*ಪ್ರಾಚೀನ ಭಾರತದಲ್ಲಿ ಭೌತಿಕವಾದ*
*ಚಾರ್ವಾಕ /ಲೋಕಯತ ದರ್ಶನ ಒಂದು ಅಧ್ಯಯನ ----ದೇವಿಪ್ರಸಾದ್ ಚಟ್ಟೋಪಾಧ್ಯಾಯ*
ಇಂದ್ರಿಯ ಅನುಭವಕ್ಕೆ ನಿಲುಕದ, ಪ್ರಾಯೋಗಿಕ, ವೈಜ್ಞಾನಿಕ ,ವೈಚಾರಿಕ ತಳಹದಿಯ ಮೇಲೆ ಯಾವುದನ್ನು ಪ್ರಶ್ನಿಸದೇ ಪರೀಕ್ಷಿಸದೆ ಒಪ್ಪಿಕೊಳ್ಳದೆ ಹಾಗೂ ವಾಸ್ತವ್ /ಪ್ರತ್ಯಕ್ಷ ಅನುಭವಗಳಿಂದ ಕೂಡಿದ ಲೋಕ ಸತ್ಯಗಳನ್ನು ಒಪ್ಪುವುದಾಗಿದೆ. ಸತ್ಯವಲ್ಲದ ಸತ್ಯವನ್ನು, ಅನುಮಾನವನ್ನು,ಆಧ್ಯಾತ್ಮಿಕ ,ಸ್ವರ್ಗ-ನರಕ, ಕರ್ಮಫಲ, ಆತ್ಮ, ಎಂಬ ಪರಿಕಲ್ಪನೆಗಳನ್ನೆ ಬಂಡವಾಳವಾಗಿಸಿಕೊಂಡು ಮುಕ್ತಿ, ಮೋಕ್ಷ, ಸ್ವರ್ಗ-ನರಕದ ಪ್ರಾಪ್ತಿ ,ಎಂದು ಜನರನ್ನು ಮಾನಸಿಕ ಗುಲಾಮರನ್ನಾಗಿಸುವ ಮೂಲಕ ಹತೋಟಿಗೆ ತೆಗೆದುಕೊಳ್ಳುವ ಪುರೋಹಿತಶಾಹಿ (ಅನೇಕ ತತ್ವದರ್ಶನಗಳಿಗೆ) ತತ್ವದರ್ಶನಕೆ ವಿರೋಧಾಭಾಸ ಉಂಟುಮಾಡುವ ತರ್ಕಬದ್ಧವಾದ ದರ್ಶನ/ಶಾಸ್ತ್ರವೇ--- ಈ ಚಾರ್ವಾಕ/ ಲೋಕಾಯತ/ ಭೌತಿಕವಾದ. (ನನ್ನ ಗ್ರಹಿಕೆ.)
ಪ್ರಾಚೀನ ಭಾರತದಲ್ಲಿ ಅಧ್ಯಾತ್ಮಿಕವಾದದೊಂದಿಗೆ ಸಂಧಿಗೊಪ್ಪದ್ದೆ....ಈ ಬೌತಿಕ ವಾದವಾಗಿದೆ.
ಜನರ ತತ್ವಜ್ಞಾನ , ಐಹಿಕ ತತ್ವಜ್ಞಾನ, ಭೌತಿಕವಾದಿ ತತ್ವಜ್ಞಾನ ಎಂದು ಅರ್ಥವಿದೆ -ಈ ಬಿ ಕೋವೆಲ್.
ಆದರೆ ಭಾರತೀಯ ತತ್ವಜ್ಞಾನದೊಳಗೆ ಭೌತಿಕವಾದದ ಖಂಡನೆ ಧಾರಾಳವಾಗಿದೆ...
*ಜಯ ರಾಶಿ ಭಟ್ಟ, ಶಂಕರಾಚಾರ್ಯ ,ಮಾಧವಾಚಾರ್ಯ, ಗುಣರತ್ನ...* ಮುಂತಾದವರು ಈ ವಾದವನ್ನು ತರ್ಕಬದ್ಧವಾಗಿ ಸಮರ್ಥಿಸುವದಕ್ಕಿಂತ ವ್ಯಂಗ್ಯವಾಗಿ ವಿರೋಧಿಸುವ ಕೆಲಸವನ್ನೇ ಮಾಡಿದ್ದಾರೆ.
