ಸ್ತ್ರೀವಾದಿ ಚಿಂತನೆ ಮೊದಲನೆಯದಾಗಿ ಸ್ತ್ರೀ-ಪುರುಷರ ನಡುವಿನ ಅಸಮಾನತೆಯನ್ನು ಪ್ರಕೃತಿ ಸಹಜವಲ್ಲ, ಜೈವಿಕ ವಲ್ಲ, ಅದು ಸಾಂಸ್ಕೃತಿಕ ಹಿನ್ನೆಲೆ ಯಾಗಿದ್ದು ಪರಿಸರದ ಕಾರಣದಲ್ಲಿ ಉದ್ಭವಿಸಿದ್ದು ಎಂದು ಹೇಳುತ್ತದೆ.
ಪುರುಷ ದೃಷ್ಟಿಕೋನ ಸಾರ್ವತ್ರಿಕವಲ್ಲ. ಪುರುಷಪ್ರಧಾನ ಮೌಲ್ಯಗಳು ಪ್ರಧಾನ ಸಂಸ್ಕೃತಿ ಅನುಕೂಲಕರವಾದ ಅರ್ಧಸತ್ಯವನ್ನಷ್ಟೇ ಹೇಳುತ್ತದೆ.
ಹೆಣ್ಣುತನದ ಗುಣ ಸ್ವಭಾವಗಳು ದೈಹಿಕವಾಗಿ ಹೆಣ್ಣಾದ ಮಾತ್ರಕ್ಕೆ ಒಳಗೊಂಡಿರುತ್ತವೆ ಎಂಬ ಮೂಲ ನಂಬಿಕೆಯನ್ನೇ ಸ್ತ್ರೀವಾದ ಪ್ರಶ್ನಿಸುತ್ತದೆ.
ಹೆಣ್ಣು ಗಂಡು ಪರಸ್ಪರ ವಿರುದ್ಧ ವ್ಯಕ್ತಿತ್ವಗಳು ಎಂಬ ಕಲ್ಪನೆಯನ್ನು ಮೊದಲು ತೊಡೆದುಹಾಕಬೇಕಾದ ಅಗತ್ಯವನ್ನು ಸ್ತ್ರೀವಾದ ಗುರುತಿಸಿದೆ.
ಸ್ತ್ರೀವಾದ ದೃಷ್ಟಿಕೋನ ಮಾನವತಾವಾದಿಕ್ಕಿಂತ ಭಿನ್ನವಲ್ಲ ,ಹುಟ್ಟಿನಿಂದಲೇ ಒಂದು ಗುಂಪು ಇನ್ನೊಂದು ಗುಂಪಿನ ಶ್ರೇಷ್ಠ ಎಂಬ ಮೂಲ ಶ್ರೇಣೀಕೃತ ವ್ಯವಸ್ಥೆಯನ್ನು ಸ್ತ್ರೀವಾದ ತಿರಸ್ಕರಿಸುತ್ತದೆ.
ಇತಿಹಾಸದುದ್ದಕ್ಕೂ ಪುರುಷ ಪ್ರಪಂಚದ ಅನುಭವಗಳೇ ಸಾರ್ವತ್ರಿಕವಾಗಿ ಎಂಬಂತೆ ಅಭಿವ್ಯಕ್ತಿಗೊಂಡು, ಸ್ತ್ರೀರಿಯರ ಅನಿಸಿಕೆ ಅನುಭವ, ಸಾಧನೆ ದಾಖಲಾಗದೆ. ಏಕಮುಖ ಚರಿತ್ರೆಯಾಗಿದೆ . ಪುರಾಣ ಪುಣ್ಯಕಥೆಗಳಲ್ಲಿ ಸತಿ ಮಣಿಯರ ಪಾತಿವ್ರತ್ಯವನ್ನು ಒತ್ತಿ ಹೇಳುವಾಗ ಪ್ರತಿಭಟಿಸದೆ ಮೆದುತನವನ್ನೇ ಆದರ್ಶವಾಗಿಸುವ ನಿಂತ ನೀರಲ್ಲಿ ಪುರುಷನ ಪ್ರತಿಬಿಂಬ ಕಂಡೆ ಅಪವಿತ್ರಳಾಗುವ ರೇಣುಕೆಯ ತಲೆ ಕಡೆದಾಗ ಪ್ರಧಾನ ಸಂಸ್ಕೃತಿ ಪುರುಷ ಲಾಭಕ್ಕಾಗಿಯೇ ದುಡಿಯುತ್ತಿತ್ತು.
