ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾಲಯ ಮಾನಸಗಂಗೋತ್ರಿ ಸಂಯೋಗದಲ್ಲಿ ನಡೆದ "ದಲಿತ ಕಲ್ಯಾಣ ಸವಾಲುಗಳು ಮತ್ತು ಅವಕಾಶಗಳು" (ದಿನಾಂಕ ಜನವರಿ 9 ರಿಂದ 13 - 2020) ಎಂಬ ಈ ಕಾರ್ಯಕ್ರಮಕ್ಕೆ ಯಾದಗಿರಿಯಿಂದ ನಾನು, ಸಿದ್ದು ,ಈಶ್ವರ್ ಮೈಸೂರಿಗೆ ಒಂದು ದಿನ ಮುಂಚಿತವಾಗಿ ತಲುಪಿದೆವು. ಆಗಾಗಲೇ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಳಗದ ವಾಟ್ಸಪ್ ಗುಂಪು ರಚನೆಯಾಗಿತ್ತು. ವಿವಿಧ ಜಿಲ್ಲೆಗಳಿಂದ ಬರುವ 30 ಶಿಬಿರಾರ್ಥಿ ಗಳಲ್ಲಿ ಮತ್ತೆ ಯಾರಾದರೂ ಪರಿಚಿತರು ಇರಬಹುದೇ ಎಂದು ವಾಟ್ಸಾಪ್ ಗುಂಪಿಗೆ ಇಣುಕಿ ನೋಡಿದಾಗ ಯಾರೋ ಹೋರಾಟದ ಚಿತ್ರಪಟಗಳನ್ನು ಪದೇ ಪದೇ ಹಂಚಿಕೊಳ್ಳುತ್ತಿರುವುದನ್ನು ಗಮನಿಸಿ ಉದಾಸೀನ ಮಂದಹಾಸದೊಂದಿಗೆ ಹೋರಬಂದೆ. ಯಾಕೆಂದರೆ ನಾವು ಇಂತಹ ಹೋರಾಟ ಮತ್ತು ಚಳುವಲಿಯನ್ನು ಹತ್ತಿರದಿಂದ ಕಂಡವರು. ಅವುಗಳ ಗಟ್ಟಿತನ ಮತ್ತು ನಿಲುವುಗಳ ಬದ್ಧತೆ ಯಲ್ಲಿನ ಇಬ್ಬಗೆಯ ಧೋರಣೆಯಿಂದಾಗಿ ಆಗಾಗ ನನ್ನ ಮನದಲ್ಲಿ ನಿರಾಶ, ತಿರಸ್ಕಾರ ಮನೊಭಾವ ಮೂಡಿದುಂಟು. ಐದು ದಿನಗಳ ಕಾಲ ಉಳಿದುಕೊಳ್ಳಲು ಹಾಸ್ಟಲ್ ನ ಕೋಣೆ ಒಂದರಲ್ಲಿ ಐದು ಹಾಸಿಗೆಗಳ ವ್ಯವಸ್ಥೆ ನಮ್ಮನ್ನು ಬರ ಮಾಡಿಕೊಂಡಿತು. ಮುಂಜಾನೆ ಹಾಸಿಗೆಯಲ್ಲೇ ಕಣ್ಬಿಟ್ಟು ನೋಡಿದಾಗ ಬಾಹುಬಲಿಯಂತೆ ,ಅಜಾನುಬಾಹು ... ಪ್ರತ್ಯಕ್ಷ, ತಟ್ಟನೆ ನೆನಪಾಯಿತು ಅದೇ ವ್ಯಕ್ತಿ ಅಲ್ಲವೇ...! ತರುವಾಯ ಪರಿಚಯಿಸಿಕೊಂಡೆವು. ಹೀಗೆ ಸಂದೇಶ ಅವರ ಮೊದಲ ಪರಿಚಯವಾದದ್ದು. ಸದೃಢವಾದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯಕ್ಕೆ ಪ್ರತಿದಿನ ಎಕ್ಸರ್ಸೈಜ್ ಮಾಡುತ್ತಿದ್ದರು