ಅದರ ವಿರೋಧಿಗಳ ಪ್ರಕಾರ ಭೌತಿಕ ವಾದವು ತಿನ್ನು ,ಕುಡಿ, ಕುಣಿದಾಡು, ನೀತಿ -ಅನೀತಿ ಗಳನ್ನು ಕುರಿತಾಗಲಿ, ಸ್ವರ್ಗ ನರಕಗಳನ್ನು ಕುರಿತಾಗಲಿ ಚಿಂತಿಸದಿರು. ಕೀಳು ಪ್ರವೃತ್ತಿಯವರು, ಕೀಳು ಅಭಿರುಚಿ ಉಳ್ಳವರು ಅಪಾಯಕಾರಿಗಳೆಂದು ಬಿಂಬಿಸಲಾಗಿದೆ.
ಹಾಗೆ ನೋಡಿದರೆ ಕುರುಕ್ಷೇತ್ರದಲ್ಲಿ ಅರ್ಜುನನ ಚಂಚಲತೆಯನ್ನು ನಿವಾರಣೆ ಮಾಡಲು ಕೃಷ್ಣ ವಿಶ್ವ ರೂಪತಾಳಿ.. ಈ *"ಯುದ್ಧದಲ್ಲಿ ನೀನು ಸತ್ತರೆ ನಿನಗೆ ಸ್ವರ್ಗ ಸಿಗುತ್ತದೆ; ನೀನು ಗೆದ್ದರೆ ಇಡೀ ಭೂಮಂಡಲವನ್ನೇ ನಿನ್ನ ಸುಖ ಸಂತೋಷಗಳಿಗೆ ಪ್ರಾಪ್ತವಾಗುತ್ತದೆ"*. (ಸುಖ ಭೋಗ- ಲಾಲಸೆ) ಎಂದು ಉಪದೇಶ ನೀಡುತ್ತಾನೆ.
ಹೀಗೆ ನಿಜವಾಗಿ ನೋಡಿದರೆ ಭೌತಿಕವಾದವನ್ನು ಕುರಿತು ಮಾಡಲಾಗಿರುವ ಆರೋಪ ಅಧ್ಯಾತ್ಮಿಕವಾದಕ್ಕೆ ಸಲ್ಲುತ್ತದೆ.
*ಎಂಗಲ್ಸ್* -ಬೌದ್ಧಿಕವಾದ ದೀರ್ಘಕಾಲ ಪುರೋಹಿತ ವರ್ಗದವರ ನಿರಂತರ ಅಪಪ್ರಚಾರಕ್ಕೆ ಬಲಿಯಾಗಿದ್ದರಿಂದ ಭೌತಿಕವಾದ ಎಂಬ ಪದದ ವಿರುದ್ಧ ಪರಂಗತ ವಿಚಾರವಂತರಲ್ಲಿ ತೀವ್ರ ಪೂರ್ವಗ್ರಹ ಬೆಳೆದು ಗಟ್ಟಿಯಾಗಿದೆ. ಬೌತಿಕವಾದವೆಂದರೆ ಹೊಟ್ಟೆಬಾಕತನ ,ಕುರುಡುತನ, ದೃಷ್ಟಿ ಕಾಮ, ಭೋಗಲಾಲಸೆ, ಅಹಂಭಾವ, ದುರ್ಮೋಹ, ಅತ್ಯಾಶೆ, ದೋಚುವಾಸೆ, ಶೇರುಮಾರುಕಟ್ಟೆಯ ವಂಚನೆ ಇತ್ಯಾದಿಗಳೆಂದು ಭಾವಿಸಲಾಗಿದೆ..
ಈ ವಿರೋಧವೂ ಬಾಲಿಶ ಹಾಗೂ ಅರ್ಥಶೂನ್ಯವಾದದ್ದು. ತಾತ್ಸಾರ ಮನೋಭಾವದಿಂದ ತಿರಸ್ಕರಿಸುವಂತದ್ದಲ್ಲದೆ ಮತ್ತೆನೂ ಅಲ್ಲಾ.
