Saturday, 19 September 2020

ಪೆರಿಯಾರ್ ವಿಚಾರಗಳು

ಪೆರಿಯಾರ್ ವಿಚಾರಗಳು:


•ರಾಮಾಯಣ ಮತ್ತು ಮನುಸ್ಮೃತಿಗಳನ್ನು ಸುಟ್ಟು 
ಹಾಕುವಂತೆ ಕರೆ ನೀಡಿದರು.

•೧೯೨೯ ರಲ್ಲಿ ಅವರು ಗಾಂಧೀಜಿಯವರೊಂದಿಗೆ ವರ್ಣಶ್ರಮ ಧರ್ಮ ನಾಶವಾದರೆ ಮಾತ್ರ ಜಾತಿ ಪದ್ಧತಿ ತೊಲಗುವುದು ಎಂದು ಪ್ರತಿಪಾದಿಸಿದರು.

•ಗ್ರೀಸ್, ಈಜಿಪ್ಟ್, ಟರ್ಕಿ, ರಷ್ಯಾ, ಜರ್ಮನಿ, ಸ್ಪೇನ್, ಫ್ರಾನ್ಸ್, ಪೋರ್ಚುಗಲ್ ಹಾಗೂ ಇಂಗ್ಲೆಂಡ್ ಮೊದಲಾದ ದೇಶಗಳಿಗೆ ಭೇಟಿ ನೀಡಿದರು.

•ಹಿಂದಿ ವಿರೋಧಿ ಕಾರ್ಯ ಚಟುವಟಿಕೆಗಳಿಗಾಗಿ, ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ರೂ‌.೨೦೦೦/- ದಂಡನೆಯನ್ನು ವಿಧಿಸಲಾಯಿತು.

•ಬ್ರಾಹ್ಮಣೀಯ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ ಎಂದು ಭಾವಿಸಿದ ಅವರು ಸ್ವಾತಂತ್ರ್ಯ ದಿನವನ್ನು ಕರಾಳ, ಸಂತಾಪ ದಿನ ಎಂದು ಘೋಷಿಸಿದರು.

•ರಾಷ್ಟ್ರೀಯತೆಯ ನಿಷ್ಠುರ ವಿಮರ್ಶಕರು.

•ಹಿಂದೂ ಧರ್ಮದ ಪಠ್ಯಗಳನ್ನು, ದೇವರ ವಿಗ್ರಹ ಮತ್ತು ಸಂಕೇತಗಳನ್ನು ರಾಮಾಯಣ ಮತ್ತು ಮಹಾಭಾರತದಂತ ಸಂಪ್ರದಾಯಿಕ ಕಥನಗಳನ್ನು ತೀವ್ರವಾಗಿ ವಿರೋಧಿಸಿದರು.

•ಧರ್ಮ ಜನಸಮೂಹದ ಮಾದಕವಸ್ತು ಎಂದು ತಿಳಿದಿದ್ದರು.

•ಖಾಸಗಿ ಆಸ್ತಿ ಮತ್ತು ಬಂಡವಾಳಶಾಹಿತ್ವ ಮನುಷ್ಯವಿರೋಧಿ ಎಂದು ಅವುಗಳ ಮೇಲೆ ತೀವ್ರವಾದ ಆಕ್ರಮಣವನ್ನು ಮಾಡಲಾರಂಭಿಸಿದರು.

•ಮಹಿಳೆಯರು, ಅವರ ಚಾರಿತ್ರ್ಯ, ಪ್ರೇಮ,ಜನನ ನಿಯಂತ್ರಣ, ವೈಧವ್ಯದ ಮತ್ತು ಅವರ ವಿಮೋಚನೆಯ ಬಗ್ಗೆ ಪೇರಿಯರ್ ಬಹಳ ಗಂಭೀರವಾಗಿದ್ದರು.

•ಪಾತಿವ್ರತ್ಯತೆಯ ಪರಿಕಲ್ಪನೆಯನ್ನು ಸಾಂಪ್ರದಾಯಿಕವಾದ ಕಥೆಗಳು ಮತ್ತು ಧರ್ಮ ಹೇಳುವ ಹಾಗೆ ಮಹಿಳೆಯರು ಹುಟ್ಟುಹಾಕಿದ್ದಲ್ಲ ಬದಲಿಗೆ ಇದು ಪುರುಷರು ಮಹಿಳೆಯರನ್ನು ಗುಲಾಮರನ್ನಾಗಿಸಿಕೊಳ್ಳುವುದಕ್ಕೆ ಅವರ ಮೇಲೆ ಹೇರಲ್ಪಟ್ಟ ಸಂಗತಿಯಾಗಿದೆ.

