Tuesday, 12 March 2019
ಬುದ್ಧ
★★★★★★★★★★★★★★
#ಸಿದ್ಧಾರ್ಥ ಗೌತಮ್-ಭೋದಿಸತ್ವನು ಹೇಗೆ ಬುಧ್ಧನಾದನು? ಪರಿವರ್ತನಯ ಪ್ರಚಾರ
ಬುದ್ಧ ಭೋಧಿಸಿದ್ದು ಏನು?
●●●●●●●●●●●●●●●●●●●●●●●●
★ಮ಼ಗ಼ನ಼ನ್ನು ರ಼ಕ್ಷಿಸ಼ಲು ತಂದೆ ಮಾಡಿದ಼ ಉಪಾಯ಼ಗ಼ಳು★
●=<>=<><<><<<===>>><><><>=<>=●
●ತನ್ನ ಮಗ ಸಿದ್ಧಾರ್ಥನು ವಿವಾಹವಾಗಿ ಗೃಹಸ್ಥಾಶ್ರಮವನ್ನು ನೋಡಿ ರಾಜನು ಸಂತೋಷಪಟ್ಟಿದ್ದರು ಸಹ, #ಅಸಿತ ಖುಷಿಯ ಭವಿಷ್ಯವಾಣಿಯು ಸದಾ ಅವನ ಮನಸ್ಸನ್ನು ಕೋರೆಯುತ್ತಿತ್ತು.
●ಆ ಭವಿಷ್ಯವಾಣಿಯು ನಿಜವಾಗುವುದನ್ನು ತಪ್ಪಿಸಲು ಸಿದ್ಧಾರ್ಥನನ್ನು ಭೌತಿಕ ಸುಖಭೋಗದಲ್ಲಿ ತನ್ನನ್ನು ತಾನು ಮರೆಯುವಂತೆ ಮಾಡಲು ರಾಜನು ಆಲೋಚಿಸಿದನು.
●ಆ ಉದ್ದೇಶದಿಂದ ಶುದ್ಧೋದನನು ತನ್ನ ಮಗನಿಗಾಗಿ #ಚಳಿಗಾಲ, #ಬೇಸಿಗೆ, & #ಮಳೆಗಾಲಗಳಿಗೆ ತಕ್ಕಂತೆ 3~ಭವ್ಯವಾದ ಅರಮನೆಗಳನ್ನು ಕಟ್ಟಿಸಿ , ಪ್ರಣಯಾಸಕ್ತಿಗೆ ಪ್ರೇರಕವಾದ ಎಲ್ಲ ಪರಿಕರಗಳೊಂದಿಗೆ ಅವುಗಳನ್ನು ಸಜ್ಜುಗೊಳಿಸಿದನು...
●ಅವನ ಅರಮನೆಯ ಪುರೋಹಿತ #ಉದಯನೊಂದಿಗೆ ಸಮಾಲೋಚಿಸಿ, ಅತಿ ಸುಂದರವಾದ ಯುವತಿಯರನ್ನೊಳಗೊಂಡ ಒಂದು ಅಂತಃಪುರವನ್ನು ರಚಿಸಲು ಸೂಚಿಸಿದನು.
● ಕನ್ಯೆಯರನ್ನು ಆರಿಸಿದ ಮೇಲೆ ಅವರಿಗೆ ರಾಜಕುಮಾರನನ್ನು ಹೇಗೆ ಪ್ರಲೋಭನೆಗೊಳಪಡಿಸಬೇಕು ಎಂದು ಉದಯನು ಅವರಿಗೆ ಬೋಧಿಸಿದ್ದು ಹೀಗೆ .
●ನೀವು ವಶೀಕರಣ ವಿದ್ಯೆಯನ್ನು ಚನ್ನಾಗಿ ಬಲ್ಲವರು. ಕಾಮಕ್ರೀಡೆಯ ಭಾಷೆ ನಿಮಗೆ ಗೊತ್ತು .ಅಲ್ಲದೆ ಋಷಿಮುನಿಗಳನ್ನು-ದೇವತೆಗಳನ್ನೂ ನಿಮ್ಮ ಮೋಹಪಾಶದಲ್ಲಿ ಬಂಧಿಸಬಲ್ಲಿರಿ.
●ಹೃದಯದಲ್ಲಿ ಮೋಹಕ ಭಾವನೆಗಳನ್ನು ಮೂಡಿಸುವ ನಿಮ್ಮ ಚಾತುರ್ಯ, ನಿಮ್ಮ ಬೆಡಗು ಬಿನ್ನಾಣ, ನಿಮ್ಮ ಮೈ-ಸೊಗಸು & ಸೌಂದರ್ಯದಿಂದಾಗಿ ಹೆಂಗಸರು ನಿಮ್ಮಲ್ಲಿ ಮೋಹಪರವಶರಾಗುತ್ತಾರೆ. ಅಂದಮೇಲೆ ಗಂಡಸರ ಪಾಡೇನ...?