ಹಾಗೆ ನನಗೂ ಕೆಲವೊಂದು ಎಕ್ಸಸೈಜ್ ಮಾಡುವ ವಿಧಾನದ ಕುರಿತು ಪ್ರಾಕ್ಟಿಕಲ್ ಆಗಿ ಹೇಳಿಕೊಡುತ್ತಿದ್ದರು. ಕಾರ್ಯಕ್ರಮದ ಸಂದರ್ಭದಲ್ಲಿ ಅವರು ದಲಿತ ಕಲ್ಯಾಣ ಮತ್ತು ಸವಾಲುಗಳ ಕುರಿತು ಅನೇಕ ಪ್ರಶ್ನೆಗಳನ್ನು ಎತ್ತುತ್ತಿದ್ದರು. ನಾಳೆ ನಾನ್ ವೆಜ್ ಊಟದ ವ್ಯವಸ್ಥೆ ಇರುವಂತೆ ಆಯೋಜಕರೊಂದಿಗೆ ಮಾತಾನಾಡುವ ಎಂದು ಸಂದೇಶ ಅವರಿಗೆ ಹೇಳಿದೆ. ಮೊದಮೊದಲು ಕಾರ್ಯಕ್ರಮದ ಆಯೋಜಕರು ಇದಕ್ಕೆ ಒಪ್ಪಿಗೆ ನೀಡಿದರು. ನಂತರದ ದಿನಗಳಲ್ಲಿ ..... ಕಾರಣಗಳನ್ನು ನೀಡಿ ಜಾರಿಕೊಂಡಿತು. ಈ ಕಾರಣಕ್ಕಾಗಿ ಏನೋ ಆ ದಿನ ಮುಸ್ಸಂಜೆ ವೇಳೆ ವಿಶ್ವವಿದ್ಯಾಲಯದ ಆವರಣದಿಂದ ಹೊರ ನಡೆದು ನನ್ನ ಹೋಟೆಲ್ ಗೆ ಕರೆದುಕೊಂಡು ಹೋಗಿ ಒಂದು ಕೆಜಿ ಕಬಾಬ್ ಆರ್ಡರ್ ಮಾಡಿದ. ಹೇ ಅಷ್ಟೊಂದು ತಿನ್ನದಾಗದು ಎಂದು ಅರ್ಧ ಕೆ ಜಿ ತರುವಂತೆ ಹೇಳಿದೆ. ಇಬ್ಬರು ಸೇರಿ ಬಾಡಿನ ಸವಿ ಸವಿದೆವು. ಬರುವಾಗ ಬೇಕ್ರಿ ಒಂದರಲ್ಲಿ ಕೆಲವಂದಿಷ್ಟು ಸ್ವೀಟ್, ಬಿಸ್ಕೆಟ್ ತೆಗೆದುಕೊಂಡರು. ಅದು ಯಾಕೆ..? ಮತ್ತು ಯಾರಿಗೆ..? ಎಂದು ಕೇಳಲಿಲ್ಲ. ನಂತರ ಹೆಣ್ಣು ಮಕ್ಕಳು ಉಳಿದುಕೊಂಡಿದ್ದ ವಸತಿ ನಿಲಯಕ್ಕೆ ಭೇಟಿ ನೀಡಿ ಆ ಸಿಹಿ ತಿನಿಸುಗಳನ್ನು ಅವರಿಗೆ ನೀಡಿದರು. ಹಾಗೆ ನಿಮಗಿಲ್ಲಿ ಉಳಿದುಕೊಳ್ಳುವುದಕ್ಕೆ, ಊಟಕ್ಕೆ ಇನ್ನಿತರ ಯಾವುದೇ ಸಮಸ್ಯೆ ಇದ್ದಲ್ಲಿ ನನಗೆ ತಿಳಿಸಿ ಎಂದು ಸಹೋದರಿಯರೆಲ್ಲರಲ್ಲಿಯು ವಿನಂತಿಸಿಕೊಂಡ. ತಮ್ಮ ಬಾಲ್ಯದ ನೆನಪು ಮತ್ತು ನೋವುಗಳನ್ನ... ನನ್ನೊಂದಿಗೆ ಹಂಚಿಕೊಂಡಿದ್ದು ಉಂಟು. ಕಾರಣಾಂತರಗಳಿಂದ ಕಾರ್ಯಕ್ರಮ ಮುಕ್ತಾಯದ ಒಂದು ದಿನ ಮುಂಚಿತವಾಗಿ ನಮ್ಮನ್ನ ಬಿಟ್ಟು ಹೋದರು. ಹೀಗೆ ಪರಿಚಯ ನಂತರದ ದಿನಗಳಲ್ಲಿ ಸ್ನೇಹವಾದದ್ದು...