ಅಧ್ಯಾತ್ಮಿಕವಾದಿಗಳು ಸತ್ಯವಲ್ಲದ ಸತ್ಯ ತಮ್ಮ ಮೂಲಭೂತ ದೌರ್ಬಲ್ಯವನ್ನು ಮುಚ್ಚಿಡುವುದಕ್ಕೆ ಈ ಅರ್ಥವಿಲ್ಲದ ವಾಗಾಡಂಬರವನ್ನಲ್ಲದೆ ಬೇರೆ ಏನನ್ನು ಉಪಯೋಗಿಸಲಾರರು..ಅಧ್ಯಾತ್ಮಿಕ ವಾದಿಗಳ ಈ ವಾದಗತಿ ಬರೇ ತಾತ್ವಿಕ ಬೂಟಾಟಿಕೆ.. ವಂಚನೆಯಾಗಿದೆ.
*ಮಹಾಭಾರತದ ಚಾರ್ವಾಕ /ದಾನವ (ಮಿತ್)*
ಕುರುಕ್ಷೇತ್ರ ಯುದ್ಧದಲ್ಲಿ ಜಯಶಾಲಿಗಳಾದ ಪಾಂಡವ ಸಹೋದರರು ಅತ್ಯಂತ ವೈಭವ ವಿಜೃಂಭಣೆಗಳೊಂದಿಗೆ ಮರಳಿ ಪ್ರವೇಶ ಮಾಡಿದಾಗ,ಯುಧಿಷ್ಠರನಿಗೆ ಆಶೀರ್ವಾದಗಳನ್ನು ನೀಡುವುದಕ್ಕಾಗಿ ಸಹಸ್ರ ಸಹಸ್ರ ಬ್ರಾಹ್ಮಣರು ಪ್ರವೇಶದ್ವಾರದಲ್ಲಿ ನೆರೆದಿದ್ದರು. ಅವರ ನಡುವೆ ಚಾರ್ವಕ ಇದ್ದ ಅವನು ಯುಧಿಪ್ಠರನನ್ನು ನೇರವಾಗಿ... ನಿನ್ನ ತಮ್ಮಂದಿರನ್ನು ಮತ್ತು ಸಹೋದರರನ್ನು ಕೊಂದು ನೀನು ಈ ರಾಜ್ಯವನ್ನು ಪಡೆದಿದ್ದೀಯ. ಅದಕ್ಕಾಗಿ ಬ್ರಾಹ್ಮಣ ಸಮುದಾಯದ ದೂಷಿಸುತ್ತದೆ .ಹೀಗೆ ನಿನ್ನ ಕುಲದ ಹಿರಿಯರನ್ನು ಕೊಂದು ನೀನು ಪಡೆದುಕೊಂಡಿದ್ದಾದರು ಏನು..? ನೀನು ಸಾಯುವುದೇ ಲೇಸು... ಎಂದು ಪ್ರಶ್ನಿಸುತ್ತಾನೆ.
ಆಗ ಅಬ್ರಾಹ್ಮಣರು ಚಾರ್ವಕನನ್ನು ಸುಟ್ಟು ಬೂದಿ ಮಾಡಿದರು *(ಅವರ ಚಿಂತನೆಗಳನ್ನು, ತರ್ಕವನ್ನು ,ಗ್ರಂಥಗಳನ್ನು)*
*ಪ್ರತ್ಯಕ್ಷಾನುಭವದ ಪ್ರಾಧಾನ್ಯ*
----------------------------------------
ಬೌದ್ಧಿಕವಾದಿಗಳು *ದೇಹಾತ್ಮವಾದ* ಎಂದು ಕರೆಯುತ್ತಾರೆ. ನಮ್ಮ ಭೌತಿಕ ಶರೀರವು ಆತ್ಮವು ಒಂದೇ ಎನ್ನುವ ವಾದವಾಗಿದೆ.
ಸಾಮಾನ್ಯ ಅನುಮಾನಗಳು ಪ್ರತ್ಯಕ್ಷಾನುಭವದ ಆಧಾರವನ್ನು ಹೊಂದಿದ್ದರೆ ಅಂಥವುಗಳಿಗೆ ಅವರ ಆಕ್ಷೇಪ ವಿರಲಿಲ್ಲ.
ಪ್ರಾಚೀನಕಾಲದಲ್ಲಿ ವಿಜ್ಞಾನವು ಬೆಳವಣಿಗೆ ಹೊಂದಿದ್ದಷ್ಟು ಮಟ್ಟಿಗೆ ಪ್ರತ್ಯಕ್ಷಾನುಭವವು ಪ್ರಕೃತಿ ವಿಜ್ಞಾನದ ಬುನಾದಿಯೂ ಆಗಿತ್ತು.
*"ದೇವರು ಎಂಬುದು ಇಲ್ಲ. ಇಹಲೋಕದ ಬಂಧನದಿಂದ ಮೋಕ್ಷವೆಂಬುದು ಇಲ್ಲ. ಪುಣ್ಯ ಮತ್ತು ಪಾಪಗಳು ಇಲ್ಲ; ಅವುಗಳ ಫಲಗಳು ಎಂಬುದು ಇಲ್ಲ. ನಿಜವಾಗಿ ಇರುವುದು ಪ್ರಪಂಚ ಒಂದೇ ಅದು ಪ್ರತ್ಯಕ್ಷ ಅನುಭವಕ್ಕೆ ನಿಲುಕುವಷ್ಟಕ್ಕೆ ನಿಜವಾಗಿದೆ. ಆದುದರಿಂದ ಗೆಳೆಯ ತೋಳಗಳ ಹೆಜ್ಜೆಗುರುತುಗಳನ್ನು ನೋಡು ಹಾಗೂ ಧರ್ಮಶಾಸ್ತ್ರಗಳ ಅಪಾರ ಜ್ಞಾನವಿರುವವರೆಂದು ಹೇಳಿಕೊಳ್ಳುವವರ ಮಾತುಗಳನ್ನು ಗಮನಿಸು".* ಹೀಗೆಂದು ಹೇಳುತ್ತಾರೆ ಲೋಕಾಯತರು...
ಆತ್ಮ ಸ್ವರ್ಗ-ನರಕ ಇತ್ಯಾದಿಗಳ ಅನುಮಾನವೂ ಧಾರ್ಮಿಕ ನಂಬಿಕೆಗಳ ಬಗ್ಗೆ ಒಂದು ತರಹದ ಕುರುಡು ಭಾವನೆಯನ್ನು ಹುಟ್ಟಿಸಿ ಜನರ ಶೋಷಣೆಗೆ, ದುರ್ಬಳಕೆ ಮಾಡುವಂತ ಉಪಕರಣವಾಗಿ ಬಳಕೆಯಾಗುತ್ತದೆ.
ಅನುಮಾನವನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆನ್ನುವ ಅಭಿಪ್ರಾಯ ಬೌತಿಕವಾದಿಗಳಿಗೆ ಇದ್ದಿರಲಾರದು;ಆದರೆ ಪ್ರತ್ಯಕ್ಷಾನುಭವದ ಯಾವ ಸಮರ್ಥನೆ ಕೂಡ ಇಲ್ಲದೆಯೇ ಅನುಮಾನವು ಯಾವುದನ್ನಾದರೂ ರುಜುವಾತು ಮಾಡಿಬಿಡಬಲ್ಲವೆಂಬ ಮಾತನ್ನು ಮಾತ್ರ ಭೌತಿಕವಾದಿಗಳು ತಿರಸ್ಕರಿಸುತ್ತಾರೆ..
ಪ್ರಾಚೀನ ಭಾರತದ ತತ್ವಜ್ಞಾನ ಕ್ಷೇತ್ರದೊಳಗಿನ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುವ *ಕೌಟಿಲ್ಯನ ಅರ್ಥಶಾಸ್ತ್ರ* ದೊಳಗಿನ ಸಾಕ್ಷಾಧಾರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ.....