ಮಹಿಳೆಗೆ ಮಕ್ಕಳ ಲಾಲನೆ ಪೋಷಣೆಯನೆಲ್ಲ ಅಂಟಿಸುವಲ್ಲಿ ಅವು ಪ್ರಕೃತಿ ಸಹಜ ಎಂದು ಸಾರುವಲ್ಲಿ ಈ ಪುರುಷ ಪ್ರಧಾನ ಸಂಸ್ಕೃತಿ ತನ್ನ ತಂದೆತನದ ಜವಾಬ್ದಾರಿಯಿಂದ ಜಾರಿಕೊಂಡಿತಲ್ಲದೆ, ಮನೆಯ ಹೊರಗಿನ ಗಂಡಿನ ದಿಗ್ವಿಜಯಗಳಿಗೆ ಇದು ಅನುಕೂಲಕರವಾಯಿತು. ಪುರುಷರು ಮಹಿಳೆಗೆ ಅನಿಸ ಬೇಕಾದದ್ದನ್ನು ಬರೆದಿಟ್ಟರು.
ಎಲ್ಲಾ ಪುರುಷಪ್ರಧಾನ ಸಂಸ್ಕೃತಿಗಳು ಸೃಷ್ಟಿಸಿದ ಹೆಣ್ಣಿನ ಪ್ರತಿಮೆ ಎರಡು ಬಗೆಯದ್ದು." ಮಾತೇ ಇಲ್ಲವೆ ಮಾಯೆ" ಮಾತೆಯಾಗಿ ಬಹು ಮಾನ್ಯಗಳು ಪೂಜ್ಯರು ಮಾಯೆಯಾಗಿ, ಮೋಹಿನಿಯಾಗಿ, ಪುರುಷನನ್ನು ಮರುಳು ಮಾಡುವವಳು, ಹಾದಿ ತಪ್ಪಿಸುವವಳು, ಜಗತ್ತಿನ ಪಾಪವನ್ನೆಲ್ಲ ಸಂಕೇತಿಸುವವಳು.
ರಾಮನ ವಚನ ಪಾಲನೆ ರಾಜ ಧರ್ಮಗಳ ಕಥೆ ಹೇಳುವ ರಾಮಾಯಣವು, ಸೀತೆಯ ತುಮುಲ ಅಪಮಾನಗಳನ್ನು ಮರೆತುಬಿಟ್ಟಿತು. ಅಣ್ಣ ತಮ್ಮಂದಿರ ಪ್ರೀತಿ ವಿಶ್ವಾಸವನ್ನು ಹಾಡಿ ಹೊಗಳುವಾಗ. ಅಣ್ಣನ ಹಿಂದೆ ಹೋದ ಲಕ್ಷ್ಮಣನ ಭ್ರಾತೃತ್ವ ಪ್ರೇಮವನ್ನು ಕೊಂಡಾಡುವಾಗ ಹದಿನಾಲ್ಕು ವರ್ಷ ಒಂಟಿಯಾಗಿ ಕಾದ ಊರ್ಮಿಳೆ ಸ್ಥಿತಿಗೆ ಮೌನ ತಾಳಿತು.
ಮಾಧವಿಯ ಹೆಣ್ಣುತನ ಹರಿದು ಹಂಚಿದ ಬಗೆಯನ್ನು ಬಣ್ಣಿಸಲೇ ಇಲ್ಲ. ರಾಜಕುಮಾರಿಯಾಗಿ ಹುಟ್ಟಿಯೂ ನಾಲ್ವರು ರಾಜರೊಡನೆ ಒಲ್ಲದ ಮನಸ್ಸಿನಿಂದ ಕೂಡಿ, ಎದೆ ಹಾಲು ಚಿಲ್ಲೆನ್ನುವ ಹೊತ್ತಲ್ಲಿ, ಹೆತ್ತ ಕೂಸು ತೊರೆದು ನಡೆದ ಮಾಧವಿಯ ಕಥೆಯನ್ನು ಪುರಾಣಗಳು ಹೇಳಲಿಲ್ಲ.
ಬೆಂಕಿಗಟ್ಟಿದರು ,ಕಾಡಿಗಟ್ಟಿದರು, ಕರುಣಾಳು ರಾಮನಲ್ಲಿ ತಪ್ಪು ಕಾಣದ, ಬುಟ್ಟಿಯಲ್ಲಿ ಗಂಡನನ್ನು ಹೊತ್ತು ಸೂಳೆಮನೆ ತಲುಪಿಸಿದ ಮಹಿಳೆಯರ ಶೀಲ ಪಾತಿವ್ರತ್ಯ ವಿಧೇಯತೆಗಳನ್ನು ಹಾಡಿ ಕೊಂಡಾಡಿದ ಸಂಸ್ಕೃತಿಯು, ಮಹಿಳೆಯ ಗುಣ - ಸ್ವಭಾವ, ಸ್ಥಾನ-ಮಾನ, ಸದಾ ಕಾಲ ಪುರುಷ ಕೇಂದ್ರಿತ ದೃಷ್ಟಿಕೋನದಿಂದ ಅರ್ಥೈಸಲ್ಪಟ್ಟಿತು.