●ಈ ಮಹಾಶೂರನ (ಬುಧ್ಧ) ಕೀರ್ತಿ ಅದೆಷ್ಟೇ ಮಹತ್ವದ್ದಿರಲಿ, ನಿಮ್ಮಲ್ಲಿರುವ ಹೆಣ್ಣಿನ ಶಕ್ತಿ ಅಪಾರವಾದದ್ದು.
●ಹಿಂದೆ ಒಂದು ಕಾಲದಲ್ಲಿ ದೇವತೆಗಳಿಂದಲೂ ಸೋಲಿಸಲಾಗದ ಮಹರ್ಷಿಯೊಬ್ಬನನ್ನು ಸಾಧಾರಣ #ವೇಶ್ಯೆ ಕಾಶಿ ಎಂಬುವವಳು ಮೋಹಿಸಿ ಗೆದ್ದು, ಅವನನ್ನು ಮೆಟ್ಟಿ ನಿಂತಳು.
●ಮಹರ್ಷಿ ವಿಶ್ವಾಮಿತ್ರನು ತಪಸ್ಸಿನಲ್ಲಿ ಮೈಮರೆತಿದ್ಧಾಗ #ಘೃತಾಚಿ ಎಂಬ ಅಪ್ಸರೆ ಅವನನ್ನು ಸೆರೆಹಿಡಿದು, ಹೊತ್ತೊಯ್ದು 10 ವರ್ಷಗಳ ಕಾಲ ಅರಣ್ಯದಲ್ಲಿ ಬಂಧಿಸಿಟ್ಟಳು.
●ಈ ರೀತಿ ಅನೇಕ ಋಷಿಗಳನ್ನು ಹೆಂಗಸರು ಮೋಹಪರವಶರನ್ನಾಗಿ ಮಾಡಿರುವಾಗ, ಯೌವನದ ಮೊದಲ ಹಂತದಲ್ಲಿ ಇರುವ ಕೋಮಲ ಶರೀರದ ಈ ರಾಜಕುಮಾರನ ಮಾತಿನ್ನೇನು.? ಎಂದು #ಉದಯನು ಕನ್ಯೆಯರಿಗೆ ಬೋಧಿಸಿದ.
ಆ ಕನ್ಯೆಯರು ರಾಜಕುಮಾರನನ್ನು ಮೋಹಿಸಿ ಗೆದ್ದರೆ..?
........ಮುಂದುವರೆವುದು.!
================================
★ರಾಜಕುಮಾರನನ್ನು ಗೆಲ್ಲುವಲ್ಲಿ ಹೆಂಗಸರ ಸೋಲು★
~~~~~~~~~~~~~~~~~~~~~~~~~
●ಆಕರ್ಷಕವಾದ ಕುಡಿನೋಟ, ತಿದ್ದಿದ ಹುಬ್ಬು, ಮೋಹಕ ನಗು, ನಯವಾದ ಮೆಲುನುಡಿ ಯಿಂದ ಅಂತಃಪುರದ ಹೆಂಗಸರು ರಾಜಕುಮಾರನನ್ನು ಗೆಲ್ಲಲು ಮುಂದೆ ಬಂದರು.
● ಕಾಮೋದ್ರೇಕಗೊಂಡ ಕೆಲವು ಹೆಂಗಸರು ಸದೃಢವಾದ ತಮ್ಮ ವಕ್ಷದ್ವಯಗಳಿಂದ ರಾಜಕುಮಾರನನ್ನು ಮೃದುವಾಗಿ ಒತ್ತಿಹಿಡಿದರು.
●ಇನ್ನೂ ಕೆಲವರು ತಾವು ಜಾರಿಬೀಳುವಂತೆ ನಟಿಸಿ ಅವನನ್ನು ಬಲವಾಗಿ ತಬ್ಬಿಕೊಂಡು ಬಳ್ಳಿಯಂತೆ ಬದುಕುವ ತಮ್ಮ ನಳಿದೋಳುಗಳಿಂದ ಅವನನ್ನು ಬಿಗಿದಪ್ಪಿದರು.