ಕೌಟಿಲ್ಯ ಅರಸನ ಜ್ಞಾನದ ನಾಲ್ಕು ಶಾಖೆಗಳಲ್ಲಿ ಪರಿಣಿತಿ ಪಡೆಯುವುದು ಅಪೇಕ್ಷಣೀಯ
ಆನ್ವೀಕ್ಷಿಕೀ, {(ತರ್ಕ)-ಸಾಂಖ್ಯ, ನ್ಯಾಯ ವೈಶೇಷಿಕ ಮತ್ತು ಲೋಕಾಯತ}
ತ್ರಯೀ-,(ವೇದಗಳು)
ವಾರ್ತ-(ಕೃಷಿ ಪಶುಪಾಲನೆ ಮತ್ತು ವ್ಯಾಪಾರ)
ದಂಡನೀತಿ-(ಜನರನ್ನು ಆಳುವ ತಂತ್ರ)
ಕೌಟಿಲ್ಯ--- ನಾವು ಭಾವಿಸುವಂಥ ಕಟ್ಟಾ ವಿಚಾರವಾದಿಯಾಗಿದ್ದ ಎಂದು ತಿಳಿದರೆ ತಪ್ಪಾದೀತು .ನಿಜವಾಗಿ ಹೇಳಬೇಕೆಂದರೆ
*ಕೌಟಿಲ್ಯ ಅರಸನ ಪ್ರಭುತ್ವವನ್ನು ನಿರ್ದಾಕ್ಷಿಣ್ಯವಾಗಿ ,ಕಠೋರವಾಗಿ ಪ್ರತಿಪಾದಿಸಿದ್ದವರಲ್ಲಿ ಪ್ರಮುಖನಾಗಿದ್ದ; ರಾಜ್ಯದ ಸುಭದ್ರ ಹಾಗೂ ಸುಸೂತ್ರ ಆಡಳಿತೆಯ ಸಲುವಾಗಿ ಜನರ ಮೂಢನಂಬಿಕೆಗಳನ್ನು ಯಾವ ಅಂಜಿಕೆಯೂ ಇಲ್ಲದೆ ಬಳಕೆ ಮಾಡಬೇಕೆಂದು ಆತ ಶಿಫಾರಸು ಮಾಡಿದ್ದ--R.s.ಶರ್ಮಾ*.
*ಚರಕ ಸಂಹಿತೆ ಮತ್ತು ಸುಶ್ರುತ ಸಂಹಿತೆ---*
"ಹೆಣಗಳನ್ನು ಕೊಯ್ದು ನೋಡುವುದು ಶರೀರ ರಚನಾ ಶಾಸ್ತ್ರದ ಅಧ್ಯಯನಕ್ಕೆ ಅಗತ್ಯವೆಂದು, ಅದಿಲ್ಲದೆ ವೈದ್ಯಕೀಯ ಜ್ಞಾನವು ಅಪೂರ್ಣವಾಗಿ ಉಳಿಯುತ್ತದೆ ಎಂದು ಹೇಳುತ್ತವೆ.
ಶರೀರದೊಳಗಿನ ವಿವಿಧ ಅಂಗಗಳನ್ನು ಪ್ರತ್ಯಕ್ಷವಾಗಿ ಕಂಡು ತಿಳಿಯುವ ಅಗತ್ಯವಿರುತ್ತದೆ. ಊಹೆ, ಅನುಮಾನಗಳಿಂದ ಸಾಧ್ಯವಾಗದು.
*ದೇಹ ಮತ್ತು ಆತ್ಮ*
----------------------------------
ಬೌದ್ಧಿಕವಾದಿಗಳು ದೇಹ ಮತ್ತು ಆತ್ಮ ಎಂಬ ಎರಡು ಬೇರೆಬೇರೆಯಾದವುಗಳಲ್ಲ "ದೇಹಾತ್ಮವಾದ" ಎಂಬ ಒಂದೇ ಅರ್ಥದಲ್ಲಿ ಪ್ರತಿಪಾದಿಸುತ್ತಾರೆ.