ಆನಂತರದಲ್ಲಿ ಅವರೊಂದಿಗೆ ಅನೇಕ ಬಾರಿ ಭೇಟಿ ಮತ್ತು ಸಂಭಾಷಣೆಗಳಿಗೆ ಕಾರಣವಾದವು.
ಸಂಘಟನೆ ಸ್ಥಾಪನೆ:-
"ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ" ಎಂಬ ಸಂಘಟನೆಯನ್ನು ಜನವರಿ 13 - 2017 ರಂದು ಹುಟ್ಟು ಹಾಕಿದರು. ಮೊದಲು ಈ ಸಂಘಟನೆಯ ಮುಖ್ಯ ಉದ್ದೇಶ ದಲಿತರು ಮಹಿಳೆಯರು ಬಡವರು ಹಾಗೂ ಶೋಷಣೆಗೆ ಒಳಪಟ್ಟವರಿಗೆ ನೆರವಾಗುವುದು ಹಾಗೂ ಅರ್ಹರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವುದು ಇದರ ಮುಖ್ಯ ಉದ್ದೇಶವನ್ನು ಹೊಂದಿತ್ತು.
ಇಲ್ಲಿಯತನಕ ಸಂದೇಶ ಅವರ ಹತ್ತಿರ ಸಮಸ್ಯೆಯನ್ನು ಹೊತ್ತುಕೊಂಡು ಹೋದವರಿಗೆ ಶಾಂತಿ ಮತ್ತು ಕಾನೂನಿನ ಮೂಲಕ ಹೋರಾಟದ ಪ್ರತಿ ಹಂತವನ್ನು ಜನರೊಂದಿಗೆ ಮುಕ್ತವಾಗಿ, ಪಾರದರ್ಶಕವಾಗಿ ಹಂಚಿಕೊಳ್ಳುತ್ತಾ ಅಂತಹ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಟ್ಟಿದ್ದಾರೆ.
ವಿವಾಹ:-
ತಮ್ಮ ಚಿಕ್ಕ ವಯಸ್ಸಿನಲ್ಲಿ ಪುರೋಹಿತಶಾಹಿ ವಿವಾಹ ಪದ್ಧತಿ, ಬಾಲ್ಯ ವಿವಾಹದಂತ ಶೋಷಣೆಗೆ ಒಳಗಾದವರು. ಅದರಿಂದ ಬಿಡುಗಡೆಗಾಗಿ ಪ್ರೇಮ ವಿವಾಹ ಮತ್ತು ಸರಳ ವಿವಾಹಕ್ಕೆ ಪ್ರೇರಣೆ ನೀಡಿದರು.
ಹೆಣ್ಣು, ಜಾತಿ ಹೆಬ್ಬಾಗಿಲಿನ ಲಾಳವಿಂಡಿಗಿ (ಅಗುಳಿ). ಧರ್ಮ, ದೇವರು, ಸಂಸ್ಕೃತಿ, ಧಾರ್ಮಿಕ ಆಚರಣೆ, ರಾಜಕೀಯ ಇವೆಲ್ಲವೂ ತಮ್ಮ ಗುರಿ ಸಾಧನೆಗಾಗಿ ಪುರುಷ ಪ್ರಧಾನ ವ್ಯವಸ್ಥೆಯು ಅಂತರ್ಜಾತಿ ವಿವಾಹವನ್ನು ವಿರೋಧಿಸುತ್ತಾ ಸ್ವ ಜಾತಿ ವಿವಾಹವನ್ನು ಪ್ರತಿಪಾದಿಸುತ್ತಾ ಅದಕ್ಕೆ ಪ್ರತಿರೋಧ ಉಂಟಾದಲ್ಲಿ ಮರ್ಯಾದೆ ಹತ್ತೆಗೇಡು, ಸಹಪಂಕ್ತಿ ಭೋಜನಗಳಲ್ಲಿ ಭೇದ, ಮೌಲ್ಯಗಳ ಹೆಸರಿನಲ್ಲಿ ಹೇರಲ್ಪಟ್ಟ ಸಾಂಸ್ಕೃತಿಕ ಯಾಜಮಾನ್ಯ, ಮಡಿವಂತಿಕೆ, ಶ್ರೇಷ್ಠತೆಯ ವ್ಯಸನನಕ್ಕಾಗಿ ಜಾತಿಯ ಜೀವಂತಿಕೆಯನ್ನು ಉಳಿಸಿಕೊಳ್ಳಲು ಅದನ್ನು ಹೆಣ್ಣಿನ ಮೂಲಕ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆ ಎಂಬುದನ್ನು ಅವರು ಮನಗೊಂಡರು. ಈ ಅಸಮಾನತೆಯ ಗೆರೆಯನ್ನು ಅಳಿಸಿ ಹಾಕಲು ಪಣತೊಟ್ಟರು. ಕೋಲಾರ ತಾಲೂಕಿನ ಕೀಲುಕೊಪ್ಪ ಗ್ರಾಮದ ದಲಿತ ಯುವಕ ಮತ್ತು ಕಿಲಾರಿಪೇಟೆಯ ಓಬಿಸಿ ಯುವತಿ ಯೊಂದಿಗೆ ಸಂಘಟನೆಯ ಸಾರಥ್ಯದಲ್ಲಿ ಜನವರಿ 18 2017 ರಲ್ಲಿ ಕೋಲಾರದ ಅಂತರಗಂಗೆ ಬೆಟ್ಟದ ತಪ್ಪಲಿನಲ್ಲಿ ಅಂಬೇಡ್ಕರ್ ಅವರ ಬ್ಯಾನರ್ ಮುಂದೆ ಮೊದಲ ಪ್ರೇಮ ವಿವಾಹ/ ಅಂತರ್ಜಾತಿ ವಿವಾಹ/ ಸರಳ ವಿವಾಹ ಮಾಡಿದರು. ಪೆರಿಯಾರ್ ಮೌಡ್ಯ ಮತ್ತು ಆಡಂಬರದಿಂದ ಕೂಡಿದ ವಿವಾಹಗಳು ಸಾಮಾಜಿಕ ಮತ್ತು ಆರ್ಥಿಕ ಶೋಷಣೆಗೆ ಕಾರಣವಾಗುತ್ತವೆ ಎಂದು ಸರಳ ವಿವಾಹಕ್ಕೆ ಕರೆ ನೀಡಿದ್ದರು. ಕುವೆಂಪು ಅವರ ಮಂತ್ರ ಮಾಂಗಲ್ಯ, ಅಂಬೇಡ್ಕರ್ ಅವರ ವಿವಾಹ ನೋಂದಣಿ (ಭದ್ರತೆ ಮತ್ತು ಆಸ್ತಿ ಹಕ್ಕು), ಜಾತಿ ವಿನಾಶಕ ಬಸವಣ್ಣ- ಅರಸ ಶರಣ ಮಧುವರಸನ ಮಗಳನ್ನು ಮತ್ತು ಸಮಗಾರ ಶರಣ ಹರಳಯ್ಯನ ಮಗನಿಗೆ ಮದುವೆ ಮಾಡಿಸಿದ್ದು... ಕಲ್ಯಾಣ ಕ್ರಾಂತಿಗೆ ಕಾರಣವಾಯಿತು ಎಂಬ ಈ ಎಲ್ಲ ಸಂಗತಿಗಳ ಅರಿವಿದ್ದು ಸಂದೇಶ ರವರು ಈ ವರೆಗೂ 130ಕ್ಕೂ ಹೆಚ್ಚು ಪ್ರೇಮ ವಿವಾಹ/ ಅಂತರ್ಜಾತಿ ವಿವಾಹ/ ಸರಳ ವಿವಾಹ ನೆರವೇರಿಸಿದ್ದಾರೆ.
