಂತ್ರಿಸುವುದು, ಕರುಣೆ ಪ್ರೀತಿ ಮೈತ್ರಿ ಪ್ರಜ್ಞೆ, ಸದಾಚಾರ ಸನ್ಮಾರ್ಗದಲ್ಲಿ ನಡೆಯುವ ಸಂಕಲ್ಪ ಮಾಡಿದಾಗ ಮಾತ್ರ ಶುದ್ಧವಾದ ಜೀವನವನ್ನು ಆನಂದವನ್ನು ಪರಿಪೂರ್ಣತೆಯನ್ನು ಹೊಂದುವರು... ಎಂದು ಭಗವಾನ್ ಬುದ್ಧರು ಹೇಳಿದರು.
ಆಗ ಆ ಬ್ರಾಹ್ಮಣನು ತನ್ನೊಳಗಿನ ಅಜ್ಞಾನವನ್ನು ಹೊರಹಾಕಿ ,ದುರ್ಗುಣಗಳನ್ನು ಹೊಸಕಿ ಹಾಕಿ ಮೊಣಕಾಲೂರಿ ಭಗವಾನ್ ಬುದ್ಧರ ಚರಣಗಳಲ್ಲಿ ಶರಣು ಹೋದ...
No comments:
Post a Comment