ಪುರುಷ ಕೇಂದ್ರಿತ ಕೃತಿಗಳಲ್ಲಿ, ಕೃತಿ ಹೇಳುವುದಷ್ಟನ್ನೇ ಪೂರ್ಣ ಸತ್ಯವೆಂದು, ಸುಮ್ಮನಾಗದೆ,ಹೇಳದ್ದನ್ನು ಪದ-ಪದಗಳ ನಡುವಿನ ಮೌನವನ್ನು ಆಲಿಸುತ್ತದೆ.
ಸ್ತ್ರೀವಾದಿಗಳ ಹೋರಾಟವೇನಿದ್ದರೂ ಪುರುಷ ಪ್ರಧಾನ ವ್ಯವಸ್ಥೆಯ ಪುರುಷ ಕೇಂದ್ರಿತ ನಿಲುವುಗಳನ್ನು ಎತ್ತಿಹಿಡಿಯುವ ವ್ಯವಸ್ಥೆಯ ವಿರುದ್ಧವೇ ಹೊರತು ಪುರುಷನ ವಿರುದ್ಧವಲ್ಲ.
ಸ್ತ್ರೀಪರವಾದ ವಿಚಾರಗಳ ಬಗೆಗೆ ವಿಶೇಷವಾದ ಕಾಳಜಿ ಹೊಂದಿದ್ದು , ಪ್ರತಿಸ್ಪಂದಿಸುವವರನ್ನು ಸ್ತ್ರೀವಾದಿಗಳೆಂದು ಗುರುತಿಸಬಹುದು.ಹೆಣ್ಣಾದವರಿಗೆ, ಹಣ್ಣಾಗಬಲ್ಲವರಿಗೆ ತಟ್ಟಬಲ್ಲ ಮುಟ್ಟಬಲ್ಲ ಆ ಕೋನವೇ ಸ್ತ್ರೀ ದೃಷ್ಟಿಕೋನ.
ಈ ಕಾರಣಕ್ಕಾಗಿಯೇ ಮುಡಚೆಟ್ಟು, ಮೃಲಿಗೆಗಳು ಹೆಣ್ತನದೊಂದಿಗೆ ತಳುಕು ಹಾಕಿಕೊಂಡು ಯಾಜಮಾನ್ಯ ಸಂಸ್ಕೃತಿ ನಿರ್ಧರಿಸುವ ಚೌಕಟ್ಟಿನೋಳಗೆ ಪ್ರವಹಿಸುತ್ತವೆ. ಅದರಲ್ಲೂ ವೈದಿಕ ವ್ಯವಸ್ಥೆಯ ಕರ್ಮಸಿದ್ಧಾಂತವು ಹೆಣ್ಣು ಹೆರಿಗೆ, ಮುಟ್ಟು ಮುಂತಾದವುಗಳನ್ನು ತುಚ್ಚೀಕರಿಸಿದೆ. ಸೂತಕಗೋಳಿಸಿದೆ " ನೀಲಾ"
ಸ್ತ್ರೀಗೆ ಪತಿಯೇ ಪರದೈವ
ಗಂಡನ ಊಟವಾದ ನಂತರ ಹೆಂಡತಿಯಾದವಳು ಊಟ ಮಾಡಬೇಕು. ಗಂಡನು ಎಷ್ಟೇ ಉದ್ರೇಕಗೊಳಿಸುವ ಮಾತುಗಳನ್ನಾಡಿದರು ಹೆಂಡತಿ ಹಿಂತಿರುಗಿ ಮಾತನಾಡಿಸಬಾರದು. ಹಾಗಿದ್ದರೆ ಮಾತ್ರ ಅವಳು ಗಂಡಿನ ಪ್ರಶಂಸೆಗೆ ಪಾತ್ರಳಾಗತ್ತಾಳೆ.