ದೇವರು:-
ಉಳ್ಳೇರಹಳ್ಳಿ ಪ್ರಸಂಗದಲ್ಲಿ ದಲಿತ ಬಾಲಕನೊಬ್ಬ ದೇವರ ಕೋಲು ಮುಟ್ಟಿದನೆಂಬ ಕಾರಣಕ್ಕಾಗಿ 60,000 ದಂಡ ಅಥವಾ ಸಮಾಜದಿಂದ ಬಹಿಷ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೃಹತ್ ಹೋರಾಟದ ಮೂಲಕ ನ್ಯಾಯ ದೊರಕಿಸಿ... ನೂರು ದೇವರನೆಲ್ಲ ನೂಕಾಚೆ ದೂರ - ಕುವೆಂಪು, ದೇವರು ಹುಟ್ಟಿದ್ದು ನಮ್ಮ ಕಲ್ಪನೆಯಲ್ಲಿ ಅದು ಸಾಯಬೇಕಾದದ್ದು ಅಲ್ಲೇ- ವಸುದೇವ್ ಭೂಪಾಲ್ ಅವರ ನುಡಿಯಂತೆ. ಶ್ರೇಣಿಕೃತ ಅಸಮಾನತೆ, ಭಯ ಮತ್ತು ಮೌಡ್ಯ ದಿಂದ ಕೂಡಿದ ಸಾಂಸ್ಕೃತಿಕ ಮತ್ತು ಧಾರ್ಮಿಕ ಆರಾಧನೆಯನ್ನು ಮನ-ಮನೆಯಿಂದ ಹೊರಗೆ ಎಸೆಯಿರಿ ಎಂದು ತಮ್ಮ ಹೋರಾಟದ ಮೂಲಕ ಕರೆ ನೀಡಿದರು.
ಹೋರಾಟ:-
ಸಂದೇಶ್ ಅವರ ಹೋರಾಟದ ಹಾದಿ ಏನು ಸುಗಮವಾಗಿರಲಿಲ್ಲ. ಯಾಕೆಂದರೆ ಅವರ ಹತ್ತಿರ ಬಂದ ಸಮಸ್ಯೆಗಳೆಲ್ಲವೂ ಭೀಕರತೆಯಿಂದ ಕೂಡಿದವುಗಳು.
ನೂರಾರು ಎಕರೆ ಭೂಮಿ ವತ್ತುವರಿಯನ್ನು ಭೂಗಳ್ಳಲ್ಲರಿಂದ ತೆರವುಗೊಳಿಸಿ ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಅನಾಥ ಅಸಹಾಯಕ ಹಿರಿಯ ಜೀವಗಳಿಗೆ ಊರು ಗೋಲು ಆಗಿದ್ದಾರೆ. ಅನೇಕ ಜನರಿಗೆ ಭೂಸಾಗುವಳಿಯ ಒಡೆತನವನ್ನು ಕಲ್ಪಿಸಿಕೊಂಟ್ಟಿದ್ದಾರೆ. ಮಾರಣಾಂತಿಕ ಹಲ್ಲೆಗೊಳಗಾದ ಜನತೆಗೆ ಸಾಂತ್ವನ ಹೇಳಿ ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ಮಾಡಿದ್ದಾರೆ. ಅನಾಥರಿಗೆ ಆಶ್ರಯ ಕಲ್ಪಿಸಿಕೊಟ್ಟಿದ್ದಾರೆ. ಬಡ ವಿದ್ಯಾರ್ಥಿಗಳ ಶಿಕ್ಷಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸತ್ತ ಶವ ಹೂಳಲು ಜಾಗವಿಲ್ಲದೆ ಉಸಿರಿರುವ ಶವಾದಂತಾದ ನೊಂದ ಮನಗಳಿಗಾಗಿ ವ್ಯೇವಸ್ತೆ ವಿರುಧ್ದ ಹೋರಾಡಿ ಸ್ಮಶಾನದ ಜಾಗ ಕಲ್ಪಿಸಿಕೊಟ್ಟಿದ್ದಾರೆ. ಅಕ್ರಮ ಮದ್ಯದ ಅಂಗಡಿಗಳನ್ನು ತೇರವುಗೊಳಿಸಿದ್ದಾರೆ. ಇಂತಹ ಅನೇಕಾ ಸಂದರ್ಭಗಳಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕೆ ಇಟ್ಟು ಹೋರಾಟಗಳನ್ನು ಮಾಡಿದ್ದಾರೆ. ಇವೆಲ್ಲವೂ ಶಾಂತಿಯುತವಾಗಿ ಮತ್ತು ಕಾನೂನಿನ ಚೌಕಟ್ಟಿನ ಒಳಗಡೆ ಮಾಡಿದ್ದು ವಿಶೇಷ.