• ಮನುಕುಲಕ್ಕೆ ಅಗತ್ಯ ಇಲ್ಲ ಎನಿಸಿದರೆ,ಹೆಣ್ಣುಮಕ್ಕಳು ಹಡೆಯುವುದನ್ನು ಬಿಟ್ಟು ಬಿಡಬಹುದೆಂಬ ಮೊಂಡುವಾದವನ್ನು ಮಾಡುತ್ತಿದ್ದರು. ನಂತರ ಗಂಡು ಮತ್ತು ಹೆಣ್ಣಿನ ದೈಹಿಕ ಸಂಪರ್ಕವಿಲ್ಲದೆ, ಮಕ್ಕಳಿಗೆ ಜನ್ಮಕೊಡುವ ವೈಜ್ಞಾನಿಕ ವಿಧಾನಗಳನ್ನು ಆವಿಷ್ಕರಿಸಬೇಕೆಂದು ಹೇಳುತ್ತಿದ್ದರು.

•ಈ ದೇಶದಲ್ಲಿ ಒಂದು ಹೆಣ್ಣಾದವಳು ಪತಿವ್ರತೆಯಾಗಿರಬೇಕೆಂದರೆ, ಅವಳು ಎಷ್ಟರಮಟ್ಟಿಗೆ ದಾಸ್ಯದ ಭಾವನೆಯೊಂದಿಗಿರುವಳೊ, ಅಷ್ಟರಮಟ್ಟಿಗೆ ಅವಳು ಶ್ರೇಷ್ಠ ಪತಿವ್ರತೆಯಾಗಿ ಭಾವಿಸಲ್ಪಡುತ್ತಾಳೆ‌. ಎಂಬುದನ್ನು ಪ್ರಶ್ನಿಸಿದರು.

•ಸಾಮಾನ್ಯವಾಗಿ ಭಾರತೀಯ ಸ್ತ್ರೀಯರ ಸಮೂಹವನ್ನೇ ಸಂಪೂರ್ಣವಾಗಿ ಹುಟ್ಟಿನಿಂದಲೇ ಸ್ವಾತಂತ್ರ್ಯಕ್ಕೆ ಅನರ್ಹರೆಂದೂ, ಪುರುಷರ ದಾಸ್ಯದಲ್ಲೇ ಇರಲು ದೇವರಿಂದಲೇ ಸೃಷ್ಟಿಸಲ್ಪಟ್ಟವರೆಂದು ಭಾವಿಸಿ, ಅವರನ್ನು ಚಲಿಸುವ ಹೆಣಗಳಂತೆ ನಡೆಸಿಕೊಳ್ಳುವುತ್ತಿದ್ದಾರೆ.

•ಭಗವದ್ಗೀತೆಯ ಆಧಾರದ ಮೇಲೆ ಗಾಂಧಿ ಪ್ರತಿಪಾದಿಸುತ್ತಿದ್ದ ವರ್ಣಾಶ್ರಮ ಧರ್ಮದ ಕಲ್ಪನೆ ಆ ಮೂಲಕ ಅವರು ಕಟ್ಟುತ್ತಿದ್ದ ಹಿಂದೂ ಐಡೆಂಟಿಟಿಯನ್ನು ಪೆರಿಯಾರ್ ತೀವ್ರವಾಗಿ ಪ್ರಶ್ನಿಸಿದರು.

•ಬ್ರಾಹ್ಮಣರು  ಬ್ರಾಹ್ಮಣೇತರರಲ್ಲಿ ರಾಜಕೀಯ ಮತ್ತು ರಾಷ್ಟ್ರೀಯ ಭಾವನೆ ಮೊದಲಾದವುಗಳ ಸೋಗಿನಲ್ಲಿ ಚಳುವಳಿಯನ್ನು ಹತ್ತಿಕ್ಕಲು ಮುಂದಾಗುತ್ತಿದ್ದಾರೆ.ಜೊತೆಗೆ ಧರ್ಮ, ಪುರಾಣ, ಹರಿಕಥೆ ಮೊದಲಾದವುಗಳ ಹೆಸರಿನಲ್ಲಿ ತಮ್ಮ ಬದುಕನ್ನು ನಡೆಸುವ ಈ ಪರಾವಲಂಬಿಗಳು ಸ್ವಾಭಿಮಾನಿ ಚಳುವಳಿಯನ್ನು ವಿರೋಧಿಸಲು ದೇವರು-ಧರ್ಮದ ಬಗ್ಗೆ ಸಾರ್ವಜನಿಕರಲ್ಲಿರುವ ಗೊಂದಲವನ್ನು ತಮಗೆ ಅನುಕೂಲವಾಗುವಂತೆ ಬಳಸಿಕೊಂಡು ವಿಚಾರಗಳನ್ನು ತಿರುಚಿ ಹೇಳುತ್ತಿದ್ದಾರೆ.