ಧರ್ಮ ಶಾಸ್ತ್ರಗಳೂ, ಪುರಾಣಗಳು ಸ್ತ್ರೀಯು ಪಾಲಿಗೆ ಆಶಾದಾಯಕವಾಗಿರಲಿಲ್ಲವೆನ್ನಬೇಕು. ಪುರುಷನ ಬೋಗ, ಕಾಮಾಸಕ್ತಿ,ಲೋಭತೆ, ತಮಗೆ ಬೇಕಾದ ರೀತಿಯ ಧಾರ್ಮಿಕ ಸೂತ್ರಗಳನ್ನು ನಿರ್ಮಿಸಿ ಅನೇಕ ಸ್ತ್ರೀಯರನ್ನು ಹೆಂಡತಿಯರನ್ನಾಗಿ ಪಡೆದು ಭೋಗಿಸಿ ಅವರನ್ನು ಅಲ್ಲಲ್ಲಿಯೇ ಬಿಟ್ಟು ಪುಣ್ಯ ಪುರುಷರಾಗಿ ಪೂಜನೀಯರೆನಿಸಿಕೊಳ್ಳುತ್ತಿದ್ದಾರೆ. ಹೆಂಗಸರ ಶೀಲವನ್ನೇ ಶಂಕಿಸಿ ಅವರನ್ನು ಮಾನಸಿಕ, ದೈಹಿಕವಾಗಿ,ಕ್ಷೋಭೆಗೊಳಪಡಿಸಿ ತಾವು ನಲಿದು ಮಹಿಳೆಯರನ್ನು ಶಿಕ್ಷೆಗೊಳಪಡಿಸಿದ್ದೂ ಇದೆ.
ಶಕುಂತಲೆಯನ್ನು ಪ್ರೇಮಿಸಿ ಅವಳನ್ನು ಭೋಗಿಸಿ ನಂತರ ತನ್ನ ಅರಮನೆಗೆ ಸೇರಿಸಿಕೊಳ್ಳದೆ ಕಾಡಿಗೆ ಅಟ್ಟಿದ ದುಶ್ಯಂತನು ಪುರಾಣ ಕಾವ್ಯಗಳಲ್ಲಿ ವೀರನೆನಿಸಿಕೊಂಡಿದ್ದಾನೆ.
ರಾಮನು ಅಗ್ನಿ ಸಾಕ್ಷಿಯಾಗಿ ಕೈಹಿಡಿದ ಸೀತೆಯನ್ನು ಅವಳ ಶೀಲವನ್ನು ಶಂಕಿಸಿ ಕಾಡಿಗೆ ಅಟ್ಟಿದ ಉದಾಹರಣೆಗೆ ರಾಮಾಯಣ ಗ್ರಂಥ ಸಾಕ್ಷಿಯಾಗಿದೆ.
ಮಹಾಭಾರತದಲ್ಲಿ ಮತ್ಸಯಗಂದಿ ಸತ್ಯವತಿ- ಶಂತನು ವನ್ನು ಕೂಡುವ ಮೊದಲೆ ಪರಾಶರ ಮುನಿಯನ್ನು ಕೂಡಿ ವ್ಯಾಸಮುನಿಯನ್ನು ಹಡೆಯುತ್ತಾಳೆ.
ಕುಂತಿಯ ಕತೆಯೇ ವಿಚಿತ್ರ ಆಕೆ ವಿವಾಹ ಪೂರ್ವದಲ್ಲಿ ಸುರ್ಯನಿಂದ ಕರ್ಣನನ್ನು ಪಡೆಯುತ್ತಾಳೆ.
ಮಾದ್ರಿ, ಅಶ್ವಿನಿ, ದೇವತೆಗಳಿಂದ, ಸಂತಾನವನ್ನು ಪಡೆಯುತ್ತಾಳೆ. ಪಾಂಡುವಿನ ಸತ್ತಾಗ ಚಿಂತೆಯಿಲ್ಲಿ ಸಹಗಮನ ಮಾಡುತ್ತಾಳೆ. ಹೆಂಡತಿ ಸತ್ತರೆ ಕೂಡಲೇ ಗಂಡಸಿಗೆ ಮರುಮದುವೆ ಮಾಡುವ ಸಮಾಜ.
ವೇದ, ಶಾಸ್ತ್ರ, ಪುರಾಣ, ಕಾವ್ಯಗಳೆಲ್ಲ ಬರೆದವರು ಪುರುಷರು, ಅವರಿಗೆ ಸ್ತ್ರೀಯರನ್ನು ತಮ್ಮ ಸರಿಸಮನಾಗಿ ಚಿತ್ರಿಸುವುದು ಅವಮಾನಕರವೆಂಬಂತೆ ಕಂಡಿರಬೇಕು.
No comments:
Post a Comment