ಇವರ ಹೇಳಿಗೆಯನ್ನು ಸಹಿಸದ ವ್ಯವಸ್ಥೆ ಹಲವು ಕುತಂತ್ರಗಳನ್ನು ರೂಪಿಸುತ್ತಲೆ ಇರುತ್ತದೆ. ಇಂತಹ ಬೆದರಿಕೆಗಳ್ಗೆ ಜಗ್ಗದ ವ್ಯಕ್ತಿ. ಆದರೆ ಮರದ ಬುಡಕ್ಕೆ ಬಿದ್ದ ಕೊಡಲಿಯ ಪೆಟ್ಟಿನ ಏಟು ನಮ್ಮವರಿಂದಲೇ ಎಂದು ತಿಳಿದಾಗ ನೊಂದು ಉಸಿರು ನಿಲ್ಲಿಸಲು ಹೊರಟಾಗ ಈ ಸಂದರ್ಭದಲ್ಲಿ ಅನೇಕ ಹೋರಾಟಗಾರ ಸಂದೇಶ್ ಅವರ ಜೊತೆ ನಿಂತು ಆತ್ಮಸ್ಥೈರ್ಯ ತುಂಬಿದರು. ಮುಖ್ಯಮಂತ್ರಿಗಳು ಮಾನ್ಯ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಬರಹದ ಮೂಲಕ ಧ್ವನಿ ಎತ್ತಿ ಬೆಂಬಲ ನೀಡಿದರು....
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ತಮ್ಮೊಂದಿಗೆ ಹೆಜ್ಜೆ ಹಾಕುವಂತೆ ಸಂದೇಶ ಅವರಿಗೆ ಕರೆ ನೀಡಿದರು..... ಇತ್ತೀಚಿಗೆ ವಿಶ್ವವಿದ್ಯಾಲಯ ವಿದ್ಯಾರ್ಥಿನಿವೊಬ್ಬರು ಅವರ ಹೋರಾಟ ಮತ್ತು ಪ್ರೇಮ ವಿವಾಹಗಳ ಕುರಿತು ಸಂಶೋಧನಾ ಪ್ರಬಂಧಕ್ಕಾಗಿ ಸಂದೇಶ್ ಅವರನ್ನು ಸಂದರ್ಶಿಸಿದ್ದನು ಕಂಡೆನು........
ಇದೇ ಅಕ್ಟೋಬರ್ 1 ರಂದು ಯಾದಗಿರಿ ಜಿಲ್ಲೆಯ ASSK ಜಿಲ್ಲಾ ಶಾಖೆ ಉದ್ಘಾಟನೆಗೆ ಆಗಮಿಸಿದ್ದಾಗ , 10 ನಿಮಿಷ ಅವರ ಹೋರಾಟದ ಹಾದಿ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಲು ಅವಕಾಶ ಸಿಕ್ಕಿತು. ಹೀಗೆ ನಾನು... ಸಂದೇಶ್ ಅವರ ಹೋರಾಟದ... ಖಾಯಂ ಸಂಗಾತಿ ಆಗಿದ್ದು.
ಸಂದೇಶ್ ಅವರ ಸಾಮಾಜಿಕ ಸೇವೆ:-
• 310ಕ್ಕೂ ಹೆಚ್ಚು ಯಶಸ್ವಿ ಹೋರಾಟ ಜಾತಿ ಶ್ರೇಣಿಕೃತ ವ್ಯವಸ್ಥೆಯ ವಿರುದ್ಧ ಶೋಷಣೆಗೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ.
•151 ಅಂತರ್ಜಾತಿ/ ಪ್ರೇಮ/ ಸರಳ ವಿವಾಹ.
•100ಕ್ಕಿಂತ ಹೆಚ್ಚು ಬಡ ಜನತೆಗೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ.
•ಹೆಣ್ಣು ಮಕ್ಕಳಿಗೆ ಸಾವಿರಕ್ಕೂ ಹೆಚ್ಚು ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ಬಡ ವಿದ್ಯಾರ್ಥಿಗಳ ಶಿಕ್ಷಣ ಜವಾಬ್ದಾರಿ.
•15 ಬಾರಿ ರಕ್ತದಾನ
• 1 doctor rates Coimbatore University
• 1 international award
• 47 state awards