ಈ ದೇಹವು *ಭೂಮಿ, ನೀರು, ಬೆಂಕಿ, ಮತ್ತು ಗಾಳಿ* ಎಂಬ ಭೌತಿಕ ವಸ್ತುಗಳಿಂದಾದ್ದದು ಈ ನಾಲ್ಕು ಮೂಲಧಾತುಗಳಿಂದಲೇ *"ಪ್ರಜ್ಞೆ"* ಹುಟ್ಟುತ್ತದೆ.
*ಮನುಷ್ಯನೆಂದರೆ ಪ್ರಜ್ಞೆಯನ್ನು ಒಳಗೊಂಡಿರುವ ದೇಹವಲ್ಲದೆ ಇನ್ನೇನು ಅಲ್ಲವೆಂದು* ಲೋಕಾಯತರ ವಾದ.
ಇವರ ವಾದಗಳನ್ನು ಖಂಡಿಸಲು ಅವರ ವಿರೋಧಿಗಳು ಮಂಡಿಸಿದ ಮುಖ್ಯವಾದಗಳು...
*ಗುಣರತ್ನ*
ಭೌತವಸ್ತು ಅದರ ನಾಲ್ಕು ಮೂಲಧಾತುಗಳ ರೂಪದಲ್ಲಿ ಬಹುತೇಕ ಎಲ್ಲಾ ಕಡೆಗಳಲ್ಲೂ ಅಸ್ತಿತ್ವದಲ್ಲಿರುತ್ತದೆ ಆದರೆ ಪ್ರಜ್ಞೆ ಇರುವ ದೇಹವು ಹಾಗೆ ಎಲ್ಲ ಕಡೆಗಳಲ್ಲಿ ಇರುವುದಿಲ್ಲ.??
ಚಾರ್ವಾಕರನ್ನು ಇಂಥ ಒಂದು ಇಕ್ಕಟ್ಟಿನ ಪರಿಸ್ಥಿತಿಗೆ ಗುಣರತ್ನ ಸಿಲುಕಿಸುತ್ತಾರೆ...
*ಶಂಕರಚಾರ್ಯರು*
ಈ ದೇಹವು 4 ಮೂಲ ಧಾತುಗಳಿಂದ ಆಗಿದ್ದು ನಂತರ ಪ್ರಜ್ಞೆಯನ್ನು ಪಡೆಯುತ್ತದೆ ಎಂಬ ಚಾರ್ವಾಕರ ವಾದವನ್ನು ಶಂಕರಾಚಾರ್ಯ ವಿರೋಧಿಸುತ್ತಾ ದೇಹವಿದು ಪ್ರಜ್ಞೆ ಇಲ್ಲದಿರುವುದಕ್ಕೆ "ಸತ್ತ ಶವ" ದಉದಾರಣೆ ಕೊಡುತ್ತಾನೆ.
ದೇಹದ ಇರುವಿಕೆಯೊಂದಿಗೆ ಪ್ರಜ್ಞೆಯ ಇಲ್ಲದಿರುವಿಕೆಯನ್ನು ತೋರಿಸಿದರೆ ಸಾಲದು, ಪ್ರಜ್ಞೆಯ ಇರುವಿಕೆಯನ್ನು ದೇಹದ ಇಲ್ಲದಿದ್ದಲ್ಲಿ ಸಹ ತೋರಿಸಬೇಕಾಗುತ್ತದೆ. ಇದೊಂದು ಶಂಕರನ ವಾದ ಕ್ರಮದಲ್ಲಿ ನ್ಯೂನತೆ.
ಹೀಗೆ ದೇವಿಪ್ರಸಾದ್ ಚಟ್ಟೋಪಾಧ್ಯಾಯರು ಭೌತಿಕ ವಾದದ ಕುರಿತು ಇಲ್ಲಿ ಅನೇಕ ಅಂಶಗಳನ್ನು ಸಂಶೋಧಿಸಿ ಚರ್ಚೆ ಮಾಡಿದ್ದಾರೆ.... (ಅನುವಾದ ಬಿ. ವಿ. ಕಕ್ಕಿಲ್ಲಾಯ)
No comments:
Post a Comment