●ಕೆಲವರು ಮೋಹಕವಾದ ಮದ್ಯದ ವಾಸನೆಯನ್ನು ಸೂಸುವ ಕೆಂಪಾದ ತಮ್ಮ ಕೆಳದುಟಿಯನ್ನು ಚಾಚುತ್ತ "ನನ್ನ ಅಂತರಂಗದ ಭಾವನೆಗಳ ರಹಸ್ಯವನ್ನು ಕೇಳು ಬಾ" ಎಂದು ಅವನ ಕಿವಿಯಲ್ಲಿ ಉಸುರಿದರು.
●ಕೆಲವರು ತಮ್ಮ ನೀಲಿ ಬಣ್ಣದ ಮೇಲುಡುಗೆಯನ್ನು ಬೇಕಂತಲೆ ಉನ್ಮತ್ತರಂತೆ ನವುರಾದ ಬಟ್ಟೆಯನ್ನು ತೊಟ್ಟು ದೇಹವನ್ನು ಪ್ರದರ್ಶಿಸತ್ತಾ ಚಿನ್ನದ ಕಾಲ್ಗೆಜ್ಜೆಗಳನ್ನು ಝೇಂಕಿಸುತ್ತಾ ಅತ್ತಿಂದಿತ್ತ ಸುಳಿದಾಡಿದರು.
●ಇನ್ನೂ ಕೆಲವರು ಮಾವಿನ ಬಿಲ್ಲನ್ನು ಕೈಯಲ್ಲಿ ಹಿಡಿದು ತಮ್ಮ ತುಂಬಿದ ಎದೆಯನ್ನು ಚಿನ್ನದ ಕಲಶದಂತೆ ಪ್ರದರ್ಶಿಸಿದರು.
●ಈ ರೀತಿ ಪ್ರೇಮಾತಿರೇಕಕ್ಕೆ ಒಳಗಾದ ಆ ಯುವತಿಯರು ರಾರಾಜಕುಮಾರನ ಮೇಲೆ ನಾನಾ ರೀತಿಯ ಯುಕ್ತಿಗಳಿಂದ ದಾಳಿ ಮಾಡಿದರು.
●ಅವರ ನೈಜ ಸ್ವರೂಪವೇನೆಂಬುದನ್ನು ಬಲ್ಲ ರಾರಾಜಕುಮಾರನು ಸ್ವಲ್ಪವೂ ವಿಚಲಿತನಾಗಲಿಲ್ಲ ದೃಢವಾದ ಮನಸ್ಸಿನಿಂದ ಅಂತರ್ ಮುಖಿಯಾಗಿ ಚಿಂತಿಸುತ್ತಿದ್ದನು.
● ಈ ಯೌವನ ಎಂಬುದು ನಶ್ವರವಾದದ್ದು. ಮುಪ್ಪು ಈ ಎಲ್ಲ ಸೌಂದರ್ಯವನ್ನು ನಾನಾಶಗೊಳಿಸುತ್ತದೆ. ಲೌಕಿಕ ಜೀವನ ನಶ್ವರವಾದದ್ದು.
ಕೊನೆಗೂ
★ರಾಜಕುಮಾರನನ್ನು ಗೆಲ್ಲುವಲ್ಲಿ ಹೆಂಗಸರ ಸೋಲು★
Subscribe to:
Post Comments (Atom)
ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.
ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...
-
ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ ನಾವೆಲ್ಲ ಮನುಜರೊಂದೆ ಎಂಬ ಭಾವ ಮೂಡಲಿ ನಮ್ಮಲ್ಲಿ ಭೇದಭಾವ ಪ್ರಭು ದೂರವಾಗಲಿ.//2// ಒಂದು ತೋಟದಲ್ಲಿ ಹಲವು ಬಣ್ಣ ಬಣ್ಣದ ಹೂವುಗಳು ...
-
ಮುದ್ದು ರಾಮನ ಬದುಕು *ಮರೆತೆಲ್ಲ ತೊಡಕುಗಳ,ಸರಿಸುತ್ತ ಹಳತುಗಳ* *"ಎಂತೋಡುತ್ತಿದೆ ಮುಂದೆ ಈ ಕಾಲಪಕ್ಷಿ! ನಾಳೆ* *ಬಾನಿನಂಚಿನಲಿ ನವರೇಖೆ ಏನಿದೆಯೋ! ಕಾಲ ಮಹಿಮೆಗೆ...
-
ಡಾ. ಸಿದ್ದಲಿಂಗಯ್ಯ ಅವರು ಪಿ.ಎಚ್. ಡಿ ಪದವಿಗಾಗಿ ಬರೆದ ಸಂಶೋಧನ ಪ್ರಬಂಧ "ಗ್ರಾಮದೇವತೆಗಳು" ಜಾನಪದೀಯ ಅಧ್ಯಯನ. "ಗ್ರಾಮದೇವತೆಗಳ ಪರಿಕಲ...
No comments:
Post a Comment