•ನಿಮ್ಮ ಧರ್ಮ ಏನು ?ತತ್ವ ಏನು..? ಎಂದರೆ ಕೆಲವು ಶಾಸ್ತ್ರ ವಿಧಿಗಳನ್ನು ಹೇಳುತ್ತಾನೆ ಹೊರತು ನಿಜವಾದ ತತ್ವವು ಯಾವ ಉದ್ದೇಶದಿಂದ ಪ್ರಾರಂಭದಲ್ಲಿ ಸೃಷ್ಟಿಸಲ್ಪಟ್ಟಿದೆ ಎಂಬುದನ್ನು ಹೇಳುವುದಿಲ್ಲ.

•ಧರ್ಮವೂ ದೇವರ ಮತ್ತು ಜನರ ಮಧ್ಯೆ ದಲ್ಲಾಳಿಗಳನ್ನು ಸೃಷ್ಟಿಮಾಡಿ ದಲ್ಲಾಳಿಗಳ ಆಚರಣೆಗಳು ಮತ್ತು ಮಾತುಗಳು ಎಷ್ಟೇ ನೀಚ ತನದಿಂದ ಕುಡಿದರೂ ಸ್ವಂತ ಅರಿವು, ಪ್ರತ್ಯಕ್ಷ ಅನುಭವಕ್ಕಿಂತ ಶ್ರೇಷ್ಠವೆಂದು ನಂಬು ಹಾಗೆ ಮಾಡುತ್ತದೆ.

•ನನಗೆ ಮತ ಅಭಿಮಾನ ಇಲ್ಲ ಅಂದುಕೊಳ್ಳಬೇಡಿ. 25 ವರ್ಷಗಳ ಕಾಲ ನಾನು ಒಂದು ದೇವಸ್ಥಾನಕ್ಕೆ ಧರ್ಮ ಕರ್ತನಾಗಿ, ಆ ದೇವಸ್ಥಾನದ ಕಾರ್ಯಗಳನ್ನೆಲ್ಲ ಶಿಸ್ತಿನಿಂದ ನಡೆಸಿಕೊಂಡು ಬಂದಿದೆ. ಮೂರುನಾಲ್ಕು ಸಲ, ದೇಶದ ವಿಷಯಕ್ಕಾಗಿ ಜೈಲಿಗೆ ಹೋಗಿರುವನು. ಆದರೆ ಅಭಿಮಾನವೆಲ್ಲ ನಮ್ಮ ಬಡ ಸಹೋದರರಿಗೆ ವಿಮೋಚನೆಯನ್ನು ತಾರದು.

•ಈ ದೇಶದ ಶೈವರು ತೋರಿದ ಕ್ರೂರತೆಯನ್ನು ನಾವು ಹೇಳಲು ಅಸಾಧ್ಯ. ಇಂದಿಗೂ ಸಹ ಮಧುರೈಯಲ್ಲಿ, ಜೈನರನ್ನು ಕಳುವು [ಚೂಪಾದ ಆಯುಧವನ್ನು ನೆಲದಲ್ಲಿ ನೇರವಾಗಿ ನಿಲ್ಲಿಸಿ, ಚೂಪು ಭಾಗದ ಮೇಲೆ ಜನರನ್ನು ಕುಳ್ಳಿರಿಸಿ ಅವರ ದೇಹಗಳನ್ನು ಎರಡು ಭಾಗವಾಗಿ ಸೀಳುವ ಕ್ರಿಯೆಗೆ 'ಕಳುವು' ಎನ್ನುತ್ತಾರೆ ] ಶಿಕ್ಷೆಗೆ ಈಡು ಮಾಡಿದ್ದರ ನೆನಪಿಗೆ ಹಬ್ಬವನ್ನು ಆಚರಿಸುತ್ತಾರೆ.

•ವೈಷ್ಣವರ ಯೋಗ್ಯತೆಯಾದರೂ ಏನು..? ಇಂದು ನಮ್ಮ ದೇವಸ್ಥಾನಗಳಲ್ಲಿರುವ ಶ್ರೀರಂಗಂ, ಕಾಂಚಿಪುರಂ ,ಪಳನಿ, ತಿರುಪತಿ, ಮೊದಲಾದೆಡೆಗಳ ದೇವಸ್ಥಾನಗಳ ಸ್ಥಳಗಳು ಹಿಂದೆ ಬೌದ್ಧ ಸಂಸ್ಥೆಗಳ ವಿಹಾರ ತಾಣಗಳಾಗಿದ್ದವು. ಇಲ್ಲೆಲ್ಲಾ ಇದ್ದ ಬುದ್ಧನ ಪುತ್ಥಳಿಗಳನ್ನು ರಂಗನಾಥ, ವರದರಸ, ಏಕಾಂಬರ, ಸುಬ್ರಹ್ಮಣ್ಯ, ವೆಂಕಟಾಚಲಪತಿಗಳಾಗಿ ಬದಲಾಯಿಸಲಾಗಿದೆ. (ವೇದಸಲಂ)

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...